ಭಾರತದ ವೈದ್ಯಕೀಯ ತಂತ್ರಜ್ಞಾನ ಉದ್ಯಮಕ್ಕೆ ಅಗಾಧ ಬೆಳವಣಿಗೆಯ ಶಕ್ತಿ ಇದೆ: ಸಿಐಐ ಅನಿಸಿಕೆ

|

Updated on: Dec 02, 2024 | 5:04 PM

Indian Medical Technology industry: ಭಾರತದ ವೈದ್ಯಕೀಯ ತಂತ್ರಜ್ಞಾನ ಉದ್ಯಮವು 2030ರಲ್ಲಿ 20 ಬಿಲಿಯನ್ ಡಾಲರ್ ಮೌಲ್ಯದಷ್ಟು ರಫ್ತು ಮಾಡುವ ಸಾಮರ್ಥ್ಯ ಹೊಂದಬಹುದು ಎಂದು ಸಿಐಐನ ಅಧಿಕಾರಿಯೊಬ್ಬರು ಹೇಳುತ್ತಾರೆ. ಸದ್ಯ ದೇಶಕ್ಕೆ ಅಗತ್ಯವಾಗಿರುವ ವೈದ್ಯಕೀಯ ಉಪಕರಣಗಳಲ್ಲಿ ಶೇ. 60-70ರಷ್ಟನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಸರ್ಕಾರವು ಈ ಉದ್ಯಮಕ್ಕೆ ಪೂರಕವಾಗುವ ರೀತಿಯಲ್ಲಿ ಕ್ರಮ ಕೈಗೊಂಡರೆ ಆಮದು ಕಡಿಮೆ ಮಾಡಿ ರಫ್ತು ಹೆಚ್ಚಿಸಬಹುದು ಎಂದಿದ್ದಾರೆ ಹಿಮಾಂಶು ಬೇದ್.

ಭಾರತದ ವೈದ್ಯಕೀಯ ತಂತ್ರಜ್ಞಾನ ಉದ್ಯಮಕ್ಕೆ ಅಗಾಧ ಬೆಳವಣಿಗೆಯ ಶಕ್ತಿ ಇದೆ: ಸಿಐಐ ಅನಿಸಿಕೆ
ವೈದ್ಯಕೀಯ ಉಪಕರಣ
Follow us on

ನವದೆಹಲಿ, ಡಿಸೆಂಬರ್ 2: ಭಾರತದ ಮೆಡಿಕಲ್ ಟೆಕ್ನಾಲಜಿ ಉದ್ಯಮ ಬಹಳ ಅಗಾಧವಾಗಿ ಬೆಳೆಯಬಲ್ಲುದು. 2030ರಲ್ಲಿ ಈ ಉದ್ಯಮದಿಂದ ಆಗುವ ರಫ್ತು 20 ಬಿಲಿಯನ್ ಡಾಲರ್ ಮಟ್ಟ ಮುಟ್ಟಬಹುದು. ಆ ಶಕ್ತಿ ಈ ಉದ್ಯಮಕ್ಕೆ ಇದೆ. ಆದರೆ, ಸರ್ಕಾರವೂ ಕೂಡ ಇದಕ್ಕೆ ಪೂರಕವಾದ ಕೆಲ ಕ್ರಮ ತೆಗೆದುಕೊಳ್ಳಬೇಕು ಎಂದು ಭಾರತೀಯ ಉದ್ಯಮ ಮಹಾ ಒಕ್ಕೂಟವಾದ ಸಿಐಐ ಹೇಳಿದೆ. ಸರ್ಕಾರದಿಂದ ಈ ಉದ್ಯಮಕ್ಕೆ ಸಿಗುವ ಪ್ರೋತ್ಸಾಹಕ ನಿಧಿ ಹೆಚ್ಚಬೇಕು, ವ್ಯವಹಾರ ಕಾನೂನು ಮತ್ತಷ್ಟು ಸರಳಗೊಳ್ಳಬೇಕು. ವಿದೇಶಗಳಿಗೆ ಸರಕು ಸಾಗಣೆಯ ಪ್ರಮಾಣ ಹೆಚ್ಚಬೇಕು ಎಂಬಿತ್ಯಾದಿ ಸಲಹೆಗಳನ್ನು ಸಿಐಐ ನೀಡಿದೆ.

ಪಿಎಲ್​ಐ ಸ್ಕೀಮ್ ವ್ಯಾಪ್ತಿಯಲ್ಲಿ ಮೆಡಿಕಲ್ ಟೆಕ್ನಾಲಜಿ ಸೆಕ್ಟರ್ ಕೂಡ ಇದೆ. ಆದರೆ, ಕೆಲವೇ ವೈದ್ಯಕೀಯ ಸಾಧನಗಳಿಗೆ ಮಾತ್ರವೇ ಪಿಎಲ್​ಐ ಸಿಗುತ್ತಿದೆ. ಇದು ಇನ್ನೂ ಹಲವಾರು ಉತ್ಪನ್ನಗಳಿಗೂ ವ್ಯಾಪಿಸಬೇಕು. ರಫ್ತುಗಳಿಗೆ ಇನ್ಸೆಂಟಿವ್ ಒದಗಿಸಬೇಕು. ಹುದುಗಿದ ವೆಚ್ಚಗಳಿಗೆ ರೀಇಂಬರ್ಸ್​ಮೆಂಟ್ ಅನ್ನು ಉತ್ಪಾದಕರಿಗೆ ಕೊಡಬೇಕು ಎಂದು ಕಾನ್ಫಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ಸಂಘಟನೆಯ ನ್ಯಾಷನಲ್ ಮೆಡಿಕಲ್ ಟೆಕ್ನಾಲಜಿ ಫೋರಂನ ಛೇರ್ಮನ್ ಆದ ಹಿಮಾಂಶು ಬೇದ್ ಅವರು ಒತ್ತಾಯಿಸಿದ್ದಾರೆ.

‘ಇವತ್ತು ನಮ್ಮ ದೇಶಕ್ಕೆ ಅಗತ್ಯ ಇರುವ ಶೇ. 60-70ರಷ್ಟು ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ನಮ್ಮಲ್ಲಿ ತಯಾರಿಕೆ ಆಗುತ್ತಿರುವುದು ಬಹಳ ಕಡಿಮೆ ಇದೆ. ರಫ್ತಿಗಿತ ನಮಗೆ ಆಮದು ಬಹಳ ಹೆಚ್ಚಿದೆ. ಎಂಟು ಬಿಲಿಯನ್ ಡಾಲರ್ ಮೊತ್ತದಷ್ಟು ಆಮದು ಮಾಡಿಕೊಳ್ಳುತ್ತಿದ್ದೇವೆ. ರಫ್ತಾಗುತ್ತಿರುವ ಪ್ರಮಾಣ ನಾಲ್ಕು ಬಿಲಿಯನ್ ಡಾಲರ್ ಮಾತ್ರವೇ’ ಎಂದು ಹಿಮಾಂಶು ಬೇದ್ ವಿವರಿಸಿದ್ದಾರೆ.

ಇದನ್ನೂ ಓದಿ: ಇಟಿಎಫ್ ರಿಟರ್ನ್​ನ ಮರುಹೂಡಿಕೆ ನಿಯಮ ಸೇರಿದಂತೆ ಇಪಿಎಫ್​ನಲ್ಲಿ ಮಹತ್ವದ ಬದಲಾವಣೆ

ವೈದ್ಯಕೀಯ ತಂತ್ರಜ್ಞಾನ ಉದ್ಯಮದಲ್ಲಿ ಭಾರತ ಸಾಕಷ್ಟು ರಫ್ತು ಮಾಡುವ ಅವಕಾಶ ಇದೆ. ಜಾಗತಿಕವಾಗಿ ಇರುವ ಚೀನಾ ಪ್ಲಸ್ ನೀತಿಯನ್ನು ಭಾರತ ತನ್ನ ಒಳಿತಿಗೆ ಬಳಸಿಕೊಳ್ಳಬಹುದು. ಸಾಫ್ಟ್​ವೇರ್, ಹಾರ್ಡ್​ವೇರ್, ಕಾರ್ಮಿಕ ವೆಚ್ಚ ಈ ಎಲ್ಲಾ ವಿಚಾರಗಳಲ್ಲಿ ಚೀನಾಗಿಂತ ಉತ್ತಮ ಸ್ಥಾನದಲ್ಲಿ ನಾವಿದ್ದೇವೆ. 2030ರೊಳಗೆ ಈ ಉದ್ಯಮದಿಂದ ಆಗುವ ರಫ್ತು 20 ಬಿಲಿಯನ್ ಡಾಲರ್​ನಷ್ಟಾಗಬಹುದು. ನಮ್ಮ ಆಮದುಗಳು 3ರಿಂದ 4 ಬಿಲಿಯನ್ ಡಾಲರ್​ಗೆ ಇಳಿಕೆ ಆಗಬಹುದು ಎನ್ನುವುದು ನನ್ನ ನಿರೀಕ್ಷೆ ಎಂದು ಬೇದ್ ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ