ಜಾಗತಿಕ ಜಾಹೀರಾತು ಮತ್ತು ಸಾರ್ವಜನಿಕ ಸಂಪರ್ಕ ಸಂಸ್ಥೆ ಓಗಿಲ್ವಿ(Ogilvy)ಯ ಜಾಗತಿಕ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO)ಯಾಗಿ ಭಾರತ ಮೂಲದ ದೇವಿಕಾ ಬುಲ್ಚಂದಾನಿ ಅವರು ನೇಮಕಗೊಂಡಿದ್ದಾರೆ. ಬುಲ್ಚಂದಾನಿ ಅವರು ಸದ್ಯ ಸಿಇಓ ಆಗಿರುವ ಆಂಡಿ ಮೈನ್ ಅವರು ನಂತರ ಅಧಿಕಾರವನ್ನು ಹಿಡಿಯಲಿದ್ದಾರೆ ಎಂದು ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಬುಲ್ಚಂದಾನಿ ಅವರು ಜಾಗತಿಕ ಸಿಇಒ ಹುದ್ದೆಯಿಂದ ಕೆಳಗಿಳಿಯುತ್ತಿರುವ ಮೈನ್ ಅವರ ಸ್ಥಾನವನ್ನು ತುಂಬಲಿದ್ದು, ವರ್ಷಾಂತ್ಯದವರೆಗೆ ಹಿರಿಯ ಸಲಹೆಗಾರರಾಗಿ ಕಾರ್ಯನಿರ್ವಹಿಸಲಿದ್ದಾರೆ.
ಬುಲ್ಚಂದಾನಿ ಅವರು ಸಿಎಓ ಆಗಿ ಅಧಿಕಾರ ವಹಿಸಿದ ನಂತರ 93 ದೇಶಗಳಲ್ಲಿ 131 ಕಛೇರಿಗಳಲ್ಲಿ ಸೃಜನಶೀಲ ನೆಟ್‌ವರ್ಕ್‌ನ ವ್ಯವಹಾರದ ಎಲ್ಲಾ ಅಂಶಗಳಿಗೆ ಜವಾಬ್ದಾರರಾಗಿರುತ್ತಾರೆ. ಅಷ್ಟೇ ಅಲ್ಲದೆ ಅದರ ಜಾಹೀರಾತು, ಸಾರ್ವಜನಿಕ ಸಂಬಂಧಗಳು, ಅನುಭವ, ಸಲಹಾ ಮತ್ತು ಆರೋಗ್ಯ ಘಟಕಗಳು ಇವರ ಅಧಿಕಾರ ವ್ಯಾಪ್ತಿಯಡಿ ಬರಲಿದೆ.
ಓಗಿಲ್ವಿ ಜಾಗತಿಕ ಪ್ರಮುಖ ಮಾರ್ಕೆಟಿಂಗ್ ಮತ್ತು ಸಂವಹನ ಗುಂಪು WPP ಭಾಗವಾಗಿದೆ. ಬುಲ್ಚಂದಾನಿ ಅವರು ತಮ್ಮ ಹೊಸ ಹುದ್ದೆಯನ್ನು ವಹಿಸಿಕೊಳ್ಳುತ್ತಿದ್ದಂತೆ WPPನ ಕಾರ್ಯಕಾರಿ ಸಮಿತಿಯನ್ನು ಸಹ ಸೇರಿಕೊಳ್ಳುತ್ತಾರೆ ಎಂದು ಹೇಳಿಕೆ ತಿಳಿಸಿದೆ.
ದೇವಿಕಾ ಅವರು ಉದ್ಯಮದಲ್ಲಿ ದೇವ್ ಎಂದು ಜನಪ್ರಿಯವಾಗಿದ್ದಾರೆ. ಇವರು ತಮ್ಮ ಬಾಲ್ಯ ಮತ್ತು ಪ್ರೌಢಾವಸ್ಥೆಯನ್ನು ಭಾರತದಲ್ಲಿ ಕಳೆದರು. ಡೆಹ್ರಾಡೂನ್‌ನ ವೆಲ್‌ಹ್ಯಾಮ್ ಬಾಲಕಿಯರ ಶಾಲೆಗೆ ಸೇರುವ ಮೊದಲು ಅವರು ಪಂಜಾಬ್‌ನ ಅಮೃತಸರದಲ್ಲಿ ತಮ್ಮ ಆರಂಭಿಕ ದಿನಗಳನ್ನು ಕಳೆದರು. ನಂತರ ಅವರು ಮುಂಬೈನ ಸೇಂಟ್ ಕ್ಸೇವಿಯರ್ ಕಾಲೇಜಿನಲ್ಲಿ ಇಂಗ್ಲಿಷ್ ಮತ್ತು ಮನೋವಿಜ್ಞಾನದಲ್ಲಿ ಪದವಿ ಪಡೆದರು. ತದನಂತರ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ತೆರಳಿ ಅಲ್ಲಿ ಸಂವಹನದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.
ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ