Indian Passport: ಭಾರತದ ಪಾಸ್​ಪೋರ್ಟ್​ಗೆ ಇನ್ನಷ್ಟು ಬಲ; ವೀಸಾ ಇಲ್ಲದೇ 57 ದೇಶಗಳಿಗೆ ಹೋಗಲು ಅವಕಾಶ; ಇಲ್ಲಿದೆ ಪಟ್ಟಿ

|

Updated on: Jul 19, 2023 | 4:47 PM

Henley Passport Index 2023: ಹೆನ್ಲೀ ಪಾಸ್​ಪೋರ್ಟ್ ಇಂಡೆಕ್ಸ್​ನಲ್ಲಿ ಭಾರತ 85ರಿಂದ 80ನೇ ಸ್ಥಾನಕ್ಕೇರಿದೆ. ಭಾರತದ ಪಾಸ್​ಪೋರ್ಟ್ ಹೊಂದಿರುವವರು 57 ದೇಶಗಳಿಗೆ ವೀಸಾರಹಿತವಾಗಿ ಹೋಗಬಹುದು.

Indian Passport: ಭಾರತದ ಪಾಸ್​ಪೋರ್ಟ್​ಗೆ ಇನ್ನಷ್ಟು ಬಲ; ವೀಸಾ ಇಲ್ಲದೇ 57 ದೇಶಗಳಿಗೆ ಹೋಗಲು ಅವಕಾಶ; ಇಲ್ಲಿದೆ ಪಟ್ಟಿ
ಭಾರತದ ಪಾಸ್​ಪೋರ್ಟ್
Follow us on

ನವದೆಹಲಿ, ಜುಲೈ 19: ಒಂದು ದೇಶದ ನಾಗರಿಕರು ಎಷ್ಟು ಮುಕ್ತವಾಗಿ ಬೇರೆ ಬೇರೆ ದೇಶಗಳಿಗೆ ಪ್ರಯಾಣಿಸಬಹುದು ಎಂಬುದಕ್ಕೆ ದ್ಯೋತಕವಾಗಿ ಅದರ ಪಾಸ್​ಪೋರ್ಟ್ ಶ್ರೇಯಾಂಕ (Passport Ranking) ಇರುತ್ತದೆ. ಈಗ ಭಾರತೀಯರು ಮುಂಚಿತವಾಗಿ ವೀಸಾ ಪಡೆಯುವ ಅಗತ್ಯ ಇಲ್ಲದೇ 57 ದೇಶಗಳಿಗೆ ಪ್ರಯಾಣಿಸುವ ಅವಕಾಶ ಇದೆ. ಇದರೊಂದಿಗೆ ವಿಶ್ವದ ಪ್ರಮುಖ ಪಾಸ್​ಪೋರ್ಟ್​ಗಳ ಪಟ್ಟಿಯಲ್ಲಿ ಭಾರತದ ಸ್ಥಾನ ಮೇಲೆರಿದೆ. ಹೆನ್ಲೀ ಪಾಸ್​ಪೋರ್ಟ್ ಇಂಡೆಕ್ಸ್ 2023 (Henley Passport Index 2023) ಪಟ್ಟಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಭಾರತದ ಪಾಸ್​ಪೋರ್ಟ್ ಶ್ರೇಯಾಂಕ 5 ಸ್ಥಾನ ಮೇಲೇರಿ 80ಕ್ಕೆ ಬಂದಿದೆ.

ಪಾಸ್​ಪೋರ್ಟ್ ರ್ಯಾಂಕಿಂಗ್ ವಿಚಾರದಲ್ಲಿ ವಿಶ್ವದಲ್ಲಿ ಮೊದಲ ಸ್ಥಾನ ಇರುವುದು ಸಿಂಗಾಪುರದ್ದು. ಈ ದೇಶದ ಪಾಸ್​ಪೋರ್ಟ್ ಹೊಂದಿರುವ ನಾಗರಿಕರಿಗೆ 192 ದೇಶಗಳು ಅನಿರ್ಬಂಧಿತವಾಗಿ ಸ್ವಾಗತಿಸುತ್ತವೆ.

ಅಫ್ಘಾನಿಸ್ತಾನದ ಪಾಸ್​ಪೋರ್ಟ್ ಸದ್ಯ ಅತ್ಯಂತ ದುರ್ಬಲ ಎನಿಸಿದ್ದು, ಇಲ್ಲಿನವರಿಗೆ ಮುಕ್ತ ಸ್ವಾಗತ ಕೊಡುವ ದೇಶಗಳ ಸಂಖ್ಯೆ 27 ಮಾತ್ರ.

ಇದನ್ನೂ ಓದಿChina: ಚೀನಾದ ಒಂದು ಕಾನೂನಿಂದ ರಿಯಲ್ ಎಸ್ಟೇಟ್ ಅಲ್ಲೋಲಕಲ್ಲೋಲ; ಎವರ್​ಗ್ರ್ಯಾಂಡ್​ಗೆ 81 ಬಿಲಿಯನ್ ಡಾಲರ್ ನಷ್ಟ

ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆ (ಐಎಟಿಎ) ಪ್ರಕಟಿಸುವ ದತ್ತಾಂಶದ ನೆರವಿನಿಂದ ಹೆನ್ಲೀ ಪಾಸ್​ಪೋರ್ಟ್ ಇಂಡೆಕ್ಸ್ ಪಟ್ಟಿ ಪ್ರಕಟವಾಗುತ್ತದೆ. ಭಾರತದ ಪಾಸ್​ಪೋರ್ಟ್ ಹೊಂದಿರುವವರು 57 ದೇಶಗಳಿಗೆ ವೀಸಾ ಇಲ್ಲದೇ ಅಥವಾ ಮುಂಚಿತವಾಗಿ ವೀಸಾ ಮಾಡುವ ಅವಶ್ಯಕತೆ ಇಲ್ಲದೇ ಪ್ರಯಾಣಿಸಬಹುದು. ಈ ದೇಶಗಳ ಪಟ್ಟಿ ಇಲ್ಲಿದೆ

  1. ಕುಕ್ ಐಲೆಂಡ್ಸ್
  2. ಫಿಜಿ
  3. ಮಾರ್ಷಲ್ ಐಲೆಂಡ್ಸ್
  4. ಮೈಕ್ರೋನೇಷ್ಯಾ
  5. ನಿಯೂ
  6. ಪಲೋ ಐಲೆಂಡ್ಸ್
  7. ಸಮೋವ
  8. ತುವಾಲು
  9. ವನಾಟು
  10. ಇರಾನ್
  11. ಜೋರ್ಡಾನ್
  12. ಓಮನ್
  13. ಕತಾರ್
  14. ಬರ್ಬಡಾಸ್
  15. ಬ್ರಿಟಿಷ್ ವರ್ಜಿನ್ ಐಲೆಂಡ್ಸ್
  16. ಡಾಮಿನಿಕಾ
  17. ಗ್ರೆನಡಾ
  18. ಹೈಟಿ
  19. ಜಮೈಕಾ
  20. ಮಾನ್ಸ್​ಟೆರಾಟ್
  21. ಸೇಂಟ್ ಕಿಟ್ಸ್ ಅಂಡ್ ನೆವಿಸ್
  22. ಸೇಂಟ್ ಲೂಷಿಯಾ
  23. ಸೇಂಟ್ ವಿನ್ಸೆಂಟ್ ಅಂಡ್ ಗ್ರಿನಾಡೈನ್ಸ್
  24. ಟ್ರಿನಿಡಾಡ್ ಅಂಡ್ ಟೊಬಾಗೋ
  25. ಭೂತಾನ್
  26. ಕಾಂಬೋಡಿಯಾ
  27. ಇಂಡೋನೇಷ್ಯಾ
  28. ಕಜಕಸ್ತಾನ
  29. ಲಾವೋಸ್
  30. ಮಕಾವ್
  31. ಮಾಲ್ಡೀವ್ಸ್
  32. ಮಯನ್ಮಾರ್
  33. ನೇಪಾಳ
  34. ಶ್ರೀಲಂಕಾ
  35. ಥಾಯ್ಲೆಂಡ್
  36. ತೈಮರ್ ಲೆಸ್ಟೆ
  37. ಬೊಲಿವಿಯಾ
  38. ಎಲ್ ಸಾಲ್ವಡಾರ್
  39. ಬುರುಂಡಿ
  40. ಕೇಪ್ ವೆರ್ಡೆ ಐಲೆಂಡ್ಸ್
  41. ಕೊಮೊರೋ ಐಲೆಂಡ್ಸ್
  42. ಡಿಜೆಬೋಟಿ
  43. ಗ್ಯಾಬೋನ್
  44. ಗಿನಿಯಾ ಬಿಸಾವು
  45. ಮಡಗಾಸ್ಕರ್
  46. ಮಾರಿಷಾನಿಯಾ
  47. ಮಾರಿಷಸ್
  48. ಮೊಜಾಂಬಿಕ್
  49. ರುವಾಂಡ
  50. ಸೆನೆಗಲ್
  51. ಸೆಯ್​ಷೆಲೆಸ್
  52. ಸಿಯೆರಾ ಲಿಯೊನೆ
  53. ಸೊಮಾಲಿಯಾ
  54. ತಾಂಜಾನಿಯಾ
  55. ಟೋಗೋ
  56. ಟುನಿಶಿಯಾ
  57. ಜಿಂಬಾಬ್ವೆ

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ