ITR Filing: ಜುಲೈ 18ರವರೆಗೂ 3 ಕೋಟಿ ಮಂದಿಯಿಂದ ಐಟಿ ರಿಟರ್ನ್ ಸಲ್ಲಿಕೆ; ಕಳೆದ ವರ್ಷಕ್ಕಿಂತ ಹೆಚ್ಚು
Faster Filing of ITR in 2023: ಜುಲೈ 18ರವರೆಗೂ ಒಟ್ಟು 3.06 ಐಟಿಆರ್ಗಳು ಸಲ್ಲಿಕೆ ಆಗಿವೆ. ಕಳೆದ ವರ್ಷ 3 ಕೋಟಿ ಐಟಿಆರ್ ಸಲ್ಲಿಕೆಯಾಗಲು ಜುಲೈ 25 ಆಗಿತ್ತು. ಈ ವರ್ಷ 7 ದಿನ ಮುಂಚಿತವಾಗಿ 3 ಕೋಟಿ ಗಡಿದಾಟಿದೆ.
ನವದೆಹಲಿ, ಜುಲೈ 19: ಆದಾಯ ತೆರಿಗೆ ರಿಟರ್ನ್ (IT Return) ಸಲ್ಲಿಸಲು ಗಡುವು ಸಮೀಪಿಸುತ್ತಿದೆ. ಜುಲೈ 31ರವರೆಗೆ ಐಟಿಆರ್ ಸಲ್ಲಿಕೆಗೆ ಅವಕಾಶ ಕೊಡಲಾಗಿದೆ. ಆದಾಯ ತೆರಿಗೆ ಇಲಾಖೆ ನೀಡಿರುವ ಮಾಹಿತಿ ಪ್ರಕಾರ ಜುಲೈ 18ರವರೆಗೂ ಐಟಿಆರ್ ಫೈಲಿಂಗ್ ಮಾಡಿರುವವರ ಸಂಖ್ಯೆ 3 ಕೋಟಿ ಗಡಿ ದಾಟಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಮಂದಿ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಿದ್ದಾರೆ. 2022ರಲ್ಲಿ ಜುಲೈ 25ಕ್ಕೆ 3 ಕೋಟಿ ಮಂದಿ ಐಟಿಆರ್ ಸಲ್ಲಿಸಿದ್ದರು. ಈ ವರ್ಷ 7 ದಿನ ಮುಂಚಿತವಾಗಿ ಈ ಸಂಖ್ಯೆ ಮುಟ್ಟಿದೆ.
2023ರ ಜುಲೈ 18ರವರೆಗೂ 3.06 ಕೋಟಿ ಐಟಿಆರ್ಗಳು ಸಲ್ಲಿಕೆಯಾಗಿವೆ. ಇದರಲ್ಲಿ 2.81 ಕೋಟಿ ಐಟಿಆರ್ಗಳನ್ನು ಇ–ವೆರಿಫೈ ಮಾಡಲಾಗಿದೆ. ಈ ಪೈಕಿ 1.50 ಕೋಟಿಗಿಂತ ಹೆಚ್ಚು ಐಟಿಆರ್ಗಳನ್ನು ಪ್ರೋಸಸ್ ಕೂಡ ಮಾಡಲಾಗಿದೆ ಎಂದು ಐಟಿ ಇಲಾಖೆ ಮಾಹಿತಿ ನೀಡಿದೆ.
Grateful to our taxpayers & tax professionals for having helped us reach the milestone of 3 crore Income Tax Returns (ITRs), 7 days early this year, compared to the preceding year!
Over 3 crore ITRs for AY 2023-24 have already been filed till 18th of July this year as compared… pic.twitter.com/jcGyirW2wa
— Income Tax India (@IncomeTaxIndia) July 19, 2023
ಇನ್ನೂ ಐಟಿ ರಿಟರ್ನ್ ಫೈಲ್ ಮಾಡದ ತೆರಿಗೆದಾರರಿಗೆ ಇನ್ನು 12-13 ದಿನ ಕಾಲಾವಕಾಶ ಮಾತ್ರ ಇದೆ. ಕಳೆದ ವರ್ಷ ಜುಲೈ 31ಕ್ಕೆ ಡೆಡ್ಲೈನ್ ಇತ್ತು. ಅದನ್ನು ವಿಸ್ತರಿಸಲಾಗಿರಲಿಲ್ಲ. ಈ ವರ್ಷವೂ ಡೆಡ್ಲೈನ್ ವಿಸ್ತರಣೆ ಆಗುವ ಸಾಧ್ಯತೆ ಕಡಿಮೆ. ಹೀಗಾಗಿ, ಜುಲೈ 31ರೊಳಗೆ ಐಟಿ ರಿಟರ್ನ್ ಪಾವತಿಸಿ, ಅನಗತ್ಯ ದಂಡ ಕಟ್ಟುವುದನ್ನು ತಪ್ಪಿಸಬಹುದು.
ಇದನ್ನೂ ಓದಿ: ITR: ಬ್ಯಾಂಕ್ ಅಕೌಂಟ್ ತಪ್ಪಾಗಿ ಹಾಕಿ ಐಟಿಆರ್ ಸಲ್ಲಿಸಿಬಿಟ್ರಾ? ಇಲ್ಲಿದೆ ಸರಿಪಡಿಸುವ ಉಪಾಯ
ಆನ್ಲೈನ್ನಲ್ಲಿ ಐಟಿಆರ್ ಫೈಲ್ ಮಾಡುವ ಕ್ರಮಗಳು
- ಇನ್ಕಮ್ ಟ್ಯಾಕ್ಸ್ ಇಫೈಲಿಂಗ್ ಪೋರ್ಟಲ್ಗೆ ಭೇಟಿ ನೀಡಿ: www.incometax.gov.in/iec/foportal/
- ಇ ಫೈಲಿಂಗ್ ಪೋರ್ಟಲ್ಗೆ ಯೂಸರ್ ಐಡಿ, ಪಾಸ್ವರ್ಡ್ ಬಳಸಿ ಲಾಗಿನ್ ಆಗಬೇಕು. ಇಲ್ಲಿ ಪ್ಯಾನ್ ನಂಬರ್ ಯೂಸರ್ ಐಡಿ ಆಗಿರುತ್ತದೆ.
- ಲಾಗಿನ್ ಆದ ಬಳಿಕ ಮುಖ್ಯಪುಟದಲ್ಲಿ ಕಾಣುವ ‘ಇ–ಫೈಲ್’ ಮೆನು ಕೆಳಗೆ ‘ಇನ್ಕಮ್ ಟ್ಯಾಕ್ಸ್ ರಿಟರ್ನ್’ ಲಿಂಕ್ ಅನ್ನು ಕ್ಲಿಕ್ ಮಾಡಿ
- ಇಲ್ಲಿ ನೀವು ಅಸೆಸ್ಮೆಂಟ್ ವರ್ಷ, ಆನ್ಲೈನ್ ಮೋಡ್ ಆಯ್ಕೆ ಮಾಡಬೇಕು. ನಂತರ ಕಂಟಿನ್ಯೂ ಮೇಲೆ ಕ್ಲಿಕ್ ಮಾಡಿ. ಅದಾದ ನಂತರ ಫೈಲಿಂಗ್ ಪ್ರಕ್ರಿಯೆ ಆರಂಭಿಸಬಹುದು.
- ಐಟಿಆರ್ ಫಾರ್ಮ್ ಸಂಖ್ಯೆ ಆರಿಸಿಕೊಳ್ಳಬೇಕು. ಫೈಲಿಂಗ್ ಟೈಪ್ ಅನ್ನು ಒರಿಜಿನಲ್ ಅಥವಾ ರಿವೈಸ್ಡ್ ರಿಟರ್ನ್ ಎಂದು ಆರಿಸಬೇಕು. ಸಬ್ಮಿಶನ್ ಮೋಡ್ ಅನ್ನು ಪ್ರಿಪೇರ್ ಅಂಡ್ ಸಬ್ಮಿಟ್ ಆನ್ಲೈನ್ ಎಂದು ಆರಿಸಿಕೊಳ್ಳಬೇಕು.
- ನಂತರ ಕಂಟಿನ್ಯೂ ಕ್ಲಿಕ್ ಮಾಡಿ
- ಆನ್ಲೈನ್ ಐಟಿಆರ್ ಫಾರ್ಮ್ನಲ್ಲಿರುವ ಎಲ್ಲಾ ಸೂಚನೆಗಳನ್ನು ಗಮನವಿಟ್ಟು ಓದಿ, ಜಾಗ್ರತೆಯಿಂದ ಮಾಹಿತಿ ತುಂಬಿರಿ.
- ಅದಾ ಬಳಿಕ ಸೇವ್ ಡ್ರಾಫ್ಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಈ ಡ್ರಾಫ್ಟ್ 30 ದಿನಗಳವರೆಗೂ ನಿಮ್ಮ ದತ್ತಾಂಶವನ್ನು ಉಳಿಸಿಟ್ಟಿರುತ್ತದೆ.
- ಒಟ್ಟು ಆದಾಯ, ಡಿಡಕ್ಷನ್, ಪಾವತಿಸಿದ ತೆರಿಗೆ, ತೆರಿಗೆ ಬಾಕಿ ಇತ್ಯಾದಿ ಎಲ್ಲಾ ವಿವರವೂ ಭರ್ತಿಯಾಗಿರಲಿ. ತೆರಿಗೆ ಉಳಿಸುವ ಯಾವುದೇ ಹೂಡಿಕೆ ಇದ್ದರೂ ಅದರ ವಿವರ ಇಲ್ಲಿ ತಪ್ಪದೇ ಹಾಕಿ. ಇದರಿಂದ ಹೆಚ್ಚು ತೆರಿಗೆ ಉಳಿಸಬಹುದು.
- ಈಗ ವೆರಿಫಿಕೇಶನ್ ಪ್ರಕ್ರಿಯೆ. ‘ಟ್ಯಾಕ್ಸಸ್ ಪೇಯ್ಡ್ ಅಂಡ್ ವೆರಿಫಿಕೇಶನ್’ ಟ್ಯಾಬ್ನಲ್ಲಿ ಮೂರು ಆಯ್ಕೆಗಳಲ್ಲಿ ಒಂದನ್ನು ಆರಿಸಬೇಕು. ನೀವು ಇವೆರಿಫೈ ಮಾಡುವ ಬದಲು ಫಾರ್ಮ್ ಅನ್ನು ಪೋಸ್ಟ್ ಮೂಲಕ ಸಿಪಿಸಿ ಕಚೇರಿಗೆ ಕಳುಹಿಸುವುದಾದರೆ ಮೂರನೇ ಆಯ್ಕೆ ಚೆಕ್ ಮಾಡಬೇಕು.
- ಇದಾದ ಬಳಿಕ ಪ್ರಿವ್ಯೂ ಅಂಡ್ ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿ. ಐಟಿಆರ್ನಲ್ಲಿ ನಮೂದಾದ ಎಲ್ಲಾ ಮಾಹಿತಿ ವೆರಿಫೈ ಆಗುತ್ತದೆ. ಈಗ ಐಟಿಆರ್ ಸಬ್ಮಿಟ್ ಮಾಡಿ.
- ಒಂದು ವೇಳೆ ನೀವು ಇ ವೆರಿಫೈ ಆಯ್ಕೆ ಆರಿಸಿಕೊಂಡರೆ ಅದರಲ್ಲೂ ವಿವಿಧ ಆಯ್ಕೆಗಳಿವೆ. ಇವಿಸಿ ಅಥವಾ ಒಟಿಪಿ ಮೂಲಕ ವೆರಿಫಿಕೇಶನ್ ಮಾಡಬಹುದು. ನೊಂದಾಯಿತ ಮೊಬೈಲ್ ನಂಬರ್ಗೆ ಇವಿಸಿ ಅಥವಾ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ ವೆರಿಫಿಕೇಶನ್ ಪೂರ್ಣಗೊಳಿಸಬೇಕು.
- ಒಟಿಪಿಯನ್ನು 60 ಸೆಕೆಂಡ್ನೊಳಗೆ ನಮೂದಿಸಿ ಸಬ್ಮಿಟ್ ಮಾಡದಿದ್ದರೆ ಮೈ ಅಕೌಂಟ್ ಹಾಗೂ ಇವೆರಿಫೈ ರೆಟರ್ನ್ಗೆ ಹೋಗಿ ಮತ್ತೊಮ್ಮೆ ವೆರಿಫಿಕೇಶನ್ ಮಾಡಬೇಕಾಗುತ್ತದೆ.
ಇ ವೆರಿಫಿಕೇಶನ್ ಆದ ಬಳಿಕ ನಿಮ್ಮ ಐಟಿ ರಿಟರ್ನ್ ಸಲ್ಲಿಕೆ ಪ್ರಕ್ರಿಯೆ ಪೂರ್ಣಗೊಂಡಂತಾಗುತ್ತದೆ. ಇದನ್ನು ಖಚಿತಪಡಿಸಿಕೊಳ್ಳಲು ನೀವು ಇದೇ ಪೋರ್ಟಲ್ನಲ್ಲಿ ಸಲ್ಲಿಕೆಯಾದ ಐಟಿಆರ್ ಅನ್ನು ವೀಕ್ಷಿಸಬಹುದು.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ