RuPay Credit Card: ಎಸ್ಬಿಐ, ಐಸಿಐಸಿಐ ಬ್ಯಾಂಕ್ನ ರುಪೇ ಕ್ರೆಡಿಟ್ ಕಾರ್ಡ್ಗಳಿಂದ ಈಗ ಯುಪಿಐ ವಹಿವಾಟು ಸಾಧ್ಯ
SBI, ICICI RuPay Credit Cards: ಎನ್ಪಿಸಿಐ ಅಭಿವೃದ್ಧಿಪಡಿಸಿರುವ ಭೀಮ್ ಯುಪಿಐ ಆ್ಯಪ್ನಲ್ಲಿ 11 ಬ್ಯಾಂಕುಗಳ ರುಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಅವಕಾಶ ಇದೆ. ಈಗ ಎಸ್ಬಿಐ ಮತ್ತು ಐಸಿಐಸಿಐ ಕ್ರೆಡಿಟ್ ಕಾರ್ಡ್ಗಳೂ ಒಳಗೊಂಡಿವೆ.
ಮಾಸ್ಟರ್ಕಾರ್ಡ್ ಮತ್ತು ವೀಸಾದ ಕ್ರೆಡಿಟ್ ಕಾರ್ಡ್ ಮಾರುಕಟ್ಟೆ ಪ್ರಾಬಲ್ಯ ಮುರಿಯಲು ಸಿದ್ಧವಾಗಿರುವ ರುಪೇ (RuPay) ಕೆಲವಾರು ವಿಶೇಷ ಫೀಚರ್ಗಳನ್ನು ಒದಗಿಸಿದೆ. ಇದರಲ್ಲಿ ರುಪೇ ಕ್ರೆಡಿಟ್ ಕಾರ್ಡ್ ಅನ್ನು ಯುಪಿಐ ಪಾವತಿಗೆ ಸೇರಿಸಿಕೊಳ್ಳುವ ಸೌಲಭ್ಯ ಕೂಡ ಇದೆ. ಕಳೆದ ವರ್ಷ ಸರ್ಕಾರ ರುಪೇ ಕ್ರೆಡಿಟ್ ಕಾರ್ಡನ್ನು ಯುಪಿಐ ಆ್ಯಪ್ಗೆ ಲಿಂಕ್ ಮಾಡುವ ಅವಕಾಶ ಒದಗಿಸಿತ್ತು. ಇದೀಗ ಎಸ್ಬಿಐ ಮತ್ತು ಐಸಿಐಸಿಐ ಬ್ಯಾಂಕ್ನ ರುಪೇ ಕ್ರೆಡಿಟ್ ಕಾರ್ಡ್ಗಳನ್ನು ಹೊಂದಿದವರು ಭೀಮ್ ಆ್ಯಪ್ಗೆ (BHIM App) ಅದನ್ನು ಲಿಂಕ್ ಮಾಡಬಹುದು.
ಭಾರತದ ಮೊದಲ ಯುಪಿಐ ಆ್ಯಪ್ ಎನಿಸಿದ ಭೀಮ್ನಲ್ಲಿ 11 ಬ್ಯಾಂಕುಗಳ ರುಪೇ ಕ್ರೆಡಿಟ್ ಕಾರ್ಡ್ಗಳನ್ನು ಲಿಂಕ್ ಮಾಡುವ ಅವಕಾಶ ಇದೆ. ಪೇಮೆಂಟ್ ಆ್ಯಪ್ಗೆ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡುವ ರೀತಿಯಲ್ಲಿ ರುಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡಬಹುದು. ನೀವು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಹಣಪಾವತಿಸುವಾಗ ಕ್ರೆಡಿಟ್ ಕಾರ್ಡ್ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಇಲ್ಲಿ ವರ್ತಕರು ಅಥವಾ ಅಂಗಡಿಗಳಲ್ಲಿ ಹಣ ಪಾವತಿಸಲು ಮಾತ್ರ ರುಪೇ ಕ್ರೆಡಿಟ್ ಕಾರ್ಡ್ ಬಳಕೆ ಸಾಧ್ಯ.
ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ (ಎನ್ಪಿಸಿಐ) ಈ ಭೀಮ್ ಆ್ಯಪ್ ಅಭಿವೃದ್ಧಿಪಡಿಸಿದೆ. ಭೀಮ್ ಆ್ಯಪ್ನಲ್ಲಿ ಮಾತ್ರವಲ್ಲ ಪೇಟಿಎಂ, ಫೋನ್ ಪೇ ಇತ್ಯಾದಿ ಬೇರೆ ಯುಪಿಐ ಆ್ಯಪ್ಗಳಲ್ಲೂ ರುಪೆ ಕ್ರೆಡಿಟ್ ಕಾರ್ಡ್ಗಳನ್ನು ಬಳಸಬಹುದು.
ಇದನ್ನೂ ಓದಿ: RuPay Card: ಮಾಸ್ಟರ್ ಕಾರ್ಡ್, ವೀಸಾಗಿಂತ ರುಪೇ ಕ್ರೆಡಿಟ್ ಕಾರ್ಡ್ ಯಾಕೆ ಉತ್ತಮ? ಇಲ್ಲಿವೆ ರುಪೇ ಕಾರ್ಡ್ನ ಅನುಕೂಲತೆಗಳು
ಭೀಮ್ ಆ್ಯಪ್ನಲ್ಲಿ ರುಪೇ ಕ್ರೆಡಿಟ್ ಕಾರ್ಡ್ ಲಿಂಕ್ ಮಾಡುವ ಕ್ರಮಗಳು
- ಮೊಬೈಲ್ನಲ್ಲಿ ಭೀಮ್ ಆ್ಯಪ್ (BHIM) ತೆರೆಯಿರಿ
- ಲಿಂಕ್ಡ್ ಬ್ಯಾಂಕ್ ಅಕೌಂಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿ
- ಆ್ಯಡ್ ಅಕೌಂಟ್ ಸೆಕ್ಷನ್ನಲ್ಲಿ + ಸಹಿ ಕಾಣಬಹುದು. ಅದರಲ್ಲಿ ಬ್ಯಾಂಕ್ ಅಕೌಂಟ್ ಮತ್ತು ಕ್ರೆಡಿಟ್ ಕಾರ್ಡ್ ಡೀಟೇಲ್ಸ್ ಎಂಬ ಎರಡು ಆಯ್ಕೆಗಳಿರುತ್ತವೆ.
- ಈ ಪೈಕಿ ಕ್ರೆಡಿಟ್ ಕಾರ್ಡ್ ಆಪ್ಷನ್ ಆಯ್ದುಕೊಳ್ಳಿ. ನಿಮ್ಮ ಮೊಬೈಲ್ ನಂಬರ್ಗೆ ಲಿಂಕ್ ಆದ ಕ್ರೆಡಿಟ್ ಕಾರ್ಡ್ನ ವಿವರ ಕಾಣುತ್ತದೆ.
- ಕ್ರೆಡಿಟ್ ಕಾರ್ಡ್ನ ವ್ಯಾಲಿಡಿಟಿ ಪೀರಿಯಡ್ ಮತ್ತು ಕೊನೆಯ 6 ಅಂಕಿಗಳನ್ನು ನಮೂದಿಸಿ
- ನಿಮ್ಮ ಮೊಬೈಲ್ ನಂಬರ್ಗೆ ಒಟಿಪಿ ಪಡೆದು ಅದನ್ನು ಇಲ್ಲಿ ಹಾಕಿ
- ಯುಪಿಐ ಪಿನ್ ಹಾಕಿದರೆ ನೊಂದಣಿ ಪ್ರಕ್ರಿಯೆ ಪೂರ್ಣಗೊಂಡಂತೆ.
ಈಗ ನೀವು ಅಂಗಡಿಗಳಲ್ಲಿರುವ ಕ್ಯೂಅರ್ ಕೋಡ್ ಸ್ಕ್ಯಾನ್ ಮಾಡಿ ಹಣ ಪಾವತಿಸುವಾಗ ರುಪೇ ಕ್ರೆಡಿಟ್ ಕಾರ್ಡ್ ಆಯ್ದುಕೊಳ್ಳಬಹುದು. ಆದರೆ, ಕ್ರೆಡಿಟ್ ಕಾರ್ಡ್ನಿಂದ ನೀವು ಮಾಡುವ ವೆಚ್ಚ ಮಿತಿಯಲ್ಲಿರಲಿ.
ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ