ಭಾರತೀಯ ರೈಲ್ವೆ ಗರಿಮೆ… ವಿಶ್ವದ ಅತಿ ಶಕ್ತಿಶಾಲಿ ಹೈಡ್ರೋಜನ್ ಎಂಜಿನ್ ಅಭಿವೃದ್ದಿ; ಅಗ್ಗದ ಪ್ರಯಾಣಕ್ಕೆ ಅಮೃತ್ ಭಾರತ್ 2.0

|

Updated on: Jan 12, 2025 | 2:41 PM

Indian railways updates: ಹೈಡ್ರೋಜನ್ ಶಕ್ತ ರೈಲು ಎಂಜಿನ್ ಅಭಿವೃದ್ಧಿಪಡಿಸಿದ ನಾಲ್ಕು ದೇಶಗಳಲ್ಲಿ ಭಾರತ ಒಂದು. 1,200 ಎಚ್​ಪಿ ಪವರ್​ನ ಎಂಜಿನ್ ಅನ್ನು ದೇಶೀಯವಾಗಿ ನಿರ್ಮಿಸಲಾಗಿದೆ. ಇದು ವಿಶ್ವದ ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ರೈಲು ಎಂಜಿನ್ ಎನಿಸಿದೆ. ಇದೇ ವೇಳೆ ಕಡಿಮೆ ಬೆಲೆಗೆ ಉತ್ಕೃಷ್ಟ ರೈಲು ಪ್ರಯಾಣದ ಅನುಭವ ನೀಡಬಲ್ಲಂತಹ ಅಮೃತ್ ಭಾರತ್ 2.0 ಆವೃತ್ತಿಯ ರೈಲು ಬೋಗಿಗಳು ನಿರ್ಮಾಣವಾಗುತ್ತಿವೆ.

ಭಾರತೀಯ ರೈಲ್ವೆ ಗರಿಮೆ... ವಿಶ್ವದ ಅತಿ ಶಕ್ತಿಶಾಲಿ ಹೈಡ್ರೋಜನ್ ಎಂಜಿನ್ ಅಭಿವೃದ್ದಿ; ಅಗ್ಗದ ಪ್ರಯಾಣಕ್ಕೆ ಅಮೃತ್ ಭಾರತ್ 2.0
ಹೈಡ್ರೋಜನ್ ಟ್ರೈನು
Follow us on

ನವದೆಹಲಿ, ಜನವರಿ 12: ಭಾರತೀಯ ರೈಲ್ವೇಸ್ ಸಂಸ್ಥೆಯು ದೇಶೀಯವಾಗಿ ಹೈಡ್ರೋಜನ್ ಶಕ್ತ ಎಂಜಿನ್ ಅನ್ನು ಅಭಿವೃದ್ಧಿಪಡಿಸಿದೆ. ಹೈಡ್ರೋಜನ್ ಶಕ್ತ ರೈಲ್ವೆ ಎಂಜಿನ್ ಅನ್ನು ತಯಾರಿಸುವ ಶಕ್ತಿ ಹೊಂದಿರುವ ನಾಲ್ಕನೇ ದೇಶ ಭಾರತವಾಗಿದೆ. ಆದರೆ, ವಿಶ್ವದ ಅತ್ಯಂತ ಶಕ್ತಿಶಾಲಿ ಹೈಡ್ರೋಜನ್ ರೈಲ್ವೆ ಎಂಜಿನ್ ಅನ್ನು ಭಾರತೀಯ ರೈಲ್ವೆ ಅಭಿವೃದ್ಧಿಪಡಿಸಿದೆ. ಸಾಮಾನ್ಯವಾಗಿ ಹೈಡ್ರೋಜನ್ ಶಕ್ತ ಟ್ರೈನ್ ಎಂಜಿನ್​ನ ಸಾಮರ್ಥ್ಯ 500ರಿಂದ 600 ಹಾರ್ಸ್​ಪವರ್ ಇರುತ್ತದೆ. ಭಾರತೀಯ ರೈಲ್ವೆಯು 1,200 ಹಾರ್ಸ್​ಪವರ್ ಇರುವ ಎಂಜಿನ್ ಅನ್ನು ಅಭಿವೃದ್ಧಿಪಡಿಸಿದೆ. ಅದೂ ದೇಶೀಯವಾಗಿ ಇದನ್ನು ತಯಾರಿಸಿರುವುದು ವಿಶೇಷ.

1,200 ಹಾರ್ಸ್​ಪವರ್ ಶಕ್ತಿಯ ಎಂಜಿನ್​ನ ಹೈಡ್ರೋಜನ್ ಟ್ರೈನು ಸದ್ಯದಲ್ಲೇ ಹರ್ಯಾಣದ ಜಿಂದ್ ಮತ್ತು ಸೋನಿಪತ್ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಓಡುವ ನಿರೀಕ್ಷೆ ಇದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಇತ್ತೀಚೆಗೆ ಇದರ ಬಗ್ಗೆ ಮಾಹಿತಿ ನೀಡಿದ್ದು, ಅವರ ಪ್ರಕಾರ, ಎಂಜಿನ್​ನ ತಯಾರಿಕೆ ಪೂರ್ಣಗೊಂಡಿದ್ದು, ಸಿಸ್ಟಂ ಇಂಟಿಗ್ರೇಶನ್ ಕಾರ್ಯ ಪ್ರಗತಿಯಲ್ಲಿದೆ.

ಇದನ್ನೂ ಓದಿ: ಭಾರತದಲ್ಲಿ ದಾಖಲೆ ಸಂಖ್ಯೆಯಲ್ಲಿ ಬೆಂಜ್ ಕಾರುಗಳ ಮಾರಾಟ; 20 ಹೊಸ ಮಳಿಗೆ ತೆರೆಯಲು ಕಂಪನಿ ನಿರ್ಧಾರ

ತಂತ್ರಜ್ಞಾನ ಅಭಿವೃದ್ದಿಯು ಒಂದು ದೇಶಕ್ಕೆ ಆತ್ಮವಿಶ್ವಾಸ ತಂದುಕೊಡುತ್ತದೆ. ಅದರಲ್ಲೂ ದೇಶೀಯವಾಗಿ ಅಭಿವೃದ್ಧಿಯಾಗುವ ತಂತ್ರಜ್ಞಾನದಿಂದ ಸಾಕಷ್ಟು ಪ್ರಯೋಜನಗಳಿವೆ. ಹೈಡ್ರೋಜನ್ ಶಕ್ತ ಎಂಜಿನ್ ಅನ್ನು ಈ ಮಟ್ಟದಲ್ಲಿ ಅಭಿವೃದ್ಧಿಪಡಿಸಬಲ್ಲೆವೆಂದರೆ ಈ ತಂತ್ರಜ್ಞಾನವನ್ನು ಟ್ರಕ್, ಟಗ್​ಬೋಟ್ ಇತ್ಯಾದಿಗೆ ಅಳವಡಿಸುವ ನಿರೀಕ್ಷೆ ಇರುತ್ತದೆ ಎಂದಿದ್ದಾರೆ ಸಚಿವರು.

ಅಗ್ಗದ ದರಕ್ಕೆ ಗುಣಮಟ್ಟದ ಪ್ರಯಾಣ ಕೊಡುವ ಅಮೃತ್ ಭಾರತ್ 2.0

ಭಾರತೀಯ ರೈಲ್ವೇಸ್ ಅಗ್ಗದ ಪ್ರಯಾಣಕ್ಕೆ ಹೆಸರುವಾಸಿಯಾಗಿದೆ. ವಂದೇ ಭಾರತ್ ಟ್ರೈನುಗಳು ತುಸು ದುಬಾರಿ ಎನಿಸಿವೆ. ಈಗ ಅಮೃತ್ ಭಾರತ್ ಎಕ್ಸ್​ಪ್ರೆಸ್ ಟ್ರೈನುಗಳನ್ನು ಉನ್ನತೀಕರಿಸಲಾಗುತ್ತಿದೆ. ಇವು ಅಗ್ಗದ ದರಕ್ಕೆ ಉತ್ತಮ ಪ್ರಯಾಣ ಅನುಭವ ನೀಡುತ್ತವೆ. ಮೊನ್ನೆ ರೈಲ್ವೆ ಸಚಿವ ಡಾ. ಎ ವೈಷ್ಣವ್ ಅವರು ಚೆನ್ನೈನಲ್ಲಿರುವ ಐಸಿಎಫ್ ಫ್ಯಾಕ್ಟರಿಗೆ ಹೋಗಿ ಅಮೃತ್ ಭಾರತ್ 2.0 ರೈಲು ಬೋಗಿಗಳ ನಿರ್ಮಾಣ ಕಾರ್ಯವನ್ನು ವೀಕ್ಷಿಸಿದ್ದಾರೆ.

ಇದನ್ನೂ ಓದಿ: 2025ರಲ್ಲಿ ಬರಲಿವೆ ಸಖತ್ ಐಪಿಒಗಳು; 3 ಲಕ್ಷ ಕೋಟಿ ರೂಗೂ ಅಧಿಕ ಬಂಡವಾಳ ಸಂಗ್ರಹಣೆ ನಿರೀಕ್ಷೆ

ದೀರ್ಘಾವಧಿ ಪ್ರಯಾಣದಲ್ಲಿ ಆರಾಮವಾಗಿ ಕೂರಲು ಮತ್ತು ಮಲಗಲು ಅನುಕೂಲವಾಗುವಂತಹ ರೀತಿಯ ಸೀಟುಗಳು, ಮೊಬೈಲ್ ಚಾರ್ಜಿಂಗ್ ಸ್ಟೇಷನ್​ಗಳು, ಎಲ್​ಇಡಿ ಲೈಟಿಂಗ್, ಸಿಸಿಟಿವಿ ಕ್ಯಾಮೆರಾಗಳು, ಲಗೇಜುಗಳನ್ನಿರಿಸಲು ದೊಡ್ಡ ರ್ಯಾಕುಗಳು ಇತ್ಯಾದಿ ಸೌಲಭ್ಯಗಳನ್ನು ಅಮೃತ್ ಭಾರತ್​ನ ಹೊಸ ಆವೃತ್ತಿಯ ಬೋಗಿಗಳಲ್ಲಿ ಕಾಣಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ