ಭಾರತದ ಷೇರು ಮಾರುಕಟ್ಟೆ (Share Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಜೂನ್ 27ನೇ ತಾರೀಕಿನ ಸೋಮವಾರದಂದು ಏರಿಕೆಯನ್ನು ದಾಖಲಿಸಿವೆ. ಬಿಎಸ್ಇ ಸೆನ್ಸೆಕ್ಸ್ 433.30 ಪಾಯಿಂಟ್ಸ್ ಅಥವಾ ಶೇ 0.82ರಷ್ಟು ಮೇಲೇರಿ 53,161.28 ಪಾಯಿಂಟ್ಸ್ನಲ್ಲಿ ವಹಿವಾಟು ಮುಗಿಸಿತು. ಇನ್ನು ಎನ್ಎಸ್ಇ ನಿಫ್ಟಿ ಸೂಚ್ಯಂಕವು 132.70 ಪಾಯಿಂಟ್ಸ್ ಅಥವಾ ಶೇ 0.85ರಷ್ಟು ಹೆಚ್ಚಳವಾಗಿ, 15,832 ಪಾಯಿಂಟ್ಸ್ನೊಂದಿಗೆ ವ್ಯವಹಾರ ಚುಕ್ತಾ ಮಾಡಿತು. ಇಂದಿನ ಷೇರು ಮಾರುಕಟ್ಟೆ ವ್ಯವಹಾರದಲ್ಲಿ 2311 ಕಂಪೆನಿಯ ಷೇರುಗಳು ಏರಿಕೆಯನ್ನು ದಾಖಲಿಸಿದರೆ, 1030 ಕಂಪೆನಿಯ ಷೇರುಗಳು ಬೆಲೆಯಲ್ಲಿ ಇಳಿಕೆ ಕಂಡವು. 140 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಲಿಲ್ಲ.
ಎಲ್ಲ ವಲಯದ ಸೂಚ್ಯಂಕಗಳು ಏರಿಕೆಯಲ್ಲೇ ಮುಕ್ತಾಯವನ್ನು ಕಂಡವು. ಕ್ಯಾಪಿಟಲ್ ಗೂಡ್ಸ್, ಮಾಹಿತಿ ತಂತ್ರಜ್ಞಾನ ವಲಯದ ಸೂಚ್ಯಂಕಗಳು ತಲಾ ಶೇ 2ರಷ್ಟು ಹೆಚ್ಚಳ ದಾಖಲಿಸಿದವು. ಬಿಎಸ್ಇ ಮಿಡ್ಕ್ಯಾಪ್ ಸೂಚ್ಯಂಕ ಶೇ 0.8 ಮತ್ತು ಸ್ಮಾಲ್ಕ್ಯಾಪ್ ಸೂಚ್ಯಂಕ ಶೇ 1.5ರಷ್ಟು ಮೇಲೇರಿದವು.
ನಿಫ್ಟಿಯಲ್ಲಿ ಏರಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಕೋಲ್ ಇಂಡಿಯಾ ಶೇ 3.12
ಒಎನ್ಜಿಸಿ ಶೇ 3.02
ಲಾರ್ಸನ್ ಶೇ 2.74
ಎಚ್ಸಿಎಲ್ ಟೆಕ್ ಶೇ 2.65
ಟೆಕ್ ಮಹೀಂದ್ರಾ ಶೇ 2.65
ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ
ಅಪೋಲೋ ಹಾಸ್ಪಿಟಲ್ ಶೇ -1.14
ಐಷರ್ ಮೋಟಾರ್ಸ್ ಶೇ -1.03
ಎಚ್ಡಿಎಫ್ಸಿ ಲೈಫ್ ಶೇ -0.61
ಕೊಟಕ್ ಮಹೀಂದ್ರಾ ಶೇ -0.40
ರಿಲಯನ್ಸ್ ಶೇ -0.30
ಇದನ್ನೂ ಓದಿ: ಷೇರು ಮಾರುಕಟ್ಟೆ ಬೆಲೆಗಳ ಏರಿಳಿತ ಊಹಿಸುವುದು ಹೇಗೆ ಗೊತ್ತಾ..! ಇಲ್ಲಿದೆ ಮಾಹಿತಿ
Published On - 4:47 pm, Mon, 27 June 22