AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಚ್ ಬಾಕ್ಸ್ ಜೊತೆ ಗೋಲ್ಡ್ ಕಾಯಿನ್, ಕಾಜು ಕತ್ಲಿ, ಡಿನ್ನರ್ ಸೆಟ್ ಇತ್ಯಾದಿ… ಭಾರತೀಯರ ದೀಪಾವಳಿ ಆನ್​ಲೈನ್ ಶಾಪಿಂಗ್ ವಿವರ

ಈ ಬಾರಿಯ ದೀಪಾವಳಿ ಹಬ್ಬಕ್ಕೆ ಭಾರತೀಯರು ಆನ್‌ಲೈನ್‌ನಲ್ಲಿ ಏನೇನು ಖರೀದಿಸಿದ್ದಾರೆ? ಧನತ್ರಯೋದಶಿ ದಿನ ಎಷ್ಟು ಚಿನ್ನ ಮಾರಾಟವಾಗಿದೆ? ಯಾವ ಸಿಹಿ ತಿಂಡಿಗಳಿಗೆ ಹೆಚ್ಚು ಆರ್ಡರ್ ಬಂದಿದೆ? ಯಾವ ಹೊತ್ತಲ್ಲಿ ಶಾಪಿಂಗ್ ಹೆಚ್ಚಿತ್ತು? ಇವೆ ಇತ್ಯಾದಿ ವಿವಿಧ ಕುತೂಹಲಕಾರಿ ಅಂಶಗಳನ್ನೊಳಗೊಂಡ ವರದಿಯೊಂದನ್ನು ಪ್ರಮುಖ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ 'ಇನ್‌ಸ್ಟಾಮಾರ್ಟ್' ಬಿಡುಗಡೆ ಮಾಡಿದೆ.

ಲಂಚ್ ಬಾಕ್ಸ್ ಜೊತೆ ಗೋಲ್ಡ್ ಕಾಯಿನ್, ಕಾಜು ಕತ್ಲಿ, ಡಿನ್ನರ್ ಸೆಟ್ ಇತ್ಯಾದಿ... ಭಾರತೀಯರ ದೀಪಾವಳಿ ಆನ್​ಲೈನ್ ಶಾಪಿಂಗ್ ವಿವರ
ದೀಪಾವಳಿ ಶಾಪಿಂಗ್Image Credit source: Press Release
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 10, 2026 | 5:41 PM

Share

ನವದೆಹಲಿ, ನವೆಂಬರ್ 10: ದೀಪಾವಳಿ ಹಬ್ಬ ಮತ್ತು ಧನತ್ರಯೋದಶಿ ಸಂದರ್ಭದಲ್ಲಿ ಭಾರತೀಯರು ಆನ್‌ಲೈನ್ ಮೂಲಕ ನಡೆಸಿದ ಶಾಪಿಂಗ್‌ನ ಕುತೂಹಲಕಾರಿ ಅಂಕಿಅಂಶಗಳನ್ನು ‘ಇನ್‌ಸ್ಟಾಮಾರ್ಟ್’ ಬಿಡುಗಡೆ ಮಾಡಿದೆ. ನವೆಂಬರ್ 6 ರ ಧನತ್ರಯೋದಶಿ ಆರಂಭವಾಗುತ್ತಿದ್ದಂತೆ (ಮಧ್ಯರಾತ್ರಿ 12:00:30 ಕ್ಕೆ) ಹೈದರಾಬಾದ್‌ನ ಗ್ರಾಹಕರೊಬ್ಬರು 24 ಕ್ಯಾರೆಟ್‌ನ ಹೂವಿನ ವಿನ್ಯಾಸದ ಚಿನ್ನದ ನಾಣ್ಯವನ್ನು ಆರ್ಡರ್ ಮಾಡಿದ್ದಾರೆ. ಇದರ ಬೆನ್ನಲ್ಲೇ ಕೇವಲ 4 ಸೆಕೆಂಡ್‌ಗಳ ಅಂತರದಲ್ಲಿ ಬೆಂಗಳೂರಿನ ಗ್ರಾಹಕರೊಬ್ಬರು ಬೆಳ್ಳಿ ನಾಣ್ಯ ಆರ್ಡರ್ ಮಾಡಿದ್ದಾರೆ. ಇಂಥ ಕೆಲ ವಿಶೇಷ ಹಬ್ಬದ ಶಾಪಿಂಗ್ ವಿವರವನ್ನು ಇನ್​ಸ್ಟಾಮಾರ್ಟ್ ವರದಿಯಲ್ಲಿ ಕಾಣಬಹುದು.

ಖರೀದಿಯಾದ ಪ್ರತಿ ಮೂರು ಚಿನ್ನದ ನಾಣ್ಯಗಳಲ್ಲಿ ಎರಡು ಗುಲಾಬಿ ಅಥವಾ ಹೂವಿನ ವಿನ್ಯಾಸದ್ದಾಗಿದ್ದರೆ, ಶೇ. 73 ರಷ್ಟು ಜನರು ಲಕ್ಷ್ಮಿ-ಗಣೇಶ ವಿನ್ಯಾಸದ ಬೆಳ್ಳಿ ನಾಣ್ಯಗಳನ್ನು ಇಷ್ಟಪಟ್ಟು ಖರೀದಿಸಿದ್ದಾರೆ. ಸಂಜೆ 6:38 ರ ಸಮಯವು ಅತಿ ಹೆಚ್ಚು ಚಿನ್ನ-ಬೆಳ್ಳಿ ಆರ್ಡರ್ ಬಂದ ‘ಬ್ಯುಸಿ ನಿಮಿಷ’ವಾಗಿ ದಾಖಲಾಗಿದೆ.

ಸಿಹಿತಿಂಡಿಗಳಲ್ಲಿ ‘ಕಾಜು ಕತ್ಲಿ’ಯದ್ದೇ ಹವಾ

ದೀಪಾವಳಿ ಸಿಹಿತಿಂಡಿಗಳ ಪಟ್ಟಿಯಲ್ಲಿ ‘ಕಾಜು ಕತ್ಲಿ’ ಮೊದಲ ಸ್ಥಾನ ಪಡೆದಿದೆ. ಇದರ ನಂತರ ಮೋತಿಚೂರ್ ಲಡ್ಡು, ಬೇಸನ್ ಲಡ್ಡು, ಮೈಸೂರ್ ಪಾಕ್ ಮತ್ತು ಸೋನ್ ಪಾಪಡಿ ಅತಿ ಹೆಚ್ಚು ಮಾರಾಟವಾಗಿವೆ.

ಇದನ್ನೂ ಓದಿ: ಇಪಿಎಫ್​ಒ ವಿಶ್ವಸ್ತ ಮಂಡಳಿ ಸಭೆ ನವೆಂಬರ್ 19ಕ್ಕೆ; ಕನಿಷ್ಠ ಇಪಿಎಸ್ ಪಿಂಚಣಿ ಏರಿಸುವ ಸಂಬಂಧ ಚರ್ಚೆ

ಪಾರ್ಟಿಗಳಿಗೆ ಬೇಕಾದ ವಸ್ತುಗಳ ಆರ್ಡರ್ ಕಳೆದ ವರ್ಷಕ್ಕಿಂತ ಶೇ. 162 ರಷ್ಟು ಹೆಚ್ಚಾಗಿದ್ದು, ದೀಪಾವಳಿಯ ಹಿಂದಿನ ರಾತ್ರಿ ದಿನಸಿಯೇತರ ವಸ್ತುಗಳ ಪೈಕಿ ‘ಡಯಟ್ ಕೋಕಾ ಕೋಲಾ’ ಅತಿ ಹೆಚ್ಚು ಬೇಡಿಕೆ ಪಡೆದಿದೆ. ಉಡುಗೊರೆಗಳ ವಿಭಾಗದಲ್ಲಿ ‘ಡಿನ್ನರ್ ಸೆಟ್’ ಮತ್ತು ಡ್ರೈ-ಫ್ರೂಟ್ಸ್ ಪ್ಯಾಕ್‌ಗಳಿಗೆ ಭಾರಿ ಬೇಡಿಕೆ ವ್ಯಕ್ತವಾಗಿದೆ.

ಮೆಟ್ರೋಗಳನ್ನು ಮೀರಿಸಿದ ಸಣ್ಣ ನಗರಗಳು

ಹಬ್ಬದ ಶಾಪಿಂಗ್‌ನಲ್ಲಿ ರಾಯ್‌ಪುರ, ಮಧುರೈ, ಗುವಾಹಟಿ, ತ್ರಿಶೂರ್ ಮತ್ತು ಕೊಲ್ಲಂ ನಗರಗಳು ಭಾರಿ ಬೇಡಿಕೆ ಸೃಷ್ಟಿಸುವ ಮೂಲಕ ದೊಡ್ಡ ಮೆಟ್ರೋ ನಗರಗಳಿಗೆ ತೀವ್ರ ಪೈಪೋಟಿ ನೀಡಿವೆ.

ಇದನ್ನೂ ಓದಿ: ರಿಲಯನ್ಸ್ ಜಿಯೋ 10,000 ರೂ ಪ್ರೀಪೇಯ್ಡ್ ಪ್ಲಾನ್; ಇದರ ವ್ಯಾಲಿಡಿಟಿ, ದೈನಂದಿನ ಡಾಟಾ, ಒಟಿಟಿ ಮತ್ತಿತರ ಸೇವೆಗಳ ವಿವರ

ವೈವಿಧ್ಯಮಯ ಮತ್ತು ರೋಚಕ ಕಾರ್ಟ್‌ಗಳು

ಮುಂಬೈನ ಗ್ರಾಹಕರೊಬ್ಬರು ಒಂದೇ ಆರ್ಡರ್‌ನಲ್ಲಿ ಚಿನ್ನದ ನಾಣ್ಯಗಳಿಗಾಗಿ ಬರೋಬ್ಬರಿ 1.11 ಲಕ್ಷ ರೂ. ಖರ್ಚು ಮಾಡಿದ್ದಾರೆ.

ಬೆಂಗಳೂರಿನ ಗ್ರಾಹಕರೊಬ್ಬರು 2 ಗ್ರಾಂ ಲಕ್ಷ್ಮಿ ಚಿನ್ನದ ನಾಣ್ಯದ ಜೊತೆಗೆ ಅಡುಗೆಗೆ ಬಳಸುವ ‘ಆಲಿವ್ ಆಯಿಲ್’ ಖರೀದಿಸಿದ್ದಾರೆ. ಗುರುಗ್ರಾಮ್​ನಲ್ಲಿ 1 ಗ್ರಾಂ ಚಿನ್ನದೊಂದಿಗೆ ಮಗುವಿನ ‘ಲಂಚ್ ಬಾಕ್ಸ್’ ಹಾಗೂ ದೆಹಲಿಯಲ್ಲಿ ಎಲ್.ಇ.ಡಿ ಕರ್ಟನ್ ಲೈಟ್ಸ್ ಆರ್ಡರ್ ಮಾಡಲಾಗಿದೆ. ನೋಯ್ಡಾದಲ್ಲಿ ಹಬ್ಬದ ಸ್ವಚ್ಛತೆಗಾಗಿ ಏರ್ ಪ್ಯೂರಿಫೈಯರ್ ಮತ್ತು ವ್ಯಾಕ್ಯೂಮ್ ಕ್ಲೀನರ್ ಖರೀದಿಸಿರುವುದು ವಿಶೇಷವಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ರೈಲಿನಡಿ ಬಿದ್ದು ಸಾಯುತ್ತಿದ್ದ ಮಹಿಳೆಯ ಜೀವ ಕಾಪಾಡಿದ ಆರ್​ಪಿಎಫ್​ ಸಿಬ್ಬಂದಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ದರ್ಶನ್ ಜೈಲಿನಿಂದ ಬಿಡುಗಡೆಯಾಗಲಿ ಎಂದು ಹಾಸನಾಂಬೆಗೆ ಹರಕೆ ಹೊತ್ತ ಅಭಿಮಾನಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಕೆಎಸ್‌ಆರ್‌ಟಿಸಿ ಲಗೇಜ್ ಶುಲ್ಕ ಹೆಚ್ಚಳ: ಇಂದಿನಿಂದಲೇ ಹೊಸ ದರ ಜಾರಿ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಬಿಗ್ ಬಾಸ್ ಕನ್ನಡ: ತಾಂಡವ್, ಗಗನ್ ಸ್ನೇಹದಲ್ಲಿ ಬಿರುಕು; ಇನ್ಮುಂದೆ ಬೇರೆ ಆಟ
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
ಮುಂಬೈನಲ್ಲಿ ಪಟಾಕಿ ಅಂಗಡಿಯಲ್ಲಿ ಸ್ಫೋಟ; 16 ವರ್ಷದ ಬಾಲಕ ಸಾವು
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ
7 ಮಂದಿ ಕೊಲೆ ಪ್ರಕರಣ: ಆರೋಪಿ ಇಂದುಶೇಖರ್​​ ವಿಚಾರಣೆ ಮತ್ತಷ್ಟು ತೀವ್ರ
ಮಾದಪ್ಪನ ಬೆಟ್ಟದಲ್ಲಿ ಇಂದು ದೀಪಾವಳಿ ಜಾತ್ರಾ ಮಹೋತ್ಸವ; ಬೆಳಗಿದವು ಲಕ್ಷದೀಪ
ಮಾದಪ್ಪನ ಬೆಟ್ಟದಲ್ಲಿ ಇಂದು ದೀಪಾವಳಿ ಜಾತ್ರಾ ಮಹೋತ್ಸವ; ಬೆಳಗಿದವು ಲಕ್ಷದೀಪ
ಹಾಸನಾಂಬೆ ದರ್ಶನಕ್ಕೆ ಇಂದೇ ಕೊನೆಯ ದಿನ
ಹಾಸನಾಂಬೆ ದರ್ಶನಕ್ಕೆ ಇಂದೇ ಕೊನೆಯ ದಿನ
ಅಣ್ಣಾವ್ರ ಸಂಬಂಧಿಕರ ಮನೆಯಲ್ಲಿ ನಿಗೂಢ ಸ್ಫೋಟ; ಕಿಟಕಿ ಗಾಜುಗಳು ಪುಡಿಪುಡಿ!
ಅಣ್ಣಾವ್ರ ಸಂಬಂಧಿಕರ ಮನೆಯಲ್ಲಿ ನಿಗೂಢ ಸ್ಫೋಟ; ಕಿಟಕಿ ಗಾಜುಗಳು ಪುಡಿಪುಡಿ!
ಬೆಂಗಳೂರಿನ ಅಮೃತಹಳ್ಳಿ ಬಳಿ ಭಾರಿ ಅಗ್ನಿ ಅವಘಡ
ಬೆಂಗಳೂರಿನ ಅಮೃತಹಳ್ಳಿ ಬಳಿ ಭಾರಿ ಅಗ್ನಿ ಅವಘಡ