
ನವದೆಹಲಿ, ನವೆಂಬರ್ 26: ಪ್ರಸಕ್ತ ಹಣಕಾಸು ವರ್ಷದ ಮೊದಲಾರ್ಧದಲ್ಲಿ (2025ರ ಏಪ್ರಿಲ್ನಿಂದ ಸೆಪ್ಟೆಂಬರ್ವರೆಗೆ) ಭಾರತದ ಜಿಡಿಪಿ ಬೆಳವಣಿಗೆ (GDP) ಶೇ. 7.6ರ ದರದಲ್ಲಿ ಆಗಿರಬಹುದು ಎಂದು ಐಸಿಐಸಿಐ ಬ್ಯಾಂಕ್ನ ವರದಿಯೊಂದರಲ್ಲಿ ನಿರೀಕ್ಷೆ ಮಾಡಲಾಗಿದೆ. ಮೊದಲ ಕ್ವಾರ್ಟರ್ನಲ್ಲಿ ಜಿಡಿಪಿ ಶೇ. 7.8ರಷ್ಟು ಬೆಳವಣಿಗೆ ದಾಖಲಿಸಿದೆ. ಐಸಿಐಸಿಐ ವರದಿಯಲ್ಲಿ ಮಾಡಲಾದ ಅಂದಾಜು ಪ್ರಕಾರ ಎರಡನೇ ಕ್ವಾರ್ಟರ್ನಲ್ಲಿ ಶೇ. 7.5ರಷ್ಟು ಜಿಡಿಪಿ ಬೆಳೆಯುವ ಸಾಧ್ಯತೆ ಇದೆ.
ಈ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ ಜಿಡಿಪಿ ಬೆಳವಣಿಗೆ ಮಂದಗತಿಯಲ್ಲಿ ಇರಬಹುದು ಎಂದು ಹೇಳಿರುವ ಈ ವರದಿಯ ಪ್ರಕಾರ ಕೊನೆಯ ಎರಡು ಕ್ವಾರ್ಟರ್ನಲ್ಲಿ ಶೇ. 6.4ರಷ್ಟು ಮಾತ್ರ ಹೆಚ್ಚಬಹುದು. ಟ್ಯಾರಿಫ್ ಕಾರಣದಿಂದ ರಫ್ತು ಕುಂಠಿತಗೊಂಡಿರುವುದು, ಟ್ಯಾಕ್ಸ್ ಸಂಗ್ರಹ ಕಡಿಮೆ ಇರುವ ಕಾರಣ ಸರ್ಕಾರದ ಬಂಡವಾಳ ವೆಚ್ಚ ಕಡಿಮೆ ಆಗಲಿರುವುದು ದ್ವಿತೀಯಾರ್ಧದ ಆರ್ಥಿಕ ಬೆಳವಣಿಗೆಗೆ ಸ್ವಲ್ಪ ಹಿನ್ನಡೆ ತರಬಹುದು ಎಂದು ಹೇಳಲಾಗಿದೆ. ಆದರೆ, ಅನುಭೋಗ ಪ್ರಮಾಣ ಉತ್ತಮವಾಗಿರುವುದು ಆರ್ಥಿಕತೆಗೆ ಸಕಾರಾತ್ಮಕವಾಗಿರುವ ಸಂಗತಿ ಎನಿಸಿದೆ.
ಇದನ್ನೂ ಓದಿ: ಮುಂದಿನ ವರ್ಷ 5,000 ರೂ ಡಾಲರ್ಗೆ ಏರಲಿದೆ ಚಿನ್ನದ ಬೆಲೆ; ಭಾರತದಲ್ಲಿ ಎಷ್ಟು ಹೆಚ್ಚಬಹುದು ಇದರ ಬೆಲೆ?
ಐಸಿಐಸಿಐ ವರದಿಯು ಈ ಹಣಕಾಸು ವರ್ಷಕ್ಕೆ ಜಿಡಿಪಿ ಬೆಳವಣಿಗೆ ಸಾಧ್ಯತೆ ಶೇ. 7.0 ಎಂದು ನಿರೀಕ್ಷಿಸಿದೆ. ಹಾಗೆಯೇ, ಮುಂದಿನ ಹಣಕಾಸು ವರ್ಷದಲ್ಲಿ (2026-27) ಆರ್ಥಿಕತೆ ಶೇ 6.5ರಷ್ಟು ಹೆಚ್ಚಬಹುದು.
ಜಿಎಸ್ಟಿ ಹಾಗೂ ಆದಾಯ ತೆರಿಗೆ ಕಡಿತದಿಂದ ಸರ್ಕಾರಕ್ಕೆ ಆದಾಯ ಕಡಿಮೆ ಆಗಿ, ಸರ್ಕಾರದ ಬಂಡವಾಳ ವೆಚ್ಚಕ್ಕೆ ಹೆಚ್ಚು ಹಣ ಇಲ್ಲದಂತಾಗಿದೆ. ಆದರೆ, ಟ್ಯಾಕ್ಸ್ ಇಳಿಸಿರುವುದರಿಂದ ಅನುಭೋಗ ಹೆಚ್ಚುತ್ತಿರುವುದನ್ನು ತಜ್ಞರು ಗುರುತಿಸಿದ್ದಾರೆ. ಐಸಿಐಸಿಐ ವರದಿಯಲ್ಲೂ ಈ ಅಂಶವನ್ನು ಗುರುತಿಸಲಾಗಿದೆ. ಜಿಎಸ್ಟಿ ದರ ಇಳಿಕೆಯ ಪರಿಣಾಮವು ಮೂರನೇ ಕ್ವಾರ್ಟರ್ನಲ್ಲಿ ಅನುಭೋಗದ ಮೇಲೆ ಆಗುತ್ತಿದೆ ಎಂದು ಹೇಳಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ