ಭಾರತದ ಫಾರೆಕ್ಸ್ ರಿಸರ್ವ್ಸ್ 642.631 ಬಿಲಿಯನ್ ಡಾಲರ್​ಗೆ ಏರಿಕೆ; ಇದು ಸಾರ್ವಕಾಲಿಕ ಗರಿಷ್ಠ ಮಟ್ಟ

|

Updated on: Mar 31, 2024 | 1:29 PM

India's Forex Reserves: ಭಾರತದ ಫಾರೆಕ್ಸ್ ರಿಸರ್ವ್ಸ್ ಮೊತ್ತ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ. ಆರ್​ಬಿಐ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಮಾರ್ಚ್ 22ರಂದು ಅಂತ್ಯಗೊಂಡ ವಾರದಲ್ಲಿ ಫಾರೆಕ್ಸ್ ರಿಸರ್ವ್ಸ್ 642.631 ಬಿಲಿಯನ್ ಡಾಲರ್​​ನಷ್ಟಾಗಿದೆ. 2021ರ ಸೆಪ್ಟಂಬರ್​ನಲ್ಲಿ ಫಾರೆಕ್ಸ್ ರಿಸರ್ವ್ಸ್ 642.453 ಬಿಲಿಯನ್ ಡಾಲರ್​ನಷ್ಟಾಗಿತ್ತು. ಆ ಮಟ್ಟವನ್ನು ಮೀರಿಸಿ ಅದು ಹೆಚ್ಚಾಗಿದೆ. ಫಾರೀನ್ ಕರೆನ್ಸಿ ಆಸ್ತಿ, ಎಸ್​ಡಿಆರ್ ಕಡಿಮೆ ಆದರೂ ಒಟ್ಟಾರೆ ಫಾರೆಕ್ಸ್ ರಿಸರ್ವ್ಸ್ ಹೆಚ್ಚಲು ಚಿನ್ನದ ಮೀಸಲು ಸಂಗ್ರಹ ಹೆಚ್ಚಾಗಿದ್ದು ಕಾರಣ.

ಭಾರತದ ಫಾರೆಕ್ಸ್ ರಿಸರ್ವ್ಸ್ 642.631 ಬಿಲಿಯನ್ ಡಾಲರ್​ಗೆ ಏರಿಕೆ; ಇದು ಸಾರ್ವಕಾಲಿಕ ಗರಿಷ್ಠ ಮಟ್ಟ
ಫಾರೆಕ್ಸ್ ರಿಸರ್ವ್ಸ್
Follow us on

ನವದೆಹಲಿ, ಮಾರ್ಚ್ 31: ಭಾರತದ ವಿದೇಶೀ ವಿನಿಮಯ ಮೀಸಲು ನಿಧಿ (Forex Reserves) ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿದೆ. ಮಾರ್ಚ್ 22ರಂದು ಅಂತ್ಯಗೊಂಡ ವಾರದಲ್ಲಿ 140 ಮಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ರಿಸರ್ವ್ಸ್ ಹೆಚ್ಚಳವಾಗಿದೆ. ಇದರೊಂದಿಗೆ ನಿಧಿ ಮೊತ್ತ 642.631 ಬಿಲಿಯನ್ ಡಾಲರ್ ಆಗಿದೆ. ಹಿಂದಿನ ವಾರದಲ್ಲಿ 6.396 ಬಿಲಿಯನ್ ಡಾಲರ್​ನಷ್ಟು ಏರಿತ್ತು. ಆರ್​ಬಿಐ ದತ್ತಾಂಶದ ಪ್ರಕಾರ 2021ರ ಸೆಪ್ಟೆಂಬರ್ ತಿಂಗಳಲ್ಲಿ ಫಾರೆಕ್ಸ್ ರಿಸರ್ವ್ಸ್ ಮೊತ್ತ 642.453 ಬಿಲಿಯನ್ ಡಾಲರ್​ನಷ್ಟಿತ್ತು. ಅದು ಸಾರ್ವಕಾಲಿಕ ಗರಿಷ್ಠ ಮೊತ್ತವಾಗಿತ್ತು. ಈಗ ಅದನ್ನೂ ಮೀರಿಸಿ ಫಾರೆಕ್ಸ್ ರಿಸರ್ವ್ಸ್ ಹೆಚ್ಚಾಗಿದೆ.

ಮಾರ್ಚ್ 29ರಂದು ಆರ್​​ಬಿಐ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ಮಾರ್ಚ್ 22ರ ವಾರದಲ್ಲಿ 140 ಮಿಲಿಯನ್ ಡಾಲರ್​ನಷ್ಟು ಅಲ್ಪ ಹೆಚ್ಚಳ ಆಗಿದೆ. ಈ ಪೈಕಿ ವಿದೇಶೀ ಕರೆನ್ಸಿ ಸಂಗ್ರಹ ಕಡಿಮೆ ಆಗಿದೆ. 123 ಮಿಲಿಯನ್ ಡಾಲರ್​ನಷ್ಟು ಕರೆನ್ಸಿ ಆಸ್ತಿ ಕುಂಠಿತವಾಗಿದೆ. ಎಸ್​ಡಿಆರ್ ಅಥವಾ ಸ್ಪೆಷಲ್ ಡ್ರಾಯಿಂಗ್ ರೈಟ್ಸ್ ಕೂಡ 57 ಮಿಲಿಯನ್ ಡಾಲರ್ ಕಡಿಮೆ ಆಗಿದೆ. ಐಎಂಎಫ್​​ನೊಂದಿಗಿನ ನಿಧಿ ಕೂಡ 27 ಮಿಲಿಯನ್ ಡಾಲರ್​ನಷ್ಟು ಕಡಿಮೆ ಆಗಿದೆ. ಈ ಮೂರು ಕೂಡ ಕಡಿಮೆ ಆದರೂ ಕೂಡ ಒಟ್ಟಾರೆ ಫಾರೆಕ್ಸ್ ರಿಸರ್ವ್ಸ್ ಹೆಚ್ಚಲು ಕಾರಣವಾಗಿರುವುದು ಗೋಲ್ಡ್ ರಿಸರ್ವ್ಸ್​ನಲ್ಲಿ ಆದ ಹೆಚ್ಚಳ. ಚಿನ್ನದ ಮೀಸಲು ಸಂಪತ್ತು 347 ಮಿಲಿಯನ್ ಡಾಲರ್​ನಷ್ಟು ಹೆಚ್ಚಾಗಿದೆ.

ಮಾರ್ಚ್ 22ಕ್ಕೆ ಭಾರತದ ಫಾರೆಕ್ಸ್ ರಿಸರ್ವ್ಸ್

ಒಟ್ಟಾರೆ ಫಾರೆಕ್ಸ್ ರಿಸರ್ವ್ಸ್: 642.631 ಬಿಲಿಯನ್ ಡಾಲರ್

  • ಫಾರೀನ್ ಕರೆನ್ಸಿ ಆಸ್ತಿ: 568.264 ಬಿಲಿಯನ್ ಡಾಲರ್
  • ಗೋಲ್ಡ್ ರಿಸರ್ವ್ಸ್: 51.487 ಬಿಲಿಯನ್ ಡಾಲರ್
  • ಎಸ್​ಡಿಆರ್: 18.219 ಬಿಲಿಯನ್ ಡಾಲರ್
  • ಐಎಂಎಫ್​ನಲ್ಲಿನ ನಿಧಿ: 4.662 ಬಿಲಿಯನ್ ಡಾಲರ್

ಇದನ್ನೂ ಓದಿ: ಚಿನ್ನ ವರ್ಸಸ್ ಷೇರು, 2023-24ರಲ್ಲಿ ಹೆಚ್ಚು ಲಾಭ ತಂದಿದ್ದು ಯಾವುದು? ಇಂಟ್ರೆಸ್ಟಿಂಗ್ ವಿಷಯ

ಭಾರತದ ಫಾರೆಕ್ಸ್ ರಿಸರ್ವ್ಸ್ ಮೊತ್ತದಲ್ಲಿ ಭಾರತದ್ದು ನಾಲ್ಕನೇ ಸ್ಥಾನ

ವಿದೇಶೀ ವಿನಿಮಯ ಮೀಸಲು ನಿಧಿ ಸಂಗ್ರಹದಲ್ಲಿ ಭಾರತ ನಾಲ್ಕನೇ ಸ್ಥಾನದಲ್ಲಿದೆ. ಚೀನಾ ಬಳಿ 3.2 ಟ್ರಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ರಿಸರ್ವ್ಸ್ ಇದೆ. ಜಪಾನ್ 1.28 ಟ್ರಿಲಿಯನ್ ಡಾಲರ್​ನಷ್ಟು ಸಂಗ್ರಹ ಹೊಂದಿದೆ. ಸ್ವಿಟ್ಜರ್​ಲ್ಯಾಂಡ್ 868 ಬಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ಆಸ್ತಿ ಹೊಂದಿದೆ. ಭಾರತದ ಕೆಳಗೆ ಐದನೇ ಸ್ಥಾನದಲ್ಲಿರುವ ರಷ್ಯಾ ಬಳಿಕ 590 ಬಿಲಿಯನ್ ಡಾಲರ್​ನಷ್ಟು ಫಾರೆಕ್ಸ್ ಮೀಸಲು ಸಂಪತ್ತು ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ