ಚಿನ್ನ ವರ್ಸಸ್ ಷೇರು, 2023-24ರಲ್ಲಿ ಹೆಚ್ಚು ಲಾಭ ತಂದಿದ್ದು ಯಾವುದು? ಇಂಟ್ರೆಸ್ಟಿಂಗ್ ವಿಷಯ

Equities Gave Far More Return than Gold In 2023-24: ಹೂಡಿಕೆಗಳಿಗೆ ಚಿನ್ನ ಮತ್ತು ಈಕ್ವಿಟಿ ಬಹಳ ಮಂದಿಗೆ ಆದ್ಯತೆಯ ಆಯ್ಕೆಗಳು. ಎರಡೂ ಕೂಡ ಉತ್ತಮ ರಿಟರ್ನ್ ತಂದುಕೊಡಬಲ್ಲ ಸಾಮರ್ಥ್ಯ ಹೊಂದಿವೆ. ಸೀಮಿತ ಸಂಪತ್ತಿನ ಚಿನ್ನಕ್ಕೆ ಯಾವತ್ತೂ ಡಿಮ್ಯಾಂಡ್ ಇದೆ. ಆದರೆ, 2023-24ರ ವರ್ಷದಲ್ಲಿ ಭಾರತದ ಷೇರು ಮಾರುಕಟ್ಟೆ ಸೂಪರ್ ಡೂಪರ್ ಹಿಟ್ ಆಗಿದೆ. ಬಹುತೇಕ ಎಲ್ಲಾ ಇಂಡೆಕ್ಸ್​ಗಳೂ ಭರ್ಜರಿಯಾಗಿ ಬೆಳೆದಿವೆ. ಚಿನ್ನ ಶೇ. 13.5ರಷ್ಟು ಬೆಳೆದರೆ, ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಇಂಡೆಕ್ಸ್​​ಗಳು ಶೇ. 60ಕ್ಕಿಂತಲೂ ಹೆಚ್ಚು ಬೆಳವಣಿಗೆ ತೋರಿವೆ.

ಚಿನ್ನ ವರ್ಸಸ್ ಷೇರು, 2023-24ರಲ್ಲಿ ಹೆಚ್ಚು ಲಾಭ ತಂದಿದ್ದು ಯಾವುದು? ಇಂಟ್ರೆಸ್ಟಿಂಗ್ ವಿಷಯ
ಷೇರು ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Mar 31, 2024 | 1:20 PM

ಪ್ರಸಕ್ತ ಅತ್ಯಧಿಕ ರಿಟರ್ನ್ ಕೊಡಬಲ್ಲ ಹೂಡಿಕೆಗಳಲ್ಲಿ ಷೇರು ಮಾರುಕಟ್ಟೆ, ಚಿನ್ನ ಪ್ರಮುಖವಾದುದು. ಚಿನ್ನ (gold) ಸದಾ ಆಕರ್ಷಣೆ ಉಳಿಸಿಕೊಳ್ಳಬಲ್ಲ ವಸ್ತು. ಅದರ ಮೇಲೆ ಮಾಡುವ ಹೂಡಿಕೆ ಯಾವತ್ತು ನಷ್ಟ ತರುವಂಥದ್ದಲ್ಲ. ಇನ್ನೊಂದೆಡೆ ಈಕ್ವಿಟಿ ಅಥವಾ ಷೇರು ಮಾರುಕಟ್ಟೆ (share market) ಅದ್ವಿತೀಯ ರಿಟರ್ನ್ ಕೊಡಬಲ್ಲುದಾದರೂ ರಿಸ್ಕ್ ಅಂಶ ಹೆಚ್ಚು. ಹೀಗಾಗಿ ನೀವು ಚಿನ್ನ ಮತ್ತು ಈಕ್ವಿಟಿ ಎರಡರಲ್ಲೂ ಹೂಡಿಕೆ ಮಾಡುವುದು ಜಾಣತನ. ಒಂದು ವೇಳೆ ಎರಡರಲ್ಲಿ ಒಂದನ್ನು ಮಾತ್ರವೇ ಆಯ್ಕೆ ಮಾಡಿಕೊಳ್ಳಬೇಕು ಎಂಬ ಸಂದಿಗ್ದತೆ ಬಂದರೆ ಏನು ಮಾಡಬೇಕು? ಷೇರೋ, ಚಿನ್ನವೋ ಯಾವುದರಲ್ಲಿ ಹೂಡಿಕೆ ಮಾಡಬಹುದು ಎಂದು ತತ್​ಕ್ಷಣಕ್ಕೆ ನಿರ್ಧರಿಸುವುದು ಕಷ್ಟ. ಆದರೆ, 2023-24ರ ಹಣಕಾಸು ವರ್ಷದಲ್ಲಿ ಚಿನ್ನ ಅದ್ಭುತ ರಿಟರ್ನ್ ಕೊಟ್ಟಿದೆ. ಆದರೆ, ಷೇರು ಮಾರುಕಟ್ಟೆಯ ಬಹುತೇಕ ಎಲ್ಲಾ ಸೂಚ್ಯಂಕಗಳೂ ಇನ್ನೂ ಅಚ್ಚರಿ ಹುಟ್ಟಿಸುವಷ್ಟು ಅದ್ವಿತೀಯವಾಗಿ ಬೆಳೆದಿವೆ.

ಚಿನ್ನದ ಬೆಲೆ ಎಷ್ಟು ಹೆಚ್ಚಳ?

ಎಂಸಿಎಕ್ಸ್​ನಲ್ಲಿ ಚಿನ್ನದ ಬೆಲೆ 2023-24ರಲ್ಲಿ ಶೇ. 13.50ರಷ್ಟು ಹೆಚ್ಚಾಗಿದೆ. ಚಿನ್ನದ ಬೆಲೆ ಆಧಾರಿತವಾಗಿ ಮೌಲ್ಯ ಪಡೆಯುವ ಸಾವರಿನ್ ಗೋಲ್ಡ್ ಬಾಂಡ್ ಕೂಡ ಶೇ. 13ರ ಆಸುಪಾಸಿನಲ್ಲಿ ಕಳೆದ ಏಳೆಂಟು ವರ್ಷದಲ್ಲಿ ಬೆಳೆದಿದೆ. ಈ ಮಟ್ಟಿಗೆ ಚಿನ್ನದ ಬೆಲೆ ಹೆಚ್ಚಳ ಸ್ಥಿರತೆ ಹೊಂದಿದೆ.

ಇದನ್ನೂ ಓದಿ: ತಿಂಗಳಿಗೆ 10,000 ರೂನಂತೆ ಹೂಡಿಕೆ; 40 ವರ್ಷದಲ್ಲಿ ಆಗುತ್ತೆ ಕನಿಷ್ಠ 11 ಕೋಟಿ ರೂ

2023-24ರಲ್ಲಿ ಈಕ್ವಿಟಿ ಇಂಡೆಕ್ಸ್​ಗಳ ಬೆಳವಣಿಗೆ

  • ನಿಫ್ಟಿ50 ಇಂಡೆಕ್ಸ್: ಶೇ. 30
  • ಬ್ಯಾಂಕ್ ನಿಫ್ಟಿ ಇಂಡೆಕ್ಸ್: ಶೇ. 18
  • ಬಿಎಸ್​ಇ ಸೆನ್ಸೆಕ್ಸ್: ಶೇ. 27
  • ಸ್ಮಾಲ್ ಕ್ಯಾಪ್ ಇಂಡೆಕ್ಸ್: ಶೇ. 62
  • ಮಿಡ್​ಕ್ಯಾಪ್ ಇಂಡೆಕ್ಸ್: ಶೇ. 65

ಈಕ್ವಿಟಿಗಳು ಮೇಲುಗೈ ಸಾಧಿಸಲು ಏನು ಕಾರಣ?

ಈಕ್ವಿಟಿ ಮತ್ತು ಚಿನ್ನದ ಮಾರುಕಟ್ಟೆಯ ಮೇಲೆ ಜಾಗತಿಕ ವಿದ್ಯಮಾನಗಳು ಪ್ರಭಾವ ಬೀರುತ್ತವೆ. ಅಮೆರಿಕದ ಆರ್ಥಿಕತೆ, ಅಲ್ಲಿನ ಬಡ್ಡಿದರ, ಹಣದುಬ್ಬರ, ಜಾಗತಿಕ ರಾಜಕೀಯ ಬಿಕ್ಕಟ್ಟು ಇವೆಲ್ಲವೂ ಕೂಡ ಷೇರು ಮಾರುಕಟ್ಟೆಗೂ ಪ್ರಭಾವಿಸುತ್ತವೆ, ಚಿನ್ನದ ಮಾರುಕಟ್ಟೆಯನ್ನೂ ಪ್ರಭಾವಿಸುತ್ತವೆ.

ಇದನ್ನೂ ಓದಿ: ಕಾಂಡೋಮ್ ಕಂಪನಿಯಿಂದ ಹಿಡಿದು ಡೈಮಂಡ್ ಪವರ್​ವರೆಗೆ 6 ತಿಂಗಳಲ್ಲಿ ಭರ್ಜರಿ ಲಾಭ ತಂದ 7 ಮಲ್ಟಿಬ್ಯಾಗರ್ ಸ್ಟಾಕ್​ಗಳು

ಭಾರತದಲ್ಲಿ ರಾಜಕೀಯ ಮತ್ತು ಆರ್ಥಿಕ ವಿದ್ಯಮಾನಗಳಿಗೆ ಷೇರುಪೇಟೆ ಸೂಕ್ಷ್ಮವಾಗಿ ಸ್ಪಂದಿಸುತ್ತದೆ. ಆದರೆ, ಚಿನ್ನದ ಬೆಲೆಯ ಮೇಲೆ ಇದರ ಪರಿಣಾಮ ಕಡಿಮೆ. ಭಾರತದಲ್ಲಿ ರಾಜಕೀಯ ಮತ್ತು ಆರ್ಥಿಕ ವಿದ್ಯಮಾನಗಳು ಸಕಾರಾತ್ಮಕವಾಗಿ ತೋರಿರುವುದರಿಂದ ಷೇರು ಮಾರುಕಟ್ಟೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ವಿವಿಧ ಕಾರ್ಪೊರೇಟ್ ಕಂಪನಿಗಳು ಉತ್ತಮ ಲಾಭ ತೋರಿದ್ದೂ ಕೂಡ ಷೇರುಬೆಲೆಯ ಏರಿಕೆಗೆ ಕಾರಣವಾಗಿದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 12:20 pm, Sun, 31 March 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ