2021-22 (FY22) ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ (GDP) ಶೇಕಡಾ 8.7 ಏರಿಕೆ ಆಗಿದೆ. ಆದರೆ ಜನವರಿ-ಮಾರ್ಚ್ ತ್ರೈಮಾಸಿಕಕ್ಕೆ (Q4 FY22) ಜಿಡಿಪಿ ಶೇಕಡಾ 4.1 ರಷ್ಟು ಏರಿಕೆ ಕಂಡಿದೆ.2021-22ರಲ್ಲಿ ಆರ್ಥಿಕತೆಯಲ್ಲಿ ಶೇಕಡಾ 8.9 ರಷ್ಟು ಬೆಳವಣಿಗೆಯಾಗಲಿದೆ ಎಂದು ಸರ್ಕಾರ ಅಂದಾಜಿಸಿತ್ತು. ಹಿಂದಿನ ಹಣಕಾಸು ವರ್ಷದಲ್ಲಿ 2020-21 (FY21) ನಲ್ಲಿ ಆರ್ಥಿಕತೆಯು -6.6 ಶೇಕಡಾ ಕುಸಿದಿತ್ತು. ಉಕ್ರೇನ್-ರಷ್ಯಾ ಯುದ್ಧದ ಕಾರಣದಿಂದಾಗಿ ಇಂಧನ ದರಗಳು ಮತ್ತು ಖಾದ್ಯ ತೈಲ ಬೆಲೆ ಏರಿಕೆಯ ನಡುವೆ ಜಿಡಿಪಿಯ ಅಂಕಿಅಂಶ ಪ್ರಕಟವಾಗಿದೆ. ಉಕ್ರೇನ್ ಮೇಲಿನ ರಷ್ಯಾ ಯುದ್ಧದಿಂದಾಗಿ ಚಿಲ್ಲರೆ ಹಣದುಬ್ಬರ ದರವು ಸತತ ನಾಲ್ಕು ತಿಂಗಳುಗಳವರೆಗೆ ಶೇಕಡಾ 6 ಶೇಕಡಾ ಮಾರ್ಕ್ ದಾಟಿದೆ.
ಅಂಕಿಅಂಶಗಳ ಪ್ರಕಾರ ಭಾರತದ ಆರ್ಥಿಕತೆಯು 2020-21 ರಲ್ಲಿ 6.6 ಶೇಕಡಾ ಕುಸಿದಿದ್ದು, 2021-22 ರಲ್ಲಿ ಶೇ 8.7 ರಷ್ಟು ಏರಿದೆ. ಎನ್ಎಸ್ಒ ತನ್ನ ಎರಡನೇ ಮುಂಗಡ ಅಂದಾಜಿನಲ್ಲಿ, 2021-22 ರ ಅವಧಿಯಲ್ಲಿ ಜಿಡಿಪಿ ಬೆಳವಣಿಗೆ 8.9 ಶೇಕಡಾ ಎಂದು ಅಂದಾಜಿಸಿದೆ. ಚೀನಾ 2022 ರ ಮೊದಲ ಮೂರು ತಿಂಗಳಲ್ಲಿ 4.8 ಶೇಕಡಾ ಆರ್ಥಿಕ ಬೆಳವಣಿಗೆಯನ್ನು ದಾಖಲಿಸಿದೆ.
2021-22ರ ಜಿಡಿಪಿಯು ಈ ಡೇಟಾವನ್ನು ಬಿಡುಗಡೆ ಮಾಡುವ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ (MoSPI) ಅಂದಾಜಿಸಿರುವ 8.9 ಶೇಕಡಾ ಬೆಳವಣಿಗೆಗಿಂತ ಕಡಿಮೆಯಿದೆ. ಭಾರತೀಯ ರಿಸರ್ವ್ ಬ್ಯಾಂಕ್ (RBI) ಶೇ 9.5 ಪ್ರತಿಶತ ಜಿಡಿಪಿ ಅಂದಾಜಿಸಿತ್ತು.
ಮಾರ್ಚ್ ತ್ರೈಮಾಸಿಕದಲ್ಲಿ ಶೇಕಡಾ 4.1 ರ ಬೆಳವಣಿಗೆಯು ಈ ಅವಧಿಗೆ ಆರ್ಬಿಐ ಅಂದಾಜಿಗಿಂತ ಕಡಿಮೆಯಾಗಿದೆ. ಆರ್ಬಿಐ 6.1 ಶೇಕಡಾ ಎಂದು ಅಂದಾಜಿಸಿತ್ತು.
ವಾಣಿಜ್ಯ ವಿಭಾಗದಲ್ಲಿನ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ
Published On - 5:56 pm, Tue, 31 May 22