AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಜಿಡಿಪಿ ಎರಡನೇ ಕ್ವಾರ್ಟರ್​ನಲ್ಲಿ ಶೇ. 7.8 ಸಾಧ್ಯತೆ: ಆರ್​ಬಿಗಿಂತ ಹೆಚ್ಚಿನ ನಿರೀಕ್ಷೆ ಇಟ್ಟ ಎಸ್​ಬಿಐ ರಿಸರ್ಚ್

ಎಸ್‌ಬಿಐ ರಿಸರ್ಚ್ ವರದಿಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ (Q2) ಭಾರತದ ಜಿಡಿಪಿ ಬೆಳವಣಿಗೆಯು ಶೇ. 7.8 ದಾಖಲಾಗಬಹುದು. ಇದು ಆರ್‌ಬಿಐನ ಶೇ. 7.2 ಅಂದಾಜನ್ನು ಮೀರಿಸಿದ ನಿರೀಕ್ಷೆಯಾಗಿದೆ. ಜಾಗತಿಕ ಸವಾಲುಗಳ ನಡುವೆಯೂ ಭಾರತದ ಆರ್ಥಿಕತೆ ಉತ್ತಮ ರೀತಿಯಲ್ಲಿ ಬೆಳವಣಿಗೆ ಹೊಂದಲಿರುವುದನ್ನು ಎಸ್​ಬಿಐ ರಿಸರ್ಚ್ ಗುರುತಿಸಿದೆ.

ಭಾರತದ ಜಿಡಿಪಿ ಎರಡನೇ ಕ್ವಾರ್ಟರ್​ನಲ್ಲಿ ಶೇ. 7.8 ಸಾಧ್ಯತೆ: ಆರ್​ಬಿಗಿಂತ ಹೆಚ್ಚಿನ ನಿರೀಕ್ಷೆ ಇಟ್ಟ ಎಸ್​ಬಿಐ ರಿಸರ್ಚ್
ಜಿಡಿಪಿImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 11, 2026 | 6:37 PM

Share

ನವದೆಹಲಿ, ನವೆಂಬರ್ 11: ಭಾರತದ ಆರ್ಥಿಕ ಬೆಳವಣಿಗೆಯ ವೇಗ ಕುಂದುವ ಲಕ್ಷಣ ಕಾಣುತ್ತಿಲ್ಲ. ಭಾರತೀಯ ಸ್ಟೇಟ್ ಬ್ಯಾಂಕ್‌ನ (SBI) ಸಂಶೋಧನಾ ವರದಿಯ ಪ್ರಕಾರ, ಜಿಡಿಪಿ ಬೆಳವಣಿಗೆಯು ನಿರೀಕ್ಷೆಗಿಂತ ಉತ್ತಮವಾಗಿರಲಿದೆ. ಎರಡನೇ ಕ್ವಾರ್ಟರ್​ನಲ್ಲಿ (ಜುಲೈನಿಂದ ಸೆಪ್ಟೆಂಬರ್) ಭಾರತದ ಆರ್ಥಿಕತೆ ಶೇ. 7.8ರಷ್ಟು ಹೆಚ್ಚಬಹುದು ಎಂದು ಈ ರಿಸರ್ಚ್ ರಿಪೋರ್ಟ್ ಹೇಳುತ್ತಿದೆ. ಇದು ಆರ್​ಬಿಐ (RBI) ಅಂದಾಜಿಸಿರುವ ಶೇ. 7.2 ಕ್ಕಿಂತ ಬಹಳ ದೊಡ್ಡ ನಿರೀಕ್ಷೆಯಾಗಿದೆ.

ನಾಮಿನಲ್ ಜಿಡಿಪಿ ಶೇ. 11.5ರಷ್ಟು ಏರಿಕೆ ಸಾಧ್ಯತೆ

ದೇಶದ ನಾಮಮಾತ್ರ ಜಿಡಿಪಿಯು ಶೇ. 11.5 ರಷ್ಟು ಏರಿಕೆಯಾಗುವ ನಿರೀಕ್ಷೆಯಿದ್ದು, ಆರ್ಥಿಕ ಚಟುವಟಿಕೆಗಳು ಮತ್ತು ಕೈಗಾರಿಕಾ ವಲಯದ ಚೇತರಿಕೆಯು ಇದಕ್ಕೆ ಮುಖ್ಯ ಕಾರಣವಾಗಿದೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: ಮುದ್ರಾ ಸಾಲ ಖಾತ್ರಿ ಯೋಜನೆಗೆ 5,000 ಕೋಟಿ ರೂ, ರಸಗೊಬ್ಬರ ಸಬ್ಸಿಡಿಗೆ 62,370 ಕೋಟಿ ರೂ ನೀಡಲು ಕೇಂದ್ರ ಸಂಪುಟ ಅನುಮೋದನೆ

ಎಸ್​ಬಿಐ ರಿಸರ್ಚ್ ಒಂದು ಡೈನಾಮಿಕ್ ಫ್ಯಾಕ್ಟರ್ ಮಾಡಲ್ ಅನ್ನು ಮಾಪನಕ್ಕಾಗಿ ಬಳಸಿದೆ. ಕೃಷಿ, ಕೈಗಾರಿಕೆ, ಸರ್ವಿಸ್ ಇತ್ಯಾದಿ ಕ್ಷೇತ್ರಗಳಿಂದ 54 ಮುಖ್ಯ ಸೂಚಕಗಳನ್ನೊಳಗೊಂಡ ಮಾಡಲ್ ಇದಾಗಿದೆ. ಹೀಗಾಗಿ, ಇದರ ಅಂದಾಜು ಹೆಚ್ಚು ನಿಖರವಾಗಿರುವ ಸಾಧ್ಯತೆ ಇದೆ.

ಆರ್ಥಿಕತೆಗೆ ಹಿನ್ನಡೆ ತರುವ ಅಂಶಗಳೂ ಇವೆ…

ಜಾಗತಿಕ ಮಟ್ಟದಲ್ಲಿ ಉದ್ಭವಿಸಿರುವ ಪರಿಸ್ಥಿತಿಯು ಭಾರತಕ್ಕೆ ಸವಾಲಾಗುವುದು ಮುಂದುವರಿಯುತ್ತದೆ. ಅದರ ನಡುವೆಯೂ ಆರ್ಥಿಕತೆ ತನ್ನ ಕ್ಷಮತೆ ತೋರುತ್ತಿದೆ. ಎಲ್ ನಿನೋ ಅತಿರೇಕ ವಾತಾರಣದ ಪರಿಣಾಮವು ಕೆಲ ರಾಜ್ಯಗಳಲ್ಲಿ ಕಾಣಸಿಗುತ್ತದೆ. ಇದು ಕೆಲ ಪ್ರದೇಶಗಳಿಗೆ ಮಾತ್ರ ಸೀಮಿತವಾಗಬಹುದು ಎಂಬುದು ಎಸ್​ಬಿಐ ರಿಸರ್ಚ್ ರಿಪೋರ್ಟ್​ನ ಅಂದಾಜು.

ಇದನ್ನೂ ಓದಿ: ಎನ್​ವಿಡಿಯಾ ಸಿಇಒ ಜೆನ್ಸೆನ್ ಹುವಾಂಗ್ ಹಗರಣದಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್; ಚೀನಾದ ಗೂಢಚಾರಿಣಿ ಮತ್ತಾಕೆಯ ಪತಿ ಮತ್ತು ಕಾರ್ಪೊರೇಟ್ ನೆಟ್ವರ್ಕ್

ಆರ್ಥಿಕತೆಯ ಬಲ: ವಿಶ್ವದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಭಾರತವು ತನ್ನ ಸ್ಥಾನವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದು, ವಿವಿಧ ವಲಯಗಳಲ್ಲಿನ ದೃಢವಾದ ಬೇಡಿಕೆಯು ಈ ಬೆಳವಣಿಗೆಗೆ ಬೆಂಬಲ ನೀಡಿದೆ.

ಈ ಎರಡನೇ ತ್ರೈಮಾಸಿಕ ಜಿಡಿಪಿ ವರದಿ ನವೆಂಬರ್ 30ರಂದು ಬಿಡುಗಡೆ ಆಗುವ ಸಾಧ್ಯತೆ ಇದೆ. ಅದಕ್ಕೆ ಮುನ್ನ, ನಾಳೆ, (ನ. 12, ಗುರುವಾರ) ಹಣದುಬ್ಬರದ ದತ್ತಾಂಶವೂ ಪ್ರಕಟವಾಗುತ್ತದೆ. ಭಾರತದ ಆರ್ಥಿಕತೆಯ ಗತಿ ಎತ್ತ ಸಾಗುತ್ತಿದೆ ಎಂಬುದನ್ನು ಈ ಎರಡು ದತ್ತಾಂಶಗಳು ಸೂಚಕವಾಗುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More