AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದ ಸೇವಾ ಕ್ಷೇತ್ರದಲ್ಲಿ ಹೊಸ ಹುರುಪು; ಮೇ ತಿಂಗಳ ಸರ್ವಿಸ್ ಸೆಕ್ಟರ್ ಪಿಎಂಐ 6 ತಿಂಗಳ ಗರಿಷ್ಠ ಮಟ್ಟಕ್ಕೆ

Indian Services PMI hit 6-month high: ಭಾರತದ ಸೇವಾ ವಲಯವು ಮೇ ತಿಂಗಳಲ್ಲಿ ಕಳೆದ 6 ತಿಂಗಳಲ್ಲೇ ಅತ್ಯಧಿಕ ಬೆಳವಣಿಗೆ ದಾಖಲಿಸಿದೆ. ಬಲವಾದ ದೇಶೀಯ ಬೇಡಿಕೆ ಮತ್ತು ಹೊಸ ಉದ್ಯೋಗಾವಕಾಶಗಳ ಸೃಷ್ಟಿಯೇ ಇದಕ್ಕೆ ಪ್ರಮುಖ ಕಾರಣ. ಎಚ್‌ಎಸ್‌ಬಿಸಿ ಪಿಎಂಐ (PMI) ಸೂಚ್ಯಂಕದಲ್ಲಿನ ಏರಿಕೆ ಈ ವಲಯದ ವಿಸ್ತರಣೆಯನ್ನು ದೃಢಪಡಿಸಿದೆ. ಇದು ದೇಶದ ಆರ್ಥಿಕತೆಗೆ ಬಲವಾದ ಅಡಿಪಾಯ ಹಾಕಿದ್ದು, ಭವಿಷ್ಯದಲ್ಲಿ ಮತ್ತಷ್ಟು ವೇಗದ ಪ್ರಗತಿಗೆ ಭರವಸೆ ನೀಡಿದೆ.

ಭಾರತದ ಸೇವಾ ಕ್ಷೇತ್ರದಲ್ಲಿ ಹೊಸ ಹುರುಪು; ಮೇ ತಿಂಗಳ ಸರ್ವಿಸ್ ಸೆಕ್ಟರ್ ಪಿಎಂಐ 6 ತಿಂಗಳ ಗರಿಷ್ಠ ಮಟ್ಟಕ್ಕೆ
ಸೇವಾ ಕ್ಷೇತ್ರದ ಪಿಎಂಐImage Credit source: PTI
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 03, 2026 | 3:25 PM

Share

ನವದೆಹಲಿ, ಜೂನ್ 3: ಭಾರತದ ಆರ್ಥಿಕತೆಗೆ ಸೇವಾ ವಲಯದಿಂದ (Services Sector) ಮತ್ತೊಂದು ಅತ್ಯಂತ ಆಶಾದಾಯಕ ಸುದ್ದಿ ಹೊರಬಿದ್ದಿದೆ. ಬಲವಾದ ದೇಶೀಯ ಬೇಡಿಕೆ ಮತ್ತು ಹೊಸ ಉದ್ಯೋಗಾವಕಾಶಗಳ ಸೃಷ್ಟಿಯಿಂದಾಗಿ ಭಾರತದ ಸೇವಾ ವಲಯದ ಬೆಳವಣಿಗೆಯು ಮೇ ತಿಂಗಳಲ್ಲಿ ಕಳೆದ 6 ತಿಂಗಳಲ್ಲೇ ಅತ್ಯಂತ ಗರಿಷ್ಠ ಮಟ್ಟವನ್ನು ತಲುಪಿದೆ. ಎಚ್‌ಎಸ್‌ಬಿಸಿ (HSBC) ಸಂಸ್ಥೆಯು ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶಗಳ ಪ್ರಕಾರ, ಭಾರತದ ಸೇವಾ ವಲಯದ ‘ಖರೀದಿ ವ್ಯವಸ್ಥಾಪಕರ ಸೂಚ್ಯಂಕ’ (Purchasing Managers’ Index – PMI) ಏಪ್ರಿಲ್ ತಿಂಗಳಲ್ಲಿದ್ದ 60.8 ಅಂಕಗಳಿಂದ ಮೇ ತಿಂಗಳಲ್ಲಿ ಗರಿಷ್ಠ ಮಟ್ಟಕ್ಕೆ ಜಿಗಿದಿದೆ.

ಏನಿದು ಪಿಎಂಐ (PMI) ಸೂಚ್ಯಂಕ?

ಪಿಎಂಐ (PMI) ಎಂಬುದು ಆರ್ಥಿಕತೆಯ ಆರೋಗ್ಯವನ್ನು ಅಳೆಯುವ ಒಂದು ಪ್ರಮುಖ ಸೂಚ್ಯಂಕವಾಗಿದೆ. ಸರಕುಗಳ ಓಡಾಟವಾಗುವ ಸಪ್ಲೈ ಚೈನ್​ನ ಮ್ಯಾನೇಜರ್​ಗಳ ಮಾಸಿಕ ಸಮೀಕ್ಷೆ ನಡೆಸಿ ಈ ಇಂಡೆಕ್ಸ್ ಅಪ್​ಡೇಟ್ ಮಾಡಲಾಗುತ್ತದೆ. ಹೊಸ ವರ್ಕ್ ಆರ್ಡರ್​ಗಳು, ಉತ್ಪಾದನೆ, ಉದ್ಯೋಗ, ಸರಬರಾಜು ಅವಧಿ ಮತ್ತು ಸರಕುಗಳ ಸಂಗ್ರಹ, ಈ ಅಂಶಗಳನ್ನು ಪರಿಗಣಿಸಲಾಗುತ್ತದೆ.

ಆರ್ಥಿಕ ತಜ್ಞರ ಪ್ರಕಾರ, ಪಿಎಂಐ ಸೂಚ್ಯಂಕವು 50 ಕ್ಕಿಂತ ಹೆಚ್ಚಿದ್ದರೆ ಅದು ಆ ವಲಯದ ಬೆಳವಣಿಗೆ ಅಥವಾ ವಿಸ್ತರಣೆಯನ್ನು (Expansion) ತೋರಿಸುತ್ತದೆ. ಪಿಎಂಐ ಇಂಡೆಕ್ಸ್ 50 ಕ್ಕಿಂತ ಕಡಿಮೆ ಇದ್ದರೆ ಅದು ಆರ್ಥಿಕ ಕುಸಿತವನ್ನು (Contraction) ಸೂಚಿಸುತ್ತದೆ.

ಭಾರತದ ಸರ್ವಿಸ್ ಸೆಕ್ಟರ್ ಪಿಎಂಐ ಸತತವಾಗಿ 50 ರ ಮಟ್ಟಕ್ಕಿಂತ ಮೇಲೆಯೇ ಉಳಿದುಕೊಂಡು ಬಂದಿದ್ದು, ದೇಶದ ಸೇವಾ ವಲಯವು ಬಲಿಷ್ಠವಾದ ಹಾದಿಯಲ್ಲಿ ಸಾಗುತ್ತಿರುವುದನ್ನು ಇದು ಸಾಬೀತುಪಡಿಸಿದೆ.

ಇದನ್ನೂ ಓದಿ: ಫಾರೆಕ್ಸ್​ನ ಚಿನ್ನ ಮಾರಿರುವ ಸುದ್ದಿ ಸುಳ್ಳು ಎಂದ ಸರ್ಕಾರ; ದೇಶದ ಬಂಗಾರದ ದಾಸ್ತಾನು 880.52 ಟನ್‌ಗಳಷ್ಟು ಸುರಕ್ಷಿತವಂತೆ

ಬೆಳವಣಿಗೆಗೆ ಪ್ರಮುಖ ಕಾರಣಗಳೇನು?

  • ಬಲವಾದ ದೇಶೀಯ ಬೇಡಿಕೆ: ದೇಶದ ಒಳಗಡೆ ಹಣಕಾಸು, ವಿಮೆ, ರಿಯಲ್ ಎಸ್ಟೇಟ್, ಮಾಹಿತಿ ತಂತ್ರಜ್ಞಾನ (IT) ಮತ್ತು ಪ್ರವಾಸೋದ್ಯಮದಂತಹ ಪ್ರಮುಖ ಸೇವೆಗಳಿಗೆ ಗ್ರಾಹಕರಿಂದ ಭಾರಿ ಬೇಡಿಕೆ ವ್ಯಕ್ತವಾಗಿದೆ.
  • ಹೊಸ ಉದ್ಯಮಗಳ ಸೃಷ್ಟಿ: ಮೇ ತಿಂಗಳಲ್ಲಿ ಹೊಸ ಆರ್ಡರ್‌ಗಳ ಪ್ರಮಾಣವು ತೀವ್ರ ಗತಿಯಲ್ಲಿ ಹೆಚ್ಚಾಗಿದ್ದು, ಕಂಪನಿಗಳು ತಮ್ಮ ಉದ್ಯಮ ವ್ಯಾಪ್ತಿಯನ್ನು ವಿಸ್ತರಿಸಲು ಮುಂದಾಗಿವೆ.
  • ಉದ್ಯೋಗಾವಕಾಶಗಳ ಹೆಚ್ಚಳ: ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ಮತ್ತು ಬಾಕಿ ಇರುವ ಕೆಲಸಗಳನ್ನು ಪೂರ್ಣಗೊಳಿಸಲು ಸೇವಾ ವಲಯದ ಕಂಪನಿಗಳು ಹೊಸ ಸಿಬ್ಬಂದಿಗಳನ್ನು ದೊಡ್ಡ ಪ್ರಮಾಣದಲ್ಲಿ ನೇಮಕ ಮಾಡಿಕೊಂಡಿವೆ. ಇದು ಉದ್ಯೋಗ ಮಾರುಕಟ್ಟೆಗೆ ಸಕಾರಾತ್ಮಕ ಶಕ್ತಿ ನೀಡಿದೆ.
  • ವಿದೇಶಿ ಬೇಡಿಕೆಯೂ ಉತ್ತಮ: ದೇಶೀಯ ಮಾರುಕಟ್ಟೆಯ ಜೊತೆಗೆ, ಏಷ್ಯಾ, ಯುರೋಪ್ ಮತ್ತು ಅಮೆರಿಕದ ಮಾರುಕಟ್ಟೆಗಳಿಂದಲೂ ಭಾರತೀಯ ಸೇವೆಗಳಿಗೆ ಉತ್ತಮ ಜಾಗತಿಕ ಬೇಡಿಕೆ (International Demand) ಮುಂದುವರಿದಿದೆ.

ಇದನ್ನೂ ಓದಿ: ಅಮೆರಿಕ ಹೊಸ ‘ವರಸೆ’; ಫೋರ್ಸ್ಡ್ ಲೇಬರ್ ಹೆಸರಲ್ಲಿ ಭಾರತ ಸೇರಿ 60 ದೇಶಗಳ ಮೇಲೆ ಶೇ. 12.5 ಹೆಚ್ಚುವರಿ ಸುಂಕಕ್ಕೆ ಯೋಜನೆ

ಉದ್ಯಮ ವಲಯದ ವಿಶ್ವಾಸ ಮತ್ತು ಭವಿಷ್ಯ

ಬೆಲೆ ಏರಿಕೆಯ (ಹಣದುಬ್ಬರ) ಒತ್ತಡಗಳ ನಡುವೆಯೂ ಕಂಪನಿಗಳ ವೆಚ್ಚ ನಿರ್ವಹಣೆ ಉತ್ತಮವಾಗಿದೆ ಎಂದು ವರದಿ ಹೇಳಿದೆ. ಮುಂಬರುವ ದಿನಗಳಲ್ಲಿ ಉದ್ಯಮದ ಸ್ಥಿತಿಗತಿಗಳು ಇನ್ನಷ್ಟು ಉತ್ತಮಗೊಳ್ಳಲಿವೆ ಎಂಬ ದೃಢವಾದ ವಿಶ್ವಾಸವನ್ನು ಸೇವಾ ವಲಯದ ಉದ್ಯಮಿಗಳು ವ್ಯಕ್ತಪಡಿಸಿದ್ದಾರೆ.

ಭಾರತದ ಒಟ್ಟು ದೇಶೀಯ ಉತ್ಪನ್ನಕ್ಕೆ (GDP) ಶೇಕಡಾ 50 ಕ್ಕಿಂತ ಹೆಚ್ಚು ಕೊಡುಗೆ ನೀಡುವ ಸೇವಾ ವಲಯದ ಈ ಭರ್ಜರಿ ಪ್ರಗತಿಯು, ಇಡೀ ದೇಶದ ಆರ್ಥಿಕತೆಯು ಮುಂಬರುವ ತ್ರೈಮಾಸಿಕಗಳಲ್ಲಿ ವೇಗವಾಗಿ ಮುನ್ನಡೆಯಲು ಬಲವಾದ ಅಡಿಪಾಯ ಹಾಕಿಕೊಟ್ಟಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಪೊಲೀಸರು ವಶಕ್ಕೆ ಪಡೆಯುವಾಗ ರಸ್ತೆಯಲ್ಲೇ ಮಲಗಿದ ಪ್ರಿಯಾಂಕಾ ಗಾಂಧಿ!
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ಮಠಕ್ಕೆ ವಿದ್ಯಾರ್ಥಿಯಾಗಿ ಬಂದು ಪೀಠಾಧಿಪತಿಯಾದ ಗವಿಸಿದ್ದೇಶ್ವರ ಶ್ರೀಗಳು
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
ನಾಳೆ ಮೀಸಲಾತಿ ಪಟ್ಟಿ ಪ್ರಕಟ:ಜಿಲ್ಲಾ-ತಾಲೂಕು ಪಂಚಾಯಿತಿ ಎಲೆಕ್ಷನ್ ಯಾವಾಗ?
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
‘ರಾಕ್ಷಸ ಮಂಜ’ನಿಗಾಗಿ ಹಾಡು ಹಾಡಿದ ಕಿರಣ್ ಶಾಸ್ತ್ರಿ: ವಿಡಿಯೋ ನೋಡಿ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಜಂತರ್ ಮಂತರ್ ಪ್ರತಿಭಟನೆ ವೇಳೆ ಮತ್ತೆ ರಾಹುಲ್ ಗಾಂಧಿ ಪೊಲೀಸ್ ವಶಕ್ಕೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಕೆಪಿಎಸ್​ಸಿ ಹಗರಣ:ಶಿವಶಂಕರಪ್ಪ ಸಾಹುಕಾರ್, ಗೀತಾ ಇಡಿ ಕಸ್ಟಡಿಗೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಹೆಸರಿಗಷ್ಟೇ ಸರ್ಕಾರಿ ಆಸ್ಪತ್ರೆ, ಒಳಗಡೆ ಬರೀ ಅವ್ಯವಸ್ಥೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಸೌಜನ್ಯ ಕೇಸ್ ತನಿಖಾಧಿಕಾರಿ ಖಡಕ್ ಆಫೀಸರ್ ಲೋಕೇಶ್ ಜಗಲ್ಸಾರ್ ಹಿನ್ನೆಲೆ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಎಸ್‌ಐಆರ್ ವಿವಾದ; ಎಫ್‌ಐಆರ್‌ಗಳು ನನಗೆ ಪದಕಗಳಿದ್ದಂತೆ ಎಂದ ರಾಹುಲ್ ಗಾಂಧಿ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ
ಮುಸ್ಲಿಂ ಮತದಾರರ ಹೆಸರು ಡಿಲೀಟ್ ಆರೋಪ