AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಕ್ವಾರ್ಟರ್​ಗೆ ಇನ್ಫೋಸಿಸ್ ಉದ್ಯೋಗಿಗಳಿಗೆ ಸರಾಸರಿ ಶೇ. 70 ಬೋನಸ್; ವರದಿ

Salary and bonus for Infosys employees: ಇನ್ಫೋಸಿಸ್ ಸಂಸ್ಥೆ ಈ ಹಣಕಾಸು ವರ್ಷದ ಮೊದಲ ಕ್ವಾರ್ಟರ್​ಗೆ ತನ್ನ ಉದ್ಯೋಗಿಗಳಿಗೆ ಸರಾಸರಿ ಶೇ. 70 ಬೋನಸ್ ನೀಡಲಿದೆ ಎಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯಲ್ಲಿ ವರದಿಯಾಗಿದೆ. ಈ ಬೋನಸ್ ಉದ್ಯೋಗಿಯ ಕ್ಷಮತೆ ಆಧಾರಿತ ವೇರಿಯಬಲ್ ಬೋನಸ್ ಆಗಿರುತ್ತದೆ. ಈ ಬಾರಿ ಬೋನಸ್ ಶೇ 55ರಿಂದ 80ರವರೆಗೆ ನೀಡಲಾಗುತ್ತಿದೆ.

ಮೊದಲ ಕ್ವಾರ್ಟರ್​ಗೆ ಇನ್ಫೋಸಿಸ್ ಉದ್ಯೋಗಿಗಳಿಗೆ ಸರಾಸರಿ ಶೇ. 70 ಬೋನಸ್; ವರದಿ
ಇನ್ಫೋಸಿಸ್Image Credit source: Gautam Singh/ INDIAPICTURE/Universal Images Group via Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on:Aug 25, 2026 | 2:01 PM

Share

ಬೆಂಗಳೂರು, ಆಗಸ್ಟ್ 25: ಭಾರತದ ಪ್ರಮುಖ ಐಟಿ ಸಂಸ್ಥೆಯಾದ ಇನ್ಫೋಸಿಸ್ (Infosys) 2026-27ರ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕಕ್ಕೆ (Q1 FY27 – ಏಪ್ರಿಲ್‌ನಿಂದ ಜೂನ್) ಅರ್ಹ ಉದ್ಯೋಗಿಗಳಿಗೆ ಸರಾಸರಿ 70% ವೇರಿಯೇಬಲ್ ಬೋನಸ್ ನೀಡಿದೆ. ಉದ್ಯೋಗಿಗಳ ಕಾರ್ಯಕ್ಷಮತೆಯ ಆಧಾರದ ಮೇಲೆ ಈ ಬೋನಸ್ 65% ರಿಂದ 80% ರಷ್ಟು ಹಂಚಿಕೆಯಾಗಿದೆ ಎಂದು ಎಕನಾಮಿಕ್ ಟೈಕ್ಸ್ ಪತ್ರಿಕೆ ವರದಿ ಮಾಡಿದೆ.

‘Commendable’ (ಉತ್ತಮ) ರೇಟಿಂಗ್ ಪಡೆದ ಉದ್ಯೋಗಿಗಳಿಗೆ ಸರಿಸುಮಾರು 80% ಬೋನಸ್ ಸಿಕ್ಕಿದೆ. ‘Met Expectations’ (ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸಿದ) ಉದ್ಯೋಗಿಗಳಿಗೆ ಸರಿಸುಮಾರು 65% ಸಿಕ್ಕಿದೆ.

ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಬೋನಸ್ ಪ್ರಮಾಣದಲ್ಲಿ ಬದಲಾವಣೆಯಾಗಿಲ್ಲ. ಅಂದರೆ 2026ರ ಜನವರಿಯಿಂದ ಮಾರ್ಚ್​ವರೆಗಿನ ಕ್ವಾರ್ಟರ್​ಗೂ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ಪರ್ಫಾರ್ಮೆನ್ಸ್ ಬೋನಸ್ ಎಂದು 70% ನೀಡಿತ್ತು. ಆದರೆ, ಹಿಂದಿನ ವರ್ಷದ ಏಪ್ರಿಲ್​ನಿಂದ ಜೂನ್​ವರೆಗಿನ ಕ್ವಾರ್ಟರ್​ಗೆ ಹೋಲಿಸಿದರೆ ಈ ಬಾರಿ 10% ಕಡಿಮೆ ಆಗಿದೆ. ಹಿಂದಿನ ವರ್ಷದಲ್ಲಿ ಈ ಬೋನಸ್ 80% ನೀಡಲಾಗಿತ್ತು.

ಇದನ್ನೂ ಓದಿ: ಹಬ್ಬದ ಸೀಸನ್​ನಲ್ಲಿ ಸಕ್ಕರೆ ದುಬಾರಿ; ಒಂದೇ ತಿಂಗಳಲ್ಲಿ ಭರ್ಜರಿ ಏರಿಕೆ ಕಂಡ ಬೆಲೆ; ಏನು ಕಾರಣ?

ಕಡಿಮೆ ಬೋನಸ್‌ಗೆ ಕಾರಣ: ಜಾಗತಿಕ ಮಾರುಕಟ್ಟೆಯಲ್ಲಿ ಮಾಹಿತಿ ತಂತ್ರಜ್ಞಾನ (IT) ಸೇವೆಗಳ ಬೇಡಿಕೆ ಕಡಿಮೆಯಾಗಿರುವುದು ಮತ್ತು ಕ್ಲೈಂಟ್‌ಗಳ ವೆಚ್ಚ ಕಡಿತದಿಂದಾಗಿ ಕಂಪನಿಯ ಲಾಭದ ಮೇಲಿನ ಒತ್ತಡವೇ ಇದಕ್ಕೆ ಮುಖ್ಯ ಕಾರಣ.

ಏನಿದು ಪರ್ಫಾರ್ಮೆನ್ಸ್ ಬೇಸ್ಡ್ ಬೋನಸ್?

ಕಾರ್ಪೊರೇಟ್ ಕಂಪನಿಗಳಲ್ಲಿ ಉದ್ಯೋಗಿಗಳಿಗೆ ಇರುವ ಸಂಬಳದ ಒಂದು ನಿಯಮ. ಇಲ್ಲಿ ಪ್ರತೀ ತಿಂಗಳು ಉದ್ಯೋಗಿಯ ಸಂಬಳದಿಂದ ನಿರ್ದಿಷ್ಟ ಬೋನಸ್ ಹಣವನ್ನು ಮುರಿದುಕೊಳ್ಳಲಾಗುತ್ತದೆ. ಆ ವರ್ಷದಲ್ಲಿ ಉದ್ಯೋಗಿಯ ಕೆಲಸದ ಕ್ಷಮತೆ ಎಷ್ಟು ಎನ್ನುವುದರ ಆಧಾರದ ಮೇಲೆ, ಮುರಿದುಕೊಂಡ ಆ ಬೋನಸ್ ಹಣವನ್ನು ಮರಳಿಸಲಾಗುತ್ತದೆ. 70% ಬೋನಸ್ ಎಂದರೆ, ಒಂದು ಲಕ್ಷ ಹಣ ಮುರಿದುಕೊಂಡಿದ್ದರೆ 70,000 ರೂ ಸಿಗುತ್ತದೆ. ‘Met Expectations’ ಎಂಬುದು ಬೋನಸ್​ನ ಕನಿಷ್ಠ ಹಂತ. ಈ ರೇಟಿಂಗ್ ಸಿಗದ ಉದ್ಯೋಗಿಗಳಿಗೆ ಒಂದು ರುಪಾಯಿ ಬೋನಸ್ ಕೂಡ ಸಿಗೋದಿಲ್ಲ.

ಇನ್ಫೋಸಿಸ್ ಉದ್ಯೋಗಿಗಳಿಗೆ ಎರಡು ಹಂತಗಳಲ್ಲಿ ಸಂಬಳ ಏರಿಕೆ

ಉದ್ಯೋಗಿಗಳಿಗೆ ವಾರ್ಷಿಕ ವೇತನ ಏರಿಕೆಯನ್ನು (Salary Hike) ಎರಡು ಹಂತಗಳಲ್ಲಿ ಜಾರಿಗೆ ತರಲು ಇನ್ಫೋಸಿಸ್ ಯೋಜಿಸಿದೆ. ಮೊದಲ ಹಂತದ ವೇತನ ಏರಿಕೆಯು ಅಕ್ಟೋಬರ್​​ನಲ್ಲಿ ಹಾಗೂ ಹಿರಿಯ ಅಧಿಕಾರಿಗಳಿಗೆ ಜನವರಿಯಲ್ಲಿ ಅನ್ವಯವಾಗಲಿದೆ.

ಇದನ್ನೂ ಓದಿ: ಚೀನಾದ ಡೀಪ್​ಸೀಕ್ ಎಐ ಮಾಡಲ್ ಬಳಸಿ ಸೈಬರ್ ದಾಳಿಗಳನ್ನು ನಡೆಸುತ್ತಿರುವ ಹ್ಯಾಕರ್​ಗಳು: ಆತಂಕ ಮೂಡಿಸಿದ ವರದಿಗಳು

ವರದಿಯೊಂದರ ಪ್ರಕಾರ, ಈ ಬಾರಿ ಇನ್ಫೋಸಿಸ್ ಉದ್ಯೋಗಿಗಳಿಗೆ 5-8% ಸಂಬಳ ಏರಿಕೆ ಸಿಗಬಹುದು ಎನ್ನಲಾಗಿದೆ. ಈ ಐಟಿ ದಿಗ್ಗಜ ಸಂಸ್ಥೆಯು ಮೊದಲ ತ್ರೈಮಾಸಿಕದಲ್ಲಿ ಗಳಿಸಿದ ನಿವ್ವಳ ಲಾಭ 12.2% ಹೆಚ್ಚಳ ಆಗಿದೆ. ಹೀಗಾಗಿ, ಉತ್ತಮ ವೇತನ ಏರಿಕೆಯ ನಿರೀಕ್ಷೆಯಲ್ಲಿ ಉದ್ಯೋಗಿಗಳು ಇದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 1:59 pm, Tue, 25 August 26

Follow Us
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್
PSI ಮೇಲೆ ಶಾಸಕ ಸುರೇಶ್‌ಗೌಡ ಪುತ್ರಿ ಕಪಾಳಮೋಕ್ಷ ಪ್ರಕರಣ; ವೀಡಿಯೋ ವೈರಲ್
ಟಾಕ್ಸಿಕ್ ರಿಲೀಸ್​ಗೂ ಮುನ್ನ ವಿಶೇಷ ಪೂಜೆ ಸಲ್ಲಿಸಲು ಧರ್ಮಸ್ಥಳಕ್ಕೆ ಬಂದ ಯಶ್
ಟಾಕ್ಸಿಕ್ ರಿಲೀಸ್​ಗೂ ಮುನ್ನ ವಿಶೇಷ ಪೂಜೆ ಸಲ್ಲಿಸಲು ಧರ್ಮಸ್ಥಳಕ್ಕೆ ಬಂದ ಯಶ್
ಕೆಪಿಎಸ್‌ಸಿ ಕಚೇರಿ ಮೇಲೆ ಮತ್ತೆ ಸಿಐಡಿ ದಾಳಿ
ಕೆಪಿಎಸ್‌ಸಿ ಕಚೇರಿ ಮೇಲೆ ಮತ್ತೆ ಸಿಐಡಿ ದಾಳಿ
ಪುತ್ತೂರು ಬಂದ್ ಹಿನ್ನೆಲೆ ಪರಿಸ್ಥಿತಿ ಶಾಂತ: ಬಿಗಿ ಪೊಲೀಸ್ ಬಂದೋಬಸ್ತ್
ಪುತ್ತೂರು ಬಂದ್ ಹಿನ್ನೆಲೆ ಪರಿಸ್ಥಿತಿ ಶಾಂತ: ಬಿಗಿ ಪೊಲೀಸ್ ಬಂದೋಬಸ್ತ್
ಬಗೆದಷ್ಟೂ ಬಯಲಾಗ್ತಿದೆ ಮರಿ ವೀರಪ್ಪನ್​​ ಗೋವಿಂದನ ಕರಾಳ ಇತಿಹಾಸ!
ಬಗೆದಷ್ಟೂ ಬಯಲಾಗ್ತಿದೆ ಮರಿ ವೀರಪ್ಪನ್​​ ಗೋವಿಂದನ ಕರಾಳ ಇತಿಹಾಸ!
ಕೊಡಗಿನಲ್ಲಿ ವರುಣನ ಅಬ್ಬರ; ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ಕೊಡಗಿನಲ್ಲಿ ವರುಣನ ಅಬ್ಬರ; ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!
ತಮಿಳುನಾಡಿಗೆ ಮತ್ತೆ ನೀರು ಬಿಡಬೇಕೆಂಬ ಆದೇಶ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ
ತಮಿಳುನಾಡಿಗೆ ಮತ್ತೆ ನೀರು ಬಿಡಬೇಕೆಂಬ ಆದೇಶ ಖಂಡಿಸಿ ಮಂಡ್ಯದಲ್ಲಿ ಪ್ರತಿಭಟನೆ
'ಬಿಗ್ ಬಾಸ್ ಅಗ್ನಿ ಪರೀಕ್ಷೆ'ಯಲ್ಲಿ ಹೈ-ವೋಲ್ಟೇಜ್ ಕಾದಾಟ
'ಬಿಗ್ ಬಾಸ್ ಅಗ್ನಿ ಪರೀಕ್ಷೆ'ಯಲ್ಲಿ ಹೈ-ವೋಲ್ಟೇಜ್ ಕಾದಾಟ
ಕರಾವಳಿಯಲ್ಲಿ ಇಂದು ಈದ್ ಮಿಲಾದ್: ದ.ಕ, ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ
ಕರಾವಳಿಯಲ್ಲಿ ಇಂದು ಈದ್ ಮಿಲಾದ್: ದ.ಕ, ಉಡುಪಿ ಜಿಲ್ಲೆಗೆ ಸಾರ್ವತ್ರಿಕ ರಜೆ
ಮಂಗಳ ಗೌರಿ ವ್ರತ, ಪ್ರದೋಷ ದಿನ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ
ಮಂಗಳ ಗೌರಿ ವ್ರತ, ಪ್ರದೋಷ ದಿನ: 12 ರಾಶಿಗಳ ದಿನ ಭವಿಷ್ಯ ಇಲ್ಲಿದೆ