ಮ್ಯಾನೇಜ್ಮೆಂಟ್ ಸ್ಕೂಲ್​ಗಳಲ್ಲಿ ಕಲಿತವರನ್ನು ಐಎಎಸ್, ಐಪಿಎಸ್ ಹುದ್ದೆಗೆ ನೇಮಿಸಲಿ: ಇನ್ಫೋಸಿಸ್ ನಾರಾಯಣಮೂರ್ತಿ ಸಲಹೆ

|

Updated on: Nov 17, 2024 | 11:25 AM

ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ಭಾರತದ ಆಡಳಿತ ವ್ಯವಸ್ಥೆಯ ಮನಃಸ್ಥಿತಿಯಲ್ಲಿ ಬದಲಾವಣೆ ಆಗಬೇಕು ಎಂದು ಕರೆ ನೀಡಿದ್ದಾರೆ. ಆಡಳಿತಾತ್ಮಕ ಧೋರಣೆಯಿಂದ ಹೊರಬಂದು ನಿರ್ವಹಣಾತ್ಮಕ ಧೋರಣೆ ಅಳವಡಿಸಿಕೊಳ್ಳಲಿ ಎಂದು ಸಲಹೆ ನೀಡಿದ್ದಾರೆ. ಮ್ಯಾನೇಜ್ಮೆಂಟ್ ಮೈಂಡ್​ಸೆಟ್​ನಲ್ಲಿ ಹೊಸತನ, ಹೊಸ ಸಾಧನೆಯ ಹುರುಪನ್ನು ಕಾಣಬಹುದು ಎಂಬುದು ಅವರ ಅನಿಸಿಕೆ.

ಮ್ಯಾನೇಜ್ಮೆಂಟ್ ಸ್ಕೂಲ್​ಗಳಲ್ಲಿ ಕಲಿತವರನ್ನು ಐಎಎಸ್, ಐಪಿಎಸ್ ಹುದ್ದೆಗೆ ನೇಮಿಸಲಿ: ಇನ್ಫೋಸಿಸ್ ನಾರಾಯಣಮೂರ್ತಿ ಸಲಹೆ
ಎನ್ ಆರ್ ನಾರಾಯಣಮೂರ್ತಿ
Follow us on

ಮುಂಬೈ, ನವೆಂಬರ್ 17: ಭಾರತದ ಆಡಳಿತ ವ್ಯವಸ್ಥೆಯು ಆಡಳಿತಾತ್ಮಕ ಧೋರಣೆಯಿಂದ ಹೊರಬರಬೇಕು. ನಿರ್ವಹಣಾತ್ಮಕ ಮನಃಸ್ಥಿತಿ ಅಳವಡಿಸಿಕೊಳ್ಳಬೇಕು ಎಂದು ಇನ್ಫೋಸಿಸ್ ಸಹ-ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ಸಲಹೆ ನೀಡಿದ್ದಾರೆ. ಇದಕ್ಕೆ ಪೂರಕವಾದ ಮತ್ತೊಂದು ಸಲಹೆ ನೀಡಿದ ಅವರು, ಭಾರತದ ಐಪಿಎಸ್, ಐಎಎಸ್ ಇತ್ಯಾದಿ ಉನ್ನತ ಪಬ್ಲಿಕ್ ಸರ್ವಿಸ್ ಹುದ್ದೆಗಳಿಗೆ ಬುಸಿನೆಸ್ ಸ್ಕೂಲ್​ಗಳಲ್ಲಿ ಕಲಿತವರನ್ನೂ ನೇಮಕ ಮಾಡಲಿ ಎಂದಿದ್ದಾರೆ.

ಖಾಸಗಿ ವಾಹಿನಿಯೊಂದರ ಗ್ಲೋಬಲ್ ಲೀಡರ್​ಶಿಪ್ ಸಮಿಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್ಥಿಕ ಪ್ರಗತಿ ಇನ್ನಷ್ಟು ಚುರುಕುಗೊಳ್ಳಬೇಕಾದರೆ ಮತ್ತು 2047ಕ್ಕೆ 50 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಗುರಿ ಸಾಧಿಸಬೇಕಾದರೆ ಆಡಳಿತ ವ್ಯವಸ್ಥೆಯು ಮ್ಯಾನೇಜ್ಮೆಂಟ್ ಮನೋಭಾವ ಅಳವಡಿಸಿಕೊಳ್ಳುವಂತಾಗಬೇಕು ಎಂದು ಇನ್ಫೋಸಿಸ್ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಐಎಎಸ್, ಐಪಿಎಸ್​ನಂತಹ ಹುದ್ದೆಗಳಿಗೆ ಯುಪಿಎಸ್​ಸಿ ಪರೀಕ್ಷೆಗಳ ಮೇಲೆ ಮಾತ್ರವೇ ಅವಲಂಬಿತರಾಗದೆ ಬಿಸಿನೆಸ್ ಸ್ಕೂಲ್​ಗಳಿಂದಲೂ ಜನರನ್ನು ನೇಮಕ ಮಾಡಿಕೊಳ್ಳಲಿ. ಆಡಳಿತ ವ್ಯವಸ್ಥೆಯಲ್ಲಿ ಆಡಳಿತಾತ್ಮಕ ಧೋರಣೆ ದೂರವಾಗಬೇಕು. ಆಡಳಿತ ಎಂದರೆ ಬದಲಾವಣೆ ಇಲ್ಲದ ನಿಶ್ಚಲವಾದುದು. ಇನ್ನೊಂದೆಡೆ, ನಿರ್ವಹಣಾತ್ಮಕ ಧೋರಣೆಯಿಂದ ಹೊಸ ಸಾಧನೆಯ ಕೆಚ್ಚು ಬರುತ್ತದೆ ಎಂದು ಎನ್ ಆರ್ ನಾರಾಯಣಮೂರ್ತಿ ಹೇಳಿದ್ದಾರೆ.

ಇದನ್ನೂ ಓದಿ: ಈ ಸರ್ಕಾರಿ ಇಲಾಖೆಯಲ್ಲಿ ಕೆಲಸಕ್ಕೆ ಮಾನದಂಡಗಳಿವು… ಸೂಪರ್ ಐಕ್ಯು, 80 ಗಂಟೆ ಕೆಲಸ, ಸಂಬಳ ಕೇಳಂಗಿಲ್ಲ…

ಯುಪಿಎಸ್ಸಿ ಪಾಸಾದವರ ಲೋಪವೇನು?

ನಾರಾಯಣಮೂರ್ತಿ ಅವರ ಪ್ರಕಾರ ಯುಪಿಎಸ್​ಸಿ ಪರೀಕ್ಷೆಯಲ್ಲಿ ತೇರ್ಗಡೆಗೊಂಡು ಆಫೀಸರ್ ಆದವರು ಸಾಮಾನ್ಯ ಆಡಳಿತದಲ್ಲಿ ನೈಪುಣ್ಯತೆ ಪಡೆದಿರುತ್ತಾರೆ. ಆದರೆ, ಬದಲಾಗುತ್ತಿರುವ ವಾತಾವರಣದಲ್ಲಿ ಆಡಳಿತಕ್ಕೆ ಬೇರೆಯೇ ಕೌಶಲ್ಯ ಅಗತ್ಯ ಇದೆ. ದೃಷ್ಟಿಕೋನ, ಉನ್ನತ ಗುರಿ, ವೆಚ್ಚ ನಿಯಂತ್ರಣ, ಹೊಸತನ ಮತ್ತು ಕ್ಷಿಪ್ರ ಕಾರ್ಯಾಚರಣೆ ಇತ್ಯಾದಿ ಗುಣವನ್ನು ಮ್ಯಾನೇಜ್ಮೆಂಟ್ ಶೈಲಿಯ ಆಡಳಿತದಲ್ಲಿ ಕಾಣಬಹುದು ಎಂದು ಮೂರ್ತಿ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ