ಆಧಾರ್ ಕಾರ್ಡ್ ಇದ್ರೆ ಸಾಕು, ವೃದ್ಧರಿಗೆ 15 ನಿಮಿಷದಲ್ಲಿ ಆಯುಷ್ಮಾನ್ ಕಾರ್ಡ್ ಸುಲಭವಾಗಿ ಲಭ್ಯ
Ayushman Bharat insurance scheme: 70 ವರ್ಷ ವಯಸ್ಸು ದಾಟಿದ ವಯೋವೃದ್ಧರಿಗೆ ನೀಡಲಾಗುವ ಆಯುಷ್ಮಾನ್ ಭಾರತ್ ವಯ ವಂದನಾ ಕಾರ್ಡ್ ಅನ್ನು ಸುಲಭವಾಗಿ ಪಡೆಯಬಹುದು. ಆಧಾರ್ ಕಾರ್ಡ್, ಮೊಬೈಲ್ ನಂಬರ್, ಇಮೇಲ್ ಇದ್ದರೆ ಸುಲಭವಾಗಿ ಕೇವಲ 15 ನಿಮಿಷದಲ್ಲಿ ಆಯುಷ್ಮಾನ್ ಕಾರ್ಡ್ ಅನ್ನು ಡೌನ್ಲೋಡ್ ಮಾಡಬಹುದು. ಹಿರಿಯ ನಾಗರಿಕರಿಗೆ ಈ ಸ್ಕೀಮ್ ಅಡಿಯಲ್ಲಿ 5 ಲಕ್ಷ ರೂ ವಿಮಾ ಕವರೇಜ್ ಇರುತ್ತದೆ.
ನವದೆಹಲಿ, ನವೆಂಬರ್ 17: ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆಯನ್ನು ಸರ್ಕಾರ 70 ವರ್ಷ ವಯಸ್ಸು ದಾಟಿದ ಎಲ್ಲಾ ವ್ಯಕ್ತಿಗಳಿಗೂ ವಿಸ್ತರಿಸಿದೆ. ಈ ಸ್ಕೀಮ್ನಲ್ಲಿ ಹಿರಿಯ ನಾಗರಿಕರಿಗೆ ವರ್ಷಕ್ಕೆ 5 ಲಕ್ಷ ರೂವರೆಗೆ ಇನ್ಷೂರೆನ್ಸ್ ಕವರೇಜ್ ಸಿಗುತ್ತದೆ. ವೃದ್ಧರು ಈ ಯೋಜನೆಗೆ ನೊಂದಾಯಿಸುವುದು ಬಹಳ ಸುಲಭ. ಹಿರಿಯ ನಾಗರಿಕರಿಗೆ ಆಧಾರ್ ಕಾರ್ಡ್, ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ಇದ್ದರೆ ಸಾಕು ಆನ್ಲೈನ್ನಲ್ಲಿ ಯೋಜನೆಗೆ ರಿಜಿಸ್ಟರ್ ಮಾಡಬಹುದು.
70 ವರ್ಷ ದಾಟಿದ ಹಿರಿಯ ನಾಗರಿಕರು ಆಯುಷ್ಮಾನ್ ಕಾರ್ಡ್ ಪಡೆಯುವುದು ಹೇಗೆ?
ನ್ಯಾಷನಲ್ ಹೆಲ್ತ್ ಅಥಾರಿಟಿಯ ಅಧಿಕೃತ ವೆಬ್ಸೈಟ್ ಅಥವಾ ಆಯುಷ್ಮಾನ್ ಆ್ಯಪ್ನಲ್ಲಿ ಹಿರಿಯ ನಾಗರಿಕರು ಆಯುಷ್ಮಾನ್ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು.
- ಪೋರ್ಟಲ್ಗೆ ಹೋಗಿ ನಿಮ್ಮ ಫೋನ್ ನಂಬರ್ ನಮೂದಿಸಬೇಕು. ಕ್ಯಾಪ್ಚಾ ಮತ್ತು ಒಟಿಪಿ ಹಾಕಿ ಲಾಗಿನ್ ಆಗಬೇಕು.
- ಮುಖ್ಯಪುಟದಲ್ಲಿ ಹಿರಿಯ ನಾಗರಿಕರಿಗೆ ಎನ್ರೋಲ್ಮೆಂಟ್ ಮಾಡುವ ಬ್ಯಾನರ್ ಮೇಲೆ ಕ್ಲಿಕ್ ಮಾಡಿ.
- ಅಲ್ಲಿ ನಿಮ್ಮ ರಾಜ್ಯ, ಜಿಲ್ಲೆ ಮತ್ತು ಆಧಾರ್ ನಂಬರ್ ಮಾಹಿತಿಯನ್ನು ಭರ್ತಿ ಮಾಡಿ.
- ಆಧಾರ್ ಒಟಿಪಿ ಒದಗಿಸಿ ಕೆವೈಸಿ ವೆರಿಫಿಕೇಶನ್ ಮಾಡಿ.
- ಇತ್ತೀಚಿನ ಭಾವಚಿತ್ರವನ್ನು ಅಪ್ಲೋಡ್ ಮಾಡಿ.
ಅನುಮೋದನೆಯಾದ ಬಳಿಕ ಕೇವಲ 15 ನಿಮಿಷದಲ್ಲಿ ಆಯುಷ್ಮಾನ್ ವಯ ವಂದನ ಕಾರ್ಡ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.
ಇದನ್ನೂ ಓದಿ: ಐಟಿಆರ್ ಸಲ್ಲಿಕೆ ವೇಳೆ ಈ ಆದಾಯ ಮರೆಮಾಚಿದರೆ 10 ಲಕ್ಷ ರೂ ದಂಡ: ಆದಾಯ ತೆರಿಗೆ ಇಲಾಖೆ ಸೂಚನೆ
ಮೊಬೈಲ್ ಆ್ಯಪ್ ಮೂಲಕ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ:
- ಆಯುಷ್ಮಾನ್ ಆ್ಯಪ್ ಅನ್ನು ನಿಮ್ಮ ಮೊಬೈಲ್ಗೆ ಡೌನ್ಲೋಡ್ ಮಾಡಿ.
- ಮೊಬೈಲ್ ನಂಬರ್ ನಮೂದಿಸಿ, ಕ್ಯಾಪ್ಚಾ ಮತ್ತು ಒಟಿಪಿ ಹಾಕಿ ಬೆನಿಫಿಶಿಯರಿಯಾಗಿ ಲಾಗಿನ್ ಆಗಿ.
- ಆಧಾರ್ ಮಾಹಿತಿ ಒದಗಿಸಿ.
- ಇತ್ತೀಚಿನ ಫೋಟೋ ಅಪ್ಲೋಡ್ ಮಾಡಿ.
- ನಿಮ್ಮ (ಫಲಾನುಭವಿ) ಹಾಗು ಕುಟುಂಬದ ಇತರ ಸದಸ್ಯರ ವಿವರಗಳನ್ನು ತುಂಬಿರಿ. ಬಳಿಕ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿ.
- ನೊಂದಣಿ ಯಶಸ್ವಿಯಾದ ಬಳಿಕ ಆಯುಷ್ಮಾನ್ ವಯ ವಂದನ ಕಾರ್ಡ್ ಅನ್ನು ಡೌನ್ಲೋಡ್ ಮಾಡಿ.
ವಯೋವೃದ್ಧರಿಗೆ ಖಾಸಗಿಯಾಗಿ ಇನ್ಷೂರೆನ್ಸ್ ಕವರೇಜ್ ಹೊಂದಿದ್ದರೂ ಆಯುಷ್ಮಾನ್ ಕಾರ್ಡ್ ಅನ್ನು ಉಪಯೋಗಿಸಬಹುದು. ಈ ಸ್ಕೀಮ್ನಲ್ಲಿ ಸರ್ಕಾರಿ ಆಸ್ಪತ್ರೆಗಳು ಮಾತ್ರವಲ್ಲ ಹಲವು ಖಾಸಗಿ ಆಸ್ಪತ್ರೆಗಳೂ ಎನ್ಲಿಸ್ಟ್ ಆಗಿವೆ. ಯಾವ ಆಸ್ಪತ್ರೆಯಲ್ಲಾದರೂ ಕ್ಯಾಷ್ಲೆಸ್ ಆಗಿ ಚಿಕಿತ್ಸೆ ಪಡೆಯಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ