ಬಜೆಟ್​ನಲ್ಲಿ ಟ್ಯಾಕ್ಸ್ ದರ ಕಡಿಮೆ ಆಗುತ್ತಾ? ಮಧ್ಯಮವರ್ಗದವರಿಗೆ ರಿಲೀಫ್ ಕೊಡಿ ಎಂದ ವ್ಯಕ್ತಿಯೊಬ್ಬರಿಗೆ ನಿರ್ಮಲಾ ಮೇಡಂ ಸಕಾರಾತ್ಮಕ ಸ್ಪಂದನೆ

Nirmala Sitharaman interaction in X: ನೀವು ದೇಶಕ್ಕೆ ಉತ್ತಮ ಕೆಲಸ ಮಾಡುತ್ತಿದ್ದೀರಿ. ಮಧ್ಯಮವರ್ಗದವರ ತೆರಿಗೆ ಹೊರೆ ಕಡಿಮೆ ಮಾಡಿ ಎಂದು ಎಕ್ಸ್ ಬಳಕೆದಾರರೊಬ್ಬರು ಮನವಿ ಮಾಡಿದ್ದಾರೆ. ಹಣಕಾಸ ಸಚಿವೆ ನಿರ್ಮಲಾ ಸೀತಾರಾಮನ್, ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಮೋದಿ ಸರ್ಕಾರ ಸ್ಪಂದನಶೀಲ ಸರ್ಕಾರ ಎಂದಿದ್ದಾರೆ.

ಬಜೆಟ್​ನಲ್ಲಿ ಟ್ಯಾಕ್ಸ್ ದರ ಕಡಿಮೆ ಆಗುತ್ತಾ? ಮಧ್ಯಮವರ್ಗದವರಿಗೆ ರಿಲೀಫ್ ಕೊಡಿ ಎಂದ ವ್ಯಕ್ತಿಯೊಬ್ಬರಿಗೆ ನಿರ್ಮಲಾ ಮೇಡಂ ಸಕಾರಾತ್ಮಕ ಸ್ಪಂದನೆ
ನಿರ್ಮಲಾ ಸೀತಾರಾಮನ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 17, 2024 | 4:21 PM

ನವದೆಹಲಿ, ನವೆಂಬರ್ 17: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಕಿವಿಗೆ ಅಸಹನೀಯ ಎನಿಸುವ ಶಬ್ದಗಳಲ್ಲಿ ತೆರಿಗೆ ಇಳಿಸುವುದೂ ಒಂದು ಎಂದು ಹಲವರು ತಮಾಷೆ ಮಾಡುವುದುಂಟು. ಈ ರೀತಿಯ ಸಾವಿರಾರು ಮೀಮ್ಸ್​ಗಳಿಗೆ ಹಣಕಾಸು ಸಚಿವೆ ಗುರಿಯಾಗಿರುವುದುಂಟು. ಇವೆಲ್ಲವನ್ನೂ ತಾನು ಗಮನಿಸುತ್ತಿದ್ದೇನೆ ಎಂದು ಬಾರಿ ಬಾರಿ ಹೇಳುವ ನಿರ್ಮಲಾ ಸೀತಾರಾಮನ್, ತೆರಿಗೆ ಪರಿಷ್ಕರಣೆ ವಿಚಾರದಲ್ಲಿ ಯಾವ ಒತ್ತಡಕ್ಕೂ ಬಾಗುವ ಮಾತೇ ಇಲ್ಲ. ಆದರೆ, ಇವತ್ತು ಭಾನುವಾರ ಅವರ ಮಾತಿನ ಲಯ ತುಸು ಬದಲಾದಂತಿತ್ತು. ಎಕ್ಸ್ ಬಳಕೆದಾರರೊಬ್ಬರು ತೆರಿಗೆ ಹೊರೆ ಕಡಿಮೆ ಮಾಡಿ ಎಂದು ಮಾಡಿಕೊಂಡ ಮನವಿಗೆ ಸಚಿವೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

‘ನಿರ್ಮಲಾ ಸೀತಾರಾಮನ್ ಅವರೇ, ನಿಮ್ಮ ಪ್ರಯತ್ನಗಳಿಗೆ ಹಾಗೂ ಈ ದೇಶಕ್ಕೆ ನೀವು ನೀಡಿರುವ ಕೊಡುಗೆಗಳ ಬಗ್ಗೆ ನಮಗೆ ಬಹಳ ಮೆಚ್ಚುಗೆ ಇದೆ. ಆದರೆ, ಮಧ್ಯಮ ವರ್ಗದವರಿಗೆ ಸ್ವಲ್ಪ ರಿಲೀಫ್ ಕೊಡಲು ಯೋಚಿಸಬೇಕೆಂದು ಸವಿನಯದಿಂದ ಕೋರುತ್ತೇನೆ. ಇದರಲ್ಲಿ ಬಹಳ ಸಮಸ್ಯೆ ಇರುವುದನ್ನು ಅರಿತುಕೊಳ್ಳಬಲ್ಲೆ. ಆದರೆ, ಇದು ನನ್ನ ಕಳಕಳಿಯ ಮನವಿಯಷ್ಟೇ,’ ಎಂದು ತುಷಾರ್ ಶರ್ಮಾ ಎಂಬುವವರು ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಬರೆದಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿರೋ ಕನ್ನಡಿಗರಿಗೆ ಮರಾಠಿ ಬರುತ್ಯೆ? ಕನ್ನಡ ಕಲಿಯಿರಿ ಎಂದ ಈ ಸಿಇಒ ಅಭಿಪ್ರಾಯಕ್ಕೆ ಆನ್​ಲೈನ್​ನಲ್ಲಿ ಬಿಸಿಬಿಸಿ ಚರ್ಚೆ

ರಾಮಾಯಣದ ಸೀತಾ ಮಾತೆಯ ನುಡಿಗಳ ಬಗ್ಗೆ ಪೇಪರ್​ಕ್ಲಿಪ್​ವೊಂದನ್ನು ನಿರ್ಮಲಾ ಸೀತಾರಾಮನ್ ತಮ್ಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದರು. ಆ ಪೋಸ್ಟ್​ಗೆ ತುಷಾರ್ ಶರ್ಮಾ ಪ್ರತಿಕ್ರಿಯಿಸಿ, ಅದಕ್ಕೆ ಸಂಬಂಧವಿಲ್ಲದ ತೆರಿಗೆ ವಿಚಾರವನ್ನು ಪ್ರಸ್ತಾಪಿಸಿದ್ದರು. ಈ ಅನಿರೀಕ್ಷಿತ ಪ್ರತಿಕ್ರಿಯೆಗೆ ಹಣಕಾಸು ಸಚಿವೆ ಸಕಾರಾತ್ಮಕವಾಗಿ ಸ್ಪಂದಿಸಿ ಅಚ್ಚರಿ ಮೂಡಿಸಿದ್ದಾರೆ.

‘ನಿಮ್ಮ ಒಳ್ಳೆಯ ಮಾತುಗಳಿಗೆ ಮತ್ತು ತಿಳಿವಳಿಕೆಗೆ ಧನ್ಯವಾದಗಳು. ನಿಮ್ಮ ಕಾಳಜಿಯನ್ನು ನಾನು ಶ್ಲಾಘಿಸುತ್ತೇನೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರವು ಸ್ಪಂದನಶೀಲ ಸರ್ಕಾರವಾಗಿದೆ. ಜನರ ಧ್ವನಿಗಳನ್ನು ಆಲಿಸುತ್ತದೆ. ನಿಮ್ಮ ಅನಿಸಿಕೆ ಅಮೂಲ್ಯವಾದುದು,’ ಎಂದು ನಿರ್ಮಲಾ ಸೀತಾರಾಮನ್ ಸ್ಪಂದಿಸಿದ್ದಾರೆ.

ಇದನ್ನೂ ಓದಿ: ಐಟಿಆರ್ ಸಲ್ಲಿಕೆ ವೇಳೆ ಈ ಆದಾಯ ಮರೆಮಾಚಿದರೆ 10 ಲಕ್ಷ ರೂ ದಂಡ: ಆದಾಯ ತೆರಿಗೆ ಇಲಾಖೆ ಸೂಚನೆ

ನಿರ್ಮಲಾ ಸೀತಾರಾಮನ್ ಅವರ ಈ ಸಕಾರಾತ್ಮಕ ಮಾತುಗಳು ಮುಂಬರುವ ಬಜೆಟ್​ನಲ್ಲಿ ಟ್ಯಾಕ್ಸ್ ರಿಲೀಫ್ ಕಾದಿರಬಹುದಾ ಎನ್ನುವ ಆಶಾಭಾವನೆಯನ್ನು ತೆರಿಗೆ ಪಾವತಿದಾರರಲ್ಲಿ ಹುಟ್ಟುಹಾಕಿರಬಹುದು. ಸಚಿವೆಯ ಈ ಪೋಸ್ಟ್​ಗೆ ಬಹಳಷ್ಟು ಜನರು ಋಣಾತ್ಮಕವಾಗಿ ಪ್ರತಿಕ್ರಿಯಿಸಿರುವುದೂ ಉಂಟು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಪಿಎಲ್ ಕಾರ್ಡ್ ರದ್ದು: ಸರ್ಕಾರ ನಡೆ ಸ್ವಾಗತಿಸಿದ ಬಿಜೆಪಿ ಎಂಪಿ ರಾಘವೇಂದ್ರ
ಬಿಪಿಎಲ್ ಕಾರ್ಡ್ ರದ್ದು: ಸರ್ಕಾರ ನಡೆ ಸ್ವಾಗತಿಸಿದ ಬಿಜೆಪಿ ಎಂಪಿ ರಾಘವೇಂದ್ರ
ಬಾಲನಟ ರೋಹಿತ್​ಗೆ ಅಪಘಾತ ಆಗಿದ್ದು ಹೇಗೆ? ಈಗ ಆರೋಗ್ಯ ಹೇಗಿದೆ?
ಬಾಲನಟ ರೋಹಿತ್​ಗೆ ಅಪಘಾತ ಆಗಿದ್ದು ಹೇಗೆ? ಈಗ ಆರೋಗ್ಯ ಹೇಗಿದೆ?
PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC
PDO ಪರೀಕ್ಷೆಯಲ್ಲೂ ಎಡವಟ್ಟು, ಅರ್ಧಂಬರ್ಧ ಪ್ರಶ್ನೆ ಪತ್ರಿಕೆ ಕಳುಹಿಸಿದ KPSC
ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ
ಎಸ್​ಎಸ್​ಎಲ್​ಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿಗ್ರಹ ವಿರೂಪಗೊಳಿಸಿದ ಬಾಲಕ
ಪ್ರಧಾನಿ ಮೋದಿಯನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ನೈಜೀರಿಯಾದ ಜನ
ಪ್ರಧಾನಿ ಮೋದಿಯನ್ನು ಆತ್ಮೀಯತೆಯಿಂದ ಬರಮಾಡಿಕೊಂಡ ನೈಜೀರಿಯಾದ ಜನ
ಮಣಿಪುರ ಹಿಂಸಾಚಾರ, ಮುಖ್ಯಮಂತ್ರಿ, ಶಾಸಕರ ಮನೆಗೆ ನುಗ್ಗಲು ಯತ್ನ
ಮಣಿಪುರ ಹಿಂಸಾಚಾರ, ಮುಖ್ಯಮಂತ್ರಿ, ಶಾಸಕರ ಮನೆಗೆ ನುಗ್ಗಲು ಯತ್ನ
ಪತಿ-ಪತ್ನಿ ಒಂದೇ ರಾಶಿಯವರಾಗಿದ್ದರೆ ಏನರ್ಥ? ವಿಡಿಯೋ ನೋಡಿ
ಪತಿ-ಪತ್ನಿ ಒಂದೇ ರಾಶಿಯವರಾಗಿದ್ದರೆ ಏನರ್ಥ? ವಿಡಿಯೋ ನೋಡಿ
ವಾರ ಭವಿಷ್ಯ: ನವೆಂಬರ್​ 18 ರಿಂದ 24ರವರೆಗೆ ವಾರ ಭವಿಷ್
ವಾರ ಭವಿಷ್ಯ: ನವೆಂಬರ್​ 18 ರಿಂದ 24ರವರೆಗೆ ವಾರ ಭವಿಷ್
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಖರೀದಿಸುವ ಯೋಗವಿದೆ
Nithya Bhavishya: ಈ ರಾಶಿಯವರಿಗೆ ಇಂದು ನಿವೇಶನ ಖರೀದಿಸುವ ಯೋಗವಿದೆ
ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ
ರೇಷನ್‌ ಕಾರ್ಡ್ ರದ್ದಾಗಿರುವುದಕ್ಕೆ ಸರ್ಕಾರದ ವಿರುದ್ಧ ಮಹಿಳೆಯರು ಕಿಡಿ