AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜನರಿಂದ, ಜನರಿಗೋಸ್ಕರ ಇರುವ ಸಂಸ್ಥೆಯಾಗಬೇಕು; 500 ವರ್ಷ ನಡೆಯಬೇಕು: ಕನಸು ಬಿಚ್ಚಿಟ್ಟ ವೇದಾಂತ ಮುಖ್ಯಸ್ಥ ಅನಿಲ್ ಅಗರ್ವಾಲ್

Vedanta Chief Anil Agarwal ambitions: ತಮ್ಮ ಸಂಸ್ಥೆ ಜನರಿಂದ ಜನರಿಗೋಸ್ಕರ ನಡೆಯುವಂತಾಗಬೇಕು, ಅದು 500 ವರ್ಷ ಬಾಳಬಲ್ಲಂತಹ ಸಂಸ್ಥೆಯಾಗಬೇಕು ಎಂದು ವೇದಾಂತ ಮುಖ್ಯಸ್ಥ ಅನಿಲ್ ಅಗರ್ವಾಲ್ ಹೇಳಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ಲೀಡರ್​ಶಿಪ್ ಸಮಿಟ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ತಮ್ಮ ಕನಸು ಬಿಚ್ಚಿಟ್ಟಿದ್ಧಾರೆ. ಸದ್ಯ ಅನಿಲ್ ಅಗರ್ವಾಲ್ ಅವರ ಮಗಳು ಪ್ರಿಯಾ ಹೆಬ್ಬಾರ್ ಅವರು ಸಂಸ್ಥೆಯನ್ನು ಮುನ್ನಡೆಸಲು ಮುಂದಿನ ವಾರಸುದಾರರಾಗಿದ್ದಾರೆ.

ಜನರಿಂದ, ಜನರಿಗೋಸ್ಕರ ಇರುವ ಸಂಸ್ಥೆಯಾಗಬೇಕು; 500 ವರ್ಷ ನಡೆಯಬೇಕು: ಕನಸು ಬಿಚ್ಚಿಟ್ಟ ವೇದಾಂತ ಮುಖ್ಯಸ್ಥ ಅನಿಲ್ ಅಗರ್ವಾಲ್
ಅನಿಲ್ ಅಗರ್ವಾಲ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Nov 17, 2024 | 5:55 PM

Share

ನವದೆಹಲಿ, ನವೆಂಬರ್ 17: ಭಾರತದ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರೆನಿಸಿದ ವೇದಾಂತ ಗ್ರೂಪ್ ಸಂಸ್ಥಾಪಕ ಅನಿಲ್ ಅಗರ್ವಾಲ್, ತಮ್ಮ ಸಂಸ್ಥೆ 500 ವರ್ಷ ಬಾಳುವಂತಾಗಬೇಕು ಎನ್ನುವ ತಮ್ಮ ಕನಸನ್ನು ತೆರೆದಿಟ್ಟಿದ್ದಾರೆ. ಹಿಂದೂಸ್ತಾನ್ ಟೈಮ್ಸ್ ವಾಹಿನಿಯ ಲೀಡರ್​ಶಿಪ್ ಸಮಿಟ್ 2024 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ತನ್ನ ಸಂಸ್ಥೆಯು ಜನರಿಂದ, ಜನರಿಗೋಸ್ಕರ ಇರಲು ಬಯಸುವುದಾಗಿ ಹೇಳಿದ್ದಾರೆ.

‘ನನ್ನ ಖಾಸಗಿ ಸಂಪತ್ತಿಗೆ ಮಗಳು ಪ್ರಿಯಾ ಅಗರ್ವಾಲ್ ಹೆಬ್ಬಾರ್ ವಾರಸುದಾರಳಾಗಿರಬಹುದು. ಆದರೆ, ಹೆಚ್ಚು ಸಮಗ್ರವಾಗಿರುವ ಮತ್ತು 500 ವರ್ಷಗಳವರೆಗೆ ಇರಬಲ್ಲಂತಹ ಸಂಸ್ಥೆಯೊಂದನ್ನು ಎದರುನೋಡುತ್ತಿದ್ದೇವೆ. ನನ್ನ ಮಗಳು ಬಿಸಿನೆಸ್ ಅನ್ನು ಮುಂದಕ್ಕೆ ತೆಗೆದುಕೊಂಡು ಹೋಗುತ್ತಾಳೆ. ಆದರೆ, ಅದು ಜನರಿಂದ ಮತ್ತು ಜನರಿಗೋಸ್ಕರ ಇರುವ ಸಂಸ್ಥೆಯಾಗಬೇಕು. 500 ವರ್ಷಕ್ಕೆ ಸಾಗುವ ಸಂಸ್ಥೆಯನ್ನು ನಾವು ರಚಿಸುತ್ತಿದ್ದೇವೆ,’ ಎಂದು ಅನಿಲ್ ಅಗರ್ವಾಲ್ ಹೇಳಿದ್ದಾರೆ.

ಇದನ್ನೂ ಓದಿ: ಮುಂಬೈನಲ್ಲಿರೋ ಕನ್ನಡಿಗರಿಗೆ ಮರಾಠಿ ಬರುತ್ಯೆ? ಕನ್ನಡ ಕಲಿಯಿರಿ ಎಂದ ಈ ಸಿಇಒ ಅಭಿಪ್ರಾಯಕ್ಕೆ ಆನ್​ಲೈನ್​ನಲ್ಲಿ ಬಿಸಿಬಿಸಿ ಚರ್ಚೆ

ಅನಿಲ್ ಅಗರ್ವಾಲ್ ಅವರ ಮಗಳಾದ ಪ್ರಿಯಾ ಹೆಬ್ಬಾರ್ ಅವರು ವೇದಾಂತ ಸಂಸ್ಥೆಯ ನಾನ್-ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಗಿದ್ದಾರೆ. ಅಂಗಸಂಸ್ಥೆಯಾದ ಹಿಂದೂಸ್ತಾನ್ ಜಿಂಕ್​ನ ಅಧ್ಯಕ್ಷೆಯಾಗಿದ್ದಾರೆ. ಕಂಪನಿಯ ನಿರ್ವಹಣೆಯಲ್ಲಿ ಅಪ್ಪನಿಗಿಂತ ಈಕೆಯದು ತುಸು ಭಿನ್ನ ನಿಲುವು. ಮೈನಿಂಗ್ ಕೆಲಸದಲ್ಲಿ ಮಹಿಳೆಯರಿಗೂ ಹೆಚ್ಚು ಅವಕಾಶ ಒದಗಿಸಿದ ಕೀರ್ತಿ ಈಕೆಯದ್ದು.

ಮೂರು ಮಿಲಿಯನ್ ಟನ್ ಜಿಂಕ್ ಅನ್ನು ಉತ್ಪಾದಿಸುವ ಗುರಿ ಈ ಕಂಪನಿಯದ್ದು. ಅಲೂಮಿನಿಯಮ್ ಉತ್ಪಾದನೆಯನ್ನು ಮತ್ತಷ್ಟು 30 ಲಕ್ಷ ಟನ್ ಹೆಚ್ಚಿಸುವ ಯೋಜನೆ ಇದೆ. ಕಾಪರ್ ಮತ್ತು ಬೆಳ್ಳಿ ಉತ್ಪಾದನೆಯಲ್ಲಿ ವಿಶ್ವದ ಅತಿದೊಡ್ಡ ಸಂಸ್ಥೆಯಾಗುವ ಮಹದ್ ಗುರಿಯೂ ಇದೆ. ಹಾಗೆಯೇ, ಐದು ಲಕ್ಷ ಬ್ಯಾರಲ್​ಗಳಷ್ಟು ತೈಲ ಉತ್ಪಾದಿಸುವ ಆಕಾಂಕ್ಷೆಯೂ ಇದೆ.

ಇದನ್ನೂ ಓದಿ: ಮ್ಯಾನೇಜ್ಮೆಂಟ್ ಸ್ಕೂಲ್​ಗಳಲ್ಲಿ ಕಲಿತವರನ್ನು ಐಎಎಸ್, ಐಪಿಎಸ್ ಹುದ್ದೆಗೆ ನೇಮಿಸಲಿ: ಇನ್ಫೋಸಿಸ್ ನಾರಾಯಣಮೂರ್ತಿ ಸಲಹೆ

ವೇದಾಂತ ಸಂಸ್ಥೆಯ ಮೂರು ಪ್ರಮುಖ ಅಂಗಸಂಸ್ಥೆಗಳೆಂದರೆ ಹಿಂದೂಸ್ತಾನ್ ಜಿಂಕ್, ಕೇರ್ನ್ ಆಯಿಲ್ ಅಂಡ್ ಗ್ಯಾಸ್ ಮತ್ತು ಜಿಂಕ್ ಇಂಟರ್ನ್ಯಾಷನಲ್. ಈ ಮೂರನ್ನೂ ಕೂಡ ಮುಂದಿನ 10 ವರ್ಷದೊಳಗೆ ನೂರಕ್ಕೆ ನೂರು ಮರುಬಳಕೆ ಇಂಧನದ ಮೂಲ ನಿರ್ವಹಿಸುವ ಪ್ಲಾನ್ ಅನ್ನು ಹಾಕಿಕೊಳ್ಳಲಾಗಿದೆ.

ಲೋಹ ಮತ್ತು ಮೈನಿಂಗ್ ಸೆಕ್ಟರ್​ನಲ್ಲಿ 2023ರ ಎಸ್ ಅಂಡ್ ಪಿ ಗ್ಲೋಬಲ್ ಕಾರ್ಪೊರೇಟ್ ಸಸ್ಟೈನಬಿಲಿಟಿ ಅಸೆಸ್ಮೆಂಟ್​ನಲ್ಲಿ (ಸಿಎಸ್​​ಎ) ಹಿಂದೂಸ್ತಾನ್ ಜಿಂಕ್ ಮೊದಲ ಸ್ಥಾನ ಗಳಿಸಿದೆ. ಮಾತೃಸಂಸ್ಥೆಯಾದ ವೇದಾಂತವು ಮೂರನೇ ಸ್ಥಾನ ಪಡೆದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಬನ್ನೇರುಘಟ್ಟ ಝೂಗೆ ದಕ್ಷಿಣ ಆಫ್ರಿಕಾದ ಕ್ಯಾಪುಚಿನ್ ಕೋತಿಗಳ ಎಂಟ್ರಿ
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಮನೆ ಭೋಗ್ಯ ಸಂಬಂಧ ಇಬ್ಬರ ಗಲಾಟೆ,  ಮೂರನೆಯವರಿಗೆ ಬಿತ್ತು ಗೂಸಾ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ