AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶೇರುಗಳಂತೆ ರಿಯಲ್ ಎಸ್ಟೇಟ್ ಆಸ್ತಿಯಲ್ಲಿ ಪಾಲು ಖರೀದಿಸಿ… ಇದು REITs ಮತ್ತು InvITs ಕೊಡುವ ಅವಕಾಶ

REITs & InvITs Explained: ರಿಯಲ್ ಎಸ್ಟೇಟ್ ಮತ್ತು ಇನ್​ಫ್ರಾಸ್ಟ್ರಕ್ಚರ್ ಯೋಜನೆಗಳಲ್ಲಿ ದೊಡ್ಡ ಹೂಡಿಕೆ ಅಸಾಧ್ಯವೆ? ಚಿಂತಿಸಬೇಡಿ! REITs (ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳು) ಮತ್ತು InvITs (ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳು) ಮೂಲಕ ಕೇವಲ ₹10,000 ದಿಂದಲೂ ಹೂಡಿಕೆ ಮಾಡಬಹುದು. ಮ್ಯೂಚುವಲ್ ಫಂಡ್‌ಗಳಂತೆ ಕಾರ್ಯನಿರ್ವಹಿಸುವ ಇವು, ನಿಮಗೆ ಬಾಡಿಗೆ ಮತ್ತು ಲಾಭಾಂಶ ರೂಪದಲ್ಲಿ ಆದಾಯ ಒದಗಿಸುತ್ತವೆ. ಇದು ದೊಡ್ಡ ಆಸ್ತಿಗಳಲ್ಲಿ ಸಣ್ಣ ಹೂಡಿಕೆ ಮಾಡಲು ಉತ್ತಮ ಮಾರ್ಗವಾಗಿದೆ.

ಶೇರುಗಳಂತೆ ರಿಯಲ್ ಎಸ್ಟೇಟ್ ಆಸ್ತಿಯಲ್ಲಿ ಪಾಲು ಖರೀದಿಸಿ... ಇದು REITs ಮತ್ತು InvITs ಕೊಡುವ ಅವಕಾಶ
ಅಸ್ತಿಯಲ್ಲಿ ಹೂಡಿಕೆImage Credit source: Getty Images
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 28, 2026 | 7:00 PM

Share

ದೊಡ್ಡ ದೊಡ್ಡ ರಿಯಲ್ ಎಸ್ಟೇಟ್ ಪ್ರಾಜೆಕ್ಟ್​ಗಳನ್ನು ನೋಡಿದಾಗ, ‘ವ್ಹಾ, ನಮಗೂ ಇಲ್ಲೆಲ್ಲಿಯಾದರೂ ಒಂದು ಅಡಿ ಜಾಗವಾದರೂ ಬರಬಾರದಾ’ ಎಂದು ಜನಸಾಮಾನ್ಯರು ಅಂದುಕೊಳ್ಳಬಹುದು. ಆದರೆ, ಅಲ್ಲೆಲ್ಲಾ ಚದರಡಿಗೆ ಹಲವು ಸಾವಿರ ರೂಗಳೇ ಆಗುತ್ತವೆ. ಒಂದು ಮನೆ ಖರೀದಿಸಲು ಕೋಟಿ ರೂ ಕೊಟ್ಟರೂ ಸಾಲದು. ಅಷ್ಟೆಲ್ಲಾ ಇನ್ವೆಸ್ಟ್ ಮಾಡಲು ಸಾಮಾನ್ಯರ ಇಡೀ ಜೀವಮಾನದ ಸಂಪಾದನೆ ಬೇಕಾಗುತ್ತದೆ. ಆದರೆ, ಕೆಲ ಹೂಡಿಕೆ ಯಂತ್ರಗಳು ಬಹಳ ಸುಲಭವಾಗಿ ರಿಯಲ್ ಎಸ್ಟೇಟ್ ಮತ್ತು ಇನ್​ಫ್ರಾಸ್ಟ್ರಕ್ಚರ್ ಪ್ರಾಜೆಕ್ಟ್​ಗಳಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುತ್ತವೆ. ನೀವು ಷೇರು ಖರೀದಿಸಿದಷ್ಟೇ ಸುಲಭವಾ ಮತ್ತು ಸರಳವಾಗಿ ಆಸ್ತಿಯ ಒಂದು ಭಾಗವನ್ನು ಪಡೆಯಬಹುದು. ಈ ಹಣಕಾಸು ಯಂತ್ರಗಳೆಂದರೆ REITs (Real Estate Investment Trusts) ಮತ್ತು InvITs (Infrastructure Investment Trusts). ಇವುಗಳಲ್ಲಿ 10,000 ರೂ ಹೂಡಿಕೆ ಮಾಡಿ ಆಸ್ತಿಯಲ್ಲಿ ಒಂದು ಪಾಲು ಪಡೆಯಬಹುದು.

ಇವು ಮ್ಯೂಚುವಲ್ ಫಂಡ್‌ಗಳಂತೆಯೇ ಕಾರ್ಯನಿರ್ವಹಿಸುತ್ತವೆ. ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಿ, ಅದನ್ನು ದೊಡ್ಡ ಮಟ್ಟದ ರಿಯಲ್ ಎಸ್ಟೇಟ್ ಮತ್ತು ಮೂಲಸೌಕರ್ಯ (ಇನ್‌ಫ್ರಾಸ್ಟ್ರಕ್ಚರ್) ಯೋಜನೆಗಳಲ್ಲಿ ಹೂಡಿಕೆ ಮಾಡಲಾಗುತ್ತದೆ. ಪ್ರಸ್ತುತ ಭಾರತೀಯ ಷೇರು ಮತ್ತು ವಿನಿಮಯ ಮಂಡಳಿ (SEBI) ಯಲ್ಲಿ 6 REITs ಮತ್ತು 28 InvITs ನೋಂದಾಯಿಸಲ್ಪಟ್ಟಿವೆ.

REITs ಮತ್ತು InvITs ನಡುವಿನ ಪ್ರಮುಖ ವ್ಯತ್ಯಾಸಗಳು

ಕಚೇರಿಗಳು, ಮಾಲ್‌ಗಳು, ಐಟಿ ಪಾರ್ಕ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳಂತಹ ರಿಯಲ್ ಎಸ್ಟೇಟ್ ಯೋಜನೆಗಳಲ್ಲಿ REITಗಳು ಹೂಡಿಕೆ ಮಾಡುತ್ತವೆ. ಇನ್ನೊಂದೆಡೆ, InvIT ಗಳು ರಸ್ತೆಗಳು, ಹೆದ್ದಾರಿಗಳು, ವಿದ್ಯುತ್ ತಂತಿಗಳು (ಮಾರ್ಗಗಳು) ಅಥವಾ ಪೈಪ್‌ಲೈನ್‌ ಪ್ರಾಜೆಕ್ಟ್​ಗಳಲ್ಲಿ ಹೂಡಿಕೆ ಮಾಡುತ್ತವೆ.

REIT ಗಳಿಗೆ ಪ್ರಮುಖ ಆದಾಯ ಮೂಲವೆಂದರೆ ಕಟ್ಟಡಗಳಿಂದ ಬರುವ ತಿಂಗಳ ಬಾಡಿಗೆ (Rent) ಅಥವಾ ಗುತ್ತಿಗೆ ಹಣ. InvIT ಗಳ ಆದಾಯ ಮೂಲಗಳು ಹೆದ್ದಾರಿಗಳ ಟೋಲ್ ಸಂಗ್ರಹ, ವಿದ್ಯುತ್ ದರ ಅಥವಾ ಸೇವಾ ಶುಲ್ಕಗಳಾಗಿರುತ್ತವೆ.

ಇದನ್ನೂ ಓದಿ: 6ನೇ ವರ್ಷವೂ ಸಂಬಳ ಬೇಡ ಎಂದ ಮುಕೇಶ್ ಅಂಬಾನಿ; ಏಷ್ಯಾದ ಅತಿ ಶ್ರೀಮಂತ ಉದ್ಯಮಿಗೆ ಆದಾಯ ಎಲ್ಲಿಂದ?

ಇವು ಹೇಗೆ ಕಾರ್ಯನಿರ್ವಹಿಸುತ್ತವೆ ಮತ್ತು ಆದಾಯ ಹೇಗೆ ಬರುತ್ತದೆ?

ಮೂರು ಹಂತದ ವ್ಯವಸ್ಥೆ: ಪ್ರವರ್ತಕರು (Sponsors) ಈ ಟ್ರಸ್ಟ್‌ಗಳನ್ನು ಸ್ಥಾಪಿಸುತ್ತಾರೆ ಮತ್ತು ಆಸ್ತಿಗಳನ್ನು ಟ್ರಸ್ಟ್‌ಗೆ ವರ್ಗಾಯಿಸುತ್ತಾರೆ. ಉದ್ಯಮವನ್ನು ನೋಡಿಕೊಳ್ಳಲು ಮ್ಯಾನೇಜ್‌ಮೆಂಟ್ ಕಂಪನಿ ಇರುತ್ತದೆ ಹಾಗೂ ಹೂಡಿಕೆದಾರರ ಹಿತರಕ್ಷಣೆಗಾಗಿ ಟ್ರಸ್ಟಿಗಳು ಇರುತ್ತಾರೆ.

ಸೆಬಿ (SEBI) ನಿಯಮಗಳ ಪ್ರಕಾರ, ಈ ಟ್ರಸ್ಟ್‌ಗಳು ತಮಗೆ ಬರುವ ಒಟ್ಟಾರೆ ತೆರಿಗೆಗೆ ಒಳಪಡುವ ಆದಾಯದಲ್ಲಿ ಕನಿಷ್ಠ ಶೇ. 90 ರಷ್ಟನ್ನು ಕಡ್ಡಾಯವಾಗಿ ಹೂಡಿಕೆದಾರರಿಗೆ ಡಿವಿಡೆಂಡ್ (ಲಾಭಾಂಶ) ರೂಪದಲ್ಲಿ ನಿಯಮಿತವಾಗಿ (ಸಾಮಾನ್ಯವಾಗಿ ಪ್ರತಿ ತ್ರೈಮಾಸಿಕಕ್ಕೊಮ್ಮೆ) ಹಂಚಬೇಕಾಗುತ್ತದೆ.

ಹೂಡಿಕೆದಾರರಿಗೆ ಇದರಿಂದ ಎರಡು ರೀತಿಯಲ್ಲಿ ಲಾಭ ಸಿಗುತ್ತದೆ — ಒಂದು ನಿಯಮಿತವಾಗಿ ಬರುವ ಬಾಡಿಗೆ/ಡಿವಿಡೆಂಡ್ ಆದಾಯ ಮತ್ತು ಎರಡನೆಯದು ಕಾಲಕ್ರಮೇಣ ಆಸ್ತಿಯ ಮೌಲ್ಯ ಹೆಚ್ಚಾದಾಗ ಷೇರು ಬೆಲೆ ಏರಿಕೆಯಾಗುವ ಮೂಲಕ ಸಿಗುವ ಲಾಭ (Capital Appreciation).

ಇವುಗಳ ಪ್ರಮುಖ ವೈಶಿಷ್ಟ್ಯಗಳು

ರಿಯಲ್ ಎಸ್ಟೇಟ್‌ನಲ್ಲಿ ನೇರವಾಗಿ ಕೋಟ್ಯಂತರ ರೂಪಾಯಿ ಹೂಡುವ ಬದಲಿಗೆ, ಕೇವಲ ₹10,000 ರಿಂದ ₹15,000 ದೊಂದಿಗೆ ಹೂಡಿಕೆ ಆರಂಭಿಸಬಹುದು. ಇವು ಷೇರು ಮಾರುಕಟ್ಟೆಯಲ್ಲಿ (NSE/BSE) ಲಿಸ್ಟ್ ಆಗಿರುವುದರಿಂದ, ಸಾಮಾನ್ಯ ಶೇರುಗಳಂತೆಯೇ ಇವುಗಳನ್ನು ಸುಲಭವಾಗಿ ಖರೀದಿಸಬಹುದು ಅಥವಾ ಮಾರಾಟ ಮಾಡಬಹುದು. ಹೆಚ್ಚಿನ ನಗದೀಕರಣ ಅಥವಾ ಲಿಕ್ವಿಡಿಟಿ ಅವಕಾಶ ಇರುತ್ತದೆ. ಭೌತಿಕವಾಗಿ ಜಾಗ ಅಥವಾ ಮನೆ ಮಾರುವುದಕ್ಕಿಂತ ಇದು ತೀರಾ ಸುಲಭ.

ಅನುಭವಿ ಫಂಡ್ ಮ್ಯಾನೇಜರ್‌ಗಳು ಈ ಆಸ್ತಿಗಳನ್ನು ನಿರ್ವಹಿಸುವುದರಿಂದ ಉತ್ತಮ ಆದಾಯದ ಸಾಧ್ಯತೆಯೂ ಹೆಚ್ಚು ಇರುತ್ತದೆ.

ಇದನ್ನೂ ಓದಿ: ಭಾರತದ ನೇತ್ರಸೆಮಿಯಿಂದ ದೇಶೀಯ ವಿನ್ಯಾಸದ ಎಐ ಪ್ರೋಸಸರ್ A2000 ಅನಾವರಣ

ಆದಾಯದ ಮೇಲಿನ ತೆರಿಗೆ ನಿಯಮಗಳು

REITs ಮತ್ತು InvITs ಗಳನ್ನು ಆದಾಯ ತೆರಿಗೆ ಕಾಯ್ದೆಯಡಿ ‘ಪಾಸ್-ಥ್ರೂ’ (Pass-through) ಘಟಕಗಳಾಗಿ ಪರಿಗಣಿಸಲಾಗುತ್ತದೆ. ಅಂದರೆ ಟ್ರಸ್ಟ್ ಮಟ್ಟದಲ್ಲಿ ತೆರಿಗೆ ಮುರಿಯದೆ ನೇರವಾಗಿ ಹೂಡಿಕೆದಾರರಿಗೆ ಆದಾಯ ವರ್ಗಾವಣೆಯಾಗುತ್ತದೆ. ಹೂಡಿಕೆದಾರರ ಕೈಗೆ ಸಿಗುವ ಆದಾಯದ ಮೇಲೆ ಈ ಕೆಳಗಿನಂತೆ ತೆರಿಗೆ ಅನ್ವಯಿಸುತ್ತದೆ:

  • ನಿಯಮಿತ ಆದಾಯ (ಡಿವಿಡೆಂಡ್/ಬಾಡಿಗೆ): ಹೂಡಿಕೆದಾರರು ಪಡೆಯುವ ಡಿವಿಡೆಂಡ್, ಬಡ್ಡಿ ಅಥವಾ ಬಾಡಿಗೆ ಆದಾಯವನ್ನು ಅವರ ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್ ದರಗಳ (Slab Rates) ಪ್ರಕಾರವೇ ತೆರಿಗೆಗೆ ಒಳಪಡಿಸಲಾಗುತ್ತದೆ.
  • ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ಸ್ (STCG): ಹೂಡಿಕೆ ಮಾಡಿದ 12 ತಿಂಗಳ ಒಳಗಾಗಿ ಒಂದು ವೇಳೆ ನೀವು REIT ಅಥವಾ InvIT ಯೂನಿಟ್‌ಗಳನ್ನು ಲಾಭಕ್ಕೆ ಮಾರಾಟ ಮಾಡಿದರೆ, ಆ ಲಾಭದ ಮೇಲೆ ಶೇ. 20 ರಷ್ಟು ತೆರಿಗೆ ವಿಧಿಸಲಾಗುತ್ತದೆ.
  • ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ಸ್ (LTCG): 12 ತಿಂಗಳ ನಂತರ (ಒಂದು ವರ್ಷದ ಬಳಿಕ) ಯೂನಿಟ್‌ಗಳನ್ನು ಮಾರಾಟ ಮಾಡಿ ಲಾಭ ಗಳಿಸಿದರೆ, ಅದನ್ನು ದೀರ್ಘಾವಧಿ ಲಾಭ ಎಂದು ಪರಿಗಣಿಸಿ ಶೇ. 12.5 ರಷ್ಟು ತೆರಿಗೆ ವಿಧಿಸಲಾಗುತ್ತದೆ. ಆದರೆ, ಒಂದು ಹಣಕಾಸು ವರ್ಷದಲ್ಲಿ ₹1.25 ಲಕ್ಷದವರೆಗಿನ ಇಂತಹ ಲಾಭಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Vijaya Sarathy SN
Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ಪ್ರಮಾಣವಚಕ್ಕೆ ಸಿದ್ಧತೆ: ಜ್ಯೋತಿಷಿ ಬಳಿ ಮುಹೂರ್ತ ಕೇಳಿದ ಡಿಕೆ ಶಿವಕುಮಾರ್
ಪ್ರಮಾಣವಚಕ್ಕೆ ಸಿದ್ಧತೆ: ಜ್ಯೋತಿಷಿ ಬಳಿ ಮುಹೂರ್ತ ಕೇಳಿದ ಡಿಕೆ ಶಿವಕುಮಾರ್
ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಮತ್ತೆ ಶಕ್ತಿ ಕೇಂದ್ರವಾದ ದೆಹಲಿ
ಸಿದ್ದರಾಮಯ್ಯ ರಾಜೀನಾಮೆ ಬೆನ್ನಲ್ಲೇ ಮತ್ತೆ ಶಕ್ತಿ ಕೇಂದ್ರವಾದ ದೆಹಲಿ
ಡಿಕೆ ಶಿವಕುಮಾರ್​​ಗೆ ಸದ್ಯದಲ್ಲೇ ಸಾಡೇ ಸಾತಿ ಶನಿ ಕಾಟ!
ಡಿಕೆ ಶಿವಕುಮಾರ್​​ಗೆ ಸದ್ಯದಲ್ಲೇ ಸಾಡೇ ಸಾತಿ ಶನಿ ಕಾಟ!
ಮುಂದಿನ ಸಿಎಂ ಯಾರು ಅಂತಿದ್ದಂತೆ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಮುಂದಿನ ಸಿಎಂ ಯಾರು ಅಂತಿದ್ದಂತೆ ಸಿದ್ದರಾಮಯ್ಯ ಹೇಳಿದ್ದೇನು ನೋಡಿ
ಸಿದ್ದರಾಮಯ್ಯ ಪದತ್ಯಾಗಕ್ಕೆ ಹುಟ್ಟೂರಲ್ಲಿ ಆಕ್ರೋಶ
ಸಿದ್ದರಾಮಯ್ಯ ಪದತ್ಯಾಗಕ್ಕೆ ಹುಟ್ಟೂರಲ್ಲಿ ಆಕ್ರೋಶ
ರಾಜೀನಾಮೆ ಬೆನ್ನಲ್ಲೇ ಡಾ.ರಾಜ್​ಕುಮಾರ್ ಮಾತು ನೆನೆದ ಸಿದ್ರಾಮಯ್ಯ
ರಾಜೀನಾಮೆ ಬೆನ್ನಲ್ಲೇ ಡಾ.ರಾಜ್​ಕುಮಾರ್ ಮಾತು ನೆನೆದ ಸಿದ್ರಾಮಯ್ಯ
ಸಿದ್ದರಾಮಯ್ಯ ರಾಜೀನಾಮೆಗೆ ವಿಶೇಷ ಸೂಚನೆ ನೀಡಿದ ರಾಜ್ಯಪಾಲರ ಕಾರ್ಯದರ್ಶಿ!
ಸಿದ್ದರಾಮಯ್ಯ ರಾಜೀನಾಮೆಗೆ ವಿಶೇಷ ಸೂಚನೆ ನೀಡಿದ ರಾಜ್ಯಪಾಲರ ಕಾರ್ಯದರ್ಶಿ!
ಸಿಎಂ ಸ್ಥಾನಕ್ಕೆ ರಾಜೀನಾಮೆ ಬಳಿಕ ಸಿದ್ದರಾಮಯ್ಯ ಫಸ್ಟ್​​ ರಿಯಾಕ್ಷನ್
ಸಿಎಂ ಸ್ಥಾನಕ್ಕೆ ರಾಜೀನಾಮೆ ಬಳಿಕ ಸಿದ್ದರಾಮಯ್ಯ ಫಸ್ಟ್​​ ರಿಯಾಕ್ಷನ್
ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ
ಸಿಎಂ ಹುದ್ದೆಗೆ ರಾಜೀನಾಮೆ ಸಲ್ಲಿಸಿದ ಸಿದ್ದರಾಮಯ್ಯ
ಎನ್​​ಟಿಆರ್ ಸಮಾಧಿಗೆ ಜೂ ಎನ್​​ಟಿಆರ್ ಭೇಟಿ, ಕಾಲಿಗೆ ಬಿದ್ದ ಅಭಿಮಾನಿ
ಎನ್​​ಟಿಆರ್ ಸಮಾಧಿಗೆ ಜೂ ಎನ್​​ಟಿಆರ್ ಭೇಟಿ, ಕಾಲಿಗೆ ಬಿದ್ದ ಅಭಿಮಾನಿ