ಯಾವುದೇ ಹೂಡಿಕೆಯು ಸಾಮಾನ್ಯವಾಗಿ ಕೆಲವು ಮಟ್ಟದ ಅಪಾಯದೊಂದಿಗೆ ಬರುತ್ತದೆ. ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಕಡಿಮೆ ಅಪಾಯದೊಂದಿಗೆ ಉತ್ತಮ ಲಾಭವನ್ನು ಪಡೆಯಬಹುದು. ಸ್ಟಾಕ್ ಮಾರುಕಟ್ಟೆಯ ಅಪಾಯವು ಹೆಚ್ಚಾಗಿರುವಾಗ ಇತರ ಹೂಡಿಕೆಯ ಆಯ್ಕೆಗಳಿಗಿಂತ ಲಾಭ ಸಹ ಹೆಚ್ಚಾಗಿರುತ್ತದೆ. ಆದರೆ ಪ್ರತಿಯೊಬ್ಬರೂ ಅಪಾಯಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಅಂಚೆ ಕಚೇರಿಯಿಂದ ಸಣ್ಣ ಉಳಿತಾಯ ಯೋಜನೆಗಳು ನಿಮಗೆ ಉತ್ತಮ ಪರ್ಯಾಯ ಆಗಬಹುದು. ಈ ಸಂದರ್ಭದಲ್ಲಿ ಅಪಾಯದ ಅಂಶವು ಕಡಿಮೆಯಾಗಿದ್ದು, ಆದರೆ ರಿಟರ್ನ್ಸ್ ಸಮಾನವಾಗಿ ಉತ್ತಮವಾಗಿರುತ್ತದೆ. ಅಪಾಯ ಕಡಿಮೆ ಮತ್ತು ಲಾಭಗಳು ಹೆಚ್ಚಿರುವ ಹೂಡಿಕೆಯನ್ನು ನಾವು ಇಂದು ವಿವರಿಸುತ್ತಿದ್ದೇವೆ. ಹೂಡಿಕೆಯ ಆಯ್ಕೆಗಳಲ್ಲಿ ಒಂದು ಪೋಸ್ಟ್ ಆಫೀಸ್ನ ರೆಕರಿಂಗ್ ಡೆಪಾಸಿಟ್ ಕೂಡ ಒಂದಾಗಿದೆ.
ಪೋಸ್ಟ್ ಆಫೀಸ್ ಆರ್‌ಡಿಯಲ್ಲಿ ಹೂಡಿಕೆ ಪ್ರಾರಂಭಿಸುವುದು ಹೇಗೆ?
ಪೋಸ್ಟ್ ಆಫೀಸ್ ಆರ್.ಡಿ. ಖಾತೆಯು ಸರ್ಕಾರದ ಬೆಂಬಲಿತ ಯೋಜನೆಯಾಗಿದ್ದು, ಅದು ಸಾಧಾರಣ ಮೊತ್ತದ ಹಣವನ್ನು ಠೇವಣಿ ಮಾಡಲು ಮತ್ತು ಹೆಚ್ಚಿನ ಬಡ್ಡಿ ದರವನ್ನು ಗಳಿಸಲು ಅನುವು ಮಾಡಿಕೊಡುತ್ತದೆ. 100 ರೂಪಾಯಿಗಳಿಂದ ಹೂಡಿಕೆಯನ್ನು ಪ್ರಾರಂಭಿಸಬಹುದು. ಯಾವುದೇ ಗರಿಷ್ಠ ಹೂಡಿಕೆ ಮಿತಿ ಇಲ್ಲ; ಬಯಸಿದಷ್ಟು ಹೂಡಿಕೆ ಮಾಡಬಹುದು. ಈ ಯೋಜನೆಯ ಖಾತೆಯು ಐದು ವರ್ಷಗಳವರೆಗೆ ತೆರೆದಿರುತ್ತದೆ. ಮತ್ತೊಂದೆಡೆ, ಬ್ಯಾಂಕ್‌ಗಳು ಆರು ತಿಂಗಳು, ಒಂದು ವರ್ಷ, ಎರಡು ವರ್ಷಗಳು ಮತ್ತು ಮೂರು ವರ್ಷಗಳ ರೆಕರಿಂಗ್ ಡೆಪಾಸಿಟ್ ಖಾತೆಗಳನ್ನು ಒದಗಿಸುತ್ತವೆ. ಪ್ರತಿ ತ್ರೈಮಾಸಿಕದಲ್ಲಿ, ಅದರಲ್ಲಿ ಠೇವಣಿ ಮಾಡಿದ ಹಣದ ಮೇಲೆ ಬಡ್ಡಿಯನ್ನು (ವಾರ್ಷಿಕ ದರದಲ್ಲಿ) ಲೆಕ್ಕ ಹಾಕಲಾಗುತ್ತದೆ. ಮತ್ತು ತ್ರೈಮಾಸಿಕದ ಕೊನೆಯಲ್ಲಿ ನಿಮ್ಮ ಖಾತೆಗೆ (ಕಾಂಪೌಂಡ್ ಬಡ್ಡಿ ಸೇರಿದಂತೆ) ಜಮಾ ಮಾಡಲಾಗುತ್ತದೆ.
ನಿಮಗೆ ಎಷ್ಟು ಬಡ್ಡಿ ಸಿಗುತ್ತದೆ?
ಸದ್ಯಕ್ಕೆ ರೆಕರಿಂಗ್ ಡೆಪಾಸಿಟ್ ಯೋಜನೆಗಳಲ್ಲಿ ಶೇ 5.8ರ ಬಡ್ಡಿ ದರ ಲಭ್ಯವಿದೆ; ಈ ಹೊಸ ದರವು ಏಪ್ರಿಲ್ 1, 2020ರಂದು ಜಾರಿಗೆ ಬಂದಿದೆ. ಪ್ರತಿ ತ್ರೈಮಾಸಿಕದಲ್ಲಿ ಭಾರತ ಸರ್ಕಾರವು ತನ್ನ ಎಲ್ಲ ಸಣ್ಣ ಉಳಿತಾಯ ಕಾರ್ಯಕ್ರಮಗಳಿಗೆ ಬಡ್ಡಿದರಗಳನ್ನು ನಿಗದಿಪಡಿಸುತ್ತದೆ.
ಪ್ರತಿ ತಿಂಗಳು 10 ಸಾವಿರ ಹಾಕಿದರೆ 16 ಲಕ್ಷ ರೂಪಾಯಿ
ನೀವು ಹತ್ತು ವರ್ಷಗಳ ಕಾಲ ಅಂಚೆ ಕಚೇರಿ ಆರ್.ಡಿ. ಯೋಜನೆಯಲ್ಲಿ ತಿಂಗಳಿಗೆ 10,000 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಶೇ 5.8ರ ದರದಲ್ಲಿ 16 ಲಕ್ಷ ರೂಪಾಯಿಗಿಂತ ಹೆಚ್ಚು ಪಡೆಯಬಹುದು.
ಪ್ರತಿ ತಿಂಗಳು ರೂ.10,000 ಹೂಡಿಕೆ
ಬಡ್ಡಿ ಶೇ 5.8
ಮೆಚ್ಯೂರಿಟಿ 10 ವರ್ಷಗಳು
10 ವರ್ಷಗಳ ನಂತರ ಮೆಚ್ಯೂರಿಟಿ ಮೊತ್ತ = 16,28,963 ರೂಪಾಯಿ
ಆರ್.ಡಿ. ಖಾತೆಯ ಬಗ್ಗೆ ಪ್ರಮುಖ ವಿಷಯಗಳು
ನಿಯಮಿತವಾಗಿ ಖಾತೆಗೆ ಹಣವನ್ನು ಠೇವಣಿ ಮಾಡುವುದನ್ನು ಮುಂದುವರಿಸಬೇಕು; ಮಾಡದಿದ್ದರೆ, ಶೇ 1ರಷ್ಟು ಮಾಸಿಕ ದಂಡವನ್ನು ವಿಧಿಸಲಾಗುತ್ತದೆ. ನಾಲ್ಕು ಬಾರಿ ಕಂತುಗಳನ್ನು ತಪ್ಪಿಸಿದ ನಂತರ ಖಾತೆಯನ್ನು ಕ್ಲೋಸ್ ಮಾಡಲಾಗುತ್ತದೆ.
ಪೋಸ್ಟ್ ಆಫೀಸ್ ಆರ್ಡಿ ಮೇಲಿನ ತೆರಿಗೆ
ರೆಕರಿಂಗ್ ಡೆಪಾಸಿಟ್ ಮೇಲೆ ಟಿಡಿಎಸ್ ಅನ್ನು ಹೂಡಿಕೆಗಳಿಂದ ಕಡಿತಗೊಳಿಸಲಾಗುತ್ತದೆ ಮತ್ತು ಠೇವಣಿಯು ರೂ. 40,000 ಮೀರಿದರೆ ಶೇ 10ರ ವಾರ್ಷಿಕ ತೆರಿಗೆ ಅನ್ವಯ ಆಗುತ್ತದೆ. ಆರ್.ಡಿ.ಯಿಂದ ಬರುವ ಬಡ್ಡಿಯು ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ. ಆದರೆ ಸಂಪೂರ್ಣ ಮೆಚ್ಯೂರಿಟಿ ಮೊತ್ತವಲ್ಲ. ಫಿಕ್ಸೆಡ್ ಡೆಪಾಸಿಟ್ಗಳಂತೆಯೇ ಯಾವುದೇ ತೆರಿಗೆಯ ಆದಾಯವನ್ನು ಹೊಂದಿರದ ಹೂಡಿಕೆದಾರರು ಫಾರ್ಮ್ 15G ಅನ್ನು ಸಲ್ಲಿಸುವ ಮೂಲಕ ಟಿಡಿಎಸ್ ವಿನಾಯಿತಿಯನ್ನು ಪಡೆಯಬಹುದು.
ಅಂಚೆ ಕಚೇರಿ ಅಲ್ಲದೆ, ಸರ್ಕಾರಿ ಮತ್ತು ಖಾಸಗಿ ಬ್ಯಾಂಕ್‌ಗಳು ಸಹ ರೆಕರಿಂಗ್ ಡೆಪಾಸಿಟ್ ಸೌಲಭ್ಯವನ್ನು ಒದಗಿಸುತ್ತವೆ.
ಬ್ಯಾಂಕ್ ರೆಕರಿಂಗ್ ಡೆಪಾಸಿಟ್ ಅವಧಿ ಹಾಗೂ ದರಗಳು
ಯೆಸ್ ಬ್ಯಾಂಕ್ ಶೇ 7.00- 12 ತಿಂಗಳಿಂದ 33 ತಿಂಗಳವರೆಗೆ
ಎಚ್ಡಿಎಫ್ಸಿ ಬ್ಯಾಂಕ್ ಶೇ 5.50- 90/120 ತಿಂಗಳುಗಳು
ಆಕ್ಸಿಸ್ ಬ್ಯಾಂಕ್ ಶೇ 5.50 – 5 ವರ್ಷದಿಂದ 10 ವರ್ಷಗಳವರೆಗೆ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ 5.40- 5 ವರ್ಷದಿಂದ 10 ವರ್ಷಗಳವರೆಗೆ
ಇದನ್ನೂ ಓದಿ: Post office savings account: ಪೋಸ್ಟ್ ಆಫೀಸ್ ಉಳಿತಾಯ ಖಾತೆ ಮೇಲೆ 3,500 ರೂ. ತನಕ ಬಡ್ಡಿಗೆ ತೆರಿಗೆ ವಿನಾಯಿತಿ