Income Tax Portal: ಇ-ಪೋರ್ಟಲ್​ನಲ್ಲಿ ವಾರ್ಷಿಕ ಇನ್​ಫೋ ಸ್ಟೇಟ್​ಮೆಂಟ್​ ಈಗ ತೆರಿಗೆ ಪಾವತಿದಾರರಿಗೆ ಲಭ್ಯ

| Updated By: Srinivas Mata

Updated on: Nov 15, 2021 | 7:58 PM

ಆನ್ಯುಯಲ್ ಇನ್​ಫರ್ಮೇಷನ್ ಸ್ಟೇಟ್​ಮೆಂಟ್​ ಅನ್ನು ಈಗ ಆದಾಯ ತೆರಿಗೆ ಇ-ಪೋರ್ಟಲ್​ನಲ್ಲಿ ಪಡೆಯಬಹುದು. ಹೇಗೆ ಪಡೆಯುವುದು ಎಂಬುದರ ಹಂತಹಂತವಾದ ವಿವರಣೆ ಇಲ್ಲಿದೆ.

Income Tax Portal: ಇ-ಪೋರ್ಟಲ್​ನಲ್ಲಿ ವಾರ್ಷಿಕ ಇನ್​ಫೋ ಸ್ಟೇಟ್​ಮೆಂಟ್​ ಈಗ ತೆರಿಗೆ ಪಾವತಿದಾರರಿಗೆ ಲಭ್ಯ
ಸಾಂದರ್ಭಿಕ ಚಿತ್ರ
Follow us on

ಆದಾಯ ತೆರಿಗೆ (ಐಟಿ) ಇಲಾಖೆಯು ಸೋಮವಾರದಂದು (ನವೆಂಬರ್ 15, 2021) ತಿಳಿಸಿರುವಂತೆ, ತೆರಿಗೆದಾರರು ಹೊಸ ಆನ್ಯುಯಲ್ ಇನ್​ಫರ್ಮೇಷನ್ ಸ್ಟೇಟ್​ಮೆಂಟ್​(AIS) ಅನ್ನು ಪಡೆಯಬಹುದು ಎಂದು ಹೇಳಿದೆ. ಅದರಲ್ಲಿ ಬಡ್ಡಿ, ಲಾಭಾಂಶಗಳು, ಸೆಕ್ಯೂರಿಟಿಗಳು ಮತ್ತು ಮ್ಯೂಚ್ಯುವಲ್ ಫಂಡ್ ವಹಿವಾಟುಗಳು ಹಾಗೂ ವಿದೇಶದಿಂದ ರವಾನೆ ಆದಂತಹ ಮೊತ್ತದ ಹೆಚ್ಚುವರಿ ಮಾಹಿತಿಯನ್ನು ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಒಳಗೊಂಡಿದೆ. ಐ.ಟಿ. ಇಲಾಖೆಯು ಕಳೆದ ತಿಂಗಳು ಹೆಚ್ಚಿನ ಮೌಲ್ಯದ ಹಣಕಾಸು ವಹಿವಾಟುಗಳ ಪಟ್ಟಿಯನ್ನು ವಿಸ್ತರಿಸಿದೆ. ಇದು ಮ್ಯೂಚುವಲ್ ಫಂಡ್ (ಎಂ.ಎಫ್.) ಖರೀದಿಗಳ ವಿವರಗಳು, ವಿದೇಶಿ ಮೊತ್ತದ ರವಾನೆಗಳು ಮತ್ತು ಇತರ ತೆರಿಗೆದಾರರ ಐಟಿಆರ್‌ಗಳಲ್ಲಿನ ಮಾಹಿತಿಯನ್ನು ಒಳಗೊಂಡಂತೆ ತೆರಿಗೆದಾರರಿಗೆ ಅವರ ಫಾರ್ಮ್ 26 ಎಎಸ್‌ನಲ್ಲಿ ಲಭ್ಯವಿರುತ್ತದೆ.

ಫಾರ್ಮ್ 26ಎಎಸ್ ಎಂಬುದು ವಾರ್ಷಿಕವಾದ ಕ್ರೋಡೀಕೃತ ತೆರಿಗೆ ಸ್ಟೇಟ್​ಮೆಂಟ್ ಆಗಿದ್ದು, ತೆರಿಗೆದಾರರು ತಮ್ಮ ಪರ್ಮನೆಂಟ್ ಅಕೌಂಟ್ ನಂಬರ್ (PAN) ಬಳಸಿಕೊಂಡು, ಆದಾಯ ತೆರಿಗೆ ವೆಬ್‌ಸೈಟ್‌ನಿಂದ ಪಡೆಯಬಹುದು. ಹೊಸ ಆದಾಯ ತೆರಿಗೆ ಇ-ಫೈಲಿಂಗ್ ಪೋರ್ಟಲ್‌ನಲ್ಲಿ “Services” ಟ್ಯಾಬ್ ಅಡಿಯಲ್ಲಿ “ಆನ್ಯುಯಲ್ ಇನ್​ಫರ್ಮೇಷನ್ ಸ್ಟೇಟ್​ಮೆಂಟ್ (AIS)” ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಹೊಸ AIS ಅನ್ನು ಪಡೆಯಬಹುದು. “AIS ಸುಲಭವಾಗಿ ಸಂಪರ್ಕ ಒದಗಿಸುತ್ತದೆ! ಅದನ್ನು ಈಗ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಸಂಪರ್ಕಿಸಬಹುದು ಮತ್ತು ಪಿಡಿಎಫ್, CSV ಹಾಗೂ JSON (ಮಶೀನ್-ರೀಡಬಲ್ ಫಾರ್ಮಾಟ್) ಡೌನ್‌ಲೋಡ್ ಮಾಡಬಹುದಾದ ಸ್ವರೂಪಗಳಲ್ಲಿ ಸುಲಭವಾಗಿ ಡೌನ್‌ಲೋಡ್ ಮಾಡಬಹುದು. http//incometax.gov.inನಲ್ಲಿ ‘services’ ಟ್ಯಾಬ್ ಅಡಿಯಲ್ಲಿ ‘AIS’ ಲಿಂಕ್ ಅನ್ನು ಕ್ಲಿಕ್ ಮಾಡಿ,” ಎಂದು ಐಟಿ ಇಲಾಖೆ ಟ್ವೀಟ್ ಮಾಡಿದೆ.

ತೆರಿಗೆದಾರರ ಹೆಚ್ಚು ಸಮಗ್ರ ಪ್ರೊಫೈಲ್ ನೀಡುತ್ತದೆ
ಐ.ಟಿ.ಯೊಂದಿಗೆ ಲಭ್ಯವಿರುವ ತೆರಿಗೆದಾರರ ಮಾಹಿತಿಯನ್ನು ನೋಡಲು ಮತ್ತು ಪರಿಶೀಲಿಸಲು ತೆರಿಗೆದಾರರಿಗೆ AIS ಅನುವು ಮಾಡಿಕೊಡುತ್ತದೆ. ವ್ಯತ್ಯಾಸಗಳು ಇರುವ ಸಂದರ್ಭದಲ್ಲಿ ಪ್ರತಿಕ್ರಿಯೆ ನೀಡಲು, ಐಟಿಆರ್ ಅನ್ನು ಪ್ರೀ-ಫಿಲ್ ಮಾಡಲು ಬಳಸಲಾದ ಟ್ಯಾಕ್ಸ್​ಪೇಯರ್ ಇನ್​ಫರ್ಮೇಷನ್​ ಸಮ್ಮರಿ (TIS) ವೀಕ್ಷಿಸಲು/ಅಪ್‌ಡೇಟ್ ಮಾಡಲು ಸಕ್ರಿಯಗೊಳಿಸುತ್ತದೆ. 2020-21ರ ಬಜೆಟ್ ಪರಿಷ್ಕೃತ ಫಾರ್ಮ್ 26AS ಅನ್ನು ಘೋಷಿಸಿತು. ತೆರಿಗೆದಾರರ ಹೆಚ್ಚು ಸಮಗ್ರ ಪ್ರೊಫೈಲ್ ಅನ್ನು ನೀಡುತ್ತದೆ. ಮೂಲದಲ್ಲಿ ಸಂಗ್ರಹಿಸಿದ ಮತ್ತು ಕಡಿತಗೊಳಿಸಿದ ತೆರಿಗೆಯ ವಿವರಗಳನ್ನು ಮೀರಿದೆ.

ಹೆಚ್ಚುವರಿ ಮಾಹಿತಿಯು ಸೂಚಿಸಲಾದ ಅಧಿಕೃತ ಡೀಲರ್ ಮೂಲಕ ಯಾವುದೇ ವ್ಯಕ್ತಿ ಮಾಡಿದ ವಿದೇಶಿ ರವಾನೆ, ಉದ್ಯೋಗಿಯು ಕ್ಲೇಮ್ ಮಾಡಿದ ಕಡಿತಗಳೊಂದಿಗೆ ಸಂಬಳದ ಬ್ರೇಕ್ ಅಪ್, ಇತರ ತೆರಿಗೆದಾರರ ಐಟಿಆರ್​ನಲ್ಲಿನ ಮಾಹಿತಿ, ಆದಾಯ ತೆರಿಗೆ ಮರುಪಾವತಿಯ ಮೇಲಿನ ಬಡ್ಡಿ, ಹಣಕಾಸು ವಹಿವಾಟುಗಳ ಸ್ಟೇಟ್​ಮೆಂಟ್​ನಲ್ಲಿ ಪ್ರಕಟವಾದ ಮಾಹಿತಿಯನ್ನು ಒಳಗೊಂಡಿರುತ್ತದೆ. ಅಲ್ಲದೆ, ಠೇವಣಿ/ರಿಜಿಸ್ಟ್ರಾರ್ ಮತ್ತು ವರ್ಗಾವಣೆ ಏಜೆಂಟ್ ವರದಿ ಮಾಡಿದ ಆಫ್-ಮಾರ್ಕೆಟ್ ವಹಿವಾಟುಗಳು, ಆರ್‌ಟಿಎ ವರದಿ ಮಾಡಿದ ಮ್ಯೂಚುವಲ್ ಫಂಡ್‌ನ ಲಾಭಾಂಶದ ಬಗ್ಗೆ ಮಾಹಿತಿ ಮತ್ತು ಆರ್‌ಟಿಎ ವರದಿ ಮಾಡಿದ ಮ್ಯೂಚುಯಲ್ ಫಂಡ್‌ನ ಖರೀದಿಯ ಮಾಹಿತಿಯನ್ನು ಸಹ ಫಾರ್ಮ್ 26 ಎಎಸ್‌ನಲ್ಲಿ ಸೇರಿಸಲಾಗುತ್ತದೆ.

ಹೊಸ ಸೆಕ್ಷನ್ 285BB ಪರಿಚಯ
ಬಜೆಟ್ 2020-21 ಆದಾಯ ತೆರಿಗೆ ಕಾಯ್ದೆಯಲ್ಲಿ ಹೊಸ ಸೆಕ್ಷನ್ 285BB ಅನ್ನು ಪರಿಚಯಿಸಿದೆ. ಫಾರ್ಮ್ 26AS ಅನ್ನು ‘ಆನ್ಯುಯಲ್ ಇನ್ಫರ್ಮೇಷನ್​ ಸ್ಟೇಟ್​ಮೆಂಟ್​’ ಪರಿಷ್ಕರಿಸಲು ಇದು ಟಿಡಿಎಸ್/ಟಿಸಿಎಸ್ ವಿವರಗಳನ್ನು ಹೊರತುಪಡಿಸಿ ನಿರ್ದಿಷ್ಟ ಹಣಕಾಸು ವಹಿವಾಟುಗಳು, ತೆರಿಗೆಗಳ ಪಾವತಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು ಒಳಗೊಂಡಿರುತ್ತದೆ. ನಿರ್ದಿಷ್ಟ ಹಣಕಾಸು ವರ್ಷದಲ್ಲಿ ತೆರಿಗೆದಾರರಿಂದ ಬೇಡಿಕೆ/ಮರುಪಾವತಿ ಮತ್ತು ಬಾಕಿ/ಮುಗಿದ ಪ್ರಕ್ರಿಯೆಗಳು ಆದಾಯ ತೆರಿಗೆ ರಿಟರ್ನ್ಸ್‌ನಲ್ಲಿ ನಮೂದಿಸಬೇಕಾಗುತ್ತದೆ. ಅದರ ನಂತರ, ಕಳೆದ ವರ್ಷ ಮೇ ತಿಂಗಳಲ್ಲಿ ಐ.ಟಿ. ಇಲಾಖೆಯು ಆರ್ಥಿಕ ವರ್ಷದಲ್ಲಿ ಕೈಗೊಂಡ ಹೆಚ್ಚಿನ ಮೌಲ್ಯದ ಹಣಕಾಸಿನ ವಹಿವಾಟುಗಳ ಮಾಹಿತಿಯನ್ನು ಒಳಗೊಂಡಂತೆ ಪರಿಷ್ಕೃತ ಫಾರ್ಮ್ 26AS ಅನ್ನು ಸೂಚಿಸಿತ್ತು. ಈ ಕ್ರಮವು ಸ್ವಯಂಪ್ರೇರಿತ ನಿಯಮಾವಳಿಗೆ ಬದ್ಧವಾಗಿ ಮತ್ತು ಐಟಿ ರಿಟರ್ನ್ಸ್‌ನ ಇ-ಫೈಲಿಂಗ್ ಅನ್ನು ಸುಲಭಗೊಳಿಸಿತು.

ಕಳೆದ ತಿಂಗಳ ಐ.ಟಿ. ಇಲಾಖೆಯ ಆದೇಶದೊಂದಿಗೆ ಫಾರ್ಮ್ 26ಎಎಸ್‌ನಲ್ಲಿ ಲಭ್ಯವಿರುವ ವಿವರಗಳ ಪಟ್ಟಿಯನ್ನು ಮತ್ತಷ್ಟು ವಿಸ್ತರಿಸಲಾಗಿದೆ.

ಆನ್ಯುಯಲ್ ಇನ್​ಫೋ ಸ್ಟೇಟ್​ಮೆಂಟ್ (AIS) ಸಂಪರ್ಕಿಸುವುದು ಹೇಗೆ:
ಹಂತ 1 – ಪ್ಯಾನ್ ಕಾರ್ಡ್ ಅಥವಾ ಆಧಾರ್ ಮತ್ತು ಪಾಸ್‌ವರ್ಡ್ ಅನ್ನು ಬಳಸಿಕೊಂಡು ಹೊಸ ಇ-ಫೈಲಿಂಗ್ ಪೋರ್ಟಲ್‌ ಪರಿಶೀಲಿಸಿ.

ಹಂತ 2 – ಮೇಲ್ಭಾಗದಲ್ಲಿರುವ ‘Services’ ವಿಭಾಗಕ್ಕೆ ಹೋಗಿ ಮತ್ತು ‘ಆನ್ಯುಯಲ್ ಇನ್​ಫರ್ಮೇಷನ್ ಸ್ಟೇಟ್​ಮೆಂಟ್ (AIS)’ ಕ್ಲಿಕ್ ಮಾಡಿ.

ಹಂತ 3 – AIS ಸ್ಟೇಟ್​ಮೆಂಟ್ ಪಿಡಿಎಫ್ ಸ್ವರೂಪದಲ್ಲಿ ಡೌನ್‌ಲೋಡ್ ಮಾಡಿ.

ಹಂತ 4 – ಪಿಡಿಎಫ್ ಅಥವಾ JSON ಆಯ್ಕೆಯನ್ನು ಆರಿಸಿಕೊಳ್ಳಿ ಮತ್ತು ‘ಡೌನ್‌ಲೋಡ್’ ಕ್ಲಿಕ್ ಮಾಡಿ.

ಹಂತ 5 – ಪಿಡಿಎಫ್​ ಅನ್ನು ಕ್ಲಿಕ್ ಮಾಡಿ ಮತ್ತು ಪಾಸ್​ವರ್ಡ್ ಅನ್ನು ನಮೂದಿಸಿ.

ಹಂತ 6 – ನಿಮ್ಮ PAN + ಜನ್ಮ ದಿನಾಂಕವೇ ಪಾಸ್​ವರ್ಡ್ ಆಗಿರುತ್ತದೆ.

ಹಂತ 7 – ಒಮ್ಮೆ ಪಾಸ್‌ವರ್ಡ್ ಅನ್ನು ನಮೂದಿಸಿದ ನಂತರ AISನಲ್ಲಿ ಎಲ್ಲ ವಿವರಗಳನ್ನು ವೀಕ್ಷಿಸಬಹುದು. ಅದೇ ವಿಧಾನವನ್ನು ಬಳಸಿಕೊಂಡು, ನವೀಕರಿಸಿದ AIS ಅನ್ನು ಸಹ ಅಪ್‌ಲೋಡ್ ಮಾಡಬಹುದು.

ಇದನ್ನೂ ಓದಿ: IT Refund Status: ಆದಾಯ ತೆರಿಗೆ ರೀಫಂಡ್ ಸ್ಥಿತಿ ಪರಿಶೀಲನೆ ಮಾಡುವುದು ಹೇಗೆ? ಇಲ್ಲಿದೆ ಹಂತಹಂತವಾದ ಮಾಹಿತಿ