ಈ ಎಂಡೋಮೆಂಟ್ ಪಾಲಿಸಿಯಲ್ಲಿ ದಿನಕ್ಕೆ 95 ರೂಪಾಯಿ ಪಾವತಿಸಿ ಮೆಚ್ಯೂರಿಟಿ ವೇಳೆ 14 ಲಕ್ಷ ರೂ. ಪಡೆಯಿರಿ

| Updated By: shruti hegde

Updated on: Nov 03, 2021 | 9:36 AM

ಈ ಎಂಡೋಮೆಂಟ್ ಪಾಲಿಸಿಯಲ್ಲಿ ದಿನಕ್ಕೆ 95 ರೂಪಾಯಿಯಂತೆ ಉಳಿತಾಯ ಮಾಡಿದರೆ ಮೆಚ್ಯೂರಿಟಿ ಹೊತ್ತಿಗೆ 14 ಲಕ್ಷ ರೂಪಾಯಿ ದೊರೆಯುತ್ತದೆ. ಯಾವುದು ಆ ಪಾಲಿಸಿ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಈ ಎಂಡೋಮೆಂಟ್ ಪಾಲಿಸಿಯಲ್ಲಿ ದಿನಕ್ಕೆ 95 ರೂಪಾಯಿ ಪಾವತಿಸಿ ಮೆಚ್ಯೂರಿಟಿ ವೇಳೆ 14 ಲಕ್ಷ ರೂ. ಪಡೆಯಿರಿ
ಸಾಂದರ್ಭಿಕ ಚಿತ್ರ
Follow us on

ದಿನಕ್ಕೆ ಕೇವಲ 95 ರೂಪಾಯಿಗಳನ್ನು ಪಾವತಿಸಿ ಮತ್ತು ಮೆಚ್ಯೂರಿಟಿ (ಪಕ್ವತೆ) ನಂತರ ನೀವು ಸುಮಾರು 14 ಲಕ್ಷ ರೂಪಾಯಿಗಳನ್ನು ಪಡೆಯುತ್ತೀರಿ. ಹೌದು ಇದು ನಿಜ. ಅಂಚೆ ಕಚೇರಿಯ ಈ ವಿಮಾ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನೀವು ಇಷ್ಟು ಹಣವನ್ನು ಪಡೆಯಬಹುದು. ಪೋಸ್ಟ್ ಆಫೀಸ್‌ನ ಗ್ರಾಮ ಸುಮಂಗಲ್ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆ ಅಥವಾ ಜನಪ್ರಿಯ ಎಂಡೋಮೆಂಟ್ ಯೋಜನೆಗಳಲ್ಲಿ ಒಂದಾದ POGSRPLIS ಬಗ್ಗೆಯೇ ಈ ಲೇಖನದಲ್ಲಿ ತಿಳಿಸುತ್ತಿರುವುದು.

ಯೋಜನೆಯ ವಿವರಗಳು
ಪಾಲಿಸಿಯನ್ನು ಖರೀದಿಸಲು ಕನಿಷ್ಠ 19 ವರ್ಷ ವಯಸ್ಸಾಗಿರಬೇಕು. ಆದರೆ 15 ವರ್ಷಗಳ ಅವಧಿ ಮುಗಿಯುವ ಹೊತ್ತಿಗೆ ಗರಿಷ್ಠ ವಯಸ್ಸಿನ ಮಿತಿ 45 ವರ್ಷಗಳಾಗಿದೆ. ಯೋಜನೆಯು ಎರಡು ಅವಧಿಗಳಿಗೆ ಲಭ್ಯವಿದೆ. ಅಂದರೆ 15 ವರ್ಷಗಳು ಮತ್ತು 20 ವರ್ಷಗಳ ನಿಯಮಿತ ಪಾವತಿ ಆಯ್ಕೆಗಳಿವೆ. 20 ವರ್ಷಗಳಲ್ಲಿ 7 ಲಕ್ಷ ರೂಪಾಯಿಗಳ ವಿಮಾ ರಕ್ಷಣೆಗಾಗಿ ಒಬ್ಬ ವ್ಯಕ್ತಿಯು ದಿನಕ್ಕೆ 95.2 ರೂಪಾಯಿಗಳ ದೈನಂದಿನ ಪ್ರೀಮಿಯಂ ಲೆಕ್ಕಾಚಾರದಲ್ಲಿ ಪಾವತಿಸಬೇಕಾಗುತ್ತದೆ. ಅಂದರೆ ಒಂದು ತಿಂಗಳಿಗೆ 2,853.5 ರೂಪಾಯಿ ಆಗುತ್ತದೆ. ಇದು 15 ವರ್ಷಗಳ ಅವಧಿಗೆ 6 ವರ್ಷಗಳು, 9 ವರ್ಷಗಳು ಮತ್ತು 12 ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಪಾವತಿಸಬೇಕಾದ ವಿಮಾ ಮೊತ್ತ ಪ್ರತಿ ಶೇ 20ರಷ್ಟು ಕ್ಯಾಶ್‌ಬ್ಯಾಕ್ ಅನ್ನು ಒಳಗೊಳ್ಳುತ್ತದೆ. 20 ವರ್ಷಗಳ ಅವಧಿಯನ್ನು ಆಯ್ಕೆ ಮಾಡುವವರಿಗೆ ಕ್ಯಾಶ್‌ಬ್ಯಾಕ್‌ಗಳು ಕ್ರಮವಾಗಿ 8, 12 ಮತ್ತು 16 ವರ್ಷಗಳ ಅಂತ್ಯದಲ್ಲಿರುತ್ತವೆ.

ಪಾವತಿ
ಯಾರಾದರೂ POGSRPLIS ಅಡಿಯಲ್ಲಿ 20 ವರ್ಷಗಳವರೆಗೆ ರೂ. 7 ಲಕ್ಷ ಕವರ್ ಅನ್ನು ಖರೀದಿಸಿದರೆ ಅವರು 8, 12 ಮತ್ತು 16 ವರ್ಷಗಳು ಪೂರ್ಣಗೊಂಡ ನಂತರ ರೂ 1.4 ಲಕ್ಷ (ರೂ 7 ಲಕ್ಷದಲ್ಲಿ ಶೇ 20) ಕ್ಯಾಶ್‌ಬ್ಯಾಕ್ ಪಡೆಯುತ್ತಾರೆ.

ಅವಧಿಯ ಕೊನೆಯಲ್ಲಿ, 20ನೇ ವರ್ಷದಲ್ಲಿ ಅವರು 7 ಲಕ್ಷ ರೂಪಾಯಿಯಲ್ಲಿ 4.2 ಲಕ್ಷ ರೂಪಾಯಿಯನ್ನು ಕಳೆದರೆ ಉಳಿಯುವ, ಅಂದರೆ ರೂ. 2.8 ಲಕ್ಷ ಮತ್ತು ಅಂದಾಜು ರೂ. 6.75 ಲಕ್ಷ ರುಪಾಯಿ ಬೋನಸ್ ಪಡೆಯುತ್ತಾರೆ. ಪ್ರಸ್ತುತ ಬೋನಸ್ ಪ್ರತಿ ವರ್ಷಕ್ಕೆ ವಿಮಾ ಮೊತ್ತದ ಪ್ರತಿ ಸಾವಿರಕ್ಕೆ ರೂ 48ರ ದರದಲ್ಲಿ ದೊರೆಯುತ್ತದೆ. ಒಟ್ಟು ಪಾವತಿಯು ರೂ. 7 ಲಕ್ಷ + ರೂ. 6.75 ಲಕ್ಷ = ರೂ. 13.75 ಲಕ್ಷ ರೂಪಾಯಿ ಆಗುತ್ತದೆ.

ಮತ್ತೊಂದೆಡೆ, ಯಾರಾದರೂ POGSRPLIS ಅಡಿಯಲ್ಲಿ 15 ವರ್ಷಗಳ ಅವಧಿಗೆ ರೂ. 7 ಲಕ್ಷದ ವಿಮಾ ರಕ್ಷಣೆಯನ್ನು ಖರೀದಿಸಿದರೆ, ಅವರು 6, 9 ಮತ್ತು 12 ವರ್ಷಗಳು ಪೂರ್ಣಗೊಂಡ ನಂತರ ರೂ. 1.4 ಲಕ್ಷದ ಕ್ಯಾಶ್‌ಬ್ಯಾಕ್‌ಗಳನ್ನು ಪಡೆಯುತ್ತಾರೆ. ಅವಧಿಯ ಕೊನೆಯಲ್ಲಿ ಅಂದರೆ 15ನೇ ವರ್ಷದಲ್ಲಿ ಅವರು 7 ಲಕ್ಷ ರೂಪಾಯಿಯಲ್ಲಿ ರೂ. 4.2 ಲಕ್ಷ ಕಳೆದರೆ ಉಳಿಯುವ ರೂ. 2.8 ಲಕ್ಷ ಮತ್ತು ಅಂದಾಜು ರೂ. 5.05 ಲಕ್ಷ ಬೋನಸ್ ಪಡೆಯುತ್ತಾರೆ. ಇಲ್ಲಿ ಒಟ್ಟು ಪಾವತಿಯು ರೂ. 7 ಲಕ್ಷ + ರೂ. 5.05 ಲಕ್ಷ = ರೂ 12.05 ಲಕ್ಷ ಆಗುತ್ತದೆ.

ಇದನ್ನೂ ಓದಿ: LIC Jeevan Umang Policy: ಈ ಎಲ್​ಐಸಿ ಪಾಲಿಸಿಯಲ್ಲಿ ದಿನಕ್ಕೆ ರೂ. 43 ಪಾವತಿಸಿ, ರೂ. 27.60 ಲಕ್ಷ ಪಡೆಯಿರಿ