LIC Jeevan Umang Policy: ಈ ಎಲ್​ಐಸಿ ಪಾಲಿಸಿಯಲ್ಲಿ ದಿನಕ್ಕೆ ರೂ. 43 ಪಾವತಿಸಿ, ರೂ. 27.60 ಲಕ್ಷ ಪಡೆಯಿರಿ

ಎಲ್​ಐಸಿಯಿಂದ ಜೀವನ್ ಉಮಂಗ್ ಪಾಲಿಸಿ ಎಂಬುದು ಇದ್ದು, ಇದರಲ್ಲಿ ದಿನಕ್ಕೆ ರೂ. 43 ಹೂಡಿಕೆ ಮಾಡಿದರೆ 27.60 ಲಕ್ಷ ರೂಪಾಯಿ ದೊರೆಯುತ್ತದೆ.

LIC Jeevan Umang Policy: ಈ ಎಲ್​ಐಸಿ ಪಾಲಿಸಿಯಲ್ಲಿ ದಿನಕ್ಕೆ ರೂ. 43 ಪಾವತಿಸಿ, ರೂ. 27.60 ಲಕ್ಷ ಪಡೆಯಿರಿ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on:Sep 18, 2021 | 2:50 PM

ಭಾರತೀಯ ಜೀವ ವಿಮಾ ನಿಗಮ (LIC)ದಿಂದ ವಿವಿಧ ಬಗೆ ಗ್ರಾಹಕರಿಗೆ ಸೂಕ್ತವಾದ ವಿವಿಧ ರೀತಿ ವಿಮಾ ಪಾಲಿಸಿಗಳನ್ನು ನೀಡುತ್ತದೆ. ಯಾವುದೇ ವ್ಯಕ್ತಿಯು ತನ್ನ ಅಗತ್ಯಗಳಿಗೆ ಮತ್ತು ಜೀವಮಾನದ ಕವರೇಜ್ ಬೇಕಾದರೆ ಸಂಪೂರ್ಣ ಜೀವವಿಮೆ, ಯೋಗ್ಯವಾದ ಹೂಡಿಕೆ ಆಯ್ಕೆಯ ಪ್ರಕಾರ ಪಾಲಿಸಿಯನ್ನು ಆರಿಸಿಕೊಳ್ಳಬಹುದು. ಈ ದಿನ ಒಂದು ಪಾಲಿಸಿ ಬಗ್ಗೆ ತಿಳಿಸಲಾಗುವುದು. ಇದರ ಹೆಸರು ಎಲ್‌ಐಸಿಯ ಜೀವನ್ ಉಮಂಗ್. ಇದು ದೀರ್ಘಾವಧಿಯ ಎಂಡೋಮೆಂಟ್​ ಪಾಲಿಸಿ ಆಗಿದ್ದು, 100 ವರ್ಷ ವಯಸ್ಸಿನವರೆಗೂ ಒಳಗೊಳ್ಳುತ್ತದೆ. ಈ ಸ್ಕೀಮ್​ನಿಂದ ಆದಾಯ ಮತ್ತು ರಕ್ಷಣೆ ಎರಡನ್ನೂ ನೀಡುತ್ತದೆ. ಈ ಯೋಜನೆಯು ಪ್ರೀಮಿಯಂ ಪಾವತಿ ಅವಧಿಯ ಅಂತ್ಯದಿಂದ ಮೆಚ್ಯೂರಿಟಿ ತನಕ ವಾರ್ಷಿಕ ಪ್ರಯೋಜನಗಳನ್ನು ನೀಡುತ್ತದೆ. ಮೆಚ್ಯೂರಿಟಿ ಆಗುವಾಗ ಅಥವಾ ಪಾಲಿಸಿದಾರರ ಮರಣದ ಸಮಯದಲ್ಲಿ ಇಡಿಗಂಟನ್ನು ಒದಗಿಸುತ್ತದೆ.

ವೈಶಿಷ್ಟ್ಯಗಳು ಎಲ್ಐಸಿಯ ಜೀವನ್ ಉಮಂಗ್ ಯೋಜನೆ ಆದಾಯ ಮತ್ತು ರಕ್ಷಣೆ ಎರಡನ್ನೂ ನೀಡುತ್ತದೆ. ಇದು ಮಾರುಕಟ್ಟೆಗೆ ಜೋಡಣೆ ಮಾಡದ, ಲಾಭದೊಂದಿಗೆ, ಸಂಪೂರ್ಣ ಜೀವ ಖಾತ್ರಿ ಯೋಜನೆ. ಮುಖ್ಯ ಲಕ್ಷಣಗಳು ಇಂತಿವೆ: – ಪ್ರವೇಶದ ಕನಿಷ್ಠ ವಯಸ್ಸು: 90 ದಿನಗಳು – ಪ್ರವೇಶದ ಗರಿಷ್ಠ ವಯಸ್ಸು: 55 ವರ್ಷಗಳು – ಕನಿಷ್ಠ ಮೂಲ ವಿಮಾ ಮೊತ್ತ: 2,00,000 ರೂಪಾಯಿ – ಗರಿಷ್ಠ ಮೂಲ ವಿಮಾ ಮೊತ್ತ: ಯಾವುದೇ ಮಿತಿಯಿಲ್ಲ – ಪ್ರೀಮಿಯಂ ಪಾವತಿಸುವ ಅವಧಿ: 15, 20, 25 ಮತ್ತು 30 ವರ್ಷಗಳು – ಪಾಲಿಸಿ ಅವಧಿ: (100 – ಪ್ರವೇಶದಲ್ಲಿ ವಯಸ್ಸು) ವರ್ಷಗಳು – ಪ್ರೀಮಿಯಂ ಪಾವತಿಸುವ ಅವಧಿಯ ಕೊನೆಯಲ್ಲಿ ಕನಿಷ್ಠ ವಯಸ್ಸು: 30 ವರ್ಷಗಳು – ಪ್ರೀಮಿಯಂ ಪಾವತಿಸುವ ಅವಧಿಯ ಕೊನೆಯಲ್ಲಿ ಗರಿಷ್ಠ ವಯಸ್ಸು: 70 ವರ್ಷಗಳು – ಮುಕ್ತಾಯದ ವಯಸ್ಸು: 100 ವರ್ಷಗಳು

ಮೂರು ವರ್ಷಗಳವರೆಗೆ ಪ್ರೀಮಿಯಂ ಪಾವತಿಸಿದರೆ ಯಾವುದೇ ಸಮಯದಲ್ಲಿ ಪಾಲಿಸಿಯನ್ನು ಸರೆಂಡರ್ ಮಾಡಬಹುದು. ಅದಾದ ಮೇಲೆ ಪಾಲಿಸಿದಾರರು ಸರೆಂಡರ್ ಮೌಲ್ಯವನ್ನು ಹೆಚ್ಚಿನ ಖಾತ್ರಿಯ ಸರೆಂಡರ್​ ಮೌಲ್ಯ ಮತ್ತು ವಿಶೇಷ ಸರೆಂಡರ್​ ಮೌಲ್ಯಕ್ಕೆ ಸಮನಾಗಿ ಪಡೆಯುತ್ತಾರೆ.

ಸಾಲ ಈ ಪಾಲಿಸಿಯ ಅಡಿಯಲ್ಲಿ ಸಾಲವನ್ನು ತೆಗೆದುಕೊಳ್ಳಬಹುದು. ಪ್ರೀಮಿಯಂ ಪಾವತಿಸುವ ಅವಧಿಯಲ್ಲಿ ಸಾಲವನ್ನು ತೆಗೆದುಕೊಂಡರೆ ಗರಿಷ್ಠ ಸಾಲವು ಸರೆಂಡರ್ ಮೌಲ್ಯದ ಶೇ 90ರ ವರೆಗೆ ಇರುತ್ತದೆ.

ಮೆಚ್ಯೂರಿಟಿ ಲಾಭ ಪಾಲಿಸಿಯು ಪಾವತಿಗೆ ಸಿದ್ಧವಾಗುವ ವೇಳೆಗೆ, ಪಾಲಿಸಿದಾರರು ಇವುಗಳನ್ನು ಸ್ವೀಕರಿಸುತ್ತಾರೆ: – ಮೂಲ ವಿಮಾ ಮೊತ್ತ – ಸರಳ ರಿವರ್ಷನ್ ಬೋನಸ್ – ಘೋಷಣೆ ವೇಳೆ ಅಂತಿಮ ಸೇರ್ಪಡೆ ಬೋನಸ್

ಪಾಲಿಸಿದಾರರು ಮೃತಪಟ್ಟ ಸಂದರ್ಭದಲ್ಲಿ ಪಾಲಿಸಿ ಅವಧಿಯ ವೇಳೆಯಲ್ಲಿ ಪಾಲಿಸಿದಾರ ಮೃತಪಟ್ಟಲ್ಲಿ ನಾಮಿನಿಯು ಈ ಕೆಳಗಿನ ಎಲ್ಲವನ್ನೂ ಪಡೆಯುತ್ತಾರೆ: – ಮೊದಲ ಐದು ಪಾಲಿಸಿ ವರ್ಷಗಳಲ್ಲಿ ಸಾವು ಸಂಭವಿಸಿದಲ್ಲಿ ಸಮ್​ ಅಶ್ಯೂರ್ಡ್​ ವಿಮಾ ಮೊತ್ತವನ್ನು ಪಾವತಿಸಲಾಗುತ್ತದೆ. – ಮರಣದ ನಂತರ ಐದು ಪಾಲಿಸಿ ವರ್ಷಗಳನ್ನು ಪೂರ್ಣಗೊಳಿಸಿದ ನಂತರ ಆದರೆ ಮುಕ್ತಾಯದ ದಿನಾಂಕಕ್ಕಿಂತ ಮುಂಚಿತವಾಗಿ, ಸಮ್​ ಅಶ್ಯೂರ್ಡ್​ ಮೊತ್ತ ಮತ್ತು ಲಾಯಲ್ಟಿ ಸೇರ್ಪಡೆಗಳನ್ನು ಪಾವತಿಸಲಾಗುತ್ತದೆ.

ಬದುಕುಳಿಯುವ ಲಾಭ ಯೋಜನೆಯ USP ಬದುಕುಳಿಯುವ (ಸರ್ವೈವಲ್) ಲಾಭವನ್ನು ಖಾತ್ರಿಪಡಿಸುತ್ತದೆ. ಪ್ರೀಮಿಯಂ-ಪಾವತಿಸುವ ಅವಧಿ ಅಂತ್ಯದವರೆಗೆ ಜೀವಿತ-ಭರವಸೆಯೊಂದಿಗೆ ಉಳಿದಿರುವ ಎಲ್ಲ ಪ್ರೀಮಿಯಂಗಳನ್ನು ಪಾವತಿಸಿದರೆ ಪ್ರತಿ ವರ್ಷವೂ ಮೂಲಭೂತ ವಿಮಾ ಮೊತ್ತದ ಶೇ 8ಕ್ಕೆ ಸಮನಾದ ಸರ್ವೈವಲ್ ಪ್ರಯೋಜನವನ್ನು ಪಾವತಿಸಲಾಗುತ್ತದೆ.

ಸರ್ವೈವಲ್ ಲಾಭದ ಮೊದಲ ಪಾವತಿಯನ್ನು ಪ್ರೀಮಿಯಂ ಪಾವತಿಸುವ ಅವಧಿಯ ಕೊನೆಯಲ್ಲಿ ಪಾವತಿಸಲಾಗುತ್ತದೆ ಮತ್ತು ನಂತರ ಪ್ರತಿ ಮುಂದಿನ ವರ್ಷವನ್ನು ಪೂರ್ಣಗೊಳಿಸಿದ ನಂತರ ಲೈಫ್-ಅಶ್ಯೂರ್ಡ್​ ಉಳಿದುಕೊಳ್ಳುವವರೆಗೆ ಅಥವಾ ಮೆಚ್ಯೂರಿಟಿ ದಿನಾಂಕದ ಮೊದಲು ಅಥವಾ ಪಾಲಿಸಿ ವಾರ್ಷಿಕೋತ್ಸವದವರೆಗೆ ಯಾವುದು ಮೊದಲೋ ಅದು.

ಪ್ರತಿ ದಿನ ಸರಾಸರಿ 43.40 ರೂಪಾಯಿ ಅಥವಾ ಪ್ರತಿ ತಿಂಗಳು 1,302 ರೂಪಾಯಿಗಳನ್ನು ಪ್ರೀಮಿಯಂ ಆಗಿ ಹೂಡಿಕೆ ಮಾಡಿದರೆ ವಾರ್ಷಿಕ ಒಟ್ಟು ಕೊಡುಗೆ 15,624 ರೂಪಾಯಿ ಆಗುತ್ತದೆ. 30 ವರ್ಷಗಳ ಪಾಲಿಸಿಯನ್ನು ತೆಗೆದುಕೊಂಡರೆ, ಹೂಡಿಕೆ ಸುಮಾರು 4.69 ಲಕ್ಷ ರೂಪಾಯಿ ಆಗುತ್ತದೆ. ಅದರ ನಂತರ 31ನೇ ವರ್ಷದಲ್ಲಿ ತಿಂಗಳಿಗೆ ರೂ. 3,333 ರಿಟರ್ನ್ ಪಡೆಯಲು ಆರಂಭವಾಗಿ, ಅದು ವಾರ್ಷಿಕ 40,000 ರೂಪಾಯಿ ಎಂದಾಗುತ್ತದೆ. ಇದು 100 ವರ್ಷಗಳವರೆಗೆ ಮುಂದುವರಿಯುತ್ತದೆ. ಪಾಲಿಸಿದಾರರು 100 ವರ್ಷ ಬದುಕಿದ್ದರೆ ಆತ ಸುಮಾರು 27.60 ಲಕ್ಷ ರೂಪಾಯಿಗಳ ಲಾಭವನ್ನು ಪಡೆಯುತ್ತಾರೆ.

ಇದನ್ನೂ ಓದಿ: LIC Aadhar Shila Plan: ಎಲ್​ಐಸಿ ಆಧಾರ್ ಶಿಲಾ ಯೋಜನೆಗೆ ದಿನಕ್ಕೆ ರೂ. 29ರಂತೆ ಉಳಿಸಿ, 4 ಲಕ್ಷ ರೂ. ಪಡೆಯಿರಿ

LIC Jeevan Labh policy : ಎಲ್​ಐಸಿ ಜೀವನ್​ ಲಾಭ್​ ಪಾಲಿಸಿ ಬಗ್ಗೆ ನಿಮಗೆ ಗೊತ್ತಿರಲೇಬೇಕಾದ ಮಾಹಿತಿಗಳಿವು

(LIC Jeevan Umang Policy Invest Rs 43 Per Day And Get Rs 27.60 Lakh)

Published On - 2:40 pm, Sat, 18 September 21

ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಅಮಿತ್ ಶಾ ಯಾವತ್ತೂ ಅಂಬೇಡ್ಕರ್​​ರನ್ನು ಅಪಮಾನಿಸಿಲ್ಲ: ಬಿಜೆಪಿ ಕಾರ್ಯಕರ್ತರು
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಸಕ್ಕರೆ ನಾಡಿನಲ್ಲಿ ಸಾಮಾನ್ಯ ಜನಜೀವನ ಎಂದಿನಂತೆ ನಡೆಯುತ್ತಿದೆ
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು
ಚಿಕ್ಕಬಳ್ಳಾಪುರ: ಬೆಂಗಳೂರು ಹೈದರಾಬಾದ್ ಹೆದ್ದಾರಿಯಲ್ಲಿ ದಟ್ಟವಾದ ಮಂಜು