Work From Home: ಲಸಿಕೆ ಕಾರ್ಯ ಎಷ್ಟೇ ವೇಗ ಪಡೆದರೂ ಮತ್ತೆ ಕಚೇರಿಗೆ ಹೋಗೋದು ಅನುಮಾನ ಅಂತಿದೆ ಅಧ್ಯಯನ
ಕೊರೊನಾ ಲಸಿಕೆ ಹಾಕುವ ಪ್ರಮಾಣದಲ್ಲಿ ಹೆಚ್ಚಳವಾದರೂ ಕಚೇರಿಗಳಿಗೆ ಮಾಮೂಲಿನಂತೆ ಸಿಬ್ಬಂದಿ ಹೋಗುವುದು ಅನುಮಾನ ಎಂದು ಅಧ್ಯಯನಗಳು ಹೇಳುತ್ತಿವೆ.
ಕೊವಿಡ್ ಪ್ರಕರಣಗಳು ಕಡಿಮೆ ಆಗುತ್ತಿದ್ದರೂ ಕೊರೊನಾ ಲಸಿಕೆ ಹಾಕುವ ಕಾರ್ಯದಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದರೂ ಕಚೇರಿಗಳು ಮತ್ತೆ ಮಾಮೂಲಿನಂತೆ ನಡೆಯುವುದು ಅನುಮಾನ ಎನ್ನಲಾಗುತ್ತಿದೆ. ನೇಮಕಾತಿ ಕಂಪೆನಿಗಳು ಹೇಳುತ್ತಿರುವ ಪ್ರಕಾರ, ವಲಸಿಗ ಜನಸಂಖ್ಯೆ ಏನಿತ್ತು ಅವರು ಮತ್ತೆ ಕಚೇರಿಗೆ ಬರುವುದಕ್ಕೆ ಸಾಧ್ಯವಾಗದೇ ಹೋಗಬಹುದು. ಯಾರು ತಮ್ಮ ಹುಟ್ಟೂರುಗಳಿಗೆ ತೆರಳಿದರೋ ಅಲ್ಲೇ ಅವರಿಗೆ ಜೀವನ ವೆಚ್ಚ ಕಡಿಮೆ ಅನಿಸಿದೆ. ಶಾಶ್ವತವಾಗಿ ಅಲ್ಲಿಯೇ ನೆಲೆಸುವ ಬಗ್ಗೆ ಆಲೋಚಿಸುತ್ತಿದ್ದಾರೆ ಎನ್ನುತ್ತಾರೆ ಅಡೆಕೊ ಇಂಡಿಯಾ ಸಿಎಂಡಿ ವಿದ್ಯಾಸಾಗರ್ ಗನ್ನಮಣಿ. ಇದರ ಹೊರತಾಗಿ ಸಾಕಷ್ಟು ಮಂದಿ ಸಣ್ಣ ಪಟ್ಟಣಗಳಿಂದ ಬಂದಂಥವರು. ಇತ್ತೀಚಗೆ ಸುಧಾರಿಸಿರುವ ಮೂಲಸೌಕರ್ಯ ಹಾಗೂ ಸಂಂಪರ್ಕದಿಂದ ಅವರಿಗೆ ಅನುಕೂಲ ಆಗಿದೆ.
ಅಡೆಕೊ ಹೇಳುವಂತೆ, ಶೇ 70ರಷ್ಟು ವಲಸಿಗ ಉದ್ಯೋಗಿಗಳು ಜೂನಿಯರ್ ಹಂತದಿಂದ ಮಧ್ಯಮ ಮ್ಯಾನೇಜ್ಮೆಂಟ್ ಹಂತದವರು. ಸೀನಿಯರ್ ಮ್ಯಾನೇಜ್ಮೆಂಟ್ ಹಂತದಲ್ಲಿ ಇರುವವರ ಪ್ರಮಾಣ ಆ ಪೈಕಿ ಶೇ 10ರಿಂದ ಶೇ 15 ಮಾತ್ರ. ಕಾರ್ಯ ನಿರ್ವಹಣೆಯ ಕಡಿಮೆ ವೆಚ್ಚ, ಸ್ಥಳೀಯ ಪ್ರತಿಭೆಗಳು ಮತ್ತು ಇತರ ಅಂಥದ್ದೇ ಕಾರಣಗಳು ಮಧ್ಯಮ ಗಾತ್ರದ ಮತ್ತು ದೊಡ್ಡ ಉದ್ಯಮಗಳ ಕಾರ್ಯ ನಿರ್ವಹಣೆ ಸಣ್ಣ ಪಟ್ಟಣಗಳಿಗೂ ವಿಸ್ತರಣೆ ಆಗಲಿದೆ. ಅಡೆಕೊ ಇಂಡಿಯಾ ಸಿಬ್ಬಂದಿ ಮತ್ತು ಅಸೋಸಿಯೇಟ್ಸ್ನ ಉದ್ಯೋಗಿ ವರ್ಗದ ವಿತರಣೆ ಅಧ್ಯಯನದ ಪ್ರಕಾರ, ಶೇಕಡಾ 60ಕ್ಕೂ ಹೆಚ್ಚು ಮಂದಿ, ತಮ್ಮ ಹುಟ್ಟೂರಿಗೆ ತೆರಳಿದವರು ತಾತ್ಕಾಲಿಕವಾಗಿ ಅಲ್ಲೇ ಮುಂದುವರಿಯಲು ಬಯಸಿದ್ದಾರೆ.
ಈಗಿನ ಬಿಕ್ಕಟ್ಟಿನ ಕಾರಣಕ್ಕೆ ಆರ್ಥಿಕ, ನಡವಳಿಕೆ ಮತ್ತು ರಚನಾತ್ಮಕ ಬದಲಾವಣೆಗಳಾಗಿವೆ. ಉದ್ಯೋಗದಾತರು ಹಾಗೂ ಉದ್ಯೋಗಿಗಳು ಸಿಬ್ಬಂದಿ ವರ್ಗದ ನಿರ್ವಹಣೆಯ ಎಲ್ಲ ಸಾಧ್ಯತೆಗಳನ್ನು ಮರುಚಿಂತಿಸುತ್ತಿದ್ದಾರೆ. ಅದರಲ್ಲಿ ಪೂರೈಕೆ ಜಾಲಗಳಿಂದ ವಿತರಣೆಯ ತನಕ ಒಳಗೊಂಡಿದೆ. ಮೇಲ್ಸ್ತರದಿಂದ ತಳಮಟ್ಟದ ತನಕ ಎಲ್ಲ ಉದ್ಯೋಗಿಗಳನ್ನು ಒಳಗೊಂಡಂಥ ವಿಶಿಷ್ಟ ಅವಕಾಶವನ್ನು ಇದು ಸೃಷ್ಟಿಸಿದೆ. ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಹುಟ್ಟೂರಿಗೆ ವಲಸೆ ಹೋದವರಿಂದಲೇ ಬಹುತೇಕ ಕಂಪೆನಿಗಳು ವರ್ಕ್ ಫ್ರಮ್ ಹೋಮ್ ಮೂಲಕ ಪೂರ್ಣ ಪ್ರತಿಭೆ ಮತ್ತು ಸಾಮರ್ಥ್ಯ ಬಳಸಿಕೊಳ್ಳುವುದಕ್ಕೆ ಯಶಸ್ವಿ ಆಗಿವೆ ಎಂದು ಗನ್ನಮಣಿ ಹೇಳಿದ್ದಾರೆ.
ಬಹುತೇಕ ಐ.ಟಿ. ಕಂಪೆನಿಗಳು ಈಗಲೂ ಸಹ ವರ್ಕ್ ಫ್ರಮ್ ಹೋಮ್ ಅವಕಾಶ ನೀಡಿವೆ. ಆದ್ದರಿಂದ ವಲಸಿಗ ದುಡಿಯುವ ಜನಸಂಖ್ಯೆ ಮತ್ತೆ ನಗರಗಳಿಗೆ ವಾಪಸಾಗುತ್ತವೆ ಎಂದು ಹೇಳುವುದು ಕಠಿಣ. ಒಂದು ಸಲ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಕೆಲಸದ ಜಾಗಗಳಿಗೆ ಹಿಂತಿರುಗುವಂತೆ ಹೇಳಿದ ಮೇಲೆ, ಉದ್ಯೋಗಿಗಳು ವಾಪಸಾಗುವುದನ್ನು ಕಾಣಬಹುದು. ಇದರ ಜತೆಗೆ ಹೊಸ ನೇಮಕಾತಿ ಆದವರನ್ನು ವರ್ಕ್ ಫ್ರಮ್ ಹೋಮ್ ಮಾಡುವ ಬದಲಿಗೆ ಕಚೇರಿಯಿಂದಲೇ ಕೆಲಸ ಮಾಡವಂತೆ ಸೂಚನೆ ನೀಡಬಹುದು ಎನ್ನುತ್ತಾರೆ ವಿಶ್ಲೇಷಕರು. ಇದೇ ವೇಳೆ ಮೆಟ್ರೋ ನಗರಗಳಲ್ಲಿ ನೇಮಕಾತಿ ಪ್ರಮಾಣವೂ ಮೇಲ್ಮುಖದಲ್ಲಿದೆ. ಇದು ಬೇಡಿಕೆಯನ್ನು ಪ್ರತಿಫಲಿಸುತ್ತವೆ. ಲಸಿಕೆ ಹಾಕುವ ಕಾರ್ಯ ವೇಗದಿಂದ ಸಾಗಿದಂತೆ ಕಂಪೆನಿಗಳು ಶೇ 25ರಷ್ಟು ಸಿಬ್ಬಂದಿಯನ್ನು ಮರಳಿ ಕಚೇರಿಗೆ ಕರೆಸಿಕೊಳ್ಳುವ ಸಾಧ್ಯತೆ ಇದೆ. ಇದು ಸರ್ಕಾರದ ನಿಯಮಕ್ಕೆ ಅನುಸಾರವಾಗಿದೆ ಎಂದು ಹೇಳುತ್ತಾರೆ.
ಆದರೆ, ಬೇರೆ ವಿಶ್ಲೇಷಕರ ಅಭಿಪ್ರಾಯಗಳು ಭಿನ್ನವಾಗಿವೆ. ತಮ್ಮ ಹುಟ್ಟೂರುಗಳಲ್ಲಿ ಅವಕಾಶ ಸೀಮಿತವಾಗಿದೆ. ಇನ್ನು ಉದ್ಯೋಗ ವಾತಾವರಣ, ನಗರ ಪ್ರದೇಶಗಳ ಜೀವನಶೈಲಿಗೆ ಹೊಂದಿಕೊಂಡವರು ಇರುತ್ತಾರೆ. ಹಳ್ಳಿಗಳು ಮತ್ತು ಸಣ್ಣ ಪಟ್ಟಣಗಳಿಂದ ಬಂದವರನ್ನು ನಗರಗಳು ಆಕರ್ಷಿಸುತ್ತವೆ. ಪಿರಮಿಡ್ನ ತಳದಲ್ಲಿ ಬರುವ ಶೇ 70ರಷ್ಟು ವಲಸಿಗ ಉದ್ಯೋಗಿಗಳು ಈಗಾಗಲೇ ನಗರಕ್ಕೆ ವಾಪಸಾಗಿದ್ದಾರೆ. ಇವರು ಮೂಲತಃ ಉತ್ಪಾದನೆ, ಪೂರೈಕೆ ಜಾಲ, ನಿರ್ಮಾಣ, ಇ-ಕಾಮರ್ಸ್ ಹಾಗೂ ರೀಟೇಲ್ ವಲಯದಲ್ಲಿ ಕಾರ್ಯ ನಿರ್ವಹಿಸುವವರು ಎನ್ನುತ್ತಾರೆ ಮಾನವ ಸಂಪನ್ಮೂಲ ವಿಭಾಗದಲ್ಲಿ ಕಾರ್ಯ ನಿರ್ವಹಿಸುವ ಹಿರಿಯ ಅಧಿಕಾರಿ.
(Even After Covid Vaccination Difficult To Go Back To Office Normal According To Study Know The Reasons Why)