AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮಗೂ ಕರೆ ಬರಬಹುದು: ವಿಜಯ್ ದೇವರಕೊಂಡ ಎಚ್ಚರಿಕೆ

Vijay Deverakonda: ವಿಜಯ್ ದೇವರಕೊಂಡ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ಮುಂದೆಯೇ ನಡೆದ ಘಟನೆಯೊಂದರ ಬಗ್ಗೆ ವಿಜಯ್ ದೇವರಕೊಂಡ ಆ ವಿಡಿಯೋನಲ್ಲಿ ಮಾತನಾಡಿದ್ದು, ನಿಮಗೂ ಆ ಫೋನ್ ಕರೆ ಆ ಸಂದೇಶ ಬರಬಹುದು ಎಚ್ಚರಿಕೆಯಿಂದ ಇರಿ ಎಂದು ಜಾಗೃತಿ ಮೂಡಿಸುವ ಕಾರ್ಯ ಮಾಡಿದ್ದಾರೆ.

ನಿಮಗೂ ಕರೆ ಬರಬಹುದು: ವಿಜಯ್ ದೇವರಕೊಂಡ ಎಚ್ಚರಿಕೆ
Vijay Deverakonda
ಮಂಜುನಾಥ ಸಿ.
|

Updated on: Jan 08, 2025 | 3:55 PM

Share

ತೆಲುಗಿನ ಸ್ಟಾರ್ ನಟ ವಿಜಯ್ ದೇವರಕೊಂಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸತತವಾಗಿ ಮೂರು ಫ್ಲಾಪ್​ ಸಿನಿಮಾ ನೀಡಿರುವ ವಿಜಯ್ ಒಂದು ಭಾರಿ ದೊಡ್ಡ ಹಿಟ್ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ. ಸದ್ಯಕ್ಕೆ ಎರಡು ಸಿನಿಮಾ ವಿಜಯ್ ದೇವರಕೊಂಡ ಕೈಯಲ್ಲಿದ್ದು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ವಿಜಯ್ ದೇವರಕೊಂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ತಮ್ಮ ಗೆಳೆಯನೊಂದಿಗೆ ನಡೆದ ಘಟನೆಯೊಂದನ್ನು ಹಂಚಿಕೊಂಡಿದ್ದಾರೆ. ಮಾತ್ರವಲ್ಲದೆ ನಿಮಗೂ ಹೀಗೆ ಆಗಬಹುದು ಎಚ್ಚರಿಕೆಯಿಂದ ಇರಿ ಎಂದು ಎಚ್ಚರಿಕೆ ಹೇಳಿದ್ದಾರೆ.

ಇತ್ತೀಚೆಗೆ ಅವರ ಗೆಳೆಯನೊಬ್ಬನಿಗೆ ಯಾರಿಂದಲೋ ಕರೆ ಒಂದು ಬಂದಂತೆ. ನಿಮ್ಮ ತಂದೆಯ ಬಳಿ ನಾನು 5000 ರೂಪಾಯಿ ಹಣ ಪಡೆದುಕೊಂಡಿದ್ದೆ, ಅದನ್ನು ವಾಪಸ್ ಕಳಿಸಬೇಕಿದೆ, ಫೋನ್ ಪೇ ಮೂಲಕ ಕಳಿಸುತ್ತೇನೆ ಎಂದರಂತೆ. ಅದಕ್ಕೆ ವಿಜಯ್ ದೇವರಕೊಂಡ ಗೆಳೆಯ ಸರಿ ಎಂದಿದ್ದಾರೆ. ಅದಾದ ಸ್ವಲ್ಪ ಹೊತ್ತಿಗೆ. ವಿಜಯ್​ರ ಗೆಳೆಯನ ಖಾತೆಗೆ 50 ಸಾವಿರ ರೂಪಾಯಿ ಹಣ ಬಂದಿರುವ ಮೆಸೇಜ್ ಬಂತಂತೆ. ಕೂಡಲೇ ಮೊದಲು ಕರೆ ಮಾಡಿದ್ದ ವ್ಯಕ್ತಿ ಮತ್ತೆ ಕರೆ ಮಾಡಿ, ನಾನು 5000 ಹಣ ಕಳಿಸುವ ಬದಲಿಗೆ ಒಂದು ಸೊನ್ನೆ ಹೆಚ್ಚು ಒತ್ತಿ 50 ಸಾವಿರ ಕಳಿಸಿದ್ದೇನೆ. 45 ಸಾವಿರ ರೂಪಾಯಿ ವಾಪಸ್ ಹಾಕಿಬಿಡಿ ಎಂದಿದ್ದಾರೆ. ನನ್ನ ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ ಹಣದ ಅರ್ಜೆಂಟ್ ನನಗೆ ಇದೆ. ಕೂಡಲೇ ಹಣ ಹಾಕಿ ಎಂದಿದ್ದಾರೆ.

ಆದರೆ ವಿಜಯ್ ಹೇಳಿರುವಂತೆ, ಈ ಘಟನೆ ನಡೆದಾಗ ಆ ಗೆಳೆಯನ ಜೊತೆಗೆ ವಿಜಯ್ ಸಹ ಇದ್ದರಂತೆ. ಅವರು ತಮ್ಮ ಗೆಳೆಯ ಹಣ ಹಾಕದಂತೆ ತಡೆದು, ನಿನ್ನ ಬ್ಯಾಂಕ್ ಖಾತೆಯ ಸ್ಟೇಟ್​ಮೆಂಟ್ ಒಮ್ಮೆ ಚೆಕ್ ಮಾಡು ಅಲ್ಲಿಗೆ ಹಣ ಬಂದಿದ್ದರೆ ಮಾತ್ರವೇ ಹಣ ಹಾಕು ಎಂದರಂತೆ. ವಿಜಯ್ ಮಾತಿನಂತೆ ಆ ಗೆಳೆಯನ ಚೆಕ್ ಮಾಡಿದಾಗ ಬ್ಯಾಂಕ್ ಖಾತೆಗೆ ಯಾವುದೇ ಹಣ ಬಂದಿರಲೇ ಇಲ್ಲವಂತೆ!

ಇದನ್ನೂ ಓದಿ:ಹೆಮ್ಮೆಯಿಂದ ಗರ್ಲ್​ಫ್ರೆಂಡ್​ ಪರಿಚಯಿಸಿದ ವಿಜಯ್ ದೇವರಕೊಂಡ

ಈ ಘಟನೆ ಹೇಳಿರುವ ವಿಜಯ್, ನಿಮಗೂ ಸಹ ಹೀಗೆ ಕರೆಗಳು, ಸಂದೇಶಗಳು ಬರಬಹುದು ಎಚ್ಚರಿಕೆಯಿಂದ ಇರಿ. ಥೇಟ್ ಕ್ರೆಡಿಟ್ ಮೆಸೇಜ್ ರೀತಿಯೇ ಕಾಣುವ ಮೆಸೇಜ್ ಅನ್ನು ಕೆಲವು ಸ್ಕ್ಯಾಮರ್​ಗಳು ಕಳಿಸುತ್ತಾರೆ ಆ ನಂತರ ನಿಮಗೆ ಕರೆ ಮಾಡಿ ನಿಮ್ಮ ಖಾತೆಗೆ ಹಣ ಬಂದಿದೆ ಅದನ್ನು ಮರಳಿ ಹಾಕಿ ಎಂದು ಕೇಳುತ್ತಾರೆ. ನೀವು ಸಂದೇಶ ಬಂದಿದೆಯೆಂದರೆ ಹಣ ಬಂದಿರುತ್ತದೆ ಎಂದು ಕೊಂಡು ಹಣ ಹಾಕಬೇಡಿ, ಒಮ್ಮೆ ಬ್ಯಾಂಕ್ ಸ್ಟೇಟ್​ಮೆಂಟ್ ಚೆಕ್ ಮಾಡಿದ ಬಳಿಕವೇ ಹಣ ಹಾಕಿ ಎಂದಿದ್ದಾರೆ ವಿಜಯ್ ದೇವರಕೊಂಡ.

ಅಂದಹಾಗೆ ವಿಜಯ್ ದೇವರಕೊಂಡ ಇದೀಗ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಡಿ 12 ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ. ವಿಜಯ್​ಗೆ ಒಂದೊಳ್ಳೆ ಹಿಟ್ ಸಿನಿಮಾ ಸಿಕ್ಕು ವರ್ಷಗಳೇ ಆಗಿವೆ. ರಶ್ಮಿಕಾ ಜೊತೆಗೆ ನಟಿಸಿದ ಸಿನಿಮಾದ ಬಳಿಕ ಅವರಿಗೆ ದೊಡ್ಡ ಗೆಲುವು ಸಿಕ್ಕೇ ಇಲ್ಲ. ಈ ಹಿಂದೆ ನಟಿಸಿದ ‘ಫ್ಯಾಮಿಲಿ ಮ್ಯಾನ್’, ‘ಲೈಗರ್’ ಮತ್ತು ‘ಖುಷಿ’ ಸಿನಿಮಾಗಳು ಫ್ಲಾಪ್ ಆಗಿವೆ. ಅದಕ್ಕೆ ಮುಂಚಿನ ‘ಟ್ಯಾಕ್ಸಿ ಡ್ರೈವರ್’, ‘ವರ್ಲ್ಡ್ ಫೇಮಸ್ ಲೌವ್ವರ್’, ‘ನೋಟಾ’ ಸಿನಿಮಾಗಳು ಸಹ ಫ್ಲಾಪ್ ಆಗಿವೆ. ಈಗ ಮತ್ತೆ ರಶ್ಮಿಕಾ ಜೊತೆಗೆ ‘ಗೀತಾ ಗೋವಿಂದಂ 2’ ಸಿನಿಮಾದಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ