KGF 3: ಯಶ್ ಬರ್ತ್ಡೇ ದಿನ ‘ಕೆಜಿಎಫ್ 3’ ಅಪ್ಡೇಟ್ಸ್ಗಾಗಿ ಕಾದು ಕುಳಿತವರಿಗೆ ಸಿಕ್ಕಿದ್ದೇನು?
‘ಕೆಜಿಎಫ್ 2’ ಚಿತ್ರದ ಯಶಸ್ಸಿನ ನಂತರ, ’ಕೆಜಿಎಫ್ 3’ ಬಗ್ಗೆ ಅಭಿಮಾನಿಗಳಲ್ಲಿ ಬಹಳಷ್ಟು ನಿರೀಕ್ಷೆ ಇತ್ತು. ಆದರೆ ಯಶ್ ಅವರ ಜನ್ಮದಿನದಂದು ಯಾವುದೇ ಅಪ್ಡೇಟ್ ಸಿಕ್ಕಿಲ್ಲ. ನಿರ್ಮಾಪಕರು 4-5 ತಿಂಗಳಲ್ಲಿ ಅಪ್ಡೇಟ್ ನೀಡುವುದಾಗಿ ಹೇಳಿದ್ದಾರೆ. ಈಗ ಅಭಿಮಾನಿಗಳು ಏಪ್ರಿಲ್ 14 (ಕೆಜಿಎಫ್ 2 ರಿಲೀಸ್ ದಿನಾಂಕ) ರಂದು ಅಪ್ಡೇಟ್ ಬರಲಿದೆ ಎಂದು ಆಶಿಸುತ್ತಿದ್ದಾರೆ.
‘ಕೆಜಿಎಫ್ 2’ ಸಿನಿಮಾ 2022ರ ಏಪ್ರಿಲ್ನಲ್ಲಿ ರಿಲೀಸ್ ಆಯಿತು. ಈ ಚಿತ್ರ ಸೂಪರ್ ಹಿಟ್ ಸಾಲಿಗೆ ಸೇರಿತ್ತು. ಈ ಚಿತ್ರದ ಕ್ಲೈಮ್ಯಾಕ್ಸ್ನಲ್ಲಿ ‘ಕೆಜಿಎಫ್ 3’ ಕುರಿತು ಮಾಹಿತಿ ನೀಡಲಾಗಿತ್ತು. ಇದನ್ನು ನೋಡಿ ಜನರು ಥ್ರಿಲ್ ಆಗಿದ್ದರು. ಆದರೆ, ಈಗಾಗಲೇ ಸಿನಿಮಾ ರಿಲೀಸ್ ಆಗಿ ಮೂರು ವರ್ಷ ಕಳೆಯುತ್ತಾ ಬಂದರೂ ಚಿತ್ರದ ಕಡೆಯಿಂದ ಯಾವುದೇ ಮಾಹಿತಿ ಸಿಕ್ಕಿಲ್ಲ. ಯಶ್ ಜನ್ಮದಿನಕ್ಕೆ (ಜನವರಿ 8) ‘ಕೆಜಿಎಫ್ 3’ ಬಗ್ಗೆ ಅಪ್ಡೇಟ್ ಸಿಗಬಹುದು ಎಂದು ಕಾದಿದ್ದ ಅಭಿಮಾನಿಗಳಿಗೆ ಸಿಕ್ಕಿದ್ದು ಬರೀ ನಿರಾಸೆ.
ಅಕ್ಟೋಬರ್ ಆರಂಭದಲ್ಲಿ ಮಾತನಾಡಿದ್ದ ನಿರ್ಮಾಪಕ ವಿಜಯ್ ಕಿರಗಂದೂರು ಅವರು, ‘4-5 ತಿಂಗಳಲ್ಲಿ ಕೆಜಿಎಫ್ 3 ಚಿತ್ರದ ಬಗ್ಗೆ ಅಪ್ಡೇಟ್ ಕೊಡುತ್ತೇವೆ. ಸದ್ಯ ಮಾತುಕತೆಗಳು ನಡೆಯುತ್ತಿವೆ’ ಎಂದು ಹೇಳಿದ್ದರು. ಆಗ ಎಲ್ಲರೂ ಅಂದುಕೊಂಡಿದ್ದು, ‘ಯಶ್ ಬರ್ತ್ಡೇ ದಿನ ಕೆಜಿಎಫ್ ಚಿತ್ರದ ಮೂರನೇ ಭಾಗದ ಬಗ್ಗೆ ಅಪ್ಡೇಟ್ ಸಿಗಬಹುದು’ ಎಂದು. ಆದರೆ, ಹಾಗಾಗಿಲ್ಲ.
‘ಹೊಂಬಾಳೆ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ ಕಡೆಯಿಂದ ಇಂದು ಬೆಳಿಗ್ಗೆಯೇ ಯಶ್ಗೆ ಬರ್ತ್ಡೇ ವಿಶ್ ಮಾಡಲಾಗಿದೆ. ಆದರೆ, ಎಲ್ಲಿಯೂ ಅವರು ‘ಕೆಜಿಎಫ್ 3’ ಬಗ್ಗೆ ಮಾಹಿತಿ ನೀಡಿಲ್ಲ. ಹೀಗಾಗಿ, ಅಭಿಮಾನಿಗಳ ಊಹೆ ತಪ್ಪಾಗಿದೆ. ಸಿನಿಮಾ ಕುರಿತು ಯಾವುದೇ ಮಾಹಿತಿ ಸಿಗದ ಕಾರಣ ಮತ್ತಷ್ಟು ದಿನ ಕಾಯಬೇಕಾದ ಪರಿಸ್ಥಿತಿ ಬಂದಿದೆ.
View this post on Instagram
ಈಗ ಎಲ್ಲರ ಗಮನ ಏಪ್ರಿಲ್ 14ರ ಮೇಲೆ ಇದೆ. ‘ಕೆಜಿಎಫ್ 2’ ಚಿತ್ರ ರಿಲೀಸ್ ಆಗಿದ್ದು ಏಪ್ರಿಲ್ 14ರಂದು. ಈಗ 2025ರ ಏಪ್ರಿಲ್ಗೆ ಸಿನಿಮಾ ಬಿಡುಗಡೆ ಹೊಂದಿ ಮೂರು ವರ್ಷಗಳು ಕಳೆಯಲಿವೆ. ಹೀಗಾಗಿ, ಆ ದಿನಾಂಕದ ಬಗ್ಗೆ ಪ್ರೇಕ್ಷಕರು ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಂದು ಅಪ್ಡೇಟ್ ಸಿಗಲಿ ಎಂದು ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: Toxic Movie: ಟಾಕ್ಸಿಕ್ ಗ್ಲಿಂಪ್ಸ್ ರಿಲೀಸ್; ಮಸ್ತ್ ಆಗಿ ಕ್ಲಬ್ಗೆ ಎಂಟ್ರಿ ಕೊಟ್ಟ ಯಶ್
ಯಶ್ ಜನ್ಮದಿನಕ್ಕೆ ಅಭಿಮಾನಿಗಳಿಗೆ ನಿರಾಸೆಯಂತೂ ಆಗಿಲ್ಲ. ‘ಟಾಕ್ಸಿಕ್’ ಚಿತ್ರದ ಗ್ಲಿಂಪ್ಸ್ನ ತಂಡದವರು ರಿಲೀಸ್ ಮಾಡಿದ್ದಾರೆ. ಇದು ಭರ್ಜರಿ ಗಮನ ಸೆಳೆದಿದೆ. ಇದನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 3:04 pm, Wed, 8 January 25