‘ಟಾಕ್ಸಿಕ್’ ಗ್ಲಿಂಪ್ಸ್​ಗೆ ಮಲಯಾಳಂ ಚಿತ್ರರಂಗದ ವಿರೋಧ; ಗೀತು ಮೋಹನ್​ದಾಸ್​ಗೆ ನೇರ ಪ್ರಶ್ನೆ  

ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಗ್ಲಿಂಪ್ಸ್ ಬಿಡುಗಡೆಯಾದ ಬಳಿಕ ಮಹಿಳಾ ವಿರೋಧಿ ದೃಶ್ಯಗಳಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಮಲಯಾಳಂ ನಿರ್ದೇಶಕ ನಿತಿನ್ ಅವರು ಗೀತು ಮೋಹನ್‌ದಾಸ್ ಅವರ ಹಿಂದಿನ ಹೇಳಿಕೆಗಳನ್ನು ಪ್ರಶ್ನಿಸಿದ್ದಾರೆ. ಚಿತ್ರದಲ್ಲಿ ಮಹಿಳೆಯರನ್ನು ಅವಮಾನಿಸುವ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಆರೋಪಿಸಲಾಗಿದೆ.

‘ಟಾಕ್ಸಿಕ್’ ಗ್ಲಿಂಪ್ಸ್​ಗೆ ಮಲಯಾಳಂ ಚಿತ್ರರಂಗದ ವಿರೋಧ; ಗೀತು ಮೋಹನ್​ದಾಸ್​ಗೆ ನೇರ ಪ್ರಶ್ನೆ  
‘ಟಾಕ್ಸಿಕ್’ ಗ್ಲಿಂಪ್ಸ್​ಗೆ ಮಲಯಾಳಂ ಚಿತ್ರರಂಗದ ವಿರೋಧ; ಗೀತು ಮೋಹನ್​ದಾಸ್​ಗೆ ನೇರ ಪ್ರಶ್ನೆ  
Follow us
ರಾಜೇಶ್ ದುಗ್ಗುಮನೆ
|

Updated on:Jan 09, 2025 | 11:03 AM

‘ಕೆಜಿಎಫ್ 2’ ಚಿತ್ರದ ಬಳಿಕ ಯಶ್ ಒಪ್ಪಿಕೊಂಡಿರುವ ‘ಟಾಕ್ಸಿಕ್’ ಸಿನಿಮಾ ಬಗ್ಗೆ ಪ್ರೇಕ್ಷಕರಿಗೆ ನಿರೀಕ್ಷೆ ಇದೆ. ಯಶ್ ಜನ್ಮದಿನದ (ಜನವರಿ 8) ಹಿನ್ನೆಲೆಯಲ್ಲಿ ಚಿತ್ರದ ಗ್ಲಿಂಪ್ಸ್ ರಿಲೀಸ್ ಮಾಡಲಾಗಿತ್ತು. ಈ ವಿಡಿಯೋ ಬಗ್ಗೆ ಮಲಯಾಳಂ ಚಿತ್ರರಂಗದಲ್ಲಿ ವಿರೋಧ ವ್ಯಕ್ತವಾಗಿದೆ. ಅನೇಕರು ಗೀತು ಮೋಹನ್​ದಾಸ್ ಅವರನ್ನು ಪ್ರಶ್ನೆ ಮಾಡಿದ್ದಾರೆ. ಮಹಿಳೆಯರನ್ನು ಕೆಟ್ಟದಾಗಿ ತೋರಿಸಲಾಗಿದೆ ಎಂದು ಅನೇಕರು ಆರೋಪಿಸಿದ್ದಾರೆ.

ಮಲಯಾಳಂ ನಿರ್ದೇಶಕ ನಿತಿನ್ ಅವರು ಗೀತು ಮೋಹನ್​ದಾಸ್ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ‘ಟಾಕ್ಸಿಕ್’ ಟೀಸರ್ ನೋಡಿದ ಬಳಿಕ ಅವರು ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅವರನ್ನು ಅನೇಕರು ಬೆಂಬಲಿಸಿದ್ದಾರೆ. ನಿತಿನ್ ಅವರು ಗೀತು ವಿರುದ್ಧ ಧ್ವನಿ ಎತ್ತಲು ಒಂದು ಕಾರಣ ಇದೆ ಎನ್ನಲಾಗಿದೆ.

ನಿತಿನ್ ನಿರ್ದೇಶನದ ಸಿನಿಮಾ ಪ್ರಶ್ನಿಸಿದ್ದ ಗೀತು

2016ರಲ್ಲಿ ‘ಕಸಾಬ’ ಹೆಸರಿನ ಸಿನಿಮಾ ಬಂದಿತ್ತು. ಇದನ್ನು ನಿರ್ದೇಶನ ಮಾಡಿದ್ದು ನಿತಿನ್ ಅವರು. ಈ ಚಿತ್ರದಲ್ಲಿ ಬರುವ ಒಂದು ದೃಶ್ಯ ಸಾಕಷ್ಟು ವಿರೋಧ ಎದುರಿಸಿತ್ತು. ಪೊಲೀಸ್ ಅಧಿಕಾರಿ (ಮಮ್ಮೂಟಿ) ಮಹಿಳಾ ಪೊಲೀಸ್ ಅಧಿಕಾರಿ ಬಳಿ ಹೋಗಿ ಅವರ ಬೆಲ್ಟ್ ತೆಗೆದು, ‘ನಾನು ನಿಮ್ಮ ಋತುಚಕ್ರವನ್ನು ನಿಲ್ಲಿಸಬಹುದು’ ಎಂದು ಹೇಳುತ್ತಾನೆ. ಈ ದೃಶ್ಯವನ್ನು ಗೀತು ಮೋಹನ್​ದಾಸ್ ಕೂಡ ವಿರೋಧಿಸಿದ್ದರು. ಈಗ ಅವರೇ ಮಹಿಳೆಯರನ್ನು ಕೆಟ್ಟದಾಗಿ ತೋರಿಸಿದ್ದು ಎಷ್ಟು ಸರಿ ಎಂಬುದು ನಿತಿನ್ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಗ್ಲಿಂಪ್ಸ್​ನಲ್ಲಿ ಯಶ್ ಲುಕ್ ಹೇಗಿದೆ? ಇಲ್ಲಿವೆ ವಿವಿಧ ಪೋಸ್ 

‘ಕಸಾಬದಲ್ಲಿ ಯಾವುದೇ ಕೆಟ್ಟ ವಿಚಾರ ಇರಲಿಲ್ಲ. ಆದಾಗ್ಯೂ ಇದು ತಪ್ಪು ತಪ್ಪು ಎಂದರು. ಈಗ ಅವರು ಬೇರೆ ರಾಜ್ಯಕ್ಕೆ ತೆರಳಿದಾಗ ಅವರು ತಮಗೆ ಸರಿಹೊಂದುವಂತೆ ಸ್ತ್ರೀದ್ವೇಷದ ವ್ಯಾಖ್ಯಾನವನ್ನು ಬದಲಾಯಿಸಿಕೊಂಡಿದ್ದಾರೆ’ ಎಂದು ನಿತೀನ್ ಹೇಳಿದ್ದಾರೆ.

ಗ್ಲಿಂಪ್ಸ್​ನಲ್ಲಿ ಏನಿದೆ?

ರಾಕಿಂಗ್ ಸ್ಟಾರ್ ಯಶ್ ಅವರು ‘ಟಾಕ್ಸಿಕ್’ ಸಿನಿಮಾದಲ್ಲಿ ಹೀರೋ ಆಗಿ ನಟಿಸಿದ್ದಾರೆ. ಅವರು ಕ್ಲಬ್ ಒಂದಕ್ಕೆ ಎಂಟ್ರಿ ಕೊಟ್ಟು ಮಹಿಳೆಯ ಮೇಲೆ ಎಣ್ಣೆ ಸುರಿಯುತ್ತಾರೆ. ಈ ರೀತಿಯಲ್ಲಿ ದೃಶ್ಯ ಇದೆ. ಇದನ್ನು ಸೋಶಿಯಲ್ ಮೀಡಿಯಾದಲ್ಲಿ ಟೀಕಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 10:15 am, Thu, 9 January 25

ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕರ್ನಾಟಕದ ಭಕ್ತರು ಯಾರೂ ಮೃತಪಟ್ಟಿಲ್ಲ ಎಂದ ಸಚಿವ ರಾಮಲಿಂಗಾರೆಡ್ಡಿ
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಕೆಪಿಸಿಸಿ ಅಧ್ಯಕ್ಷನ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಭಯವಿಲ್ಲ: ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಬೆಂಗಳೂರಲ್ಲಿದ್ದರೂ ಬಿಜೆಪಿ ಸಭೆಗೆ ಹಾಜರಾಗದ ಬಸನಗೌಡ ಪಾಟೀಲ್ ಯತ್ನಾಳ್
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಪ್ರತಿಭಟನೆಕಾರರು ಆಟೋರಿಕ್ಷಾ ಬೆನ್ನಟ್ಟಿದ್ದರೂ ಪೊಲೀಸ್ ಮೂಕ ಪ್ರೇಕ್ಷಕ ಮಾತ್ರ
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ಕುಂಭಕೋಣಂ ಪ್ರತ್ಯಂಗಿರಾ ದೇವಿ ದರ್ಶನ ಪಡೆದ ಡಿಕೆ ಶಿವಕುಮಾರ್
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರೈಲು ಹತ್ತಲು ಹೋಗಿ ಪ್ಲಾಟ್​ಫಾರಂ ಕೆಳಗೆ ಬೀಳುತ್ತಿದ್ದ ಪ್ರಯಾಣಿಕನ ರಕ್ಷಣೆ
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್
ರಸ್ತೆಗಳಲ್ಲಿ ವಾಹನ ಸಂಚಾರ ಕಂಡುಬರುತ್ತಿಲ್ಲ, ಶಾಲೆಗಳು ಬಂದ್ ಆಗಿವೆ: ಪೊಲೀಸ್