- Kannada News Photo gallery Rocking Star Yash Toxic Movie glimpse Toxic movie Yash Poses Cinema News in Kannada
‘ಟಾಕ್ಸಿಕ್’ ಗ್ಲಿಂಪ್ಸ್ನಲ್ಲಿ ಯಶ್ ಲುಕ್ ಹೇಗಿದೆ? ಇಲ್ಲಿವೆ ವಿವಿಧ ಪೋಸ್
ರಾಕಿಂಗ್ ಸ್ಟಾರ್ ಯಶ್ ಅವರ ಜನ್ಮದಿನದಂದು ವಿಶೇಷ ಉಡುಗೊರೆ ಕೊಡೋದಾಗಿ ‘ಟಾಕ್ಸಿಕ್’ ತಂಡ ಈ ಮೊದಲೇ ಘೋಷಣೆ ಮಾಡಿತ್ತು. ಅಂತೆಯೇ ಇಂದು (ಜನವರಿ 8) ಬೆಳಿಗ್ಗೆ 10 ಗಂಟೆ 25 ನಿಮಿಷಕ್ಕೆ ‘ಟಾಕ್ಸಿಕ್’ ಗ್ಲಿಂಪ್ಸ್ ರಿಲೀಸ್ ಆಗಿದೆ. ಯಶ್ ಅವರ ಚಿತ್ರದ ಮೇಲಿರುವ ನಿರೀಕ್ಷೆ ಈಗ ದ್ವಿಗುಣವಾಗಿದೆ.
Updated on: Jan 08, 2025 | 11:42 AM

ನಟ ರಾಕಿಂಗ್ ಸ್ಟಾರ್ ಯಶ್ ಅವರು ‘ಟಾಕ್ಸಿಕ್’ ಸಿನಿಮಾದ ಬಗ್ಗೆ ನಿರೀಕ್ಷೆ ಹೆಚ್ಚುವಂತೆ ಆಗಿದೆ. ಅದಕ್ಕೆ ಕಾರಣ ಆಗಿರೋದು ಈ ಚಿತ್ರದ ಗ್ಲಿಂಪ್ಸ್. ಬರ್ತ್ಡೇ ಪ್ರಯುಕ್ತ ಚಿತ್ರದ ಮೊದಲ ಗ್ಲಿಂಪ್ಸ್ ಬಿಡುಗಡೆ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಇಂದು (ಜನವರಿ 8) ಯಶ್ ಜನ್ಮದಿನ. ಈ ಪ್ರಯುಕ್ತ ಚಿತ್ರದ ಬಗ್ಗೆ ಅಪ್ಡೇಟ್ ಕೊಡೋದಾಗಿ ತಂಡದವರು ಮೊದಲೇ ಹೇಳಿದ್ದರು. ಅದರಂತೆಯೇ ‘ಟಾಕ್ಸಿಕ್’ ಚಿತ್ರದ ಗ್ಲಿಂಪ್ಸ್ ರಿಲೀಸ್ ಮಾಡಲಾಗಿದೆ. ಇದು ಗಮನ ಸೆಳೆಯುತ್ತಿದೆ.

‘ಟಾಕ್ಸಿಕ್’ ಚಿತ್ರದ ಬಗ್ಗೆ ಯಾವುದೇ ಹಿಂಟ್ ಕೊಡದ ರೀತಿಯಲ್ಲಿ ಈ ಚಿತ್ರದ ಗ್ಲಿಂಪ್ಸ್ ಮೂಡಿ ಬಂದಿದೆ. ಈ ಸಿನಿಮಾ ಈ ವರ್ಷಾಂತ್ಯಕ್ಕೆ ತೆರೆಗೆ ಬರಲಿದೆ. ಹೀಗಾಗಿ ಈಗಲೇ ಹೆಚ್ಚಿನ ವಿಚಾರ ರಿವೀಲ್ ಮಾಡೋದು ಬೇಡ ಎಂಬ ನಿರ್ಧಾರಕ್ಕೆ ತಂಡ ಬಂದಂತಿದೆ.

ಯಶ್ ಅವರು ಕ್ಲಾಸಿ ಲುಕ್ನಲ್ಲಿ ಕ್ಲಬ್ ಒಂದಕ್ಕೆ ಎಂಟ್ರಿ ಕೊಡುತ್ತಾರೆ. ಅವರು ಎಂಟ್ರಿ ಕೊಡೋದು ವಿಂಟೇಜ್ ಕಾರಿನಲ್ಲಿ. ಈ ಲುಕ್ನ ಈ ಮೊದಲೇ ಪೋಸ್ಟರ್ನಲ್ಲಿ ರಿಲೀಸ್ ಮಾಡಲಾಗಿತ್ತು. ಯಶ್ ಅವರ ಲುಕ್ ಈಗ ಗಮನ ಸೆಳೆಯುತ್ತಿದೆ.

ಯಶ್ ಎಂಟ್ರಿ ಕೊಡೋ ಕ್ಲಬ್ನಲ್ಲಿ ದೊಡ್ಡ ಮಟ್ಟದಲ್ಲಿ ಪಾರ್ಟಿ ನಡೆಯುತ್ತಾ ಇರುತ್ತದೆ. ಈ ಪಾರ್ಟಿಯಲ್ಲಿ ಯಶ್ ಕೂಡ ಭಾಗಿ ಆಗುತ್ತಾರೆ. ಆ ಬಳಿಕ ಅವರು ಪಾರ್ಟಿಯಲ್ಲಿ ಎಂಜಾಯ್ ಮಾಡುತ್ತಾರೆ. ಹುಡುಗಿಯ ಮೇಲೆ ಎಣ್ಣೆ ಸುರಿಯುತ್ತಾರೆ.

‘ಟಾಕ್ಸಿಕ್’ ಚಿತ್ರಕ್ಕೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಅವರು ದೊಡ್ಡ ಬಜೆಟ್ನಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಾ ಇದ್ದಾರೆ.

‘ಟಾಕ್ಸಿಕ್’ ಚಿತ್ರದಲ್ಲಿ ಹಿಂದಿಯ ಕಿಯಾರಾ ಅಡ್ವಾಣಿ, ತಮಿಳಿನ ನಯನತಾರಾ ನಟಿಸುತ್ತಿದ್ದಾರೆ. ಈ ಸಿನಿಮಾ ವರ್ಷಾಂತ್ಯಕ್ಕೆ ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಡ್ರಗ್ಸ್ ಬಗ್ಗೆ ಇರಲಿದೆ ಎಂದು ಹೇಳಲಾಗುತ್ತಿದೆ. ಸಿನಿಮಾಗಾಗಿ ಫ್ಯಾನ್ಸ್ ಕಾದಿದ್ದಾರೆ.



















