ಗುಜರಾತ್ನಲ್ಲಿ ಪ್ರೇಯಸಿಯನ್ನು ಭೇಟಿಯಾಗಲು ಹೋದ ಯುವಕನ ಕೂದಲು ಕತ್ತರಿಸಿ, ಥಳಿಸಿದ ಜನರು
ಗುಜರಾತ್ನ ಬನಸ್ಕಾಂತದಲ್ಲಿ ತನ್ನ ಗೆಳತಿಯನ್ನು ಭೇಟಿಯಾಗಲು ಹೋದ ಯುವಕನಿಗೆ ಅಮಾನವೀಯವಾಗಿ ಶಿಕ್ಷೆ ವಿಧಿಸಿರುವ ವಿಡಿಯೋ ವೈರಲ್ ಆಗಿದೆ. ತನ್ನ ಗೆಳತಿಯನ್ನು ಭೇಟಿಯಾಗಲು ಹೋದ ಯುವಕನಿಗೆ ತಾಲಿಬಾನ್ ಶೈಲಿಯಲ್ಲಿ ಶಿಕ್ಷೆ ನೀಡಲಾಗಿದೆ. ಆ ಯುವಕನಿಗೆ ಹಗ್ಗ ಬಿಗಿದು, ಕೂದಲು ಕತ್ತರಿಸಿ, ಥಳಿಸಿರುವ ಘಟನೆ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಅಹಮದಾಬಾದ್: ಗುಜರಾತ್ನ ಬನಸ್ಕಾಂತದಲ್ಲಿ ಯುವಕನೊಬ್ಬನಿಗೆ ತಾಲಿಬಾನ್ ಮಾದರಿಯಲ್ಲಿ ಶಿಕ್ಷೆ ವಿಧಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಗೆಳತಿಯನ್ನು ಭೇಟಿಯಾಗಲು ಹೋದ ಯುವಕನಿಗೆ ಶಿಕ್ಷೆ ವಿಧಿಸಿರುವುದು ಬೆಳಕಿಗೆ ಬಂದಿದೆ. ಯುವಕನೊಬ್ಬನಿಗೆ ಥಳಿಸಿ ಕೂದಲು ಕತ್ತರಿಸಿರುವ ವಿಡಿಯೋ ವೈರಲ್ ಆಗಿದೆ. ತನ್ನ ಪ್ರೇಯಸಿಯನ್ನು ಭೇಟಿಯಾಗಲು ಹೋಗುತ್ತಿದ್ದ ಯುವಕ ಮತ್ತು ಆತನ ಇಬ್ಬರು ಸ್ನೇಹಿತರನ್ನು ಜನರು ಥಳಿಸಿದ್ದಾರೆ. ಮೂವರು ಯುವಕರನ್ನು ಹಗ್ಗದಿಂದ ಕಟ್ಟಿ ಶಿಕ್ಷೆ ನೀಡಿರುವ ವಿಡಿಯೋ ವೈರಲ್ ಆಗಿದೆ. ಕೆಲವರು ಯುವಕರನ್ನು ಚುಡಾಯಿಸುತ್ತಿರುವುದು ಕಂಡು ಬಂದಿದೆ. ಕಾನೂನನ್ನು ಕೈಗೆತ್ತಿಕೊಂಡವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿ ಬಂದಿದೆ.
ಬನಸ್ಕಾಂತದಲ್ಲಿ ಈ ರೀತಿ ಘಟನೆ ನಡೆಯುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಭಿಕ್ಷೆ ಬೇಡುತ್ತಿದ್ದ ಮಾದಿಗ ಸಮುದಾಯದ ಯುವಕನಿಗೆ ಥಳಿಸಲಾಗಿತ್ತು. ಈ ಹಿಂದೆಯೂ ಬನಸ್ಕಾಂತದಲ್ಲಿ ತಾಲಿಬಾನ್ ಶಿಕ್ಷೆಯ ವಿಡಿಯೋ ವೈರಲ್ ಆಗಿತ್ತು. ವೈರಲ್ ಆಗಿರುವ ವಿಡಿಯೋ ಯಾತ್ರಾಸ್ಥಳದಲ್ಲಿ ನಡೆದಿದ್ದು ಎಂದು ಊಹಿಸಲಾಗಿತ್ತು. ವಾಡಿ ಸಮುದಾಯದ ಇಬ್ಬರು ಯುವಕರು ಭಿಕ್ಷಾಟನೆ ಮಾಡುತ್ತಿದ್ದ ಮಹಿಳೆಯರ ಫೋಟೋ ತೆಗೆದಿದ್ದಾರೆ ಎಂಬ ಅನುಮಾನದ ಮೇಲೆ ಸ್ಥಳೀಯರು ಅವರನ್ನು ಹಿಡಿದು ಅವರ ಸಮುದಾಯದ ಮುಖಂಡರಿಗೆ ಒಪ್ಪಿಸಿದ್ದರು.
ಇದನ್ನೂ ಓದಿ: Viral: ಮೊಟ್ಟ ಮೊದಲ ಬಾರಿಗೆ ಹಂಗೇರಿ-ರೊಮೇನಿಯಾ ಗಡಿಯನ್ನು ದಾಟಿದ ಬೀದಿ ನಾಯಿ; ಹೃದಯಸ್ಪರ್ಶಿ ವಿಡಿಯೋ ವೈರಲ್
ಬಳಿಕ, ಆ ಸಮುದಾಯದ ಮುಖಂಡರು ಯುವಕರಿಬ್ಬರಿಗೂ ಮಹಿಳೆಯರ ಬಟ್ಟೆ ತೊಡಿಸಿ, ಕೊರಳಿಗೆ ಚಪ್ಪಲಿ ಹಾರ ಹಾಕಿ ಥಳಿಸಿ, ತಾಲಿಬಾನ್ ಮಾದರಿಯಲ್ಲಿ ಶಿಕ್ಷೆ ವಿಧಿಸಿದ್ದರು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ