ಮಹಾಕುಂಭಕ್ಕೂ ಮುನ್ನ ಸನ್ಯಾಸಿನಿ ದೀಕ್ಷೆ ಪಡೆದ 13 ವರ್ಷದ ಬಾಲಕಿ

ಮಹಾಕುಂಭದ ಸಂದರ್ಭದಲ್ಲಿ ನಡೆದಿರುವ ಆಶ್ಚರ್ಯಕರ ಘಟನೆಯಲ್ಲಿ, 13 ವರ್ಷದ ರಾಖಿ ಧಾಕ್ರೆ ತನ್ನ ಕುಟುಂಬವನ್ನು ತೊರೆದು ಸನ್ಯಾಸಿನಿಯ ಜೀವನವನ್ನು ಸ್ವೀಕರಿಸುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. ಈಗ ಸನ್ಯಾಸಿನಿ ಗೌರಿ ಗಿರಿ ಎಂದು ಕರೆಯಲ್ಪಡುವ ಈಕೆ ತಮ್ಮ ಗುರು ಮಹಂತ್ ಕೌಶಲ್ ಗಿರಿ ಮಹಾರಾಜ್ ಅವರೊಂದಿಗೆ ವಾಸಿಸಲು ನಿರ್ಧರಿಸಿದ್ದಾಳೆ. ಆಧ್ಯಾತ್ಮಿಕ ಅಭ್ಯಾಸಗಳಿಗೆ ತನ್ನನ್ನು ಈಕೆ ಸಮರ್ಪಿಸಿಕೊಂಡಿದ್ದಾಳೆ.

ಮಹಾಕುಂಭಕ್ಕೂ ಮುನ್ನ ಸನ್ಯಾಸಿನಿ ದೀಕ್ಷೆ ಪಡೆದ 13 ವರ್ಷದ ಬಾಲಕಿ
Maha Kumbh
Follow us
ಸುಷ್ಮಾ ಚಕ್ರೆ
|

Updated on: Jan 08, 2025 | 5:39 PM

ಪ್ರಯಾಗರಾಜ್: ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ಮಹಾಕುಂಭಕ್ಕೂ ಮುನ್ನ ನಡೆದ ಅಚ್ಚರಿಯ ಘಟನೆಯೊಂದರಲ್ಲಿ 13 ವರ್ಷದ ರಾಖಿ ಧಾಕ್ರೆ ತನ್ನ ಕುಟುಂಬವನ್ನು ತೊರೆದು ಸನ್ಯಾಸಿನಿಯ ಜೀವನವನ್ನು ಅಳವಡಿಸಿಕೊಳ್ಳುವ ದಿಟ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ. ಓಕೆಗೆ ಸನ್ಯಾಸಿನಿ ಗೌರಿ ಗಿರಿ ಎಂದು ಹೆಸರು ನೀಡಲಾಗಿದೆ. ಈಕೆ ತಮ್ಮ ಗುರು ಮಹಂತ್ ಕೌಶಲ್ ಗಿರಿ ಮಹಾರಾಜ್ ಅವರೊಂದಿಗೆ ವಾಸಿಸುವ ಮೂಲಕ ಆಧ್ಯಾತ್ಮಿಕವನ್ನೇ ತನ್ನ ಜೀವನವನ್ನಾಗಿಸಿಕೊಳ್ಳಲು ನಿರ್ಧರಿಸಿದ್ದಾಳೆ.

ಈ ಬಗ್ಗೆ ಎಎನ್‌ಐ ಜೊತೆ ಮಾತನಾಡಿದ ಮಹಂತ್ ಕೌಶಲ್ ಗಿರಿ ಮಹಾರಾಜ್, “ಬಾಬಾ ಗಿರಿ ಒಂದು ಸವಾಲಿನ ಹಾದಿ. ಆಕೆಯಿನ್ನೂ ಮಗು, ಈ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಆಕೆ ಇನ್ನೂ ಸಿದ್ಧವಾಗಿಲ್ಲ” ಎಂದು ಟೀಕಿಸಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಆ ಬಾಲಕಿ ತನ್ನ ನಿರ್ಧಾರವನ್ನು ದೃಢವಾಗಿ ತಿಳಿಸಿದ್ದು, “ನಾನು ಸನ್ಯಾಸಿಯಾಗುತ್ತೇನೆ” ಎಂದು ಪ್ರತಿಪಾದಿಸಿದ್ದಾಳೆ ಆದರೆ, ಮಹಂತ್ ಕೌಶಲ್ ಗಿರಿ ಆಕೆಗೆ ಎಚ್ಚರಿಕೆ ನೀಡುತ್ತಾ, “ಆಧ್ಯಾತ್ಮಿಕ ಆಚರಣೆಗಳನ್ನು ನಡೆಸುವ ಮೊದಲು ಮರುಪರಿಶೀಲಿಸಲು ನಿನಗೆ ಇನ್ನೂ ಸಮಯವಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Mahakumbh 2025: ಮಹಾಕುಂಭ, ಅರ್ಧ ಕುಂಭ ಮತ್ತು ಕುಂಭ ಮೇಳದ ನಡುವಿನ ವ್ಯತ್ಯಾಸವೇನು?

“ಆಕೆ ನಮ್ಮ ದೈನಂದಿನ ಜೀವನ ಮತ್ತು ಸಂಪ್ರದಾಯಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾಳೆ. ಆಕೆ ನಮ್ಮ ಜೀವನ ವಿಧಾನದಲ್ಲಿ ಸೇರಿಕೊಳ್ಳಲು ಮನಸು ಮಾಡಿದ್ದಾಳೆ. ಪುರುಷ ತನಗಿಷ್ಟ ಬಂದಿದ್ದು ಮಾಡಬಹುದು ಎಂದಮೇಲೆ ಹೆಣ್ಣುಮಕ್ಕಳಿಗೆ ಈ ಭಾರತದಲ್ಲಿ ಸ್ವಾತಂತ್ರ್ಯವಿಲ್ಲವೇ? ಎಲ್ಲರಿಗೂ ಸ್ವಾತಂತ್ರ್ಯ ನೀಡಲಾಗಿದೆ; ಭಾರತವು ಎಲ್ಲರಿಗೂ ಅಂತಹ ನಿಯಮವನ್ನು ನೀಡಿದೆ. ಆ ಬಾಲಕಿ ಎಲ್ಲವನ್ನು ಸ್ವತಂತ್ರಳಾಗಿ ಯೋಚಿಸಿ ನಿರ್ಧಾರ ಮಾಡುವಳೆಂಬ ನಂಬಿಕೆಯಿದೆ” ಎಂದಿದ್ದಾರೆ.

ಈ ಬಗ್ಗೆ ಎಎನ್‌ಐ ಜೊತೆ ಮಾತನಾಡಿದ ಸನ್ಯಾಸಿನಿ ಗೌರಿ ಗಿರಿ, “ನಾನು ಗುರು ದೀಕ್ಷೆ ತೆಗೆದುಕೊಂಡಾಗ ನನಗೆ 11 ವರ್ಷ. ನಾನು 13ನೇ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ತೆಗೆದುಕೊಂಡೆ” ಎಂದು ಹೇಳಿದ್ದಾಳೆ. ಸನ್ಯಾಸ ದೀಕ್ಷೆಯನ್ನು ತೆಗೆದುಕೊಂಡು ಸಂತಳಾಗುವುದು ನನ್ನ ಬಾಲ್ಯದ ಆಸೆಯಾಗಿತ್ತು. ಆದರೆ ಚಿಕ್ಕವಳಾದ ಕಾರಣ ನನ್ನ ಕುಟುಂಬ ಸದಸ್ಯರು ನನ್ನ ಮಾತನ್ನು ಕೇಳಲಿಲ್ಲ. ನಾನು ಮಹಾಕುಂಭದ ಜಾತ್ರೆಗೆ ಬಂದಾಗ ನಾನು ಗುರುಗಳಿಗೆ ಹೇಳಿದೆ. ಮೊದಲು ಅವರು ನಿರಾಕರಿಸಿದರು. ಆದರೂ ನಾನು ನನ್ನ ಪಟ್ಟು ಬಿಟ್ಟಿಲ್ಲ ಎಂದಿದ್ದಾಳೆ.

ಇದನ್ನೂ ಓದಿ: Kumbh Mela: ಉತ್ತರದಲ್ಲಷ್ಟೇ ಅಲ್ಲ, ನಮ್ಮ ಕರ್ನಾಟಕದಲ್ಲೂ ನಡೆಯುತ್ತೇ ಅದ್ಧೂರಿ ಕುಂಭ ಮೇಳ!

12 ವರ್ಷಗಳ ನಂತರ ಮಹಾಕುಂಭವನ್ನು ಆಚರಿಸಲಾಗುತ್ತಿದ್ದು, ಈ ಕಾರ್ಯಕ್ರಮಕ್ಕೆ 45 ಕೋಟಿಗೂ ಅಧಿಕ ಭಕ್ತರನ್ನು ನಿರೀಕ್ಷಿಸಲಾಗಿದೆ. ಮಹಾಕುಂಭದ ಸಮಯದಲ್ಲಿ, ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ಸಂಗಮದಲ್ಲಿ ಭಕ್ತರು ಸೇರುತ್ತಾರೆ. ಇದು ಪಾಪಗಳನ್ನು ನಿವಾರಿಸಲು ಮತ್ತು ಮೋಕ್ಷವನ್ನು ನೀಡುತ್ತದೆ ಎಂದು ನಂಬಲಾಗಿದೆ. ಫೆ.26ರಂದು ಮಹಾಕುಂಭ ಸಮಾರೋಪಗೊಳ್ಳಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ