Multibagger 2021: ಹನ್ನೊಂದೂವರೆ ತಿಂಗಳಲ್ಲಿ ಈ ಷೇರಿನ ಮೇಲಿನ 1 ಲಕ್ಷ ರೂಪಾಯಿ ಹೂಡಿಕೆ 21.38 ಲಕ್ಷಕ್ಕೆ ಏರಿಕೆ

| Updated By: shivaprasad.hs

Updated on: Nov 17, 2021 | 8:42 AM

2021ರಲ್ಲಿ ಈ ಸ್ಟಾಕ್ ಮೇಲಿನ ರೂ. 1 ಲಕ್ಷ ರೂಪಾಯಿಯ ಹೂಡಿಕೆ ರೂ. 21.38 ಲಕ್ಷ ಆಗಿದೆ. ಅಂದರೆ ಹನ್ನೊಂದೂವರೆ ತಿಂಗಳಲ್ಲಿ 21 ಪಟ್ಟು ಏರಿಕೆ ಆಗಿದೆ.

Multibagger 2021: ಹನ್ನೊಂದೂವರೆ ತಿಂಗಳಲ್ಲಿ ಈ ಷೇರಿನ ಮೇಲಿನ 1 ಲಕ್ಷ ರೂಪಾಯಿ ಹೂಡಿಕೆ 21.38 ಲಕ್ಷಕ್ಕೆ ಏರಿಕೆ
ಸಾಂದರ್ಭಿಕ ಚಿತ್ರ
Follow us on

ಭಾರತೀಯ ಷೇರುಪೇಟೆ ಸೂಚ್ಯಂಕಗಳು ದಾಖಲೆಯ ಎತ್ತರಕ್ಕೆ ಏರುತ್ತಿರುವ ಮಧ್ಯೆ 2021ರಲ್ಲಿ ಉತ್ತಮ ಸಂಖ್ಯೆಯ ಷೇರುಗಳು ಮಲ್ಟಿಬ್ಯಾಗರ್ ಸ್ಟಾಕ್‌ಗಳ ಪಟ್ಟಿಯನ್ನು ಪ್ರವೇಶಿಸಿವೆ. ಮಲ್ಟಿಬ್ಯಾಗರ್ ಸ್ಟಾಕ್​ಗಳು ಅಂದರೆ ಶೇ 100ಕ್ಕಿಂತ ಹೆಚ್ಚು ರಿಟರ್ನ್ಸ್​ ನೀಡಿರುವಂಥದ್ದು. ಎಕ್ಸ್​ಪ್ರೋ (Xpro) ಇಂಡಿಯಾ ಷೇರುಗಳು ಅವುಗಳಲ್ಲಿ ಒಂದು. ಪಾಲಿಮರ್ ಸಂಸ್ಕರಣಾ ಕಂಪೆನಿಯ ಸ್ಟಾಕ್ ಪ್ರತಿ ಷೇರಿನ ಮಟ್ಟಕ್ಕೆ 33.75 ರೂಪಾಯಿಯಿಂದ 721.65 ರೂಪಾಯಿಗೆ ಈ ವರ್ಷದಿಂದ ಇಲ್ಲಿಯ ದಿನಾಂಕದವರೆಗೆ, ಅಂದರೆ 2021ರಲ್ಲಿ ಏರಿಕೆಯಾಗಿದೆ. ಈ ಅವಧಿಯಲ್ಲಿ ತನ್ನ ಷೇರುದಾರರಿಗೆ ಶೇ 2,000ಕ್ಕಿಂತ ಹೆಚ್ಚಿನ ಲಾಭವನ್ನು ನೀಡುತ್ತದೆ. ಆದರೂ ಷೇರು ಮಾರುಕಟ್ಟೆ ತಜ್ಞರು ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ ಇನ್ನೂ ಬುಲಿಶ್ ಆಗಿದ್ದಾರೆ. ಎಕ್ಸ್​ಪ್ರೋ ಇಂಡಿಯಾ ಷೇರಿನ ಬೆಲೆಯಲ್ಲಿ ಯಾವುದೇ ಕುಸಿತವನ್ನು ಖರೀದಿಸಲು ಅವಕಾಶವಾಗಿ ನೋಡಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಷೇರು ಮಾರುಕಟ್ಟೆ ತಜ್ಞರ ಪ್ರಕಾರ, ಎಕ್ಸ್​ಪ್ರೋ ಇಂಡಿಯಾ ಷೇರುಗಳಲ್ಲಿ ಪ್ರಾಫಿಟ್-ಬುಕಿಂಗ್ ನಿರೀಕ್ಷಿಸಲಾಗುತ್ತಿದೆ. ಆದರೆ ಪ್ರಾಫಿಟ್​-ಬುಕಿಂಗ್ ಮುಗಿದ ನಂತರ ಅದು ತೀಕ್ಷ್ಣವಾದ ‘ಮೇಲ್ಮುಖ ಪ್ರಯಾಣ’ ನೀಡಬಹುದು. ಮಲ್ಟಿಬ್ಯಾಗರ್ ಸ್ಟಾಕ್ ಪ್ರತಿ ಷೇರಿನ ಮಟ್ಟಕ್ಕೆ 650 ರೂಪಾಯಿಯಂತೆ ಬಲವಾದ ಬೆಂಬಲವನ್ನು ಹೊಂದಿರುವುದರಿಂದ ಹೂಡಿಕೆದಾರರಿಗೆ ‘ಇಳಿಕೆಯಲ್ಲಿ ಖರೀದಿ’ ತಂತ್ರವನ್ನು ಕಾಪಾಡಿಕೊಳ್ಳಲು ಅವರು ಸಲಹೆ ನೀಡಿದ್ದಾರೆ.

ಎಕ್ಸ್​ಪ್ರೋ ಇಂಡಿಯಾ ಷೇರು ಖರೀದಿ ಇತಿಹಾಸ
ಈ ಮಲ್ಟಿಬ್ಯಾಗರ್ ಸ್ಟಾಕ್‌ನ ಷೇರು ಬೆಲೆ ಇತಿಹಾಸದ ಪ್ರಕಾರ, ಕಳೆದ ಒಂದು ತಿಂಗಳಲ್ಲಿ ಸುಮಾರು ರೂ. 669 ರಿಂದ ರೂ. 721.65ಕ್ಕೆ ಏರಿತು. ಅದರ ಷೇರುದಾರರಿಗೆ ಸುಮಾರು ಶೇ 8ರಷ್ಟು ಲಾಭವನ್ನು ನೀಡುತ್ತಿದೆ. ಅದೇ ರೀತಿ ಕಳೆದ 6 ತಿಂಗಳಲ್ಲಿ ಎಕ್ಸ್​ಪ್ರೋ ಇಂಡಿಯಾ ಷೇರಿನ ಬೆಲೆಯು 118.70 ರೂಪಾಯಿಯಿಂದ 721.65 ರೂಪಾಯಿ ಮಟ್ಟಗಳಿಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಶೇ 500ಕ್ಕಿಂತ ಹೆಚ್ಚಿನ ಜಿಗಿತವನ್ನು ದಾಖಲಿಸಿದೆ. ಅದೇ ರೀತಿ, ವರ್ಷದಿಂದ ಇಲ್ಲಿಯವರೆಗೆ ಷೇರಿನ ಬೆಲೆಯು ರೂ. 33.75 ರಿಂದ ರೂ. 721.65 ಮಟ್ಟಕ್ಕೆ ಏರಿದ್ದು, ಈ ಸಮಯದಲ್ಲಿ 21.38 ಪಟ್ಟು ಏರಿಕೆಯಾಗಿದೆ.

ಹೂಡಿಕೆಯ ಮೇಲೆ ಪರಿಣಾಮ
ಹೂಡಿಕೆದಾರರು ಒಂದು ತಿಂಗಳ ಹಿಂದೆ ಈ ಮಲ್ಟಿಬ್ಯಾಗರ್ ಸ್ಟಾಕ್‌ನಲ್ಲಿ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದರೆ ಅದರ 1 ಲಕ್ಷ ಇಂದು 1.08 ಲಕ್ಷಕ್ಕೆ ಬದಲಾಗುತ್ತಿತ್ತು. ಅದೇ ರೀತಿ, ಹೂಡಿಕೆದಾರರು 6 ತಿಂಗಳ ಹಿಂದೆ ಎಕ್ಸ್‌ಪ್ರೊ ಇಂಡಿಯಾ ಷೇರುಗಳಲ್ಲಿ 1 ಲಕ್ಷ ಹೂಡಿಕೆ ಮಾಡಿದ್ದರೆ ಮತ್ತು ಈ ಅವಧಿಯಲ್ಲಿ ಈ ಷೇರುಗಳಲ್ಲಿ ಹೂಡಿಕೆ ಮಾಡಿದ್ದರೆ ಅದರ 1 ಲಕ್ಷ ಇಂದು 6 ಲಕ್ಷ ಆಗುತ್ತಿತ್ತು. ಅಂತೆಯೇ ಹೂಡಿಕೆದಾರರು 2021ರ ಆರಂಭದಲ್ಲಿ ಈ ಸ್ಟಾಕ್‌ನಲ್ಲಿ 1 ಲಕ್ಷವನ್ನು ಹೂಡಿಕೆ ಮಾಡಿದ್ದರೆ ಎಕ್ಸ್​ಪ್ರೋ ಇಂಡಿಯಾ ಷೇರುಗಳನ್ನು 33.75 ಪ್ರತಿ ಹಂತಗಳಲ್ಲಿ ಖರೀದಿಸಿದರೆ ಅದರ 1 ಲಕ್ಷ ಇಂದು 21.38 ಲಕ್ಷ ರೂಪಾಯಿ ಆಗಿ ಬದಲಾಗುತ್ತಿತ್ತು.

ಎಕ್ಸ್​ಪ್ರೋ ಇಂಡಿಯಾ ಷೇರು ಬೆಲೆ ಗುರಿ
ಷೇರು ಮಾರ್ಕೆಟ್ ಹೂಡಿಕೆದಾರರಿಗೆ ‘ಇಳಿಕೆಯಲ್ಲಿದ್ದಾಗ ಖರೀದಿ’ ತಂತ್ರವನ್ನು ನಿರ್ವಹಿಸಲು ಸಲಹೆ ನೀಡುವ ಚಾಯ್ಸ್ ಬ್ರೋಕಿಂಗ್‌ನ ಕಾರ್ಯನಿರ್ವಾಹಕ ನಿರ್ದೇಶಕ ಸುಮೀತ್ ಬಗಾಡಿಯಾ, “ಷೇರು ರೂ. 780ಕ್ಕಿಂತ ಹೆಚ್ಚು ತಾಜಾ ಬ್ರೇಕ್​ಔಟ್ ನೀಡಬಹುದು. 650 ರೂಪಾಯಿಯಲ್ಲಿ ಬಲವಾದ ಬೆಂಬಲವನ್ನು ಹೊಂದಿದೆ. ಕೌಂಟರ್‌ನಲ್ಲಿ ಕೆಲವು ಪ್ರಾಫಿಟ್​-ಬುಕ್ಕಿಂಗ್ ಮಾಡಬಹುದಾದ ಕಾರಣ ಎಕ್ಸ್​ಪ್ರೋ ಇಂಡಿಯಾ ಷೇರುಗಳಲ್ಲಿ ಇಳಿಕೆ ತಂತ್ರದ ಮೇಲೆ ಖರೀದಿಯನ್ನು ನಿರ್ವಹಿಸಬೇಕು,” ಎನ್ನುತ್ತಾರೆ. ಇದನ್ನು ನಿರಾಕರಿಸಲು ಆಗುವುದಿಲ್ಲ. ಸ್ಥಾನಿಕ ಹೂಡಿಕೆದಾರರು ಸುಮಾರು 650 ಅಥವಾ 780 ರೂಪಾಯಿಗಿಂತ ಹೆಚ್ಚಿನ ಮೊತ್ತದಲ್ಲಿ ಖರೀದಿಸಬಹುದು.

ಎಚ್ಚರಿಕೆ: ಈ ಲೇಖನದಲ್ಲಿನ ಶಿಫಾರಸು, ಅಭಿಪ್ರಾಯಗಳು ಆಯಾ ಲೇಖಕರದೇ ಹೊರತು ಟಿವಿ9ಗೆ ಸಂಬಂಧವಿಲ್ಲ.

ಇದನ್ನೂ ಓದಿ: Multibagger 2021: 1.20 ಲಕ್ಷ ರೂಪಾಯಿ ಮೊತ್ತವು 5 ವರ್ಷದಲ್ಲಿ 62 ಲಕ್ಷ ರೂಪಾಯಿ ಆದ ಮಲ್ಟಿಬ್ಯಾಗರ್ ಇದು