AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇರಾನ್​ನ ಕರೆನ್ಸಿ ಮಹಾಕುಸಿತ; ಒಂದು ಡಾಲರ್​ಗೆ 20 ಲಕ್ಷ ರಿಯಾಲ್; ಇರಾನ್ ಆರ್ಥಿಕತೆ ತತ್ತರ

Iran's currency value down to 2 million Rials per dollar: ಇರಾನ್​ನಲ್ಲಿ ಒಂದು ಡಾಲರ್ ಬಿಕರೆ ಮಾಡಿದರೆ 2 ಮಿಲಿಯನ್ ರಿಯಾಲ್ ಪಡೆಯಬಹುದು. ಅಷ್ಟು ಮಟ್ಟಕ್ಕೆ ಇರಾನ್ ಕರೆನ್ಸಿಯ ಮೌಲ್ಯ ಕುಸಿದಿದೆ. 20 ಲಕ್ಷ ರಿಯಾಲ್ ಹಣಕ್ಕೆ ಇರಾನ್​ನಲ್ಲಿ ಎರಡು ಕಿಲೋ ಟೊಮೆಟೋ ಕೂಡ ಸಿಗುವುದಿಲ್ಲ. ಅಮೆರಿಕ ವಿಧಿಸಿರುವ ಆರ್ಥಿಕ ದಿಬ್ಬಂಧನ ಅಥವಾ ನಿಷೇಧವು ಇರಾನ್ ಆರ್ಥಿಕತೆಯನ್ನು ಜರ್ಝರಿತಗೊಳಿಸಿದೆ.

ಇರಾನ್​ನ ಕರೆನ್ಸಿ ಮಹಾಕುಸಿತ; ಒಂದು ಡಾಲರ್​ಗೆ 20 ಲಕ್ಷ ರಿಯಾಲ್; ಇರಾನ್ ಆರ್ಥಿಕತೆ ತತ್ತರ
ಇರಾನ್‌Image Credit source: AP
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 27, 2026 | 12:59 PM

Share

ನವದೆಹಲಿ, ಆಗಸ್ಟ್ 27: ಇರಾನ್‌ನ ಕರೆನ್ಸಿಯಾದ ರಿಯಾಲ್ (Rial) ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದ್ದು, ದೇಶದಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ. ಅಂತರರಾಷ್ಟ್ರೀಯ ನಿರ್ಬಂಧಗಳು ಮತ್ತು ಹಣದುಬ್ಬರದಿಂದಾಗಿ ಇರಾನ್ ಕರೆನ್ಸಿಯ ಮೌಲ್ಯವು ಐತಿಹಾಸಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ. ಒಂದು ಯುಎಸ್ ಡಾಲರ್​ಗೆ 2.02 ಮಿಲಿಯನ್ ರಿಯಾಲ್ ಮೌಲ್ಯ್ಕಕೆ ಕುಸಿದಿದೆ. ಅಂದರೆ ಭಾರತದ ₹100 ಹಣ ಕೊಟ್ಟರೆ 20 ಲಕ್ಷ ರಿಯಾಲ್ (Iranian Rial) ಪಡೆಯಬಹುದು.

ಜಾಗತಿಕ ರಾಜಕೀಯ ಒತ್ತಡಗಳು ಹಾಗೂ ಅಮೆರಿಕದ ಸಾಲು ಸಾಲು ಆರ್ಥಿಕ ನಿರ್ಬಂಧಗಳಿಂದಾಗಿ ಇರಾನ್‌ನ ‘ರಿಯಾಲ್’ ಮೌಲ್ಯ ಸಂಪೂರ್ಣವಾಗಿ ಕುಸಿದಿದೆ.

ನಿತ್ಯೋಪಯೋಗಿ ವಸ್ತುಗಳ ಬೆಲೆ ಗಗನಕ್ಕೆ: ಕರೆನ್ಸಿ ಮೌಲ್ಯ ಕುಸಿದು ತೀವ್ರ ಹಣದುಬ್ಬರ (Inflation) ಸ್ಥಿತಿ ಉದ್ಭವಿಸಿದೆ. ಇರಾನ್​ನಲ್ಲಿ ದಿನಸಿ, ಆಹಾರ ಮತ್ತು ಅಗತ್ಯ ವಸ್ತುಗಳನ್ನು ಖರೀದಿಸಲು ಸ್ಥಳೀಯರು ಕಷ್ಟಪಡುವಂತಾಗಿದೆ. ಅಲ್ಲಿನ ಜನರು ಸಣ್ಣಪುಟ್ಟ ವಸ್ತುಗಳನ್ನು ಕೊಳ್ಳಲು ಸಹ ದೊಡ್ಡ ಪ್ರಮಾಣದ ಕರೆನ್ಸಿ ನೋಟುಗಳ ಕಟ್ಟನ್ನು ಒಯ್ಯಬೇಕಾದ ದುಸ್ಥಿತಿ ಬಂದೊದಗಿದೆ.

ಇದನ್ನೂ ಓದಿ: ಮಂತ್ರಿಯಾಗ್ತಾರಾ ಟಾಟಾ ಸನ್ಸ್ ಮಾಜಿ ಛೇರ್ಮನ್? ಎನ್ ಚಂದ್ರಶೇಖರನ್ ರಾಜಕೀಯ ಪ್ರವೇಶದ ಬಗ್ಗೆ ದಟ್ಟ ವದಂತಿ

ಇರಾನ್ ಜಿಡಿಪಿ ಮತ್ತು ವಿಕೋಪಕ್ಕೆ ತಲುಪಿರುವ ಆರ್ಥಿಕತೆಯು ಅಲ್ಲಿನ ಸಾಮಾನ್ಯ ನಾಗರಿಕರ ದೈನಂದಿನ ಜೀವನೋಪಾಯವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ.

20 ಲಕ್ಷ ರಿಯಾಲ್​ಗೆ ಇರಾನ್​ನಲ್ಲಿ ಏನು ಸಿಗುತ್ತೆ?

ಒಂದು ಸಾವಿರ ರೂಪಾಯಿ ಮಾರಿ ನೀವು 2 ಕೋಟಿ ಇರಾನೀ ರಿಯಾಲ್ ಹಣವನ್ನು ಪಡೆಯಬಹುದು. ಅಷ್ಟು ಹಣ ಇಟ್ಟುಕೊಂಡು ವರ್ಷ ಪೂರ್ತಿ ಇರಬಹುದು ಎಂದು ಭಾವಿಸಿ ಹೋದರೆ, ಒಂದು ವಾರದ ವೆಚ್ಚಕ್ಕೂ ಅದು ಸಾಕಾಗುವುದಿಲ್ಲ. 20 ಲಕ್ಷ ರಿಯಾಲ್​ಗೆ 2 ಕಿಲೋ ಟೊಮೊಟೋ ಕೂಡ ಸಿಗುವುದಿಲ್ಲವಂತೆ. ಇತ್ತೀಚಿನ ದಿನಗಳಲ್ಲಿ ಅಲ್ಲಿ ಬೆಲೆಗಳು ಎರಡು ಪಟ್ಟು ಮೂರು ಪಟ್ಟು ಹೆಚ್ಚಿವೆ. ಅದರಲ್ಲೂ ಔಷಧಗಳಿಗಂತೂ ವಿಪರೀತ ಬೇಡಿಕೆ ಇದೆ.

ಇದನ್ನೂ ಓದಿ: ಬೀಟಾ ಗ್ರೂಪ್ ಮುಖ್ಯಸ್ಥರ ಸ್ಫೂರ್ತಿಯುತ ಕತೆ; ಸತತ ಕಷ್ಟ, ಸವಾಲುಗಳ ನಡುವೆ ಯಶಸ್ಸಿನ ಉದ್ಯಮ ಕಟ್ಟಿದ ರಾಜಮೋಹನ್ ಪಿಳ್ಳೈ

ಕನಿಷ್ಠ ವೇತನ ತಿಂಗಳಿಗೆ 16.6 ಕೋಟಿ ರಿಯಾಲ್

ಇರಾನ್​ನ ಕರೆನ್ಸಿ ಮೌಲ್ಯ ನೆಲ ಕಚ್ಚಿರುವುದರಿಂದ ಸರ್ಕಾರವು ದೇಶದೊಳಗೆ ಕನಿಷ್ಠ ವೇತನವನ್ನು ಗಣನೀಯವಾಗಿ ಹೆಚ್ಚಿಸಿದೆ. ತಿಂಗಳಿಗೆ 166 ಮಿಲಿಯನ್ ರಿಯಾಲ್ ವೇತನ ನೀಡಬೇಕು ಎಂದು ಕಟ್ಟುಪಾಡು ಮಾಡಿದೆ. ಆದರೂ ಕೂಡ ದುಬಾರಿ ಬೆಲೆಯಲ್ಲಿ ಇಷ್ಟು ಹಣ ಯಾತಕ್ಕೂ ಸಾಕಾಗದಂತಹ ಪರಿಸ್ಥಿತಿ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
ಸುಗ್ಗನಹಳ್ಳಿ ವಿಜಯಸಾರಥಿ
ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ನಾನಾ ಪಾಟೇಕರ್ ಜೊತೆ ಕರಿ ಸುಬ್ಬು ಒಡನಾಟ ಶುರು ಆಗಿದ್ದು ಹೇಗೆ? ವಿವರಿಸಿದ ನಟ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಮುಂಬೈನ ಮುಲುಂಡ್ ಕಾರ್ಮಿಕರ ಕ್ಯಾಂಪ್‌ನಲ್ಲಿ ಭೀಕರ ಬೆಂಕಿ ದುರಂತ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ಚಿಕ್ಕಮಗಳೂರಲ್ಲಿ ಬಿರುಗಾಳಿ ಸಹಿತ ಅಬ್ಬರಿಸಿದ ವರುಣ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ವಿಜಯಲಕ್ಷ್ಮಿ ದರ್ಶನ್ ಅರ್ಜಿ ರದ್ದಾಗಿದ್ದೇಕೆ: ವಿವರಿಸಿದ ವಕೀಲ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಸತತ 2ನೇ ವರ್ಷವೂ ಚಾಮರಾಜನಗರ ದಸರಾ ರದ್ದು; ಜಾನಪದ ಕಲಾವಿದರಲ್ಲಿ ಬೇಸರ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಎಸ್​​​​ಐಆರ್ ವಿರುದ್ಧ ಸಿಜೆಪಿ ಸಮರ: ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಕರ್ನಾಟಕ ಸರ್ಕಾರ ಕೆಡವಲು ಕೇಂದ್ರದಿಂದ ಯತ್ನ: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡದ ಟಿಹೆಚ್ಒಗಳು: ಸಚಿವ ಖಾದರ್ ಗರಂ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಆಸ್ಪತ್ರೆಯಲ್ಲಿ ಮೊಬೈಲ್ ಟಾರ್ಚ್ ಬೆಳಕಿನಲ್ಲೇ ಚಿಕಿತ್ಸೆ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ
ಬೀಗರೂಟ ಮಾಡಿದ್ರೆ 1 ಲಕ್ಷ, ತಿಂದ್ರೆ 50 ಸಾವಿರ ದಂಡ