ಊಟಿ ಸುತ್ತಮುತ್ತಲ ಹಸಿರು ಪ್ರದೇಶಗಳು ಪ್ರವಾಸಿಗರಿಗೆ ಯಾವತ್ತೂ ಫೇವರಿಟ್ಗಳೇ. ಆದರೆ, ಊಟಿ ಟೂರ್ ಪ್ಯಾಕೇಜ್ (Ooty Tour) ದರ ತುಸು ಹೆಚ್ಚಿರುವುದರಿಂದ ಬಹಳ ಮಂದಿ ಹಿಂದೇಟು ಹಾಕುವುದಿದೆ. ಆದರೆ, ರೈಲ್ವೆ ಇಲಾಖೆಗೆ ಸೇರಿದ ಐಆರ್ಸಿಟಿಸಿ ಇದೀಗ ಕಡಿಮೆ ಬೆಲೆಗೆ ಊಟಿ ಪ್ರವಾಸ ಪ್ಯಾಕೇಜ್ ಆರಂಭಿಸಿದೆ. ಊಟಿ ಸುತ್ತಮುತ್ತಲ ಪ್ರವಾಸ ಸ್ಥಳಗಳನ್ನು ನೋಡಬಹುದು. ಐದು ರಾತ್ರಿ ಆರು ಹಗಲುಗಳ ಈ ಪ್ರವಾಸದ ಪ್ಯಾಕೇಜ್ ಜೂನ್ 1ರಿಂದ ಆರಂಭವಾಗುತ್ತದೆ. ಪ್ರತೀ ಗುರುವಾರ ಪ್ರವಾಸಿಗರಿಗೆ ಈ ಪ್ಯಾಕೇಜ್ ಲಭ್ಯ ಇರಲಿದೆ.
5-6 ದಿನಗಳ ಈ ಟೂರ್ ಪ್ಯಾಕೇಜ್ನಲ್ಲಿ ಊಟಿ, ಮುದುಮಲೈ ಮತ್ತು ಕೂನ್ನೂರು ಸ್ಥಳಗಳನ್ನು ಒಳಗೊಳ್ಳಲಾಗಿದೆ. ಒಬ್ಬರೇ ವ್ಯಕ್ತಿಯಾದರೆ 20,750 ರೂ ಆಗುತ್ತದೆ. ಇಬ್ಬರು ವ್ಯಕ್ತಿಗಳು ಒಂದೇ ರೂಮು ಹಂಚಿಕೊಳ್ಳುವುದಾದರೆ ಒಬ್ಬರಿಗೆ 10,860 ರೂ ಆಗುತ್ತದೆ. ಮೂವರು ವ್ಯಕ್ತಿಗಳಾದರೆ ಒಬ್ಬರಿಗೆ 8,300 ರೂ ದರ ಇದೆ. ಸಣ್ಣ ಮಗು ಇದ್ದರೆ 3,700 ರೂ ಹೆಚ್ಚುವರಿ ದರ ಇದೆ. ಈ ಪ್ಯಾಕೇಜ್ನಲ್ಲಿ ಟಾಟಾ ಇಂಡಿಕಾ ಕಾರಿನ ಬಳಕೆ ಸೌಲಭ್ಯ ಇರುತ್ತದೆ. ಇನ್ನೋವಾ ಕಾರು ಬೇಕೆಂದರೆ ಬೇರೆ ದರ ಇದೆ.
ಇದನ್ನೂ ಓದಿ: Bengaluru Egg Story: ಬಿಸಿಲಿಗೆ ಕೋಳಿಗಳ ವರ್ತನೆ, ಉತ್ಪಾದನೆ ಬದಲಾಗುತ್ತಾ? ಒಂದು ಮೊಟ್ಟೆ ದುಬಾರಿಯಾದ ಕಥೆ ಕೇಳಿ
ದಿನ 1: ಪ್ಯಾಕೇಜ್ ಪಡೆದವರು ತಾವೇ ಸ್ವಂತವಾಗಿ ಚೆನ್ನೈ ಸೆಂಟ್ರಲ್ ರೈಲ್ವೆ ಸ್ಟೇಷನ್ಗೆ ಬರಬೇಕು. ಜೂನ್ 1, ಗುರುವಾರ ರಾತ್ರಿ 9:05ಕ್ಕೆ ನೀಲಗಿರಿ ಎಕ್ಸ್ಪ್ರೆಸ್ ರೈಲಿನಲ್ಲಿ ಪ್ರಯಾಣ ಆರಂಭ.
ದಿನ 2: ಬೆಳಗ್ಗೆ 6:15ಕ್ಕೆ ಮೇಟ್ಟುಪಾಳ್ಯಂಗೆ ರೈಲು ಆಗಮನ. ಅಲ್ಲಿಂದ ರಸ್ತೆ ಮೂಲಕ ಊಟಿಗೆ ಪ್ರಯಾಣ. ಅಲ್ಲಿ ಹೋಟೆಲ್ ವ್ಯವಸ್ಥೆ. ಬಳಿಕ ದೊಡ್ಡಬೆಟ್ಟ ಮತ್ತು ಟೀ ಮ್ಯೂಸಿಯಂಗೆ ಭೇಟಿ, ಬಳಿಕ ಊಟಿ ಪಟ್ಟಣಕ್ಕೆ ಪ್ರಯಾಣ. ಅಲ್ಲಿಂದ ಊಟಿ ಕೆರೆ, ಸಸ್ಯಧಾಮ ವೀಕ್ಷಣೆ. ಅಂದು ರಾತ್ರಿ ಊಟಿಯಲ್ಲಿ ಇಳಿಯಲು ವ್ಯವಸ್ಥೆ.
ದಿನ 3: ಬೆಳಗ್ಗೆ ಸಿನಿಮಾ ಶೂಟಿಂಗ್ ಸ್ಥಳಗಳಿಗೆ ಭೇಟಿ. ಪೈಕಾರ ಫಾಲ್ಸ್, ಕೆರೆ ಇತ್ಯಾದಿ ವೀಕ್ಷಣೆ. ಬಳಿಕ ಮುದುಮಲೈ ವನ್ಯಧಾನಕ್ಕೆ ಭೇಟಿ. ಆನೆ ಶಿಬಿರ, ಜಂಗಲ್ ರೈಡ್ ಇತ್ಯಾದಿ ಸೇವೆ. ಬಳಿಕ ರಾತ್ರಿ ಊಟಿಗೆ ಮರಳಿ ಹೋಟೆಲ್ನಲ್ಲಿ ಉಳಿಯುವುದು.
ದಿನ 4: ಪ್ರವಾಸಿಗರೇ ಇಚ್ಛೆ ಬಂದಂತೆ ಸುತ್ತಾಡುವ ಅವಕಾಶ. ಊಟಿಯ ಹೋಟೆಲ್ ತೆರವು ಮಾಡಿ ಕೂನ್ನೂರಿಗೆ ಹೋಗಿ ಅಲ್ಲಿ ಸಿಮ್ಸ್ ಪಾರ್ಕ್, ಲ್ಯಾಂಬ್ಸ್ ರಾಕ್, ಡಾಲ್ಫಿನ್ಸ್ ನೋಸ್ ಇತ್ಯಾದಿ ಸ್ಥಳಗಳಿಗೆ ಭೇಟಿ. ರಸ್ತೆ ಮೂಲಕ ಮೇಟ್ಟುಪಾಳ್ಯಂಗೆ ತೆರಳುವುದು. ಅಲ್ಲಿಂದ ನೀಲಗಿರಿ ಎಕ್ಸ್ಪ್ರೆಸ್ ರೈಲಿನ ಮೂಲಕ ರಾತ್ರಿ 9:20ಕ್ಕೆ ಚೆನ್ನೈಗೆ ಹೊರಡುವುದು.
ದಿನ 5: ಚೆನ್ನೈ ರೈಲ್ವೆ ನಿಲ್ದಾಣಕ್ಕೆ ಬೆಳಗ್ಗೆ 6:20ಕ್ಕೆ ಟ್ರೈನು ಹೋಗಿ ನಿಲ್ಲುತ್ತದೆ. ಅಲ್ಲಿಂದ ಪ್ರವಾಸಿಗರು ತಮ್ಮ ಖರ್ಚಿನಲ್ಲಿ ತಮ್ಮೂರಿಗೆ ತೆರಳುವುದು.
ಈ ಪ್ರವಾಸ ಪ್ಯಾಕೇಜ್ನಲ್ಲಿ ರೈಲು ಪ್ರಯಾಣ, 2 ರಾತ್ರಿ ತಂಗಲು ಹೋಟೆಲ್ ಸೌಲಭ್ಯ, ಪ್ರವಾಸಿ ಸ್ಥಳಗಳನ್ನು ನೋಡಲು ಕಾರು ವ್ಯವಸ್ಥೆ, ಟ್ರಾವೆಲ್ ಇನ್ಷೂರೆನ್ಸ್, ಟಾಲ್ ಇತ್ಯಾದಿ ದರಗಳು ಒಳಗೊಂಡಿರುತ್ತವೆ. ಆದರೆ, ಮುದುಮಲೈ ಸಫಾರಿ, ಸೈಟ್ ಸೀಯಿಂಗ್ ಸ್ಥಳಗಳ ಶುಲ್ಕ, ಹೋಟೆಲ್ ಊಟ ಇತ್ಯಾದಿ ವೆಚ್ಚವೆಲ್ಲಾ ಪ್ರವಾಸಿಗರದ್ದೇ.