Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI Dy Governor: ಆರ್​ಬಿಐ ಉಪ ಗವರ್ನರ್ ಹುದ್ದೆಗೆ ಜೂನ್ 1ರಂದು ಐವರ ಸಂದರ್ಶನ; ಅರ್ಹತೆ, ಸಂಬಳ ಏನು? ಇಲ್ಲಿದೆ ಡೀಟೇಲ್ಸ್

Salary and Qualification of RBI Dy Governor: ಆರ್​ಬಿಐ ಉಪಗವರ್ನರ್ ಹುದ್ದೆಗೆ ಐವರ ಹೆಸರು ಶಾರ್ಟ್​ಲಿಸ್ಟ್ ಆಗಿದ್ದು ಜೂನ್ 1ಕ್ಕೆ ದೆಹಲಿಯಲ್ಲಿ ಸಂದರ್ಶನ ನಡೆಯಲಿದೆ. ಇದರಲ್ಲಿ ಆಯ್ಕೆಯಾದವರು 3 ವರ್ಷ ಕಾಲ ಸೇವೆಯಲ್ಲಿರಲಿದ್ದಾರೆ. ಹಣಕಾಸು ವಲಯದಲ್ಲಿ ಹಿರಿಯ ಸ್ತರದಲ್ಲಿ 15 ವರ್ಷ ಕೆಲಸ ಮಾಡಿದ ಅನುಭವಿಗಳಾಗಿರಬೇಕು.

RBI Dy Governor: ಆರ್​ಬಿಐ ಉಪ ಗವರ್ನರ್ ಹುದ್ದೆಗೆ ಜೂನ್ 1ರಂದು ಐವರ ಸಂದರ್ಶನ; ಅರ್ಹತೆ, ಸಂಬಳ ಏನು? ಇಲ್ಲಿದೆ ಡೀಟೇಲ್ಸ್
ಅರ್​ಬಿಐ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 29, 2023 | 2:10 PM

ನವದೆಹಲಿ: ಇದೇ ಜೂನ್ 1ಕ್ಕೆ ಆರ್​ಬಿಐ ಉಪಗವರ್ನರ್ ಹುದ್ದೆಗೆ (RBI Deputy Governor) ಸಂದರ್ಶನ ನಿಗದಿಯಾಗಿದೆ. ಒಂದು ಉಪ ಗವರ್ನರ್ ಸ್ಥಾನ ಖಾಲಿ ಇದೆ. ಈ ಹುದ್ದೆಗೆ ಐವರು ಅಭ್ಯರ್ಥಿಗಳ ಹೆಸರು ಶಾರ್ಟ್​ಲಿಸ್ಟ್ ಆಗಿರುವುದು ತಿಳಿದುಬಂದಿದೆ. ಕೇಂದ್ರ ಸಂಪುಟ ಕಾರ್ಯದರ್ಶಿ ನೇತೃತ್ವದಲ್ಲಿ ಹಣಕಾಸು ವಲಯ ನಿಯಂತ್ರಕ ನೇಮಕಾತಿ ಶೋಧ ಸಮಿತಿ (FCRASC) ದೆಹಲಿಯಲ್ಲಿ ಈ 5 ಅಭ್ಯರ್ಥಿಗಳ ಸಂದರ್ಶನ ನಡೆಸಲಿದೆ ಎಂಬ ಮಾಹಿತಿ ಸದ್ಯಕ್ಕೆ ಗೊತ್ತಾಗಿದೆ. ಈ ಸಮಿತಿಯಲ್ಲಿ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್, ಹಣಕಾಸು ಸೇವೆಗಳ ಕಾರ್ಯದರ್ಶಿ ಹಾಗೂ ಇಬ್ಬರು ಸ್ವತಂತ್ರ ಸದಸ್ಯರಿದ್ದಾರೆ.

ಆರ್​ಬಿಐನ ಉಪಗವರ್ನರ್ ಎಂಕೆ ಜೈನ್ ಅವರ ಅವಧಿ ಜೂನ್ ತಿಂಗಳಲ್ಲಿ ಅಂತ್ಯಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈ ಹುದ್ದೆ ನೇಮಕಾತಿಗೆ ಅರ್ಜಿ ಕರೆಯಲಾಗಿತ್ತು. ಹಲವು ಅರ್ಜಿಗಳ ಪೈಕಿ ಐವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಜೂನ್ 1ರಂದು ನಡೆಯುವ ಸಂದರ್ಶನದಲ್ಲಿ ಆಯ್ಕೆಯಾಗುವ ಅಭ್ಯರ್ಥಿಯ ಹೆಸರನ್ನು ಸಂಪುಟದ ನೇಮಕಾತಿ ಸಮಿತಿಯ ಅನುಮೋದನೆಗಾಗಿ ಕಳುಹಿಸಿಕೊಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆ ಸಮಿತಿ ಇರುತ್ತದೆ.

ಇದನ್ನೂ ಓದಿEPF Nomination: ನಿಮ್ಮ ಪಿಎಫ್ ಖಾತೆಗೆ ನಾಮಿನೇಶನ್ ಮಾಡಿಲ್ಲವಾ? ಆನ್​ಲೈನ್ ಮೂಲಕ ಸುಲಭವಾಗಿ ನಾಮಿನೇಟ್ ಮಾಡಬಹುದು

ಅರ್​ಬಿಐನಲ್ಲಿ ಒಟ್ಟು ನಾಲ್ವರು ಉಪಗವರ್ನರ್​ಗಳಿರುತ್ತಾರೆ. ಸದ್ಯ ಎಂಕೆ ಜೈನ್, ಮೈಕೇಲ್ ದೇಬಬ್ರತ ಪಾತ್ರ, ರಾಜೇಶ್ವರ್ ರಾವ್ ಮತ್ತು ಟಿ ರಬಿ ಶಂಕರ್ ಅವರು ಉಪಗವರ್ನರ್​ಗಳಾಗಿದ್ದಾರೆ. ಎಂಕೆ ಜೈನ್ ಅವರ ಸ್ಥಾನ ತೆರವುಗೊಳ್ಳುತ್ತಿದೆ. ಇವರ ಸ್ಥಾನಕ್ಕೆ ನೇಮಕವಾಗುವ ನೂತನ ಉಪಗವರ್ನರ್ ಅವರ ಅವಧಿ 3 ವರ್ಷದ್ದಾಗಿರುತ್ತದೆ. ಒಮ್ಮೆ ಮಾತ್ರ ಅವರ ಅವಧಿ ವಿಸ್ತರಣೆ ಸಾಧ್ಯವಿರುತ್ತದೆ.

ಆರ್​ಬಿಐ ಉಪಗವರ್ನರ್ ಹುದ್ದೆಗೆ ಅರ್ಹತೆ ಮತ್ತು ಸಂಬಳ ಎಷ್ಟು?

ಆರ್​ಬಿಐ ಉಪಗವರ್ನರ್ ಹುದ್ದೆಗೆ ತಿಂಗಳಿಗೆ 2.25 ಲಕ್ಷ ರೂ ಸಂಬಳ, ಜೊತೆಗೆ ಭತ್ಯೆ ಇರುತ್ತದೆ. ಇವರು ಬ್ಯಾಂಕಿಂಗ್ ಮತ್ತು ಹಣಕಾಸು ಮಾರುಕಟ್ಟೆ ಕಾರ್ಯಾಚರಣೆಯಲ್ಲಿ 15ವರ್ಷ ಕೆಲಸ ಮಾಡಿದ ಅನುಭವಶಾಲಿಯಾಗಿರಬೇಕು. ಕಮರ್ಷಿಯಲ್ ಬ್ಯಾಂಕರ್​ಗಳನ್ನು ಈ ಹುದ್ದೆಗೆ ಪರಿಗಣಿಸಲಾಗುತ್ತಿದೆ. ಹಣಕಾಸು ವಲಯದಲ್ಲಿ ಅಭ್ಯರ್ಥಿಗಳಾದವರು ಪೂರ್ಣಾವಧಿ ನಿರ್ದೇಶಕರಾಗಿರಬೇಕು, ಅಥವಾ ಮಂಡಳಿ ಸದಸ್ಯರಾಗಿರಬೇಕು. ಬಹಳ ಉನ್ನತ ಸ್ತರದಲ್ಲಿ ವ್ಯವಹಾರ ನಿಭಾಯಿಸುವ ಹೊಣೆಗಾರಿಕೆಯ ಅರಿವಿರಬೇಕು. ಹಾಗೆಯೆ, ಅಭ್ಯರ್ಥಿಗಳ ವಯಸ್ಸು 2023 ಜೂನ್ 22ಕ್ಕೆ 60 ವರ್ಷ ಮೀರಿರಬಾರದು ಎಂದು ಮಾರ್ಚ್ ತಿಂಗಳಲ್ಲಿ ಹೊರಡಿಸಲಾದ ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಎಲ್ಲರ ಆಶೀರ್ವಾದ ಮಗ ದರ್ಶನ್ ಮೇಲಿರಲಿ: ಮೀನಾ ತೂಗುದೀಪ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಡೀಸೆಲ್ ಬೆಲೆ ಹೆಚ್ಚಳದಿಂದ ಹಲವಾರು ವಸ್ತುಗಳ ಬೆಲೆ ಜಾಸ್ತಿಯಾಗುತ್ತದೆ: ಅಶೋಕ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಹೊಸಪಕ್ಷ ಕಟ್ಟುವ ಕುರಿತು ಯತ್ನಾಳ್ ಮನಸ್ಸಿನಲ್ಲಿರೋದು ಗೊತ್ತಿಲ್ಲ: ನಿರಾಣಿ
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಮಾತಾಡಿದ್ದು ನಿರಾಣಿ, ಆಸ್ಥೆಯಿಂದ ಕೇಳಿಸಿಕೊಂಡಿದ್ದು ಶಿವಕುಮಾರ್!
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬೆಲೆಯೇರಿಕೆ ಎಲ್ಲ ಕಡೆ ಆಗುತ್ತಿದೆ, ಕೇವಲ ಕರ್ನಾಟಕ ಮಾತ್ರ ಅಲ್ಲ: ಜಾರಕಿಹೊಳಿ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಬ್ಯಾಗ್ ಕದಿಯಲು ಹೋಗಿ ತನ್ನ ಜೀವಕ್ಕೇ ಕುತ್ತು ತಂದುಕೊಂಡ ಕಳ್ಳ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ಐಪಿಎಲ್ ಮ್ಯಾಚ್ ನೋಡಲು ಹೋಗೋ ಮುನ್ನ ಸಂಚಾರ ಪೊಲೀಸರ ಈ ಸಲಹೆ ಗಮನಿಸಿ
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ತಾವು ರಾಷ್ಟ್ರೀಯ ಪಕ್ಷವೆಂಬ ಹಮ್ಮು ಬಿಜೆಪಿ ನಾಯಕರಿಗಿರಬಹುದು: ಸುರೇಶ್ ಬಾಬು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಸರ್ಕಾರದ ಏಜೆಂಟ್​​​ನಂತೆ ವರ್ತಿಸುವ ಸ್ಪೀಕರ್​ಗೆ ಧಿಕ್ಕಾರ: ಪ್ರತಿಭಟನೆಕಾರರು
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ
ಪೊಲೀಸರ ನಿಸ್ವಾರ್ಥ ಸೇವೆ ಮತ್ತು ದಕ್ಷತೆಗೆ ಮುಖ್ಯಮಂತ್ರಿ ಮೆಚ್ಚುಗೆ