EPF Nomination: ನಿಮ್ಮ ಪಿಎಫ್ ಖಾತೆಗೆ ನಾಮಿನೇಶನ್ ಮಾಡಿಲ್ಲವಾ? ಆನ್ಲೈನ್ ಮೂಲಕ ಸುಲಭವಾಗಿ ನಾಮಿನೇಟ್ ಮಾಡಬಹುದು
Step-by-step Process For EPFO E-Nomination: ಪಿಡಿಎಫ್ಗೆ ಇ-ಸಹಿ ಬೀಳದೇ ಕೇವಲ ಇ-ನಾಮಿನೇಶನ್ ಮಾಡಿದ್ದರೆ ಅದನ್ನು ಪರಿಗಣಿಸಲಾಗುವುದಿಲ್ಲ. ಅಂದರೆ, ನೀವು ಮೃತಪಟ್ಟಾಗ ನಾಮಿನಿಗಳಿಗೆ ನಿಮ್ಮ ಹಣ ರವಾನೆಯಾಗುವುದು ಕಷ್ಟವಾಗಬಹುದು. ಆದ್ದರಿಂದ ಇ-ನಾಮಿನೇಶನ್ ಮಾಡಿದ ಬಳಿಕ ಪಿಡಿಎಫ್ ಫೈಲ್ ಜನರೇಟ್ ಮಾಡಿ ಅದಕ್ಕೆ ಇ-ಸೈನ್ ಹಾಕಿರಲೇಬೇಕು.
ಇಪಿಎಫ್ ಖಾತೆಗೆ ನಾಮಿನೇಶನ್ (EPF e Nomination) ಮಾಡಬೇಕೆಂದು ಇಪಿಎಫ್ಒ ತಿಳಿಸಿದ್ದು, ಬಹಳ ಮಂದಿ ಇನ್ನೂ ಅಪ್ಡೇಟ್ ಮಾಡಿಲ್ಲ. ನಾಮಿನೇಶನ್ ಎಂಬುದು ಬಹಳ ಮುಖ್ಯ ಅಂಶ. ಬ್ಯಾಂಕ್ ಖಾತೆ, ಲೈಫ್ ಇನ್ಷೂರೆನ್ಸ್ ಇತ್ಯಾದಿ ಯಾವುದೇ ಸ್ಕೀಮ್, ಹೂಡಿಕೆ ಇತ್ಯಾದಿ ಹಣಕಾಸು ಯೋಜನೆಗಳಲ್ಲಿ ನಾಮಿನೇಶನ್ ಕಡ್ಡಾಯ ಇರುತ್ತದೆ. ನೀವು ಆಕಸ್ಮಿಕವಾಗಿ ಸಾವನ್ನಪ್ಪಿದಾಗ ಖಾತೆಯಲ್ಲಿರುವ ಹಣ ನೀವು ನಾಮಿನೇಟ್ ಮಾಡಿದವರಿಗೆ ಹೋಗುತ್ತದೆ. ಹೀಗಾಗಿ, ನಾಮಿನೇಶನ್ ಎಂಬುದು ಬಹಳ ಮುಖ್ಯ ಎನಿಸುತ್ತದೆ. ನೀವು ಬೇಕೆಂದಾಗ ನಾಮಿನಿಗಳನ್ನು ಬದಲಾಯಿಸುವ ಅವಕಾಶವೂ ಇದೆ. ಆದರೆ, ಇ–ನಾಮಿನೇಶನ್ ಫೈಲ್ ಮಾಡಲು ಯಾವುದೇ ಗಡುವು ನೀಡಲಾಗಿಲ್ಲ. ಹೀಗಾಗಿ ಆತುರವಿಲ್ಲದೇ ಆರಾಮವಾಗಿ ನಾಮಿನಿ ಸೇರಿಸಿ. ಈಗ ನಿಮ್ಮ ಇಪಿಎಫ್ ಖಾತೆಗೆ ನಾಮಿನಿಗಳನ್ನು ಹೆಸರಿಸುವುದು ಹೇಗೆಂಬ ವಿವರ ಇಲ್ಲಿದೆ.
ಇಪಿಎಫ್ಒಗೆ ಇ–ನಾಮಿನೇಶನ್ ಮಾಡುವ ವಿಧಾನಗಳು
- ಇಪಿಎಫ್ಒ ಸದಸ್ಯರ ಪೋರ್ಟಲ್ಗೆ ಲಾಗಿನ್ ಆಗಿ
- ಕುಟುಂಬದ ಎಲ್ಲ ಸದಸ್ಯರ ಹೆಸರನ್ನು ಸೇರಿಸಿ
- ಕುಟುಂಬ ಸದಸ್ಯರ ಫೋಟೋ ಮತ್ತು ಆಧಾರ್ ಅನ್ನು ಸೇರಿಸಿ
- ಕುಟುಂಬದವರ ಹೆಸರು ಇತ್ಯಾದಿ ವಿವರಗಳು ಅವರವರ ಆಧಾರ್ ಕಾರ್ಡ್ ಮಾಹಿತಿಯೊಂದಿಗೆ ತಾಳೆಯಾಗಬೇಕು. ಹಾಗಿದ್ದಾಗ ಮಾತ್ರ ಹೆಸರು ಸೇರ್ಪಡೆ ಯಶಸ್ವಿಯಾಗುವುದು.
- ಕುಟುಂಬ ಸದಸ್ಯರ ಬ್ಯಾಂಕ್ ಖಾತೆ ಸೇರಿಸುವುದು ಐಚ್ಛಿಕ ಮಾತ್ರ, ಕಡ್ಡಾಯವಲ್ಲ.
- ಇದಾದ ಮೇಲೆ ಪಿಡಿಎಫ್ ಫೈಲ್ ಸಿದ್ಧವಾಗುತ್ತದೆ. ನಿಮ್ಮ ಆಧಾರ್ಗೆ ಜೋಡಿತವಾದ ಮೊಬೈಲ್ ನಂಬರ್ಗೆ ಬರುವ ಒಟಿಪಿ ಮೂಲಕ ಈ ಪಿಡಿಎಫ್ ಫೈಲ್ಗೆ ಇ–ಸೈನ್ ಹಾಕಬೇಕು.
ಇದನ್ನೂ ಓದಿ: PF Advance: ಮನೆ ನಿರ್ಮಾಣಕ್ಕೆ ಪಿಎಫ್ ಅಡ್ವಾನ್ಸ್ ಪಡೆಯುವುದು ಹೇಗೆ? ಇಲ್ಲಿದೆ ವಿಧಾನ
ಪಿಡಿಎಫ್ಗೆ ಇ–ಸಹಿ ಬೀಳದೇ ಕೇವಲ ಇ–ನಾಮಿನೇಶನ್ ಮಾಡಿದ್ದರೆ ಅದನ್ನು ಪರಿಗಣಿಸಲಾಗುವುದಿಲ್ಲ. ಅಂದರೆ, ನೀವು ಮೃತಪಟ್ಟಾಗ ನಾಮಿನಿಗಳಿಗೆ ನಿಮ್ಮ ಹಣ ರವಾನೆಯಾಗುವುದು ಕಷ್ಟವಾಗಬಹುದು. ಆದ್ದರಿಂದ ಇ–ನಾಮಿನೇಶನ್ ಮಾಡಿದ ಬಳಿಕ ಪಿಡಿಎಫ್ ಫೈಲ್ ಜನರೇಟ್ ಮಾಡಿ ಅದಕ್ಕೆ ಇ–ಸೈನ್ ಹಾಕಿರಲೇಬೇಕು.
ನೀವು ಸರಿಯಾದ ರೀತಿಯಲ್ಲಿ ನಾಮಿನೇಶನ್ ಮಾಡಿದ್ದರೆ ನಿಮ್ಮ ಕುಟುಂಬ ಸದಸ್ಯರು ತಮ್ಮ ಆಧಾರ್ ಜೋಡಿತ ಮೊಬೈಲ್ ಮೂಲಕ ಇಪಿಎಫ್ಒ ಖಾತೆಗೆ ಲಾಗಿನ್ ಆಗಿ ಹಣ ಕ್ಲೇಮ್ ಮಾಡಲು ಸಾಧ್ಯವಾಗುತ್ತದೆ.
ಪಿಡಿಎಫ್ ಫೈಲ್ಗೆ ಇ–ಸೈನ್ ಹೇಗೆ ಹಾಕುವುದು?
ಇ–ನಾಮಿನೇಶನ್ ಬಳಿಕ ಪಿಡಿಎಫ್ ಫೈಲ್ ಜನರೇಟ್ ಮಾಡಬೇಕು. ಬಳಿಕ ಇ–ಸೈನ್ ಲಿಂಕ್ ಮೇಲ್ ಕ್ಲಿಕ್ ಮಾಡಿದರೆ ಹೊಸ ಪುಟ ತೆರೆದುಕೊಳ್ಳುತ್ತದೆ. ಚೆಕ್ ಬಾಕ್ಸ್ ಆಯ್ಕೆ ಮಾಡಿ. ಮಕುಂದಿನ ಪುಟದಲ್ಲಿ ಎರಡು ಆಯ್ಕೆಗಳಿರುತ್ತವೆ. ಆಧಾರ್ ಆಧಾರಿತವಾಗಿ ದೃಢೀಕರಣ ಮಾಡುವ ಆಯ್ಕೆಗಳು ಇವೆ. ಒಂದು ಆಧಾರ್ ನಂಬರ್, ಇನ್ನೊಂದು ವರ್ಚುವಲ್ ಐಡಿ.
ಆಧಾರ್ ನಂಬರ್ ಅಥವಾ ವರ್ಚುವಲ್ ಐಡಿ ಈ ಎರಡರಲ್ಲಿ ಯಾವುದಾದರೂ ಒಂದನ್ನು ನಮೂದಿಸಿ ವೆರಿಫೈ ಬಟನ್ ಒತ್ತಿರಿ. ಆಧಾರ್ ಜೋಡಿತ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತದೆ. ಅದನ್ನು ಹಾಕಿ ಸಲ್ಲಿಸಿದರೆ ನಿಮ್ಮ ನಾಮಿನೇಶನ್ ವಿವರಗಳು ಇಪಿಎಫ್ಒ ಡಾಟಾಬೇಸ್ನಲ್ಲಿ ಸಂಗ್ರಹವಾಗುತ್ತದೆ.
ಇದನ್ನೂ ಓದಿ: EPF Transfer: ಕಂಪನಿ ಬದಲಿಸಿದಾಗ ಇಪಿಎಫ್ ಖಾತೆ ವರ್ಗಾಯಿಸದಿದ್ದರೆ ಏನಾಗುತ್ತದೆ? ಈ ವಿಷಯ ತಿಳಿದಿರಲಿ
ಗಮನಿಸಿ: ನೀವು ಇ–ನಾಮಿನೇಶನ್ ಪ್ರಕ್ರಿಯೆ ಆರಂಭಿಸುವ ಮುನ್ನ ಕುಟುಂಬ ಸದಸ್ಯರ ಫೋಟೋ, ಆಧಾರ್ ನಂಬರ್ ಅನ್ನು ಸಿದ್ಧವಾಗಿಟ್ಟುಕೊಳ್ಳಿ. ಫೋಟೋ ಜೆಪಿಜಿ ಫಾರ್ಮಾಟ್ನಲ್ಲಿ ಇರಬೇಕು. 100 ಕೆಬಿಗಿಂತ ಕಡಿಮೆ ಗಾತ್ರದ್ದಾಗಿರಬೇಕು. ಫೋಟೋದಲ್ಲಿ ವ್ಯಕ್ತಿಯ ಚಹರೆ ಸ್ಪಷ್ಟವಾಗಿ ಕಾಣುವಂತಿರಬೇಕು.
ಇನ್ನೊಂದು ಸಂಗತಿ ಎಂದರೆ, ಇಪಿಎಫ್ ಖಾತೆದಾರ ವಿವಾಹಿತರಾಗಿದ್ದರೆ ಕುಟುಂಬ ಸದಸ್ಯರ ಪಟ್ಟಿಯಲ್ಲಿ ಪತ್ನಿ ಮತ್ತು ಮಕ್ಕಳ ಹೆಸರು ಇರಲೇಬೇಕು. ಪತ್ನಿ, ಮಕ್ಕಳು ಇಲ್ಲದಿದ್ದರೆ ಅಥವಾ ಖಾತೆದಾರ ಅವಿವಾಹಿತರಾಗಿದ್ದರೆ ಕುಟುಂಬ ಸದಸ್ಯರ ಪಟ್ಟಿಯಲ್ಲಿ ಯಾರ ಹೆಸರನ್ನು ಬೇಕಾದರೂ ಸೇರಿಸಬಹುದು.