Sign In

By signing in or creating an account, you agree with Associated Broadcasting Company's Terms & Conditions and Privacy Policy.

HDFC: ಎಚ್​ಡಿಎಫ್​ಸಿ ಬ್ಯಾಂಕ್ ಹೊಸ ಎಫ್​ಡಿ ಸ್ಕೀಮ್; ಹೆಚ್ಚು ಬಡ್ಡಿ, ಸೀಮಿತ ಅವಕಾಶ; ಇಲ್ಲಿದೆ ಡೀಟೇಲ್ಸ್

Revised FD Rates In HDFC Bank: ಎಚ್​ಡಿಎಫ್​ಸಿ ಎರಡು ವಿಶೇಷ ಎಫ್​ಡಿ ಪ್ಲಾನ್ ಅನಾವರಣಗೊಳಿಸಿದೆ. 35 ತಿಂಗಳು ಮತ್ತು 55 ತಿಂಗಳ ಅವಧಿಯ ಈ ಎರಡು ಪ್ಲಾನ್​ನಲ್ಲಿ ಎಫ್​ಡಿಗಳಿಗೆ ಹೆಚ್ಚು ಬಡ್ಡಿ ಸಿಗುತ್ತದೆ. ಕೆಲವೇ ದಿನಗಳವರೆಗೆ ಈ ಆಫರ್ ಇರುತ್ತದೆ ಎನ್ನಲಾಗಿದೆ.

HDFC: ಎಚ್​ಡಿಎಫ್​ಸಿ ಬ್ಯಾಂಕ್ ಹೊಸ ಎಫ್​ಡಿ ಸ್ಕೀಮ್; ಹೆಚ್ಚು ಬಡ್ಡಿ, ಸೀಮಿತ ಅವಕಾಶ; ಇಲ್ಲಿದೆ ಡೀಟೇಲ್ಸ್
ಎಚ್​ಡಿಎಫ್​ಸಿ ಬ್ಯಾಂಕ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 29, 2023 | 1:06 PM

ಜನಸಾಮಾನ್ಯರು ಸಾಮಾನ್ಯವಾಗಿ ಬಳಸುವ ಸೇವಿಂಗ್ ಸ್ಕೀಮ್ ಎಂದರೆ ಅದು ನಿಶ್ಚಿತ ಠೇವಣಿ. ಬಹಳ ಸುಲಭ, ಸರಳ ಎನಿಸಿರುವ ಎಫ್​ಡಿ ಸ್ಕೀಮ್​ಗಳು (Fixed Deposit Plans) ಉತ್ತಮ ಬಡ್ಡಿ ಕೊಡುವುದರ ಜೊತೆಗೆ ಸುರಕ್ಷಿತ ಹೂಡಿಕೆಯಾಗಿಯೂ ಪರಿಗಣಿತವಾಗಿದೆ. ಬಹಳಷ್ಟು ಬ್ಯಾಂಕುಗಳು ನಿಶ್ಚಿತ ಠೇವಣಿಗಳಿಗೆ ಅಧಿಕ ಬಡ್ಡಿ ಕೊಡುತ್ತವೆ. ಎಚ್​ಡಿಎಫ್​ಸಿ ಬ್ಯಾಂಕ್ ಗ್ರಾಹಕರಿಗೆ ಇದೇ ವೇಳೆ ಖುಷಿಯ ಸುದ್ದಿ ಇದೆ. ಭಾರತದ ಅತಿದೊಡ್ಡ ಖಾಸಗಿ ಬ್ಯಾಂಕ್ ಎನಿಸಿದ ಎಚ್​ಡಿಎಫ್​ಸಿ ಎರಡು ವಿಶೇಷ ಎಫ್​ಡಿ ಪ್ಲಾನ್ ಅನಾವರಣಗೊಳಿಸಿದೆ. 35 ತಿಂಗಳು ಮತ್ತು 55 ತಿಂಗಳ ಅವಧಿಯ ಈ ಎರಡು ಪ್ಲಾನ್​ನಲ್ಲಿ ಎಫ್​ಡಿಗಳಿಗೆ ಹೆಚ್ಚು ಬಡ್ಡಿ ಸಿಗುತ್ತದೆ. ಕೆಲವೇ ದಿನಗಳವರೆಗೆ ಈ ಆಫರ್ ಇರುತ್ತದೆ.

ಎಚ್​ಡಿಎಫ್​ಸಿ ನಿಶ್ಚಿತ ಠೇವಣಿಗಳಿಗೆ ಶೇ. 7.75ರವರೆಗೆ ಬಡ್ಡಿ

ಹೆಚ್​ಡಿಎಫ್​ಸಿ ಬ್ಯಾಂಕ್​ನ ಠೇವಣಿ ದರಗಳ ಪರಿಷ್ಕರಣೆ ಆಗಿದೆ. ಹಿರಿಯ ನಾಗರಿಕ ಠೇವಣಿಗಳಿಗೆ ಶೇ. 7.75ರವರೆಗೆ ಬಡ್ಡಿ ಕೊಡಲಾಗುತ್ತದೆ. 35 ತಿಂಗಳ ಸ್ಪೆಷಲ್ ಎಡಿಶನ್ ಎಫ್​ಡಿ ಪ್ಲಾನ್​ನಲ್ಲಿ ಹಿರಿಯ ನಾಗರಿಕರ ಠೇವಣಿಗೆ ಶೇ. 7.70ರಷ್ಟು ಬಡ್ಡಿ ಸಿಗುತ್ತದೆ. ಇನ್ನು, 55 ತಿಂಗಳ ಠೇವಣಿಗಳಿಗೆ ಶೇ. 7.75ರಷ್ಟು ಬಡ್ಡಿ ಸಿಗುತ್ತದೆ.

ಇತರ ಸಾಮಾನ್ಯ ಗ್ರಾಹಕರ 35 ತಿಂಗಳ ಎಫ್​ಡಿಗಳಿಗೆ ಶೇ. 7.20ರಷ್ಟು ವಾರ್ಷಿಕ ಬಡ್ಡಿ ಬರುತ್ತದೆ. 55 ತಿಂಗಳ ಠೇವಣಿಗಳಿಗೆ ಶೇ. 7.25ರಷ್ಟು ಬಡ್ಡಿ ಸಿಗುತ್ತದೆ. ಈ ಪರಿಷ್ಕೃತ ದರಗಳು 2023 ಮೇ 29, ಅಂದರೆ ಇಂದು ಸೋಮವಾರದಿಂದಲೇ ಜಾರಿಗೆ ಬರುತ್ತಿವೆ.

ಇದನ್ನೂ ಓದಿPPF: ಕೇವಲ 500 ರೂ ಹೂಡಿಕೆಗೆ ಲಕ್ಷಾಧಿಪತಿ ಮಾಡುವ ಸ್ಕೀಮ್; ಪಿಪಿಎಫ್ ಖಾತೆ ತೆರೆಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್

ಎಚ್​ಡಿಎಫ್​ಸಿ ಬ್ಯಾಂಕ್​ನಲ್ಲಿ ಸಾಮಾನ್ಯ ಗ್ರಾಹಕರ ವಿವಿಧ ಅವಧಿಯ ಠೇವಣಿಗಳಿಗೆ ಎಷ್ಟಿದೆ ಬಡ್ಡಿ ದರ?

  • 7ರಿಂದ 29 ದಿನಗಳು: ಶೇ. 3 ಬಡ್ಡಿ
  • 30ರಿಂದ 45ದಿನಗಳು: ಶೇ. 3.5 ಬಡ್ಡಿ
  • 46ದಿನದಿಂದ 6 ತಿಂಗಳವರೆಗಿನ ಠೇವಣಿ: ಶೇ. 4.5 ಬಡ್ಡಿ
  • 6ತಿಂಗಳು 1 ದಿನದಿಂದ 9 ತಿಂಗಳವರೆಗಿನ ಠೇವಣಿ: ಶೇ. 5.75 ಬಡ್ಡಿ
  • 9 ತಿಂಗಳು 1 ದಿನದಿಂದ 1 ವರ್ಷದೊಳಗಿನ ಠೇವಣಿ: ಶೇ. 5.75 ಬಡ್ಡಿ
  • 1 ವರ್ಷದಿಂದ 15 ತಿಂಗಳೊಳಗಿನ ಠೇವಣಿ: ಶೇ. 6.60 ಬಡ್ಡಿ
  • 15 ತಿಂಗಳಿಂದ 18 ತಿಂಗಳೊಳಗಿನ ಠೇವಣಿ: ಶೇ. 7.10 ಬಡ್ಡಿ
  • 18 ತಿಂಗಳಿಂದ 21 ತಿಂಗಳೊಳಗಿನ ಠೇವಣಿ: ಶೇ. 7 ಬಡ್ಡಿ
  • 21 ತಿಂಗಳಿಂದ 2 ವರ್ಷದವರೆಗಿನ ಠೇವಣಿ: ಶೇ. 7 ಬಡ್ಡಿ
  • 2 ವರ್ಷ 1 ದಿನದಿಂದ 2 ವರ್ಷ 11 ತಿಂಗಳೊಳಗಿನ ಠೇವಣಿ: ಶೇ. 7 ಬಡ್ಡಿ
  • 2 ವರ್ಷ 11 ತಿಂಗಳ ಠೇವಣಿ: ಶೇ. 7.20 ಬಡ್ಡಿ
  • 2 ವರ್ಷ 11 ತಿಂಗಳು 1ದಿನದಿಂದ 3 ವರ್ಷದವರೆಗಿನ ಠೇವಣಿ: ಶೇ. 7 ಬಡ್ಡಿ
  • 3 ವರ್ಷ 1 ದಿನದಿಂದ 4 ವರ್ಷ 7 ತಿಂಗಳವರೆಗಿನ ಠೇವಣಿ: ಶೇ. 7 ಬಡ್ಡಿ
  • 4 ವರ್ಷ 7 ತಿಂಗಳ ಠೇವಣಿ: 7.25 ಬಡ್ಡಿ
  • 4 ವರ್ಷ 7 ತಿಂಗಳು 1 ದಿನದಿಂದ 5 ವರ್ಷದವರೆಗಿನ ಠೇವಣಿ: ಶೇ. 7 ಬಡ್ಡಿ
  • 5 ವರ್ಷ 1 ದಿನದಿಂದ 10 ವರ್ಷದವರೆಗಿನ ಠೇವಣಿ: ಶೇ 7 ಬಡ್ಡಿ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!