PPF: ಕೇವಲ 500 ರೂ ಹೂಡಿಕೆಗೆ ಲಕ್ಷಾಧಿಪತಿ ಮಾಡುವ ಸ್ಕೀಮ್; ಪಿಪಿಎಫ್ ಖಾತೆ ತೆರೆಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್

How To Start PPF Scheme: 15ರಿಂದ 20 ವರ್ಷ ಅವಧಿಯ ಪಿಪಿಎಫ್ ಯೋಜನೆ ಉತ್ತಮ ಬಡ್ಡಿ ದರದ ಜೊತೆಗೆ ತೆರಿಗೆ ಉಳಿತಾಯಕ್ಕೂ ಸಹಾಯವಾಗುತ್ತದೆ. ವರ್ಷಕ್ಕೆ 500 ರೂನಿಂದ 1,50,000 ರೂವರೆಗೆ ಹೂಡಿಕೆ ಸಾಧ್ಯ. ಪಿಪಿಎಫ್ ಖಾತೆ ತೆರೆಯುವ ವಿಧಾನ ಇಲ್ಲಿದೆ...

PPF: ಕೇವಲ 500 ರೂ ಹೂಡಿಕೆಗೆ ಲಕ್ಷಾಧಿಪತಿ ಮಾಡುವ ಸ್ಕೀಮ್; ಪಿಪಿಎಫ್ ಖಾತೆ ತೆರೆಯುವುದು ಹೇಗೆ? ಇಲ್ಲಿದೆ ಡೀಟೇಲ್ಸ್
ಪಿಪಿಎಫ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 29, 2023 | 12:27 PM

ಸರ್ಕಾರದಿಂದ ನಡೆಸಲಾಗುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (PPF- Public Provident Fund) ಬಹಳ ಮಂದಿಗೆ ನೆಚ್ಚಿನ ಸೇವಿಂಗ್ಸ್ ಸ್ಕೀಮ್ ಎನಿಸಿದೆ. ಇದು ಶೇ. 7ಕ್ಕಿಂತ ಹೆಚ್ಚು ಬಡ್ಡಿ ಕೊಡುವುದರ ಜೊತೆಗೆ ತೆರಿಗೆ ಲಾಭಗಳನ್ನೂ ತಂದುಕೊಡುತ್ತದೆ. ಹೀಗಾಗಿ, ತೆರಿಗೆ ಪಾವತಿದಾರರು ಈ ಸ್ಕೀಮ್​ನಲ್ಲಿ ಹಣ ತೊಡಗಿಸುತ್ತಾರೆ. 15 ವರ್ಷದ ಅವಧಿಯ ಸಾರ್ವಜನಿಕ ಭವಿಷ್ಯ ನಿಧಿ ಯೋಜನೆಯನ್ನು 20 ವರ್ಷದವರೆಗೆ ವಿಸ್ತರಿಸಬಹುದು. ವರ್ಷಕ್ಕೆ 500 ರೂನಿಂದ ಒಂದೂವರೆ ಲಕ್ಷ ರೂವರೆಗೆ ಹೂಡಿಕೆ ಮಾಡಬಹುದು. ವರ್ಷಕ್ಕೆ ಶೇ. 7.1ರಷ್ಟು ಬಡ್ಡಿದರದಲ್ಲಿ ಹೂಡಿಕೆ ಬೆಳೆಯುತ್ತಾ ಹೋಗುತ್ತದೆ. ನೀವು ವರ್ಷಕ್ಕೆ ಒಂದೇ ಬಾರಿಗೆ ಹೂಡಿಕೆ ಮಾಡಬಹುದು, ಅಥವಾ ಪ್ರತೀ ತಿಂಗಳು ಕಟ್ಟಬಹುದು. ಉದಾಹರಣೆಗೆ, ನೀವು ವರ್ಷಕ್ಕೆ 1,20,000 ರೂ ಕಟ್ಟುತ್ತೀರೆಂದರೆ ತಿಂಗಳಿಗೆ 10,000 ರೂನಂತೆ 12 ಕಂತುಗಳಲ್ಲಿ ಕಟ್ಟಬಹುದು.

ನೀವು ಒಂದು ವರ್ಷಕ್ಕೆ 1.5 ಲಕ್ಷ ರೂನಷ್ಟು ಹೂಡಿಕೆ ಮಾಡಿದರೆ ಅಷ್ಟು ಮೊತ್ತದ ನಿಮ್ಮ ಆದಾಯಕ್ಕೆ ತೆರಿಗೆ ಅನ್ವಯ ಆಗುವುದಿಲ್ಲ. ಹೀಗಾಗಿ, ನೀವು ಸಾಕಷ್ಟು ತೆರಿಗೆ ಹಣವನ್ನು ಕಡಿಮೆ ಮಾಡಿಕೊಳ್ಳಲು ಸಾಧ್ಯ.

ಇದನ್ನೂ ಓದಿInvestment: 1 ಲಕ್ಷ ಸೇರಿದಂತೆ ವಿವಿಧ ಹೂಡಿಕೆಗಳಿಗೆ ಸಿಗುವ ರಿಟರ್ನ್ ಎಷ್ಟು? ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಲೆಕ್ಕಾಚಾರ ಇಲ್ಲಿದೆ

ಪಿಪಿಎಫ್ ಖಾತೆ ತೆರೆಯುವುದು ಹೇಗೆ?

ಪಿಪಿಎಫ್ ಖಾತೆಯನ್ನು ಭಾರತೀಯ ಪ್ರಜೆಯಾಗಿರುವ ಯಾರು ಬೇಕಾದರೂ ತೆರೆಯಬಹುದು. ಎಸ್​ಬಿಐ, ಪಿಎನ್​ಬಿ, ಆಂಧ್ರಾ ಬ್ಯಾಂಕ್ ಇತ್ಯಾದಿ ಸರ್ಕಾರಿ ಸ್ವಾಮ್ಯದ ಯಾವುದೇ ಬ್ಯಾಂಕ್ ಅಥವಾ ಅಂಚೆ ಕಚೇರಿಗಳಲ್ಲಿ ಪಿಪಿಎಫ್ ಖಾತೆ ತೆರೆಯಬಹುದು. ನೀವು ಬ್ಯಾಂಕ್ ಕಚೇರಿ ಅಥವಾ ಅಂಚೆ ಕಚೇರಿಗೆ ಹೋಗಿ ಅಲ್ಲಿ ಅರ್ಜಿ ಭರ್ತಿ ಮಾಡುವ ಮೂಲಕ ಪಿಪಿಎಫ್ ಖಾತೆ ತೆರೆಯಲು ಸಾಧ್ಯ. ಆನ್​ಲೈನ್​ನಲ್ಲೂ ಸುಲಭವಾಗಿ ಪಿಪಿಎಫ್ ಅಕೌಂಟ್ ತೆರೆಯಬಹುದು.

ಆನ್​ಲೈನ್​ನಲ್ಲಿ ಪಿಪಿಎಫ್ ಅಕೌಂಟ್ ತೆರೆಯುವ ವಿಧಾನ

  • ಸರ್ಕಾರಿ ಸ್ವಾಮ್ಯದ ಬ್ಯಾಂಕಿನಲ್ಲಿ ನೀವು ಖಾತೆ ಹೊಂದಿದ್ದರೆ ಇಂಟರ್ನೆಟ್ ಬ್ಯಾಂಕಿಂಗ್ ವೆಬ್​ಸೈಟ್​ಗೆ ಲಾಗಿನ್ ಆಗಿರಿ
  • ಅಲ್ಲಿ ಪಿಪಿಎಫ್ ಅಕೌಂಟ್ ಎಂಬುದನ್ನು ಆರಿಸಿಕೊಳ್ಳಿ
  • ನಿಮ್ಮ ಹೆಸರಿನಲ್ಲಿ ಖಾತೆ ತೆರೆಯುವುದಿದ್ದರೆ ಸೆಲ್ಫ್ ಅಕೌಂಟ್ ಮೇಲೆ ಕ್ಲಿಕ್ ಮಾಡಿ

ಇದನ್ನೂ ಓದಿLeave Encashment Tax: ಲೀವ್ ಎನ್​ಕ್ಯಾಶ್ಮೆಂಟ್​ಗೆ ತೆರಿಗೆ: ಬದಲಾವಣೆ ತಂದ ಹಣಕಾಸು ಇಲಾಖೆ; ಏನಿದು ಹೊಸ ರೂಲ್ಸ್?

  • ಅಪ್ರಾಪ್ತರ ಹೆಸರಿನಲ್ಲಿ ನೀವು ಖಾತೆ ತೆರೆಯುವುದಾದರೆ ಮೈನರ್ ಅಕೌಂಟ್ ಅನ್ನು ಆರಿಸಿಕೊಳ್ಳಿ.
  • ನಂತರ ಅರ್ಜಿಯಲ್ಲಿ ಅಗತ್ಯ ಮಾಹಿತಿ ತುಂಬಿರಿ
  • ಒಂದು ಹಣಕಾಸು ವರ್ಷದಲ್ಲಿ ಎಷ್ಟು ಮೊತ್ತವನ್ನು ಖಾತೆಗೆ ಹಾಕುತ್ತೀರಿ ಎಂಬುದನ್ನು ನಮೂದಿಸಿ
  • ಅಪ್ಲಿಕೇಶನ್ ಸಬ್ಮಿಟ್ ಮಾಡಿ.
  • ನಿಮ್ಮ ನೊಂದಾಯಿತ ಮೊಬೈಲ್ ನಂಬರ್​ಗೆ ಒಟಿಪಿ ಬರುತ್ತದೆ. ಅದನ್ನು ನಮೂದಿಸಿ.
  • ಇದಾದ ಕೂಡಲೇ ನಿಮ್ಮ ಪಿಪಿಎಫ್ ಖಾತೆ ಸಿದ್ಧವಾಗುತ್ತದೆ. ಪರದ ಮೇಲೆ ನಿಮ್ಮ ಪಿಪಿಎಫ್ ಖಾತೆ ನಂಬರ್ ಕಾಣುತ್ತದೆ.
  • ನಿಮ್ಮ ನೊಂದಾಯಿತ ಇಮೇಲ್ ವಿಳಾಸಕ್ಕೆ ಈ ಸಂಬಂಧ ಒಂದು ಮೇಲ್ ಬರುತ್ತದೆ. ಅಲ್ಲಿಗೆ ನೀವು ಪಿಪಿಎಫ್ ಖಾತೆ ತೆರೆದಿರುವುದಕ್ಕೆ ದೃಢೀಕರಣ ಬಂದಂತಾಗುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು
ಮ್ಯಾಕ್ಸ್ ಸಿನಿಮಾ ಬಗ್ಗೆ ಪ್ರಾಮಾಣಿಕ ವಿಮರ್ಶೆ ತಿಳಿಸಿದ ಯಶ್ ಅಭಿಮಾನಿಗಳು
Video: ಕ್ರಿಸ್​ಮಸ್​ಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ
Video: ಕ್ರಿಸ್​ಮಸ್​ಗೆ ಶುಭಾಶಯ ಕೋರಿದ ಪ್ರಧಾನಿ ಮೋದಿ
ವಾಜಪೇಯಿ ಜನ್ಮದಿನ, ವಿಡಿಯೋ ಮೂಲಕ ಅಟಲ್ ಕಾರ್ಯ ಹೊಗಳಿದ ಪ್ರಧಾನಿ ಮೋದಿ
ವಾಜಪೇಯಿ ಜನ್ಮದಿನ, ವಿಡಿಯೋ ಮೂಲಕ ಅಟಲ್ ಕಾರ್ಯ ಹೊಗಳಿದ ಪ್ರಧಾನಿ ಮೋದಿ
ಬೆಂಗಳೂರಿನಲ್ಲಿ ಕ್ರಿಸ್ಮಸ್​ ಸಡಗರ​, ಲೈಟಿಂಗ್ಸ್​ನಲ್ಲಿ ಚರ್ಚ್​ಗಳು ಝಗಮಗ
ಬೆಂಗಳೂರಿನಲ್ಲಿ ಕ್ರಿಸ್ಮಸ್​ ಸಡಗರ​, ಲೈಟಿಂಗ್ಸ್​ನಲ್ಲಿ ಚರ್ಚ್​ಗಳು ಝಗಮಗ
ಆಪರೇಷನ್ ಬಳಿಕ ಶಿವರಾಜ್​ಕುಮಾರ್ ಹೆಲ್ತ್​ಅಪ್​ಡೇಟ್ ನೀಡಿದ ವೈದ್ಯರು
ಆಪರೇಷನ್ ಬಳಿಕ ಶಿವರಾಜ್​ಕುಮಾರ್ ಹೆಲ್ತ್​ಅಪ್​ಡೇಟ್ ನೀಡಿದ ವೈದ್ಯರು