AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Investment: 1 ಲಕ್ಷ ಸೇರಿದಂತೆ ವಿವಿಧ ಹೂಡಿಕೆಗಳಿಗೆ ಸಿಗುವ ರಿಟರ್ನ್ ಎಷ್ಟು? ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಲೆಕ್ಕಾಚಾರ ಇಲ್ಲಿದೆ

National Savings Certificate: ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್ ಐದು ವರ್ಷದ ಸ್ಕೀಮ್ ಆಗಿದ್ದು, ಸರ್ಕಾರದಿಂದ ನೇರವಾಗಿ ನಿರ್ವಹಿಸಲ್ಪಡುತ್ತದೆ. ಈ ಹೂಡಿಕೆಗೆ ತೆರಿಗೆ ಲಾಭಗಳುಂಟು.

Investment: 1 ಲಕ್ಷ ಸೇರಿದಂತೆ ವಿವಿಧ ಹೂಡಿಕೆಗಳಿಗೆ ಸಿಗುವ ರಿಟರ್ನ್ ಎಷ್ಟು? ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಲೆಕ್ಕಾಚಾರ ಇಲ್ಲಿದೆ
ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 28, 2023 | 3:36 PM

Share

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹಲವು ಉಳಿತಾಯ ಯೋಜನೆಗಳಲ್ಲಿ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಒಂದು. ಅಂಚೆ ಕಚೇರಿಯಲ್ಲಿ ಎನ್​ಎಸ್​ಸಿ ತೆರೆಯಬಹುದಾಗಿದ್ದು, ಇದು 5 ವರ್ಷದ ಅವಧಿಯ ಯೋಜನೆಯಾಗಿದೆ. ಫಿಕ್ಸೆಡ್ ಡೆಪಾಸಿಟ್​ನಂತೆ ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಯೋಜನೆಯಲ್ಲಿ ಒಮ್ಮೆ ಮಾತ್ರ ಠೇವಣಿ ಇಡಬಹುದು. ಐದು ವರ್ಷದ ಬಳಿಕ ಇದು ಮೆಚ್ಯೂರ್ ಆಗುತ್ತದೆ. ರಾಷ್ಟ್ರೀಯ ಉಳಿತಾಯ ಪತ್ರ ಯೋಜನೆಯಲ್ಲಿ ನಿಮ್ಮ ಠೇವಣಿಗೆ ಶೇ. 7.7ರಷ್ಟು ಬಡ್ಡಿ ಸಿಗುತ್ತದೆ.

ಸರ್ಕಾರಿ ಉಳಿತಾಯ ಪ್ರಚಾರ ಕಾಯ್ದೆ ಅಡಿ ಸರ್ಕಾರದಿಂದಲೇ ನೇರವಾಗಿ ಈ ಸ್ಕೀಮ್ ನಡೆಸಲಾಗುತ್ತದಾದ್ದರಿಂದ ದುಡ್ಡು ಹೆಚ್ಚುಕಡಿಮೆ ಆಗಿಹೋದೀತೆಂದು ಭಯ ಪಡಬೇಕಿಲ್ಲ. ಈ ಸ್ಕೀಮ್​ನಲ್ಲಿ ತೊಡಗಿಸುವ ಹೂಡಿಕೆಗೆ ಟ್ಯಾಕ್ಸ್ ಲಾಭ ಇರುತ್ತದೆ. ಐಟಿ ಕಾಯ್ದೆ ಸೆಕ್ಷನ್ 80ಸಿ ಅಡಿಯಲ್ಲಿ 1.5 ಲಕ್ಷ ರೂವರೆಗಿನ ಟ್ಯಾಕ್ಸ್ ಡಿಡಕ್ಷನ್ ಸೌಲಭ್ಯದ ವ್ಯಾಪ್ತಿಗೆ ಎನ್​ಎಸ್​ಸಿ ಬರುತ್ತದೆ.

ಇದನ್ನೂ ಓದಿHigh Risk: ಸೇವಿಂಗ್ಸ್ ಸ್ಕೀಮ್​ಗೆ 10 ಲಕ್ಷಕ್ಕೂ ಹೆಚ್ಚು ಹಣ ಹೂಡಿಕೆ ಮಾಡುತ್ತೀರಾ? ಈ ಹೊಸ ನಿಯಮಗಳು ತಿಳಿದಿರಲಿ

ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್​ನಲ್ಲಿ ಎಷ್ಟು ಹೂಡಿಕೆಗೆ 5 ವರ್ಷದ ಬಳಿಕ ಎಷ್ಟು ಲಾಭ ಬರುತ್ತದೆ?

1 ಲಕ್ಷ ರೂ: ನೀವು ಎನ್​ಎಸ್​ಸಿಯಲ್ಲಿ 1 ಲಕ್ಷ ರೂ ಡೆಪಾಸಿಟ್ ಇಟ್ಟರೆ 5 ವರ್ಷದ ಬಳಿಕ 1.44 ಲಕ್ಷ ರೂ ಹಣ ನಿಮಗೆ ಸೇರುತ್ತದೆ. 5 ವರ್ಷದಲ್ಲಿ 44,903 ರೂನಷ್ಟು ಮೊತ್ತದ ಬಡ್ಡಿ ಜಮೆಯಾಗುತ್ತದೆ.

3 ಲಕ್ಷ ರೂ: ಐದು ವರ್ಷದಲ್ಲಿ 4.34 ಲಕ್ಷ ರೂ ರಿಟರ್ನ್ ಸಿಗುತ್ತದೆ. ಒಟ್ಟು ಬಡ್ಡಿ ಹಣ 1.34 ಲಕ್ಷದಷ್ಟು ನಿಮ್ಮದಾಗುತ್ತದೆ.

5 ಲಕ್ಷ ರೂ: ಐದು ಲಕ್ಷ ರೂ ಹಣವನ್ನು ಎನ್​ಎಸ್​ಸಿಯಲ್ಲಿ ಹೂಡಿಕೆ ಮಾಡಿದರೆ ಐದು ವರ್ಷದ ಬಳಿಕ ಬಡ್ಡಿಯೂ ಸೇರಿ 7.24 ಲಕ್ಷ ರೂ ಹಣ ಸೇರುತ್ತದೆ. ಒಟ್ಟು ಬಡ್ಡಿ 2.24 ಲಕ್ಷ ರೂ ಸಿಗುತ್ತದೆ.

ಇದನ್ನೂ ಓದಿStudents and Money: ವಿದ್ಯಾರ್ಥಿಗಳು ಹಣ ಉಳಿಸುವ ಟ್ರಿಕ್; ಭವಿಷ್ಯಕ್ಕೆ ಬುನಾದಿ ಇದು; ತಪ್ಪದೇ ಓದಿ

10 ಲಕ್ಷ ರೂ: ಐದು ವರ್ಷದಲ್ಲಿ ಬಡ್ಡಿ ಸೇರಿ 14.49 ಲಕ್ಷ ರೂ ರಿಟರ್ನ್ ಸಿಗುತ್ತದೆ.

50 ಲಕ್ಷ ರೂ: ಇಷ್ಟು ಮೊತ್ತದ ಹೂಡಿಕೆ ಮಾಡಿದರೆ ಐದು ವರ್ಷದಲ್ಲಿ 22.45 ಲಕ್ಷ ರೂ ಬಡ್ಡಿ ಸೇರಿ ಒಟ್ಟು 72.45 ಲಕ್ಷ ರೂ ನಿಮ್ಮ ಕೈಸೇರುತ್ತದೆ.

1 ಕೋಟಿ ರೂ: ನ್ಯಾಷನಲ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್​ನಲ್ಲಿ ನೀವು 1ಕೋಟಿ ರೂನಷ್ಟು ಹೂಡಿಕೆ ಮಾಡಿದರೆ 5 ವರ್ಷಕ್ಕೆ ನಿಮ್ಮ ಸಂಪತ್ತು 1.44ಕೋಟಿ ರೂ ಆಗುತ್ತದೆ.

(ಗಮನಿಸಿ: ಇಲ್ಲಿ ನೀವು 10 ಲಕ್ಷ ರೂಗಿಂತ ಹೆಚ್ಚು ಮೊತ್ತದ ಹೂಡಿಕೆ ಮಾಡುವುದಾದರೆ ಅ ಹಣಕ್ಕೆ ಮೂಲ ಯಾವುದು ಎಂದು ದಾಖಲೆ ನೀಡಬೇಕಾಗಬಹುದು.)

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ