High Risk: ಸೇವಿಂಗ್ಸ್ ಸ್ಕೀಮ್​ಗೆ 10 ಲಕ್ಷಕ್ಕೂ ಹೆಚ್ಚು ಹಣ ಹೂಡಿಕೆ ಮಾಡುತ್ತೀರಾ? ಈ ಹೊಸ ನಿಯಮಗಳು ತಿಳಿದಿರಲಿ

New Rules For High Investment: ಉಳಿತಾಯ ಯೋಜನೆಗಳಲ್ಲಿನ ಹೂಡಿಕೆಗಳನ್ನು ಕಡಿಮೆ ರಿಸ್ಕ್, ಮೀಡಿಯಂ ರಿಸ್ಕ್ ಮತ್ತು ಹೈರಿಸ್ಕ್ ಎಂದು ಮೂರು ಭಾಗವಾಗಿ ಮಾಡಲಾಗಿದೆ. ಹೈರಿಸ್ಕ್ ಎಂದು ಪರಿಗಣಿಸಲಾದ ಸ್ಕೀಮ್​ಗಳಲ್ಲಿ ಹೂಡಿಕೆದಾರರಿಂದ ಕೆವೈಸಿ ದಾಖಲೆಗಳು ಹಾಗೂ ಇನ್ಕಂ ಪ್ರೂಫ್ ದಾಖಲೆಗಳನ್ನು ಪಡೆಯಬೇಕೆಂದು ಸೂಚಿಸಲಾಗಿದೆ.

High Risk: ಸೇವಿಂಗ್ಸ್ ಸ್ಕೀಮ್​ಗೆ 10 ಲಕ್ಷಕ್ಕೂ ಹೆಚ್ಚು ಹಣ ಹೂಡಿಕೆ ಮಾಡುತ್ತೀರಾ? ಈ ಹೊಸ ನಿಯಮಗಳು ತಿಳಿದಿರಲಿ
ಸಾಂದರ್ಭಿಕ ಚಿತ್ರ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 28, 2023 | 2:15 PM

ಸಣ್ಣ ಉಳಿತಾಯ ಯೋಜನೆಗಳು (Small Savings Scheme) ಸಾಕಷ್ಟು ಜನಪ್ರಿಯವಾಗುತ್ತಿವೆ. ಅದರಲ್ಲೂ ಪೋಸ್ಟ್ ಆಫೀಸ್ ಸೇವಿಂಗ್ ಸ್ಕೀಮ್​ಗಳಿಗೆ ಜನಾಕರ್ಷಣೆ ಹೆಚ್ಚುತ್ತಿದೆ. ಹೆಚ್ಚೆಚ್ಚು ಜನರು ಪೋಸ್ಟ್ ಆಫೀಸ್ ಸ್ಕೀಮ್​ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆದರೆ, ಭಯೋತ್ಪಾದಕ ಚಟುವಟಿಕೆಗಳಿಗೆ ಹಣದ ಹರಿವಾಗಿ ಇಂಥ ಸ್ಕೀಮ್​ಗಳನ್ನು ದುರುಪಯೋಗಿಸಿಕೊಳ್ಳಲಾಗುತ್ತಿದೆ ಎನ್ನುವಂತಹ ಮಾಹಿತಿ ಇರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಸೇವಿಂಗ್ ಸ್ಕೀಮ್​ಗಳಲ್ಲಿನ ಹೂಡಿಕೆ ವಿಚಾರದಲ್ಲಿ ಕೆಲವೊಂದಿಷ್ಟು ನಿಯಮ ಬದಲಾವಣೆ ಮಾಡಿದೆ. ಅದರಲ್ಲಿ ನಿರ್ದಿಷ್ಟವಾಗಿ ಅಂಚೆ ಕಚೇರಿಯ ಉಳಿತಾಯ ಯೋಜನೆಗಳಿಗೆ ಈ ನಿಯಮ ಅನ್ವಯ ಆಗುತ್ತದೆ.

ಅಂಚೆ ಕಚೇರಿಯ ಉಳಿತಾಯ ಯೋಜನೆಗಳಲ್ಲಿನ ಹೂಡಿಕೆಗಳನ್ನು ಕಡಿಮೆ ರಿಸ್ಕ್, ಮೀಡಿಯಂ ರಿಸ್ಕ್ ಮತ್ತು ಹೈರಿಸ್ಕ್ ಎಂದು ಮೂರು ಭಾಗವಾಗಿ ಮಾಡಲಾಗಿದೆ. ಹೈರಿಸ್ಕ್ ಎಂದು ಪರಿಗಣಿಸಲಾದ ಸ್ಕೀಮ್​ಗಳಲ್ಲಿ ಹೂಡಿಕೆದಾರರಿಂದ ಕೆವೈಸಿ ದಾಖಲೆಗಳು ಹಾಗೂ ಇನ್ಕಂ ಪ್ರೂಫ್ ದಾಖಲೆಗಳನ್ನು ಪಡೆಯಬೇಕೆಂದು ಸೂಚಿಸಲಾಗಿದೆ.

ಹೂಡಿಕೆದಾರರನ್ನು ಹೈ ರಿಸ್ಕ್ ಎಂದು ಹೇಗೆ ಪರಿಗಣಿಸಲಾಗುತ್ತದೆ?

ಒಬ್ಬ ಹೂಡಿಕೆದಾರ 50,000 ರೂ ಮೀರದಂತೆ ಉಳಿತಾಯ ಸ್ಕೀಮ್​ನಲ್ಲಿ ಹೂಡಿಕೆ ಮಾಡಿದ್ದರೆ ಅವರನ್ನು ಕಡಿಮೆ ರಿಸ್ಕ್ ಕೆಟಗರಿಗೆ ಸೇರಿಸಲಾಗುತ್ತದೆ.

ಇದನ್ನೂ ಓದಿStudents and Money: ವಿದ್ಯಾರ್ಥಿಗಳು ಹಣ ಉಳಿಸುವ ಟ್ರಿಕ್; ಭವಿಷ್ಯಕ್ಕೆ ಬುನಾದಿ ಇದು; ತಪ್ಪದೇ ಓದಿ

ಹೂಡಿಕೆಯ ಮೊತ್ತ 50,000 ರೂ ಮೇಲ್ಪಟ್ಟಿದ್ದು, ಆದರೆ, 10 ಲಕ್ಷ ರೂ ಒಳಗೆ ಇದ್ದರೆ ಅಂಥ ಹೂಡಿಕೆದಾರರನ್ನು ಮಧ್ಯಮ ಅಪಾಯದ ಕೆಟಗರಿಗೆ ಸೇರಿಸಲಾಗುತ್ತದೆ.

ಇನ್ನು, ಹೂಡಿಕೆ ಮೊತ್ತ 10,000 ರೂ ಗಡಿದಾಟಿದರೆ ಅಂಥವರನ್ನು ಹೆಚ್ಚು ರಿಸ್ಕ್​ನ ಕೆಟಗರಿಯವರೆಂದು ಪರಿಗಣಿಸಲಾಗುತ್ತದೆ.

ಹೈ ರಿಸ್ಕ್ ಹೂಡಿಕೆದಾರರು ಯಾವ ದಾಖಲೆಗಳನ್ನು ಒದಗಿಸಬೇಕು?

ಸೇವಿಂಗ್ ಸ್ಕೀಮ್ ಬಳಸುವ ಯಾವುದೇ ಹೂಡಿಕೆದಾರರಾದರೂ ಸರಿ ಫೋಟೋ, ಐಡಿ ಪ್ರೂಫ್, ಪ್ಯಾನ್ ನಂಬರ್ ಪಡೆಯಬೇಕು ಎಂದು ಅಂಚೆ ಕಚೇರಿಗಳಿಗೆ ತಿಳಿಸಲಾಗಿದೆ.

ಇದನ್ನೂ ಓದಿIT Returns: ಬೇರೆ ಐಟಿ ರಿಟರ್ನ್ ಫಾರ್ಮ್ ಭರ್ತಿ ಮಾಡಿ ಸಲ್ಲಿಸಿಬಿಟ್ಟರೆ ಏನಾಗುತ್ತದೆ?

ಆದರೆ, 10 ಲಕ್ಷ ರೂ ಮೇಲ್ಪಟ್ಟ ಹೂಡಿಕೆ ಮಾಡಿದವರು ತಮ್ಮ ಹಣಕ್ಕೆ ಮೂಲ ಯಾವುದು ಎಂಬುದರ ದಾಖಲೆ ಒದಗಿಸಬೇಕು. ಅಂಥ ದಾಖಲೆಗಳು ಈ ಕೆಳಕಂಡಂತಿವೆ:

  • ಬ್ಯಾಂಕ್ ಅಕೌಂಟ್ ಸ್ಟೇಟ್ಮೆಂಟ್, ಅಥವಾ ಪೋಸ್ಟ್ ಆಫೀಸ್ ಅಕೌಂಟ್ ಸ್ಟೇಟ್ಮೆಂಟ್
  • ಕಳೆದ 3 ವರ್ಷದಲ್ಲಿ ಸಲ್ಲಿಸಲಾದ ಐಟಿ ರಿಟರ್ನ್ಸ್​ನ ಒಂದು ವರ್ಷದ ದಾಖಲೆ
  • ಸೇಲ್ ಡೀಡ್, ಗಿಫ್ಟ್ ಡೀಡ್, ವಿಲ್, ಅನುವಂಶಿಕ ಆಸ್ತಿ ಇತ್ಯಾದಿ ದಾಖಲೆಗಳು
  • ಆ ಹಣಕ್ಕೆ ಮೂಲ ಯಾವುದು ಎಂದು ತೋರಿಸುವ ಇತರ ಯಾವುದೇ ದಾಖಲೆ

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ