ತೋಟದ ಮನೆಯಲ್ಲಿ ಯುವ ವಕೀಲೆ ಜೊತೆಗೆ ಯುವಕನ ಶವ ಪತ್ತೆ, ಸಾವಿನ ಸುತ್ತ ಅನುಮಾನಗಳ ಹುತ್ತ
ಅನುಮಾಸ್ಪದವಾಗಿ ಸಾವನ್ನಪ್ಪಿರುವ ಎರಡು ಶವಗಳು ಪತ್ತೆಯಾಗಿವೆ. ಯುವ ವಕೀಲೆ ಜೊತೆಗೆ ಯುವಕನ ಮೃತದೇಹವೂ ಸಹ ಪತ್ತೆಯಾಗಿದೆ. ಇಬ್ಬರೂ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಎರಡೂ ಸಾವುಗಳ ಹಿಂದೆ ಹಲವು ಅನುಮಾನಗಳು ವ್ಯಕ್ತವಾಗಿವೆ. ಹಾಗಾದ್ರೆ, ಶವ ಪತ್ತೆಯಾದ ಆ ತೋಟದ ಮನೆ ಯಾವುದು? ಮೃತಪಟ್ಟು ಯುವ ವಕೀಲೆ ಹಾಗೂ ಯುವಕ ಯಾರು ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಏಪ್ರಿಲ್ 25): ನೆಲಮಂಗಲದ (Nelamangala) ಶ್ರೀನಿವಾಸಪುರದ ತೋಟದ ಮನೆಯಲ್ಲಿ ಇಬ್ಬರ ಶವಗಳು (dead Body) ಪತ್ತೆಯಾಗಿವೆ. ನೇಣು ಬಿಗಿದ ಸ್ಥಿತಿಯಲ್ಲಿ ವಕೀಲೆ ರಮ್ಯಾ(27) ಹಾಗೂ ಪುನೀತ್ ಎನ್ನುವ ಯುವಕನ ಮೃತದೇಹಗಳು ಪತ್ತೆಯಾಗಿದ್ದು, ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ನಿನ್ನೆ(ಏಪ್ರಿಲ್ 24) ಸಂಜೆ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಆದ್ರೆ, ಸಾವಿನ ಹಲವು ಅನುಮಾನಗಳಿಗೆ ಎಡೆಮಾಟಿಕೊಟ್ಟಿದೆ. ಈ ಬಗ್ಗೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಬೇರೆ ಬೇರೆ ಆಯಾಮಾಗಳಲ್ಲಿ ತನಿಖೆ ಕೈಗೊಂಡಿದ್ದಾರೆ.
27 ವರ್ಷದ ರಮ್ಯ ಮೃತದೇಹ ನೆಲಮಂಗಲದ ಶ್ರೀನಿವಾಸಪುರದ ತೋಟದ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇನ್ನು ವಕೀಲೆ ರಮ್ಯ ಮನೆಯಲ್ಲಿ ವಾಸವಿದ್ದ ಪುನೀತ್ ಎಂಬಾತನ ಮೃತದೇಹ ಕೆಂಪಲಿಂಗನಹಳ್ಳಿಯ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಾವಿಗೆ ಕಾರಣ ನಿಗೂಢವಾಗಿದೆ. ಮರಣೋತ್ತರ ಪರೀಕ್ಣೆಗೆ ಮೃತ ದೇಹ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ: ವಿಜಯಪುರ: ತಂದೆಯ ಪಿಸ್ತೂಲ್ನಿಂದ ಗುಂಡು ಹಾರಿಸಿಕೊಂಡು ಮಗ ಆತ್ಮಹತ್ಯೆ
ರಮ್ಯಾ ಸಾವಿನ ಸುತ್ತಲೂ ಅನುಮಾನಗಳು ಹುಟ್ಟಿಕೊಂಡಿದ್ದು, ಕುಟುಂಬಸ್ಥರು ಉದ್ಯಮಿ ದಿನೇಶ್ ಎಂಬಾತನ ಮೇಲೆ ಅನುಮಾನ ವ್ತಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಕುಟುಂಬಸ್ಥರ ದೂರಿನ ಮೇರೆಗೆ ಕೊಲೆ ಆರೋಪದ (103) ಅಡಿ ಎಫ್ ಐಆರ್ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
ಗಂಡನ ಮನೆಯಲ್ಲೇ ಪತ್ನಿ ನೇಣಿಗೆ ಶರಣು
ಕೋಲಾರ : ಮಾನಸಿಕ ಹಾಗೂ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆ ನೇಣಿಗೆ ಶರಣಾಗಿರುವಂತಹ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕು ಕಾಡದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಡೆತ್ನೋಟ್ ಬರೆದಿಟ್ಟು ಗಂಡನ ಮನೆಯಲ್ಲಿ ರಶ್ಮಿ (25) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿ ದಿನೇಶ್ ಗೌಡ, ಮಾವ ಅಪ್ಪಾಜಿ ಗೌಡ, ಅತ್ತೆ ಸರೋಜಮ್ಮ ಮತ್ತು ದೊಡ್ಡತ್ತೆ ರತ್ನಮ್ಮ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.