ಬೆಂಗಳೂರಿನಲ್ಲಿ ಕನ್ನಡಿಗನ ಮೇಲೆ ವಿಂಗ್ ಕಮಾಂಡರ್ ರೌಡಿ ವರ್ತನೆ: ಅಸಲಿಗೆ ಆಗಿದ್ದೇನು?
ಏರ್ಫೋರ್ಸ್ ಅಧಿಕಾರಿ, ವಿಂಗ್ ಕಮಾಂಡರ್ ಶಿಲಾದಿತ್ಯ ಹಾಗೂ ಟೆಕ್ಕಿ ವಿಕಾಸ್ ಕುಮಾರ್ (Vikas Kumar) ನಡುವಿನ ಗಲಾಟೆ ದೇಶಮಟ್ಟದಲ್ಲಿ ಸದ್ದು ಮಾಡಲಾರಂಭಿಸಿದೆ. ಅಲ್ಲದೇ ಈ ಪ್ರಕರಣ ಸಂಬಂಧ ಸಾಮಾಜಿಕ ಜತಾಣಗಳಲ್ಲಿ ಭಾರೀ ಚರ್ಚೆಯಾಗುತ್ತಿದ್ದು, ನಿನ್ನೆ ಅಂದರೆ ಏಪ್ರಿಲ್ 21ರ ಬೆಳಗ್ಗೆ ಬೆಂಗಳೂರಿನ ಬೈಯಪ್ಪನಹಳ್ಳಿ ರೋಡ್ ರೇಜ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವಿಂಗ್ ಕಮಾಂಡರ್ ವಿಡಿಯೋದಲ್ಲಿ ಯುವಕನೇ ಹಲ್ಲೆ ಮಾಡಿದ್ದಾಗಿ ಆರೋಪಿಸಿದ್ದ. ಆದ್ರೆ ವಿಂಗ್ ಕಮಾಂಡರ್ ಯುವಕನ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಬಟಾಬಯಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧದ ಚರ್ಚೆಗಳು ನಡೆಯುತ್ತಿವೆ. ಅಷ್ಟಕ್ಕೂ ಇದರಲ್ಲಿ ಯಾರದ್ದು ತಪ್ಪು? ಯಾರು ಏನಂದ್ರು ಎನ್ನುವ ವಿವರ ಇಲ್ಲಿದೆ.

ಬೆಂಗಳೂರು, (ಏಪ್ರಿಲ್ 22): ವಿಂಗ್ ಕಮಾಂಡರ್ (Wing Commander) ಶಿಲಾದಿತ್ಯ ಬೋಸ್ ಹಾಗೂ ಟೆಕ್ಕಿ ವಿಕಾಸ್ ನಡುವೆ ಬೆಂಗಳೂರಿನಲ್ಲಿ (Bengaluru ನಡೆದ ಗಲಾಟೆ ಪಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ವಿಂಗ್ ಕಮಾಂಡರ್ ಶಿಲಾದಿತ್ಯನೇ (Wing Commander Shiladitya Bose) ಕನ್ನಡಿಗ ವಿಕಾಸ್ಗೆ (Kannadiga Vikas) ಮನಬಂದಂತೆ ಥಳಿಸಿ ಬಳಿಕ ತಮ್ಮ ಮೇಲೆ ಹಲ್ಲೆಯಾಗಿದೆ ಎಂದು ವಿಡಿಯೋ ಮಾಡಿ ಹರಿಬಿಟ್ಟಿದ್ದಾನೆ. ಆದ್ರೆ, ಇದೀಗ ಸಿಸಿಟಿವಿಯಲ್ಲಿ ಶಿಲಾದಿತ್ಯ ಬೋಸ್ ನವರಂಗಿ ಆಟ ಬಟಾಬಯಲಾಗಿದ್ದು, ವಿಂಗ್ ಕಮಾಂಡರ್ ಶಿಲಾದಿತ್ಯನೇ ವಿಕಾಸ್ಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಹೊಡೆತಕ್ಕೆ ವಿಕಾಸ್ ನೆಲಕ್ಕೆ ಬಿದ್ದು ಅಸ್ವಸ್ಥನಾಗಿದ್ದರೂ ವಿಂಗ್ ಕಮಾಂಡ್ ಬಿಟ್ಟಿಲ್ಲ. ಆ ವೇಳೆ ಸ್ಥಳೀಯರು ಬಿಡಿಸಲು ಬಂದರೂ ಆವಾಜ್ ಹಾಕಿದ್ದಾನೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ (Social Media) ಭಾರೀ ಚರ್ಚೆಯಾಗುತ್ತಿದೆ. ಕೆಲವರು ವಿಂಗ್ ಕಮಾಂಡ್ ಪರ ಬ್ಯಾಟಿಂಗ್ ಮಾಡುತ್ತಿದ್ದರೆ, ಹಲವರು ಹಲ್ಲೆಗೊಳಗಾದ ವಿಕಾಸ್ ಬೆನ್ನಿಗೆ ನಿಂತಿದ್ದಾರೆ.
ಅಸಲಿಗೆ ಆಗಿದ್ದೇನು?
ಬೈಕ್ ಸವಾರನ ಮೇಲೆ ವಿಂಗ್ ಕಮಾಂಡರ್ ಹೇಗೆ ಏಕಾಏಕಿ ಹಲ್ಲೆ ಮಾಡಿದ್ದಾನೆ. ನಡುರೋಡಲ್ಲಿ ಬೈಕ್ ಸವಾರನಿಗೆ ಫುಟ್ಬಾಲ್ ಒದ್ದ ಹಾಗೆ ಒದ್ದಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರಿಗೆ ಬೈಕ್ ಟಚ್ ಆಯ್ತು ಎನ್ನುವ ಕಾರಣಕ್ಕೆ ಸವಾರ ವಿಕಾಸ್ ಜೊತೆ ಕಿರಿಕ್ ತಗೆದ ವಿಂಗ್ ಕಮಾಂಡರ್, ಬೈಕ್ ಸೈಡ್ ಹಾಕಲೂ ಬಿಡದೇ ತಳ್ಳಾಡಿದ್ದಾನೆ. ಅಲ್ಲದೇ ವಿಕಾಸ್ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಜೊತೆಗೆ, ಕನ್ನಡಿಗನೇ ನನ್ನ ಮೇಲೆ ಅಟ್ಯಾಕ್ ಮಾಡಿದ್ದಾನೆಂದು ನೌಟಂಕಿ ನಾಟಕವಾಡಿದ್ದಾನೆ. ಗಲಾಟೆ ವೇಳೆ ವಿಕಾಸ್ನ ಬೈಕ್ ಕೀ ವಿಂಗ್ ಕಮಾಂಡ್ಗೆ ತಾಗಿ ರಕ್ತ ಬಂದಿದೆ. ಅದನ್ನೇ ಅಸ್ತ್ರ ಮಾಡಿಕೊಂಡ ವಿಂಗ್ ಕಮಾಂಡ್, ರಕ್ತ ಬರುವಂತೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾನೆ. ಅಲ್ಲದೇ ವಿಕಾಸ್ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾನೆ. ಜೊತೆಗೆ, ಕನ್ನಡಿಗನೇ ನನ್ನ ಮೇಲೆ ಅಟ್ಯಾಕ್ ಮಾಡಿದ್ದಾನೆಂದು ನೌಟಂಕಿ ನಾಟಕವಾಡಿದ್ದಾನೆ.
ಇದನ್ನೂ ಓದಿ: ತಾನೇ ಯುವಕನಿಗೆ ಹಿಗ್ಗಾಮುಗ್ಗಾ ಥಳಿಸಿ ದೂರು ನೀಡಿದ ವಿಂಗ್ ಕಮಾಂಡರ್: ವಿಡಿಯೋ ಸಾಕ್ಷಿ ಇಲ್ಲಿದೆ
ವಿಂಗ್ ಕಮಾಂಡರ್ನ ಕಳ್ಳಾಟ ಬಯಲು
ಯುವಕನ ಮೇಲೆ ಮನಬಂದಂತೆ ಹಲ್ಲೆ ಮಾಡಿ ಬಳಿಕ ಗಂಟಾಘೋಷವಾಗಿ ಸುಳ್ಳಿನ ಮೇಲೆ ಸುಳ್ಳು ಹೇಳಿದ ವಿಂಗ್ ಕಮಾಂಡರ್ ಶಿಲಾದಿತ್ಯ, ಕನ್ನಡಿಗನ ಮೇಲೆ ಹಲ್ಲೆ ಮಾಡಿದ್ದಲ್ಲದೇ ಕರ್ನಾಟಕದ ಬಗ್ಗೆಯೂ ಸುಳ್ಳು ಪುಂಗಿದ್ದ. ಆದ್ರೆ, CCTV ದೃಶ್ಯ ರಿಲೀಸ್ ಆಗುತ್ತಿದ್ದಂತೆ ವಿಂಗ್ ಕಮಾಂಡ್ ಶಿಲಾದಿತ್ಯನ ನೌಟಂಕಿ ನಾಟಕ ಬಯಲಾಗಿದೆ. ಮತ್ತೊಂದೆಡೆ ಪತ್ನಿ ಬೇಡ ಬೇಡ ಎಂದು ಹೇಳ್ತಿದ್ರೂ ವಿಂಗ್ ಕಮಾಂಡರ್ ಶಿಲಾದಿತ್ಯ ಯುವಕನ ಮೇಲೆ ದರ್ಪ ಮೆರೆದಿದ್ದಾನೆ ಎನ್ನುವುದು ಸಿಸಿಟಿವಿ ದೃಶ್ಯಗಳು ಸಾರಿ ಸಾರಿ ಹೇಳುತ್ತಿವೆ.
ಯುವಕ ರಿಲೀಸ್, ವಿಂಗ್ ಕಮಾಂಡರ್ ವಿರುದ್ಧ ಕೇಸ್ ಬುಕ್
ಏರ್ಫೋರ್ಸ್ ಅಧಿಕಾರಿ, ವಿಂಗ್ ಕಮಾಂಡರ್ ಶಿಲಾದಿತ್ಯ ಹಾಗೂ ಟೆಕ್ಕಿ ವಿಕಾಸ್ ಕುಮಾರ್ (Vikas Kumar) ನಡುವಣ ಬೆಂಗಳೂರಿನ ರಸ್ತೆ ಜಗಳ ಇದೀಗ ದೇಶಮಟ್ಟದಲ್ಲಿ ಸದ್ದು ಮಾಡಲಾರಂಭಿಸಿದೆ. ಒಂದು ಕಡೆ, ಭಾಷೆಯ ವಿಚಾರಕ್ಕೆ ತಮ್ಮ ಮೇಲೆ ಹಲ್ಲೆ ನಡೆದಿದೆ ಎಂದು ಶಿಲಾದಿತ್ಯ ಹೇಳಿಕೊಂಡಿದ್ದರೆ, ಮತ್ತೊಂದೆಡೆ ಅವರ ವಿರುದ್ಧವೇ ಕೊಲೆ ಯತ್ನ ಪ್ರಕರಣವೂ ದಾಖಲಾಗಿದೆ. ಇನ್ನು ಈ ಪ್ರಕರಣದಲ್ಲಿ ಯುವಕ ವಿಕಾಸ್ ಕುಮಾರ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದರು. ಬಳಿಕ ಸಿಸಿಟಿವಿಯಲ್ಲಿ ವಿಂಗ್ ಕಮಾಂಡರ್ನ ಕ್ರೌರ್ಯ ಗೊತ್ತಾಗುತ್ತಿದ್ದಂತೆಯೇ ಶಿಲಾದಿತ್ಯ ವಿರುದ್ಧವೇ ಕೊಲೆ ಯತ್ನ ಪ್ರಕರಣ ದಾಖಸಿಕೊಂಡಿದ್ದಾರೆ. ಸದ್ಯ ಯುವಕ ವಿಕಾಸ್ನನ್ನು ಪೊಲೀಸರು ಸ್ಟೇಷನ್ ಬೇಲ್ ಮೇಲಿ ಬಿಟ್ಟು ಕಳುಹಿಸಿದ್ದಾರೆ.
ವಿಂಗ್ ಕಮಾಂಡರ್ ವಿರುದ್ಧ ಭುಗಿಲೆದ್ದ ಆಕ್ರೋಶ
ಭೀಕರ ಹಲ್ಲೆಗೊಳಗಾಗಿರೋ ಯುವಕ ವಿಕಾಸ್ ಬೆನ್ನಿಗೆ ಕನ್ನಡಿಗರು ನಿಂತಿದ್ದು, ಹಲ್ಲೆಗೈದ ವಿಂಗ್ ಕಮಾಂಡರ್ ವಿರುದ್ಧ ಸಿಡಿದೆದ್ದಿದ್ದಾರೆ. ರಾಕ್ಷಸನಂತೆ ಹಲ್ಲೆಗೈದ ರೌಡಿ ವಿಂಗ್ ಕಮಾಂಡರ್ ಶಿಲಾಧಿತ್ಯ ಬಂಧನಕ್ಕೆ ಆಗ್ರಹಿಸುತ್ತಿದ್ದಾರೆ. ಅರೆಸ್ಟ್ ವಿಂಗ್ ಕಮಾಂಡರ್ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಶುರುವಾಗಿದೆ. ಹೀಗಾಗಿ ಟ್ವಿಟರ್ನಲ್ಲಿ ‘ಅರೆಸ್ಟ್ ಶಿಲಾಧಿತ್ಯ’ ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ನಲ್ಲಿದೆ.
ಮಾಹಿತಿ ಪಡೆದ ಏರ್‌ಪೋರ್ಸ್ ಅಧಿಕಾರಿಗಳು
ನಡುರೋಡಲ್ಲಿ ಬೈಕ್ ಸವಾರನಿಗೆ ಫುಟ್ಬಾಲ್ ಒದ್ದ ಹಾಗೆ ಒದ್ದಿರುವ ರೋಡ್ ರೇಜ್ ಪ್ರಕರಣದಲ್ಲಿ ವಿಂಗ್ ಕಮಾಂಡರ್ ಶಿಲಾಧಿತ್ಯ ಬೋಸ್ ಅವರಿಗೆ ಸಂಕಷ್ಟ ಎದುರಾಗಿದೆ. ಘಟನೆ ಸಂಬಂಧ ಶಿಲಾಧಿತ್ಯ ವಿರುದ್ಧ ಎಫ್ಐಆರ್ ದಾಖಲಾಗಿದ್ದು,ರೋಡ್ ರೇಜ್ ಪ್ರಕರಣದಲ್ಲಿ ವಿಂಗ್ ಕಮಾಂಡರ್ ಶಿಲಾಧಿತ್ಯ ಬೋಸ್ ಆರೋಪಿಯಾಗಿದ್ದಾರೆ. ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಏರ್‌ಪೋರ್ಸ್ ಅಧಿಕಾರಿಗಳು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಗೆ ಭೇಟಿ ನೀಡಿ ವಿಂಗ್ ಕಮಾಂಡರ್ ಶಿಲಾದಿತ್ಯಾ ಬೋಸ್ ವಿರುದ್ಧದ ಘಟನೆ ಸಂಬಂಧ ಮಾಹಿತಿ ಪಡೆದಿದ್ದಾರೆ. ಬೈಯಪ್ಪನಹಳ್ಳಿ ಠಾಣೆಯ ಪೊಲೀಸರು FIR ದಾಖಲಿಸಿ ಅಸಲಿಗೆ ತಪ್ಪು ಯಾರದ್ದು ಅನ್ನೋ ತನಿಖೆ ನಡೆಸುತ್ತಿದ್ದಾರೆ.