IT Returns: ಬೇರೆ ಐಟಿ ರಿಟರ್ನ್ ಫಾರ್ಮ್ ಭರ್ತಿ ಮಾಡಿ ಸಲ್ಲಿಸಿಬಿಟ್ಟರೆ ಏನಾಗುತ್ತದೆ?

Consequences For Choosing Wrong ITR Form: ತಪ್ಪಾದ ಐಟಿ ರಿಟರ್ನ್ ಫಾರ್ಮ್ ತುಂಬಿಸಿ ಸಲ್ಲಿಸುವ ಸಾಧ್ಯತೆ ಇರುತ್ತದೆ. ಹಾಗೊಂದು ವೇಳೆ ಬೇರೆ ಐಟಿಆರ್ ಫಾರ್ಮ್ ಸಲ್ಲಿಸಿಬಿಟ್ಟರೆ ಏನಾಗುತ್ತದೆ? ಈ ಪರಿಣಾಮಗಳು, ಸಾಧ್ಯಾಸಾಧ್ಯತೆಗಳನ್ನು ತಿಳಿಯುವುದು ಉತ್ತಮ.

IT Returns: ಬೇರೆ ಐಟಿ ರಿಟರ್ನ್ ಫಾರ್ಮ್ ಭರ್ತಿ ಮಾಡಿ ಸಲ್ಲಿಸಿಬಿಟ್ಟರೆ ಏನಾಗುತ್ತದೆ?
ಐಟಿ ಇಲಾಖೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 28, 2023 | 11:26 AM

ಐಟಿ ರಿಟರ್ನ್ ಸಲ್ಲಿಸುವ ಸಮಯ ಇದು. ಇನ್ನೆರಡು ತಿಂಗಳಲ್ಲಿ ಐಟಿಆರ್ ಅರ್ಜಿಗಳನ್ನು (ITR Forms) ಭರ್ತಿ ಮಾಡಿ ಸಲ್ಲಿಸಬೇಕು. ಜುಲೈ 30ರವರೆಗೂ ಕಾಲಾವಕಾಶ ಇರುವ ಸಾಧ್ಯತೆ ಇದೆ. ಐಟಿ ರಿಟರ್ನ್ ಸಲ್ಲಿಕೆಯನ್ನು ತುಸು ಸರಳಗೊಳಿಸಲಾಗಿದೆ. ಆಡಿಟರ್ ಅಥವಾ ತಜ್ಞ ಅಕೌಂಟೆಂಟ್ ಸಹಾಯವಿಲ್ಲದೇ ಸಾಮಾನ್ಯ ಉದ್ಯೋಗಿಗಳೂ ಈಗ ಸುಗಮವಾಗಿ ತೆರಿಗೆ ರಿಟರ್ನ್ ಫೈಲ್ ಮಾಡಬಹುದು. ಆದರೆ, 4 ಐಟಿಆರ್ ಫಾರ್ಮ್​ಗಳಿರುವುದು ಕೆಲವರಿಗೆ ಗೊಂದಲ ತರಬಹುದು. ವಿವಿಧ ಮೂಲಗಳಿಂದ ಆದಾಯ ಹೊಂದಿರುವ ವರ್ಗದ ಜನರಿಗೆ ಯಾವ ಐಟಿಆರ್ ಅರ್ಜಿ ಭರ್ತಿ ಮಾಡಬೇಕು ಎಂಬುದನ್ನು ನಿರ್ಧರಿಸಲು ಕಷ್ಟವಾಗಬಹುದು. ಈ ವೇಳೆ ತಪ್ಪಾದ ಐಟಿ ರಿಟರ್ನ್ ಫಾರ್ಮ್ ತುಂಬಿಸಿ ಕಳುಹಿಸುವ ಸಾಧ್ಯತೆ ಇರುತ್ತದೆ. ಹಾಗೊಂದು ವೇಳೆ ಬೇರೆ ಐಟಿಆರ್ ಫಾರ್ಮ್ ಸಲ್ಲಿಸಿಬಿಟ್ಟರೆ ಏನಾಗುತ್ತದೆ? ಈ ಪರಿಣಾಮಗಳು, ಸಾಧ್ಯಾಸಾಧ್ಯತೆಗಳನ್ನು ತಿಳಿಯುವುದು ಉತ್ತಮ.

ತಪ್ಪಾದ ಐಟಿ ರಿಟರ್ನ್ ಫಾರ್ಮ್ ಸಲ್ಲಿಸಿದರೆ ತುಸು ಗಂಭೀರ ಎನಿಸುವ ಪರಿಣಾಮಗಳು ಎದುರಾಗಬಹುದು. ಆದಾಯ ತೆರಿಗೆ ಇಲಾಖೆಯು ನಿಮ್ಮ ಅರ್ಜಿಯನ್ನು ತಿರಸ್ಕರಿಸಿ, ಸರಿಯಾದ ಫಾರ್ಮ್​ನಲ್ಲಿ ಮತ್ತೊಮ್ಮೆ ಸಲ್ಲಿಸುವಂತೆ ತಿಳಿಸಬಹುದು. ಕೆಲವೊಮ್ಮೆ ಕಾನೂನು ಪ್ರಕಾರ ಕ್ರಮ ಜಾರಿಯಾಗಬಹುದು, ದಂಡ ಹೇರಬಹುದು.

ಐಟಿ ಅಧಿಕಾರಿಗಳಿಂದ ಪರಿಶೀಲನೆ, ನಿಮ್ಮೆಲ್ಲಾ ಆದಾಯ ಜಾಲಾಡುವ ಸಾಧ್ಯತೆ

ನೀವು ತಪ್ಪು ಐಟಿಆರ್ ಫಾರ್ಮ್ ಸಲ್ಲಿಸಿದರೆ, ಕೆಲವೊಂದು ಸಂದರ್ಭದಲ್ಲಿ ತೆರಿಗೆ ಅಧಿಕಾರಿಗಳು ಫಾರ್ಮ್ ರಿಜೆಕ್ಟ್ ಮಾಡುವ ಬದಲು ನಿಮ್ಮ ಎಲ್ಲಾ ಹಣಕಾಸು ದಾಖಲೆ, ವಹಿವಾಟು ಇತ್ಯಾದಿಯನ್ನು ಪರಿಶೀಲಿಸಬಹುದು. ಅಗತ್ಯಬಿದ್ದರೆ ತನಿಖೆ, ಆಡಿಟ್ ಇತ್ಯಾದಿ ಕಾರ್ಯ ಕೈಗೊಳ್ಳಬಹುದು. ಆಗ ನೀವು ತೆರಿಗೆ ತಪ್ಪಿಸಲು ಏನಾದರೂ ಮಾಡಿದ್ದರೆ ಅವೆಲ್ಲವೂ ಬೆಳಕಿಗೆ ಬಂದುಬಿಡುತ್ತದೆ.

ಇದನ್ನೂ ಓದಿITR Forms: ಐಟಿ ರಿಟರ್ನ್ ಸಲ್ಲಿಕೆಗೆ 4 ಫಾರ್ಮ್​ಗಳ ಆಯ್ಕೆ; ಯಾರಿಗೆ ಇವೆ ಈ ಐಟಿಆರ್ ಫಾರ್ಮ್​ಗಳು, ಇಲ್ಲಿದೆ ಡೀಟೇಲ್ಸ್

ತಪ್ಪು ಐಟಿಆರ್ ಫಾರ್ಮ್ ಸಲ್ಲಿಸಿದರೆ ತೆರಿಗೆ ಲಾಭ ತಪ್ಪಬಹುದು

ನಿಮ್ಮ ಆದಾಯಕ್ಕೆ ಹೊಂದಿಕೆಯಾಗುವ ಅರ್ಜಿಯ ಬದಲು ಬೇರೆ ಐಟಿಆರ್ ಫಾರ್ಮ್ ಅನ್ನು ಸಲ್ಲಿಸಿದರೆ ತೆರಿಗೆ ಲಾಭ, ವಿನಾಯಿತಿ ಡಿಡಕ್ಷನ್ ಇತ್ಯಾದಿ ಸೌಲಭ್ಯಗಳು ತಪ್ಪಬಹುದು. ನಿಮ್ಮ ಫಾರ್ಮ್ ತಿರಸ್ಕೃತಗೊಂಡು ನೀವು ಮರಳಿ ಅದನ್ನು ಸಲ್ಲಿಸಬಹುದು. ಅಥವಾ ತೆರಿಗೆ ಅಧಿಕಾರಿಗಳು ನಿಮ್ಮಿಂದ ಹೆಚ್ಚುವರಿ ಮಾಹಿತಿ ಇತ್ಯಾದಿಯನ್ನು ಕೋರಬಹುದು. ಇದರಿಂದ ಸುಮ್ಮನೆ ವಿಳಂಬವಾಗುತ್ತದೆ.

ನೀವು ತೆರಿಗೆ ತಪ್ಪಿಸಲೆಂದು ಉದ್ದೇಶಪೂರ್ವಕವಾಗಿ ತಪ್ಪು ಫಾರ್ಮ್ ಅನ್ನು ಆಯ್ಕೆ ಮಾಡಿಕೊಂಡಿದ್ದೀರೆಂದು ಐಟಿ ಇಲಾಖೆಗೆ ಅನಿಸಿದಲ್ಲಿ ದಂಡ ವಿಧಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ಸಮುದ್ರಕ್ಕೆ ಹಾರಿದ ಯುವತಿ, ರೋಚಕ ರಕ್ಷಣಾ ಕಾರ್ಯಾಚರಣೆ ಹೀಗಿತ್ತು ನೋಡಿ
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ನಾಥನ್ ಲಿಯಾನ್ ಹೆಣೆದ ಬಲೆಗೆ ಬಿದ್ದ ರಿಷಭ್ ಪಂತ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಆಸ್ಟ್ರೇಲಿಯಾ ಪಾಲಿಗೆ ದುಬಾರಿಯಾದ ಖ್ವಾಜಾ ಕೈಬಿಟ್ಟ ಕ್ಯಾಚ್
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಮಹಾರಾಷ್ಟ್ರ: ಸ್ವತಂತ್ರ ಅಭ್ಯರ್ಥಿಯ ವಿಜಯೋತ್ಸವದ ವೇಳೆ ಅಗ್ನಿ ಅವಘಡ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ
ಸಂಭಾಲ್ ಜಾಮಾ ಮಸೀದಿ ಸಮೀಕ್ಷೆ ವೇಳೆ ಕಲ್ಲು ತೂರಾಟ