AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tour Package: ಐಆರ್​ಸಿಟಿಸಿಯಿಂದ ಕಡಿಮೆ ಬೆಲೆಗೆ ಊಟಿ ಮುದುಮಲೈ ಪ್ರವಾಸ ಪ್ಯಾಕೇಜ್; ಲಾಡ್ಜ್, ಕಾರ್ ಉಚಿತ; ನೋಡಿ ಡೀಟೇಲ್ಸ್

IRCTC Ooty-Conoor-Mudumalai Tour Package: ತಮಿಳುನಾಡಿನ ಖ್ಯಾತ ಪ್ರವಾಸ ಸ್ಥಳ ಊಟಿಗೆ ಇಬ್ಬರು ಒಟ್ಟಿಗೆ ಪ್ರವಾಸ ಹೋಗುವುದಾದರೆ ಒಬ್ಬರಿಗೆ 11,000 ರೂಗಿಂತ ಕಡಿಮೆ ಬೆಲೆಗೆ ಪ್ರವಾಸ ಪ್ಯಾಕೇಜ್ ಐಆರ್​ಸಿಟಿಸಿಯಲ್ಲಿ ಲಭ್ಯ ಇದೆ. ಐದು ದಿನಗಳ ಈ ಪ್ರವಾಸದ ವಿವರ ಇಲ್ಲಿದೆ....

Tour Package: ಐಆರ್​ಸಿಟಿಸಿಯಿಂದ ಕಡಿಮೆ ಬೆಲೆಗೆ ಊಟಿ ಮುದುಮಲೈ ಪ್ರವಾಸ ಪ್ಯಾಕೇಜ್; ಲಾಡ್ಜ್, ಕಾರ್ ಉಚಿತ; ನೋಡಿ ಡೀಟೇಲ್ಸ್
ಊಟಿImage Credit source: Wikipedia
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 29, 2023 | 4:57 PM

ಊಟಿ ಸುತ್ತಮುತ್ತಲ ಹಸಿರು ಪ್ರದೇಶಗಳು ಪ್ರವಾಸಿಗರಿಗೆ ಯಾವತ್ತೂ ಫೇವರಿಟ್​ಗಳೇ. ಆದರೆ, ಊಟಿ ಟೂರ್ ಪ್ಯಾಕೇಜ್ (Ooty Tour) ದರ ತುಸು ಹೆಚ್ಚಿರುವುದರಿಂದ ಬಹಳ ಮಂದಿ ಹಿಂದೇಟು ಹಾಕುವುದಿದೆ. ಆದರೆ, ರೈಲ್ವೆ ಇಲಾಖೆಗೆ ಸೇರಿದ ಐಆರ್​ಸಿಟಿಸಿ ಇದೀಗ ಕಡಿಮೆ ಬೆಲೆಗೆ ಊಟಿ ಪ್ರವಾಸ ಪ್ಯಾಕೇಜ್ ಆರಂಭಿಸಿದೆ. ಊಟಿ ಸುತ್ತಮುತ್ತಲ ಪ್ರವಾಸ ಸ್ಥಳಗಳನ್ನು ನೋಡಬಹುದು. ಐದು ರಾತ್ರಿ ಆರು ಹಗಲುಗಳ ಈ ಪ್ರವಾಸದ ಪ್ಯಾಕೇಜ್ ಜೂನ್ 1ರಿಂದ ಆರಂಭವಾಗುತ್ತದೆ. ಪ್ರತೀ ಗುರುವಾರ ಪ್ರವಾಸಿಗರಿಗೆ ಈ ಪ್ಯಾಕೇಜ್ ಲಭ್ಯ ಇರಲಿದೆ.

ಈ ಊಟಿ ಮುದುಮಲೈ ಪ್ಯಾಕೇಜ್ ದರ ಎಷ್ಟು?

5-6 ದಿನಗಳ ಈ ಟೂರ್ ಪ್ಯಾಕೇಜ್​ನಲ್ಲಿ ಊಟಿ, ಮುದುಮಲೈ ಮತ್ತು ಕೂನ್ನೂರು ಸ್ಥಳಗಳನ್ನು ಒಳಗೊಳ್ಳಲಾಗಿದೆ. ಒಬ್ಬರೇ ವ್ಯಕ್ತಿಯಾದರೆ 20,750 ರೂ ಆಗುತ್ತದೆ. ಇಬ್ಬರು ವ್ಯಕ್ತಿಗಳು ಒಂದೇ ರೂಮು ಹಂಚಿಕೊಳ್ಳುವುದಾದರೆ ಒಬ್ಬರಿಗೆ 10,860 ರೂ ಆಗುತ್ತದೆ. ಮೂವರು ವ್ಯಕ್ತಿಗಳಾದರೆ ಒಬ್ಬರಿಗೆ 8,300 ರೂ ದರ ಇದೆ. ಸಣ್ಣ ಮಗು ಇದ್ದರೆ 3,700 ರೂ ಹೆಚ್ಚುವರಿ ದರ ಇದೆ. ಈ ಪ್ಯಾಕೇಜ್​ನಲ್ಲಿ ಟಾಟಾ ಇಂಡಿಕಾ ಕಾರಿನ ಬಳಕೆ ಸೌಲಭ್ಯ ಇರುತ್ತದೆ. ಇನ್ನೋವಾ ಕಾರು ಬೇಕೆಂದರೆ ಬೇರೆ ದರ ಇದೆ.

ಇದನ್ನೂ ಓದಿ: Bengaluru Egg Story: ಬಿಸಿಲಿಗೆ ಕೋಳಿಗಳ ವರ್ತನೆ, ಉತ್ಪಾದನೆ ಬದಲಾಗುತ್ತಾ? ಒಂದು ಮೊಟ್ಟೆ ದುಬಾರಿಯಾದ ಕಥೆ ಕೇಳಿ

ಐಆರ್​ಸಿಟಿಸಿ ಊಟಿ ಪ್ರವಾಸ ವಿವರ:

ದಿನ 1: ಪ್ಯಾಕೇಜ್ ಪಡೆದವರು ತಾವೇ ಸ್ವಂತವಾಗಿ ಚೆನ್ನೈ ಸೆಂಟ್ರಲ್ ರೈಲ್ವೆ ಸ್ಟೇಷನ್​ಗೆ ಬರಬೇಕು. ಜೂನ್ 1, ಗುರುವಾರ ರಾತ್ರಿ 9:05ಕ್ಕೆ ನೀಲಗಿರಿ ಎಕ್ಸ್​ಪ್ರೆಸ್ ರೈಲಿನಲ್ಲಿ ಪ್ರಯಾಣ ಆರಂಭ.

ದಿನ 2: ಬೆಳಗ್ಗೆ 6:15ಕ್ಕೆ ಮೇಟ್ಟುಪಾಳ್ಯಂಗೆ ರೈಲು ಆಗಮನ. ಅಲ್ಲಿಂದ ರಸ್ತೆ ಮೂಲಕ ಊಟಿಗೆ ಪ್ರಯಾಣ. ಅಲ್ಲಿ ಹೋಟೆಲ್ ವ್ಯವಸ್ಥೆ. ಬಳಿಕ ದೊಡ್ಡಬೆಟ್ಟ ಮತ್ತು ಟೀ ಮ್ಯೂಸಿಯಂಗೆ ಭೇಟಿ, ಬಳಿಕ ಊಟಿ ಪಟ್ಟಣಕ್ಕೆ ಪ್ರಯಾಣ. ಅಲ್ಲಿಂದ ಊಟಿ ಕೆರೆ, ಸಸ್ಯಧಾಮ ವೀಕ್ಷಣೆ. ಅಂದು ರಾತ್ರಿ ಊಟಿಯಲ್ಲಿ ಇಳಿಯಲು ವ್ಯವಸ್ಥೆ.

ದಿನ 3: ಬೆಳಗ್ಗೆ ಸಿನಿಮಾ ಶೂಟಿಂಗ್ ಸ್ಥಳಗಳಿಗೆ ಭೇಟಿ. ಪೈಕಾರ ಫಾಲ್ಸ್, ಕೆರೆ ಇತ್ಯಾದಿ ವೀಕ್ಷಣೆ. ಬಳಿಕ ಮುದುಮಲೈ ವನ್ಯಧಾನಕ್ಕೆ ಭೇಟಿ. ಆನೆ ಶಿಬಿರ, ಜಂಗಲ್ ರೈಡ್ ಇತ್ಯಾದಿ ಸೇವೆ. ಬಳಿಕ ರಾತ್ರಿ ಊಟಿಗೆ ಮರಳಿ ಹೋಟೆಲ್​ನಲ್ಲಿ ಉಳಿಯುವುದು.

ದಿನ 4: ಪ್ರವಾಸಿಗರೇ ಇಚ್ಛೆ ಬಂದಂತೆ ಸುತ್ತಾಡುವ ಅವಕಾಶ. ಊಟಿಯ ಹೋಟೆಲ್ ತೆರವು ಮಾಡಿ ಕೂನ್ನೂರಿಗೆ ಹೋಗಿ ಅಲ್ಲಿ ಸಿಮ್ಸ್ ಪಾರ್ಕ್, ಲ್ಯಾಂಬ್ಸ್ ರಾಕ್, ಡಾಲ್ಫಿನ್ಸ್ ನೋಸ್ ಇತ್ಯಾದಿ ಸ್ಥಳಗಳಿಗೆ ಭೇಟಿ. ರಸ್ತೆ ಮೂಲಕ ಮೇಟ್ಟುಪಾಳ್ಯಂಗೆ ತೆರಳುವುದು. ಅಲ್ಲಿಂದ ನೀಲಗಿರಿ ಎಕ್ಸ್​ಪ್ರೆಸ್ ರೈಲಿನ ಮೂಲಕ ರಾತ್ರಿ 9:20ಕ್ಕೆ ಚೆನ್ನೈಗೆ ಹೊರಡುವುದು.

ದಿನ 5: ಚೆನ್ನೈ ರೈಲ್ವೆ ನಿಲ್ದಾಣಕ್ಕೆ ಬೆಳಗ್ಗೆ 6:20ಕ್ಕೆ ಟ್ರೈನು ಹೋಗಿ ನಿಲ್ಲುತ್ತದೆ. ಅಲ್ಲಿಂದ ಪ್ರವಾಸಿಗರು ತಮ್ಮ ಖರ್ಚಿನಲ್ಲಿ ತಮ್ಮೂರಿಗೆ ತೆರಳುವುದು.

ಈ ಪ್ರವಾಸ ಪ್ಯಾಕೇಜ್​ನಲ್ಲಿ ರೈಲು ಪ್ರಯಾಣ, 2 ರಾತ್ರಿ ತಂಗಲು ಹೋಟೆಲ್ ಸೌಲಭ್ಯ, ಪ್ರವಾಸಿ ಸ್ಥಳಗಳನ್ನು ನೋಡಲು ಕಾರು ವ್ಯವಸ್ಥೆ, ಟ್ರಾವೆಲ್ ಇನ್ಷೂರೆನ್ಸ್, ಟಾಲ್ ಇತ್ಯಾದಿ ದರಗಳು ಒಳಗೊಂಡಿರುತ್ತವೆ. ಆದರೆ, ಮುದುಮಲೈ ಸಫಾರಿ, ಸೈಟ್ ಸೀಯಿಂಗ್ ಸ್ಥಳಗಳ ಶುಲ್ಕ, ಹೋಟೆಲ್ ಊಟ ಇತ್ಯಾದಿ ವೆಚ್ಚವೆಲ್ಲಾ ಪ್ರವಾಸಿಗರದ್ದೇ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ರಸ್ತೆಯಲ್ಲಿ ಹೋಗುತ್ತಿದ್ದ ಬಾಲಕನ ತುಟಿಗೆ ಕಚ್ಚಿದ ಹುಚ್ಚುನಾಯಿ
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಕೆಂಡದಂಥ ಬಿಸಲಿನಿಂದ ರಕ್ಷಿಸಲು ವಿನೂತನ ಕ್ರಮ: ಪೊಲೀಸ್ ಕಮೀಷನರ್
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ಸೋನು ನಿಗಮ್ ಬದಲಿಗೆ ಕನ್ನಡದ ಗಾಯಕನಿಗೆ ಅವಕಾಶ ಕೊಟ್ಟ ನಿರ್ಮಾಪಕ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ರೆಡ್ಡಿ ಜೈಲು ಸೇರುವಂತಾಗುವಲ್ಲಿ ಸಿಬಿಐ ಅಧಿಕಾರಿಗಳ ಪಾತ್ರ ದೊಡ್ಡದು: ಹಿರೇಮಠ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಉಗ್ರರ ದಾಳಿ ಖಂಡಿಸಿ ಜರ್ಮನಿಯಲ್ಲಿ ಅನಿವಾಸಿ ಭಾರತೀಯರಿಂದ ಮೆರವಣಿಗೆ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಅಪಾಯ ಉಂಟಾದಾಗ ಪಾರಾಗಲು ಮಾಕ್ ಡ್ರಿಲ್ ವೇಳೆ ಜಮ್ಮು ಶಾಲೆಯ ಮಕ್ಕಳಿಗೆ ತರಬೇತಿ
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ಸಿನಿಮಾದಿಂದ ಸೋನು ನಿಗಂ ಹಾಡು ಡ್ರಾಪ್, ನಿರ್ದೇಶಕ ಹೇಳಿದ್ದಿಷ್ಟು?
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ನನ್ನ ಮೇಲೆ ಹಲ್ಲೆ, ತಾತನ ವಿರುದ್ಧ ಅಟ್ರಾಸಿಟಿ ಕೇಸ್ ಹಾಕಲಾಗಿತ್ತು: ಗಣೇಶ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಮನೆಯೆದುರು ಮಕ್ಕಳು ಆಡುವಾಗ ಚಿರತೆ ಪ್ರತ್ಯಕ್ಷ; ಶಾಕಿಂಗ್ ವಿಡಿಯೋ ವೈರಲ್
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?
ಪಾಕಿಸ್ತಾನೀಯರ ಬೆಂಬಲ ಭಾರತಕ್ಕಾ?