Sign In

By signing in or creating an account, you agree with Associated Broadcasting Company's Terms & Conditions and Privacy Policy.

Bengaluru Egg Story: ಬಿಸಿಲಿಗೆ ಕೋಳಿಗಳ ವರ್ತನೆ, ಉತ್ಪಾದನೆ ಬದಲಾಗುತ್ತಾ? ಒಂದು ಮೊಟ್ಟೆ ದುಬಾರಿಯಾದ ಕಥೆ ಕೇಳಿ

Poultry Industry Face Hurdle In Hot Summer: ಬೇಸಿಗೆಯಲ್ಲಿ ಕೋಳಿಗಳು ಕಡಿಮೆ ಮೊಟ್ಟೆ ಇಡಲು ಕಾರಣವೇನು? ಮೊಟ್ಟೆ ಉತ್ಪಾದನೆ ಕುಸಿತದ ಪರಿಣಾಮವಾಗಿ ಬೆಂಗಳೂರಿನಲ್ಲಿ ಮೊಟ್ಟೆ ದುಬಾರಿ ಎನಿಸುತ್ತಿದೆ. ಬೇಡಿಕೆ ಪೂರೈಸಲು ತಮಿಳುನಾಡಿನಿಂದ ಮೊಟ್ಟೆ ಸರಬರಾಜು ಮಾಡಲಾಗುತ್ತಿದೆ.

Bengaluru Egg Story: ಬಿಸಿಲಿಗೆ ಕೋಳಿಗಳ ವರ್ತನೆ, ಉತ್ಪಾದನೆ ಬದಲಾಗುತ್ತಾ? ಒಂದು ಮೊಟ್ಟೆ ದುಬಾರಿಯಾದ ಕಥೆ ಕೇಳಿ
ಕೋಳಿಫಾರ್ಮ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 29, 2023 | 3:57 PM

ಬೆಂಗಳೂರು: ಬೇಸಿಗೆ ಬಂತೆಂದರೆ ನೀರಿನ ಅಭಾವದಂತೆ ಮೊಟ್ಟೆಗಳಿಗೂ ಬರ ಎದುರಾಗುತ್ತದೆ. ಪ್ರತೀ ಬೇಸಿಗೆಯಂತೆ ಬೆಂಗಳೂರಿನಲ್ಲಿ ಈ ಬಾರಿಯೂ ಮೊಟ್ಟೆ ದುಬಾರಿಯಾಗಿದೆ. ಕೆಲವೊಂದು ಕಡೆ ಒಂದು ಮೊಟ್ಟೆ 7 ರೂವರೆಗೂ ಬೆಲೆಗೆ ಮಾರಾಟವಾಗುತ್ತಿದೆ. ಒಂದೆಡೆ ಮೊಟ್ಟೆಗೆ ಬೇಡಿಕೆ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಬೇಸಿಗೆಯಲ್ಲಿ ಮೊಟ್ಟೆ ಲಭ್ಯತೆ ಕಡಿಮೆ ಆಗುತ್ತಿದೆ. ಬೆಂಗಳೂರು ಸುತ್ತಮುತ್ತಲಿನ ಕೋಳಿಫಾರ್ಮ್​ಗಳಲ್ಲಿ ಉತ್ಪಾದನೆ ಕುಂಠಿತಗೊಂಡಿದೆ. ಪರಿಣಾಮವಾಗಿ ಮೊಟ್ಟೆಯ ಬೇಡಿಕೆ ಪೂರೈಸಲು ಬೇರೆ ಬೆರೆ ಭಾಗಗಳಿಂದ ಮೊಟ್ಟೆ ಸರಬರಾಜು ಮಾಡಲಾಗುತ್ತಿದೆ. ತಮಿಳುನಾಡಿನಿಂದಲೂ ಆಮದು ಮಾಡಿಕೊಳ್ಳಲಾಗುತ್ತಿದೆ.

ಬೇಸಿಗೆಯ ಬಿಸಿಗೆ ನಲುಗಿಹೋಗುತ್ತಿರುವ ಕೋಳಿಗಳು

ಬೇಸಿಗೆ ತಾಪಕ್ಕೆ ಬಹಳ ಮಂದಿ ಒದ್ದಾಡಿ ಹೋಗುತ್ತೇವೆ. ಸೌಕರ್ಯ ಇದ್ದವರು ಎಸಿ ಹಾಕಿಕೊಂಡು ಶೆಖೆ ನೀಗಿಸಿಕೊಳ್ಳುತ್ತಾರೆ. ಆದರೆ, ಮೂಕ ಪ್ರಾಣಿ ಪಕ್ಷಿಗಳು ಏನು ಮಾಡಿಯಾವು…! ಅದರಲ್ಲೂ ಸೆರೆಯಲ್ಲಿ ಜೀವನ ಸವೆಸುವ ಕೋಳಿಯಂಥ ಪಕ್ಷಿಗಳ ಕಥೆ ಏನು ಯೋಚಿಸಿ..! ಕೋಳಿಫಾರ್ಮ್​ನಲ್ಲಿರುವ ಕೋಳಿಗಳು ಬೇಸಿಗೆಯ ಬಿಸಿಲಿಗೆ ಅಕ್ಷರಶಃ ನಲುಗಿಹೋಗುತ್ತಿವಂತೆ. ಮಾನಸಿಕವಾಗಿ ಮತ್ತು ದೈಹಿಕವಾಗಿ ಹಾಗೂ ಅದರ ವರ್ತನೆಯಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ.

ಇದನ್ನೂ ಓದಿOld Man’s Story: ಒಬ್ಬ ಮಗ ಐಎಎಸ್, ಇನ್ನೊಬ್ಬ ಬ್ಯುಸಿನೆಸ್; ವೃದ್ಧಾಶ್ರಮಕ್ಕೆ ಬಂದು ಕಣ್ಣೀರಿಟ್ಟ ವೃದ್ಧ; ಕರುಳುಹಿಂಡುತ್ತದೆ ಇವರ ಕಥೆ

ಕೋಳಿಫಾರ್ಮ್​ನಲ್ಲಿರುವ ಕೋಳಿಗಳಿಗೆ ಶೆಖೆ ಹೆಚ್ಚಾದಾಗ ಬೆವರಿಳಿಸುವ ಶಕ್ತಿಯನ್ನು ಕಳೆದುಕೊಂಡಿರುತ್ತವೆ. ಶೆಖೆ ಹೆಚ್ಚಾದಾಗ ಈ ಕೋಳಿಗಳು ಆಹಾರ ಸೇವಿಸುವುದನ್ನು ತೀರಾ ಕಡಿಮೆ ಮಾಡಿ, ನೀರು ಕುಡಿಯುವುದನ್ನು ಹೆಚ್ಚಿಸುತ್ತವೆ. ಇದರಿಂದ ಕೋಳಿ ಇಡುವ ಮೊಟ್ಟೆಯ ಸಂಖ್ಯೆ ಕಡಿಮೆ ಆಗುತ್ತದೆ. ಇಟ್ಟ ಮೊಟ್ಟೆಯ ಗುಣಮಟ್ಟವೂ ಕಳಪೆಯಾಗಿರುತ್ತದೆ. ಈ ಮೊಟ್ಟೆದ ಪದರ ತೆಳುವಾಗಿದ್ದು, ಗಾತ್ರವೂ ಸಣ್ಣದಿರುತ್ತದೆ. ಹೀಗಾಗಿ, ಮೊಟ್ಟೆ ಬೇಗ ಹಾಳಾಗುವ ಸಾಧ್ಯತೆ ಇರುತ್ತದೆ.

ಇದನ್ನೂ ಓದಿRs 75 Coin Rate: ಒಂದು 75 ರೂ ನಾಣ್ಯ ತಯಾರಿಕೆಗೆ ಎಷ್ಟು ವೆಚ್ಚ? ಎಲ್ಲಿ ಮತ್ತು ಎಷ್ಟಕ್ಕೆ ಸಿಗುತ್ತೆ ಈ ಕಾಯಿನ್?

ಒಟ್ಟಾರೆ ಮೊಟ್ಟೆಯ ಉತ್ಪಾದನೆ ಕುಸಿದುಹೋಗಿದೆ. ಕರ್ನಾಟಕದ ಕುಕ್ಕುಟ ಉದ್ಯಮದ ಸಂಘಟನೆ ಕೆಪಿಎಫ್​ಬಿಎ ಪ್ರಕಾರ ಏಪ್ರಿಲ್ ತಿಂಗಳಲ್ಲಿ ದಿನಕ್ಕೆ 1.8 ಕೋಟಿ ಮೊಟ್ಟೆಗಳ ಉತ್ಪಾದನೆ ಆಗುತ್ತಿತ್ತು. ಇದು ಮೇ ತಿಂಗಳಲ್ಲಿ 1.6 ಕೋಟಿಗೆ ಬಂದು ಇಳಿದಿದೆ ಎಂದು ಹೇಳಲಾಗಿದೆ. ಅದೇನೇ ಇದ್ದರೂ ಇದು ತಾತ್ಕಾಲಿಕ ಹಿನ್ನಡೆ ಮಾತ್ರ ಎಂಬುದು ನಿಜ. ಬೇಸಿಗೆಯ ವಿದ್ಯಮಾನ ಎಂದು ಈ ಉದ್ಯಮದವರು ಸುಮ್ಮನಾಗುತ್ತಾರೆ. ಜೂನ್​ನಿಂದ ಮಳೆ ಆರಂಭವಾಗುವುದರಿಂದ ಕುಕ್ಕುಟೋದ್ಯಮ ಮತ್ತೆ ಗರಿಗೆದರಿಕೊಂಡು ಮಿಂಚುತ್ತದೆ ಎಂಬ ಆಸೆಯಲ್ಲಿ ಮತ್ತು ನಿರೀಕ್ಷೆಯಲ್ಲಿ ಇದ್ದಾರೆ ಮೊಟ್ಟೆ ವ್ಯಾಪಾರಿಗಳು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ