ಐಟಿ ಉದ್ಯೋಗಾವಕಾಶ; ಬೆಂಗಳೂರನ್ನು ಮೀರಿಸಿದ ಹೈದರಾಬಾದ್; ಯಾವ ಸಾಫ್ಟ್​ವೇರ್ ಸ್ಪೆಷಲಿಸ್ಟ್​ಗಳಿಗೆ ಬೇಡಿಕೆ ಹೆಚ್ಚಿದೆ, ನೋಡಿ

|

Updated on: May 26, 2024 | 10:54 AM

IT jobs in India: 2023ರ ಏಪ್ರಿಲ್​ನಿಂದ 2024ರ ಏಪ್ರಿಲ್​ವರೆಗಿನ ಅವಧಿಯಲ್ಲಿ ಇಂಡೀಡ್​ನಲ್ಲಿ ದಾಖಲಾದ ದತ್ತಾಂಶ ಪ್ರಕಾರ ಐಟಿ ಸೆಕ್ಟರ್​ನ ಕೆಲಸಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ಹೊತ್ತಿನಲ್ಲಿ ಜಾಬ್ ಪೋಸ್ಟಿಂಗ್ಸ್ ಕಡಿಮೆ ಆಗಿದೆ. ದೇಶಾದ್ಯಂತ ಐಟಿ ಜಾಬ್ ಪೋಸ್ಟಿಂಗ್ಸ್, ಅಂದರೆ ಹೈರಿಂಗ್ ಶೇ. 3.6ರಷ್ಟು ಕಡಿಮೆ ಆಗಿದೆ. ಸಲ್ಲಿಕೆಯಾಗಿರುವ ಜಾಬ್ ಪೋಸ್ಟಿಂಗ್​ಗಳಲ್ಲಿ ಹೈದರಾಬಾದ್ ಶೇ. 41.5ರಷ್ಟು ಹೆಚ್ಚಳ ಕಂಡಿದೆ. ಬೆಂಗಳೂರಿನಲ್ಲಿ ಶೇ. 24ರಷ್ಟು ಜಾಬ್ ಪೋಸ್ಟಿಂಗ್ಸ್ ಹೆಚ್ಚಳವಾಗಿದೆ.

ಐಟಿ ಉದ್ಯೋಗಾವಕಾಶ; ಬೆಂಗಳೂರನ್ನು ಮೀರಿಸಿದ ಹೈದರಾಬಾದ್; ಯಾವ ಸಾಫ್ಟ್​ವೇರ್ ಸ್ಪೆಷಲಿಸ್ಟ್​ಗಳಿಗೆ ಬೇಡಿಕೆ ಹೆಚ್ಚಿದೆ, ನೋಡಿ
ಐಟಿ ಜಾಬ್
Follow us on

ನವದೆಹಲಿ, ಮೇ 26: ಕಳೆದ ಒಂದು ವರ್ಷದಲ್ಲಿ ಐಟಿ ಸೆಕ್ಟರ್​ನಲ್ಲಿ ದೇಶಾದ್ಯಂತ ಜಾಬ್ ಪೋಸ್ಟಿಂಗ್ಸ್ ಕಡಿಮೆ ಆಗಿದೆ. ಐಟಿ ಕಂಪನಿಗಳು ಹೈರಿಂಗ್ ಮಾಡಿಕೊಳ್ಳುತ್ತಿರುವುದು ಇಳಿಕೆ ಆಗಿದೆ. ‘ಇಂಡೀಡ್’ ಎಂಬ ಹೈರಿಂಗ್ ಪ್ಲಾಟ್​ಫಾರ್ಮ್ (Indeed) ಪ್ರಕಾರ 2023ರ ಏಪ್ರಿಲ್​ನಿಂದ 2024ರ ಏಪ್ರಿಲ್​ವರೆಗಿನ 13 ತಿಂಗಳಲ್ಲಿ ಜಾಬ್ ಪೋಸ್ಟಿಂಗ್ಸ್ ಶೇ. 3.6ರಷ್ಟು ಕಡಿಮೆ ಆಗಿದೆ. ಆದರೆ, ಉದ್ಯೋಗ ಬಯಸಿ ಅರ್ಜಿ ಸಲ್ಲಿಸುವವರ ಸಂಖ್ಯೆ ಗಣನೂಯವಾಗಿ ಹೆಚ್ಚಾಗಿದೆ. ಐಟಿ ಸಿಟಿಯಾದ ಬೆಂಗಳೂರಿನಲ್ಲಿ ಉದ್ಯೋಗಾವಕಾಶ ಹೆಚ್ಚಾಗಿದೆ. ಕುತೂಹಲವೆಂದರೆ ಬೆಂಗಳೂರಿಗಿಂತ ಹೈದರಾಬಾದ್​ನಲ್ಲಿ ಐಟಿ ಉದ್ಯೋಗಗಳಿಗೆ ಅವಕಾಶ ಹೆಚ್ಚಾಗಿದೆ.

ಇಂಡೀಡ್ ಪ್ರಕಾರ ಹೈದರಾಬಾದ್​ನಲ್ಲಿ ಐಟಿ ಜಾಬ್ ಪೋಸ್ಟಿಂಗ್ ಶೇ. 41.5ರಷ್ಟು ಏರಿದೆ. ಅಲ್ಲಿ ಐಟಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯಲ್ಲಿ ಶೇ. 161ರಷ್ಟು ಹೆಚ್ಚಾಗಿದೆ. ಇನ್ನು, ಸಿಲಿಕಾನ್ ಸಿಟಿಯಾಗಿರುವ ಬೆಂಗಳೂರಿನಲ್ಲಿ ಐಟಿ ಜಾಬ್ ಪೋಸ್ಟಿಂಗ್​ನಲ್ಲಿ ಶೇ. 24ರಷ್ಟು ಹೆಚ್ಚಾಗಿದೆ. ಕೆಲಸಕ್ಕಾಗಿ ಅರ್ಜಿ ಸಲ್ಲಿಸುವ ಸಂಖ್ಯೆಯಲ್ಲಿ ಶೇ. 80ರಷ್ಟು ಏರಿಕೆ ಆಗಿದೆ. ಆದರೆ, ಐಟಿ ಕಂಪನಿಗಳಿಂದ ಜಾಬ್ ಆಫರ್ ಕಡಿಮೆ ಆಗಿರುವುದು ಹೌದು.

ಇದನ್ನೂ ಓದಿ: ಕಂಪನಿ ಮಾರುವಂತೆ ಮಾಡಿದ್ರು… 2014ರ ಹಿಂದಿನ ದಿನಗಳನ್ನು ಸ್ಮರಿಸಿ ಮರುಗಿದ ಉದ್ಯಮಿ ಶಿವಶಂಕರನ್

‘ಸಾಫ್ಟ್​ವೇರ್ ಮತ್ತು ಐಟಿ ಜಾಬ್​ಗಳಿಗೆ ಬೇಡಿಕೆ ಹೆಚ್ಚಿದೆ. ಇದೇ ಕ್ಷೇತ್ರದಲ್ಲಿ ಇರುವ ಉದ್ಯೋಗಿಗಳು ಮಾತ್ರವಲ್ಲ, ಹೊಸ ವೃತ್ತಿ ಅವಕಾಶ ಕೋರುವ ಅಭ್ಯರ್ಥಿಗಳೂ ಕೂಡ ಈ ಸೆಕ್ಟರ್​ನಲ್ಲಿ ಉದ್ಯೋಗಕ್ಕೆ ಆಸಕ್ತಿ ತೋರುತ್ತಿದ್ದಾರೆ. ಐಟಿ ಸೆಕ್ಟರ್​ನಲ್ಲಿ ಲೇ ಆಫ್ ಹೆಚ್ಚಿದ್ದರೂ ಅದರ ಆಕರ್ಷಣೆ ಕೂಡ ಹೆಚ್ಚಿದೆ,’ ಎಂದಿದ್ದಾರೆ ಇಂಡೀಡ್ ಇಂಡಿಯಾದ ಸೇಲ್ಸ್ ಮುಖ್ಯಸ್ಥ ಶಶಿಕುಮಾರ್.

2023ರ ಏಪ್ರಿಲ್​ನಿಂದ 2024ರ ಏಪ್ರಿಲ್​ವರೆಗೆ ಇಂಡೀಡ್​ನಲ್ಲಿ ಸಲ್ಲಿಕೆಯಾದ ಜಾಬ್ ಪೋಸ್ಟಿಂಗ್ಸ್ ಮತ್ತು ಜಾಬ್ ಅರ್ಜಿಗಳ ದತ್ತಾಂಶ ಆಧಾರಿತವಾಗಿ ಈ ವಿಶ್ಲೇಷಣೆ ಮಾಡಲಾಗಿದೆ.

ಯಾವ ಸಾಫ್ಟ್​ವೇರ್ ಕೌಶಲ್ಯಕ್ಕೆ ಹೆಚ್ಚಿನ ಬೇಡಿಕೆ ಇದೆ ನೋಡಿ…

  1. ಅನಾಲಿಸಿಸ್: ಶೇ. 5.51
  2. ಎಜೈಲ್: ಶೇ. 5.39
  3. ಎಪಿಐ: ಶೇ. 4.5
  4. ಜಾವಾ ಸ್ಕ್ರಿಪ್ಟ್: ಶೇ. 4
  5. ಎಸ್​ಕ್ಯೂಎಲ್: ಶೇ. 4

ಇದನ್ನೂ ಓದಿ: ಮೋದಿ ಮಾಡಿದಷ್ಟು ಬದಲಾವಣೆ ಯಾವ ವಿಶ್ವನಾಯಕನಿಂದಲೂ ಆಗಿಲ್ಲ: ಕ್ರಿಸ್ಟೋಫರ್ ವುಡ್

ಇಲ್ಲಿ ಎಜೈಲ್ ಎಂಬುದು ಸಾಫ್ಟ್​ವೇರ್ ಪ್ರಾಜೆಕ್ಟ್​ಗಳನ್ನು ವ್ಯವಸ್ಥಿತವಾಗಿ ನಿಭಾಯಿಸುವ ಒಂದು ಪ್ರಕ್ರಿಯೆಯಾಗಿದೆ. ಬಹುತೇಕ ಐಟಿ ಸರ್ವಿಸ್ ಕಂಪನಿಗಳು ಈ ಫ್ರೇಮ್​ವರ್ಕ್ ಅಳವಡಿಸಿಕೊಂಡಿರುತ್ತವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ