AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಂಪನಿ ಮಾರುವಂತೆ ಮಾಡಿದ್ರು… 2014ರ ಹಿಂದಿನ ದಿನಗಳನ್ನು ಸ್ಮರಿಸಿ ಮರುಗಿದ ಉದ್ಯಮಿ ಶಿವಶಂಕರನ್

Aircel founder C Sivasankaran on forcing him to sell company: ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲೊಂದಾಗಿದ್ದ ಏರ್ಸೆಲ್ ಇದ್ದಕ್ಕಿದ್ದಂತೆ ಸದ್ದಿಲ್ಲದೇ ಮುರುಟಿಹೋಗಿತ್ತು. ಅದರ ಸಂಸ್ಥಾಪಕ ಸಿ ಶಿವಶಂಕರನ್ 2006ರಲ್ಲಿ ಅಲ್ಪಮೊತ್ತಕ್ಕೆ ಏರ್ಸೆಲ್ ಅನ್ನು ಮಾರಿದ್ದರು. ರಾಜಕಾರಣಿಗಳು ಸೇರಿ ಕಡಿಮೆ ಬೆಲೆಗೆ ಕಂಪನಿ ಮಾರುವಂತೆ ಮಾಡಿದರು ಎಂದು ಅವರು ಆರೋಪಿಸಿದ್ದಾರೆ. ಆವತ್ತಿನ ದಿನಗಳು ಇವತ್ತಿನ ಹಾಗಿರಲಿಲ್ಲ. ಈಗ ಯಾರೂ ಕೂಡ ನಿಮ್ಮ ಮೇಲೆ ಒತ್ತಡ ಹಾಕುವುದಿಲ್ಲ. ಆಗ ಎಟಿ ಅಂಡ್ ಟಿಗೆ ಮಾರಿದ್ದರೆ ಹೆಚ್ಚು ಹಣ ಸಿಗುತ್ತಿತ್ತು. ರಾಜಕಾರಣಿಗಳು ಸೇರಿ ಬೇರೆ ಕಂಪನಿಗೆ ಕಡಿಮೆ ದುಡ್ಡಿಗೆ ಮಾರುವಂತೆ ಮಾಡಿದರು ಎಂದು ಚಿನ್ನಕಣ್ಣನ್ ಶಿವಶಂಕರನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಂಪನಿ ಮಾರುವಂತೆ ಮಾಡಿದ್ರು... 2014ರ ಹಿಂದಿನ ದಿನಗಳನ್ನು ಸ್ಮರಿಸಿ ಮರುಗಿದ ಉದ್ಯಮಿ ಶಿವಶಂಕರನ್
ಚಿನ್ನಕಣ್ಣನ್ ಶಿವಶಂಕರನ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 24, 2024 | 2:54 PM

Share

ನವದೆಹಲಿ, ಮೇ 24: ದಶಕದ ಹಿಂದೆ ಭಾರತದಲ್ಲಿ ಬಿಸಿನೆಸ್ ಮಾಡಲು ಕಷ್ಟವಾಗಿತ್ತು. ಈಗ ಪರಿಸ್ಥಿತಿ ಬೇರೆ ಇದೆ. ಇವತ್ತು ನಿಮ್ಮ ಬಿಸಿನೆಸ್ ಮೇಲೆ ಯಾರೂ ಒತ್ತಡ ಹಾಕುವುದಿಲ್ಲ. ಆದರೆ, ಅಂದಿನ ದಿನಗಳು ಬೇರೆಯೇ ಇದ್ದವು ಎಂದು ಏರ್​ಸೆಲ್ ಸಂಸ್ಥಾಪಕರಾಗಿದ್ದ ಚಿನ್ನಕಣ್ಣನ್ ಶಿವಶಂಕರನ್ (C Sivasankaran) ಅವರು ಯುಪಿಎ ಅವಧಿಯ ದಿನಗಳತ್ತ ಬೊಟ್ಟು ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತಮ್ಮ ಏರ್ಸೆಲ್ ಕಂಪನಿಯನ್ನು (Aircel) ಬಹಳ ಕಡಿಮೆ ದುಡ್ಡಿಗೆ ಮಾರುವಂತೆ ಮಾಡಿಬಿಟ್ಟರು ಎಂದು ಅವರು ಮರುಗಿದ್ದಾರೆ.

ಏರ್​ಸೆಲ್ ಸಂಸ್ಥೆ ಭಾರತದ ಪ್ರಮುಖ ಟೆಲಿಕಮ್ಯೂನಿಕೇನ್ ಸರ್ವಿಸ್ ಸಂಸ್ಥೆಗಳಲ್ಲಿ ಒಂದಾಗಿತ್ತು. 2006ರಲ್ಲಿ ಮ್ಯಾಕ್ಸಿಸ್ ಬರ್ಹಾಡ್ ಕಂಪನಿಗೆ ಏರ್​ಸೆಲ್ ಮಾರಾಟವಾಗಿತ್ತು. ಏರ್​ಸೆಲ್ ಸಂಸ್ಥಾಪಕ ಸಿ ಶಿವಶಂಕರನ್ ಅವರು ಅಲ್ಪ ಮೊತ್ತಕ್ಕೆ ಕಂಪನಿಯನ್ನು ಮಾರುವ ಪರಿಸ್ಥಿತಿ ತಂದಿಟ್ಟರು ಎಂದು ಅಂದಿನ ರಾಜಕಾರಣಿಗಳನ್ನು ದೂರಿದ್ದಾರೆ. ಸಿಂಹಳೀ ತಮಿಳಗ ಮತ್ತು ಮಲೇಷ್ಯಾ ಪ್ರಜೆ ಆನಂದ ಕೃಷ್ಣನ್ ಮಾಲಕತ್ವದ ಮ್ಯಾಕ್ಸಿಸ್ ಬರ್ಹಾಡ್ ಕಂಪನಿ 2006ರಲ್ಲಿ ಏರ್ಸೆಲ್ ಸಂಸ್ಥೆಯ ಶೇ. 74ರಷ್ಟು ಪಾಲನ್ನು ಖರೀದಿಸಿತ್ತು. ಈ ಡೀಲ್​ನಲ್ಲಿ ಶಿವಶಂಕರನ್ ಅವರಿಗೆ ಸಿಕ್ಕಿದ್ದು ಕೇವಲ 3,400 ಕೋಟಿ ರೂ ಅಂತೆ.

ಇದನ್ನೂ ಓದಿ: ವಿಕಸಿತ ಭಾರತದ ಗುರಿಗೆ ದೈವ ಪ್ರೇರಣೆ; ಆ ದೈವವೇ ನನಗೆ ಶಕ್ತಿ ತುಂಬುತ್ತಿದೆ: ಪ್ರಧಾನಿ ಮೋದಿ

ರಾಜಕಾರಣಿಗಳು ಸೇರಿ ಕಂಪನಿಯನ್ನು ಅಲ್ಪ ಮೊತ್ತಕ್ಕೆ ಮಾರುವಂತೆ ಮಾಡಿಬಿಟ್ಟರು. ನಾನು ಎಟಿ ಅಂಡ್ ಟಿಗೆ ಕಂಪನಿಯನ್ನು ಮಾರಿದ್ದರೆ ಎಂಟು ಬಿಲಿಯನ್ ಡಾಲರ್ ಸಿಗುತ್ತಿತ್ತು ಎಂದು ಚಿನ್ನಕಣ್ಣನ್ ಶಿವಶಂಕರ್ ಆರೋಪಿಸುತ್ತಿದ್ದಾರೆ. ಅಂದಿನ ಕಾಲಘಟ್ಟದಲ್ಲಿ ಡಾಲರ್​ಗೆ 43 ರೂ ಇತ್ತು ಎಂದು ಪರಿಗಣಿಸಿದರೂ 35ರಿಂದ 40 ಸಾವಿರ ಕೋಟಿ ರೂನಷ್ಟಾದರೂ ಹಣವು ಆ ಡೀಲ್​ನಿಂದ ಸಿಗುತ್ತಿತ್ತು. ಕೇವಲ 3,400 ರೂಗೆ ಕಂಪನಿ ಮಾರುವಂತಾಯಿತು ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಅಂದರೆ ಶೇ. 10ರ ಬೆಲೆಗೆ ಕಂಪನಿಯನ್ನು ಅವರು ಮಾರುವಂತಾಗಿತ್ತು. ಅಂದು ಯುಪಿಎ ಸರ್ಕಾರದ ಅವಧಿಯಲ್ಲಾದ ಬೆಳವಣಿಗೆ.

ಇವತ್ತಿನಂತಿರಲಿಲ್ಲ ಆವತ್ತಿನ ಪರಿಸ್ಥಿತಿ…

‘ಇವತ್ತಿನ ಭಾರತವು ಆವತ್ತಿನಂತಿಲ್ಲ. ಇವತ್ತು ಯಾರೂ ಕೂಡ ನಿಮ್ಮ ಮೇಲೆ ಒತ್ತಡ ಹಾಕುವುದಿಲ್ಲ. ಅಂದು ಉದ್ಯಮಿಯಾದವನಿಗೆ ನಿರ್ದಿಷ್ಟ ವ್ಯಕ್ತಿಗೆಯೇ ಕಂಪನಿ ಮಾರಬೇಕು ಎನ್ನುವಂತಹ ಒತ್ತಡ ಹಾಕಲಾಗುತ್ತಿತ್ತು,’ ಎಂದು ಶಿವಶಂಕರನ್ ಹೇಳುತ್ತಾರೆ.

‘ಇವತ್ತು ಯಾರ ಒತ್ತಡವೂ ಇಲ್ಲದೇ ನೀವು ಬಿಸಿನೆಸ್ ಕಟ್ಟಬಹುದು. ಇವತ್ತು ಉದಾರೀಕರಣಗೊಂಡ ಭಾರತವಾಗಿದೆ. ಆವತ್ತು ಬಲವಂತವಾಗಿ ಕಂಪನಿ ಮಾರುವಂತೆ ಮಾಡಿದ್ದಕ್ಕೆ ಬೇಸರ ಇಲ್ಲ. ಆದರೆ, ಎಂಟು ಬಿಲಿಯನ್ ಡಾಲರ್ ಆಫರ್ ಮಾಡಿದವರಿಗೆ ಕಂಪನಿ ಮಾರಲು ಅವಕಾಶ ಕೊಡಬೇಕಿತ್ತು ಎಂಬುದಷ್ಟೇ ನನ್ನ ದೂರು,’ ಎಂದು ಚಿನ್ನಕಣ್ಣನ್ ಶಿವಶಂಕರನ್ ಬೇಸರ ವ್ಯಕ್ತಪಡಿಸುತ್ತಾರೆ.

ಇದನ್ನೂ ಓದಿ: ಭಾರತ ಚೀನಾವನ್ನು ಮೀರಿಸಲು ಹೇಗೆ ಸಾಧ್ಯ? ನಾರಾಯಣಮೂರ್ತಿ ಸೂತ್ರ ಇದು

ಬಹಳ ಕಡಿಮೆ ಬೆಲೆಗೆ ಏರ್ಸೆಲ್ ಅನ್ನು ಖರೀದಿಸಿದ ಮ್ಯಾಕ್ಸಿಸ್ ಕಂಪನಿ ಮಾಲೀಕ ಆನಂದ್ ಕೃಷ್ಣನ್ ಅವರು ಅದನ್ನು ಸರಿಯಾಗಿ ಮುನ್ನಡೆಸಲು ಆಗಲಿಲ್ಲ. 45 ಬಿಲಿಯನ್ ಡಾಲರ್ ಹಣ ನಷ್ಟ ಮಾಡಿಕೊಂಡರು. 2018ರಲ್ಲಿ ಏರ್ಸೆಲ್ ಮ್ಯಾಕ್ಸಿಸ್ ಕಂಪನಿ ಮುಚ್ಚೇ ಹೋಯಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ನಟ ಭಯಂಕರ ವಜ್ರಮುನಿ ಅವರ ಕೊನೆಯ ದಿನಗಳು ಹೇಗಿದ್ದವು: ವಿಡಿಯೋ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ