ಮೋದಿ ಮಾಡಿದಷ್ಟು ಬದಲಾವಣೆ ಯಾವ ವಿಶ್ವನಾಯಕನಿಂದಲೂ ಆಗಿಲ್ಲ: ಕ್ರಿಸ್ಟೋಫರ್ ವುಡ್

Christopher Wood of Jefferies prainses Narendra Modi: ಕಳೆದ 10 ವರ್ಷದಲ್ಲಿ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಬಹಳಷ್ಟು ಪರಿವರ್ತನೆ ತಂದಿದ್ದಾರೆ. ಇಷ್ಟು ಕೆಲಸವನ್ನು ಈಗಿನ ವಿಶ್ವದ ಯಾವ ನಾಯಕನೂ ಮಾಡಿಲ್ಲ ಎಂದು ಇನ್ವೆಸ್ಟ್​ಮೆಂಟ್ ಬ್ಯಾಂಕ್​ ಆದ ಜೆಫರೀಸ್​ನ ಮುಖ್ಯಸ್ಥ ಕ್ರಿಸ್ಟೋಫರ್ ವುಡ್ ಹೇಳಿದ್ದಾರೆ. ಚುನಾವಣೆಯಲ್ಲಿ ಬಿಜೆಪಿ ನಿರೀಕ್ಷಿತ ಸಾಧನೆ ಮಾಡುತ್ತಿಲ್ಲ ಎಂದು ಗುಲ್ಲೆಬ್ಬಿಸಲಾಗುತ್ತಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಬಂದಷ್ಟು ಸ್ಥಾನಗಳು ಸಿಕ್ಕರೆ ಸರ್ಕಾರ ನಡೆಸಲು ತೊಂದರೆ ಇಲ್ಲ ಎಂದು ವುಡ್ ತಿಳಿಸಿದ್ದಾರೆ.

ಮೋದಿ ಮಾಡಿದಷ್ಟು ಬದಲಾವಣೆ ಯಾವ ವಿಶ್ವನಾಯಕನಿಂದಲೂ ಆಗಿಲ್ಲ: ಕ್ರಿಸ್ಟೋಫರ್ ವುಡ್
ಕ್ರಿಸ್ಟೋಫರ್ ವುಡ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 24, 2024 | 7:36 PM

ನವದೆಹಲಿ, ಮೇ 24: ಜನಜೀವನದಲ್ಲಿ ಕಳೆದ 10 ವರ್ಷದಲ್ಲಿ ಪ್ರಧಾನಿ ನರೇಂದ್ರ ಮೋದಿ ತಂದಷ್ಟು ಸಕಾರಾತ್ಮಕ ಪರಿವರ್ತನೆ ಇವತ್ತಿನ ಯಾವ ವಿಶ್ವನಾಯಕರಿಂದಲೂ ಆಗಿಲ್ಲ ಎಂದು ಜೆಫರೀಸ್ ಸಂಸ್ಥೆಯ ಕ್ರಿಸ್ಟೋಫರ್ ವುಡ್ ಹೊಗಳಿದ್ದಾರೆ. ಇತ್ತೀಚಿನ ತಮ್ಮ ಗ್ರೀಡ್ ಅಂಡ್ ಫಿಯರ್ ರಿಪೋರ್ಟ್​ನಲ್ಲಿ ಕ್ರಿಸ್ಟೋಫರ್ ವುಡ್ ಅವರು ಚುನಾವಣೆಯಲ್ಲಿ ಬಿಜೆಪಿಗೆ ಪೂರಕವಾದ ಫಲಿತಾಂಶ ಬರುವುದಿಲ್ಲ ಎನ್ನುವಂತಹ ವದಂತಿಯನ್ನು ವಿದೇಶೀ ಮಾಧ್ಯಮಗಳು ಹಬ್ಬಿಸಲು ಪ್ರಯತ್ನಿಸುತ್ತಿವೆ ಎಂದು ಟೀಕಿಸಿದ್ದಾರೆ.

ಚುನಾವಣೆಯಲ್ಲಿ ಬಿಜೆಪಿ ಪ್ರದರ್ಶನ ಉತ್ತಮವಾಗಿಲ್ಲ ಎಂದು ಬಿಂಬಿಸುವ ಪ್ರಯತ್ನವಾಗುತ್ತಿದೆ. ನರೇಂದ್ರ ಮೋದಿ ಅವರ ಭಾಷಣಗಳನ್ನು ಕಟು ವಿಮರ್ಶೆಗೆ ಒಳಪಡಿಸಲಾಗುತ್ತಿದೆ ಎಂದು ತಮ್ಮ ವರದಿಯಲ್ಲಿ ಕ್ರಿಸ್ಟೋಫರ್ ವುಡ್ ಹೇಳಿದ್ದಾರೆ.

‘ಚುನಾವಣೆ ಇನ್ನೂ ನಡೆಯುತ್ತಿದೆ. ಮೂರನೇ ಎರಡರಷ್ಟು ಕ್ಷೇತ್ರಗಳಿಗೆ ಮತದಾನವಾಗಿದೆ. ಒಟ್ಟಾರೆ ಚಲಾವಣೆಯಾದ ಮತಗಳು 2019ರ ಮಟ್ಟಕ್ಕಿಂತ ಎರಡು ಪಾಯಿಂಟ್ ಕಡಿಮೆ ಇದೆ. ಇದರಿಂದಾಗಿ ಹಿಂದಿನ ಚುನಾವಣೆಗಿಂತ ಕಡಿಮೆ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ ಎನ್ನುವಂತಹ ಆತಂಕಗಳು ಮನೆ ಮಾಡಿವೆ’ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ವಿಕಸಿತ ಭಾರತದ ಗುರಿಗೆ ದೈವ ಪ್ರೇರಣೆ; ಆ ದೈವವೇ ನನಗೆ ಶಕ್ತಿ ತುಂಬುತ್ತಿದೆ: ಪ್ರಧಾನಿ ಮೋದಿ

ಪ್ರದಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ ದೊಡ್ಡ ಪರಿವರ್ತನೆಯನ್ನೇ ತಂದಿದ್ದಾರೆ. ಗ್ರಾಮೀಣ ಭಾಗದಲ್ಲಿ 11.10 ಕೋಟಿ ಮನೆಗಳಲ್ಲಿ ಟಾಯ್ಲೆಟ್ ನಿರ್ಮಾಣ ಮಾಡಿರುವುದು ಅತಿ ಮೂಲಭೂತ ಬದಲಾವಣೆಯಾಗಿದೆ. ಹೀಗಾಗಿ, 2004ರಲ್ಲಿ ಬಿಜೆಪಿಗೆ ಆದ ಅನಿರೀಕ್ಷಿತ ಸೋಲು ಈಗ ಪುನಾವರ್ತನೆ ಆಗುವ ಸಾಧ್ಯತೆ ಬಹಳ ಕಡಿಮೆ ಎಂದು ಇನ್ವೆಸ್ಟ್​ಮೆಂಟ್ ಬ್ಯಾಂಕ್ ಆದ ಜೆಫರೀಸ್​ನ ಕ್ರಿಸ್ಟೋಫರ್ ವುಡ್ ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ