ITR Filing: ದಂಡವಿಲ್ಲದೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬಹುದು; ನೀವು ತಿಳಿದಿರಲೇಬೇಕಾದ ಅಂಶಗಳು ಇಲ್ಲಿವೆ

ಸಾಮಾನ್ಯವಾಗಿ ಆದಾಯ ತರಿಗೆ ರಿಟರ್ನ್ ಸಲ್ಲಿಕೆ ದಿನಾಂಕದ ನಂತರ ದಂಡದೊಂದಿಗೆ ಐಟಿಆರ್ ಸಲ್ಲಿಸಬೇಕಾಗುತ್ತದೆ ಎಂದು ತಿಳಿದಿದೆ. ಆದರೆ, ದಂಡ ಪಾವತಿಸದೆಯೂ ಐಟಿಆರ್ ಸಲ್ಲಿಸಬಹುದು ಎಂಬುದು ನಿಮಗೆ ಗೊತ್ತಿದೆಯೇ?

ITR Filing: ದಂಡವಿಲ್ಲದೆ ಆದಾಯ ತೆರಿಗೆ ರಿಟರ್ನ್ ಸಲ್ಲಿಸಬಹುದು; ನೀವು ತಿಳಿದಿರಲೇಬೇಕಾದ ಅಂಶಗಳು ಇಲ್ಲಿವೆ
ಐಟಿಆರ್ ಸಲ್ಲಿಕೆ ಮಾಡುವ ಮುನ್ನ ನೀವು ತಿಳಿದಿರಬೇಕಾದ ಅಂಶಗಳು (ಸಾಂದರ್ಭಿಕ ಚಿತ್ರ)
Edited By:

Updated on: Sep 19, 2022 | 10:54 AM

ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಕೆಗೆ ಸರ್ಕಾರವು ಗಡುವನ್ನು ವಿಸ್ತರಿಸಿದ್ದರೂ ಈ ವರ್ಷ ಗಡುವನ್ನು ಬದಲಾಯಿಸಲಾಗಿಲ್ಲ. ಹಣಕಾಸು ವರ್ಷ 2021-22 (ಮೌಲ್ಯಮಾಪನ ವರ್ಷ 2022-23) ಗಾಗಿ ಐಟಿಆರ್ ಅನ್ನು ಸಲ್ಲಿಸುವ ಗಡುವನ್ನು ಒಂದು ದಿನವೂ ವಿಸ್ತರಿಸಲಾಗಿಲ್ಲ. ಅದರಂತೆ ಅಂತಿಮ ದಿನಾಂಕವು ಜುಲೈ 31 ಆಗಿತ್ತು. ಈ ಅವಧಿ ಮುಕ್ತಾಯಗೊಂಡು ಒಂದೂವರೆ ತಿಂಗಳು ಕಳೆದಿದೆ. ಇನ್ನು ಐಟಿಆರ್ ಸಲ್ಲಿಸಬೇಕೆಂದರೆ ದಂಡದೊಂದಿಗೆ ಪಾವತಿಸಬೇಕು ಎಂದು ಗ್ರಹಿಸಲಾಗಿದೆ. ಆದರೆ ದಂಡ ವಿಲ್ಲದೆಯೂ ಐಟಿಆರ್ ಸಲ್ಲಿಕೆ ಮಾಡಬಹುದು ಎಂಬುದು ನಿಮಗೆ ತಿಳಿದಿದೆಯೇ? ಇಲ್ಲವಾದಲ್ಲಿ ಉಪಯುಕ್ತ ಮಾಹಿತಿ ಇಲ್ಲಿದೆ.

ದಂಡ ಪಾವತಿಸಲೇ ಬೇಕಾ ಎಂಬ ಪ್ರಶ್ನೆಗೆ TaxBuddy.com ನ ಸಂಸ್ಥಾಪಕರಾದ ಸುಜಿತ್ ಬಂಗಾರ್ ಹೌದು ಮತ್ತು ಪಾವತಿಸದೆಯೇ ಐಟಿಆರ್ ಸಲ್ಲಿಸಬಹುದು ಎನ್ನುತ್ತಾರೆ. ಝಿ ಮೀಡಿಯಾಕ್ಕೆ ಮಾಹಿತಿ ನೀಡಿದ ಅವರು, ದಂಡದವನ್ನು ಎಲ್ಲಾ ಸಂದರ್ಭಗಳಲ್ಲಿ ವಿಧಿಸಲಾಗುವುದಿಲ್ಲ. ಆದರೆ ನಿಮ್ಮ ಐಟಿಆರ್ ಕೇಸ್ ಎಲ್ಲಿಗೆ ಬರುತ್ತದೆ ಎಂದು ತಿಳಿದುಕೊಳ್ಳುವುದು ಬಹಳ ಮುಖ್ಯ. ಯಾವುದೇ ದಂಡವನ್ನು ಪಾವತಿಸುವ ಅಗತ್ಯವಿಲ್ಲದ ಸನ್ನಿವೇಶಗಳನ್ನು ತಿಳಿದುಕೊಳ್ಳಬೇಕು ಎಂದರು. ಅವರು ದಂಡವಿಲ್ಲದೆ ಐಟಿಆರ್ ಸಲ್ಲಿಸುವುದು ಹೇಗೆ ಎಂದು ತಿಳಿಸಿದ್ದಾರೆ ನೋಡಿ:

ಕೊನೆಯ ದಿನಾಂಕದ ನಂತರವೂ ದಂಡವಿಲ್ಲದೆ ಐಟಿಆರ್ ಫೈಲ್ ಮಾಡುವ  ಮುನ್ನ ತಿಳಿದಿರಬೇಕಾದ ಅಂಶಗಳು ನಿಮಗೆ ಅನುಮತಿಸುವ ಆದಾಯ ತೆರಿಗೆ ನಿಯಮಗಳು

1. ನಿಮ್ಮ ಒಟ್ಟು ಆದಾಯವು ಮೂಲ ವಿನಾಯಿತಿ ಮಿತಿಯನ್ನು ಮೀರದಿದ್ದರೆ ತಡವಾಗಿ ಐಟಿಆರ್ ಫೈಲಿಂಗ್‌ಗೆ ಯಾವುದೇ ದಂಡವಿರುವುದಿಲ್ಲ. ಆದರೆ ನೀವು ವಿದೇಶಿ ಮೂಲಗಳಿಂದ ಆದಾಯವನ್ನು ಹೊಂದಿದ್ದರೆ ಈ ಪ್ರಯೋಜನವು ಲಭ್ಯವಿರುವುದಿಲ್ಲ.

2. ನೀವು ಕೃಷಿಯಿಂದ ಮಾತ್ರ ಆದಾಯವನ್ನು ಹೊಂದಿದ್ದರೆ ಮತ್ತು ಬೇರೆ ಯಾವುದೇ ಆದಾಯವನ್ನು ಹೊಂದಿಲ್ಲದಿದ್ದರೆ ಐಟಿಆರ್ ಅನ್ನು ತಡವಾಗಿ ಸಲ್ಲಿಸಲು ಯಾವುದೇ ದಂಡವಿರುವುದಿಲ್ಲ.

3. ನಿಮ್ಮ ಆದಾಯವು ತೆರಿಗೆಯಿಂದ ವಿನಾಯಿತಿ ಪಡೆದಿದ್ದರೆ ಮತ್ತು ಯಾವುದೇ ತೆರಿಗೆಗೆ ಒಳಪಡುವ ಆದಾಯವಿಲ್ಲದಿದ್ದರೆ ತಡವಾಗಿ ಐಟಿಆರ್ ಫೈಲಿಂಗ್‌ಗಾಗಿ ದಂಡದ ಪಾವತಿಸಬೇಕಿಲ್ಲ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ