AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್‌ನ ಷೇರುಗಳಲ್ಲಿ ಇಂದು ಶೇ.10 ರಷ್ಟು ಏರಿಕೆ

ಅಂಬುಜಾ ಸಿಮೆಂಟ್ಸ್ ಮತ್ತು ಅದರ ಅಂಗಸಂಸ್ಥೆ ಎಸಿಸಿ ಲಿಮಿಟೆಡ್ ಅನ್ನು ಸ್ವಾಧೀನಪಡಿಸಿಕೊಂಡ ಬೆನ್ನಲ್ಲೆ ಅದಾನಿ ಎಂಟರ್‌ಪ್ರೈಸಸ್, ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್‌ನ ಷೇರುಗಳು ಇಂದು ಶೇಕಡಾ 10 ರಷ್ಟು ಏರಿಕೆ ಕಂಡವು.

ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್‌ನ ಷೇರುಗಳಲ್ಲಿ ಇಂದು ಶೇ.10 ರಷ್ಟು ಏರಿಕೆ
ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್‌ನ ಷೇರುಗಳು ಇಂದು ಶೇಕಡಾ 10 ರಷ್ಟು ಏರಿಕೆ ಕಂಡವು (ಸಾಂದರ್ಭಿಕ ಚಿತ್ರ)
TV9 Web
| Edited By: |

Updated on: Sep 19, 2022 | 4:27 PM

Share

ಅದಾನಿ ಎಂಟರ್‌ಪ್ರೈಸಸ್ (Adani Enterprises), ಎಸಿಸಿ ಮತ್ತು ಅಂಬುಜಾ ಸಿಮೆಂಟ್ಸ್‌ (ACC Cement and Ambuja Cement)ನ ಷೇರುಗಳು ಇಂದು ಶೇಕಡಾ 10 ರಷ್ಟು ಏರಿಕೆ ಕಂಡವು. ಅದಾನಿ ಗ್ರೂಪ್ ಶುಕ್ರವಾರ ಅಂಬುಜಾ ಸಿಮೆಂಟ್ಸ್ ಮತ್ತು ಅದರ ಅಂಗಸಂಸ್ಥೆ ಎಸಿಸಿ ಲಿಮಿಟೆಡ್ ಅನ್ನು ಸ್ವಿಟ್ಜರ್ಲೆಂಡ್‌ನ ಹೋಲ್ಸಿಮ್ ಗ್ರೂಪ್‌ನಿಂದ 6.4 ಬಿಲಿಯನ್‌ಗೆ ಸ್ವಾಧೀನಪಡಿಸಿಕೊಂಡಿತು. ಅದರಂತೆ ಆದಿತ್ಯ ಬಿರ್ಲಾ ಗ್ರೂಪ್‌ (Aditya Birla Group)ನ ಅಲ್ಟ್ರಾಟೆಕ್ ಸಿಮೆಂಟ್‌ (Ultratech Cement)ನ ನಂತರ ಅದಾನಿಯ ಎಸಿಸಿ ಸಿಮೆಂಟ್ ಭಾರತದಲ್ಲಿ ಎರಡನೇ ಅತಿದೊಡ್ಡ ಸಿಮೆಂಟ್ ಕಂಪನಿಯಾಗಿದೆ. ಇದರ ಬೆನ್ನಲ್ಲೇ ಷೇರುಗಳು ಶೇಕಡಾ 10 ರಷ್ಟು ಏರಿಕೆ ಕಂಡಿವೆ.

ಸ್ವಾದೀನ ಪ್ರಕ್ರಿಯೆ ಪೂರ್ಣಗೊಂಡ ಬೆಳವಣಿಗೆಯಿಂದ ಉತ್ತೇಜಿತಗೊಂಡಿರುವ ಅಂಬುಜಾ ಸಿಮೆಂಟ್ಸ್ ಷೇರುಗಳು ದಾಖಲೆಯ ಗರಿಷ್ಠ 567.9 ರೂ.ಗೆ ತಲುಪಿ, ಬಿಎಸ್‌ಇಯಲ್ಲಿ ಹಿಂದಿನ 516.30 ರೂ.ಗೆ ಹೋಲಿಸಿದರೆ ಶೇ.9.99ರಷ್ಟು ಏರಿಕೆ ಕಂಡಿದೆ. ಅಂಬುಜಾ ಸಿಮೆಂಟ್ಸ್ ಸ್ಟಾಕ್ ಸರಾಸರಿಗಿಂತ ಹೆಚ್ಚಿನ ವಹಿವಾಟು ನಡೆಸುತ್ತಿದೆ. ಸ್ಟಾಕ್ ಒಂದು ವರ್ಷದಲ್ಲಿ 32.52 ರಷ್ಟು ಏರಿಕೆಯಾಗಿದೆ ಮತ್ತು 2022 ರಲ್ಲಿ 47.42 ಶೇಕಡಾವನ್ನು ಗಳಿಸಿದೆ. ಒಂದು ತಿಂಗಳಲ್ಲಿ ಸ್ಟಾಕ್ 32.49 ಶೇಕಡಾವನ್ನು ಗಳಿಸಿದೆ. ಬಿಎಸ್‌ಇಯಲ್ಲಿ 99.82 ಕೋಟಿ ವಹಿವಾಟು ನಡೆದಿದೆ. ಹೆಚ್ಚುವರಿಯಾಗಿ, ಅದಾನಿ ಗ್ರೂಪ್ ಷೇರುಗಳ ಆದ್ಯತೆಯ ಹಂಚಿಕೆಯ ಮೂಲಕ ಅಂಬುಜಾ ಸಿಮೆಂಟ್ಸ್‌ಗೆ 20,000 ಕೋಟಿ ರೂಪಾಯಿಗಳನ್ನು ತುಂಬಲಿದೆ ಎಂದು ವರದಿಗಳು ತಿಳಿಸಿವೆ.

ಅದಾನಿ ಕುಟುಂಬವು ಅಂಬುಜಾ ಸಿಮೆಂಟ್ಸ್ ಮತ್ತು ಎಸಿಸಿಯ ಸ್ವಾಧೀನವನ್ನು ಪೂರ್ಣಗೊಳಿಸಿದೆ ಮತ್ತು ದೇಶದ ಎರಡನೇ ಅತಿದೊಡ್ಡ ಸಿಮೆಂಟ್ ಕಂಪನಿಯಾಗಿದೆ. ಎಸಿಸಿಯಲ್ಲಿ ಅದಾನಿಯವರ ಪಾಲು ಈಗ ಶೇ.56.7ರಷ್ಟಿದ್ದರೆ ಅಂಬುಜಾದಲ್ಲಿ ಶೇ.63.2ರಷ್ಟಿದೆ. ಸ್ವಾಧೀನದ ನಂತರ, ಎರಡೂ ಕಂಪನಿಗಳು ತಮ್ಮ ನಿರ್ವಹಣೆ ಮತ್ತು ಮಂಡಳಿಗಳನ್ನು ಬದಲಾಯಿಸಿವೆ ಮತ್ತು ಜನವರಿ-ಡಿಸೆಂಬರ್‌ನಿಂದ ಏಪ್ರಿಲ್-ಮಾರ್ಚ್‌ಗೆ ಹಣಕಾಸು ವರ್ಷದಲ್ಲಿ ಬದಲಾವಣೆಯನ್ನು ಘೋಷಿಸಿವೆ.

ಮತ್ತಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ